ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !

ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !

(ಲೇಖನ ಸಂಖ್ಯೆ ೯)

ವಾದನ ಕಲೆಯ ಆಧ್ಯಾತ್ಮಿಕ ಇತಿಹಾಸ !

‘ವಾದನಕಲೆ’ಯು ಎಂತಹ ದಿವ್ಯ ಮಾಧ್ಯಮವೆಂದರೆ, ಅದು ನಾದದ ಮೂಲಕ ವಾದಕರಿಗೆ ಮತ್ತು ಶ್ರೋತೃಗಳಿಗೆ ಭಗವಂತನ ಅಸ್ತಿತ್ವದ ಅನುಭೂತಿ ನೀಡುತ್ತದೆ. ‘ನಾದ’ವು ಸಾಕ್ಷಾತ್ ‘ಬ್ರಹ್ಮತತ್ತ್ವ’ಕ್ಕೆ ಜೊತೆಗೂಡಿದೆ. ಆದ್ದರಿಂದಲೇ ನಾದವನ್ನು ‘ನಾದಬ್ರಹ್ಮ’ ಎನ್ನುತ್ತಾರೆ. ಈ ಲೇಖನದಲ್ಲಿ ನಾವು ‘ಪ್ರಾಚೀನ ಕಾಲದಿಂದ ವಾದ್ಯವಾದನಗಳ ಉದ್ದೇಶ, ದೇವತೆಗಳಿಗೆ ಸಂಬಂಧಿಸಿದ ವಾದ್ಯಗಳು ಮತ್ತು ವಾದನದ ಆಧ್ಯಾತ್ಮಿಕ ಹಿನ್ನೆಲೆ’ಯನ್ನು ತಿಳಿದುಕೊಳ್ಳಲಿದ್ದೇವೆ.

೧. ಸತ್ಯಯುಗದ ಆರಂಭದಲ್ಲಿನ ನೃತ್ಯಗಳು 

೧ ಅ. ಉತ್ಪತ್ತಿ (ಸೃಷ್ಟಿ), ಸ್ಥಿತಿ ಮತ್ತು ಲಯದ ಪ್ರತೀಕವಾಗಿರುವ ಭಗವಾನ ನಟರಾಜನ (ಶಿವನ) ತಾಂಡವ ನೃತ್ಯ ! : ‘ನೃತ್ಯಕಲೆ’ ಇದು ಭಗವಾನ ಶಿವನಿಂದ ನಿರ್ಮಾಣವಾಗಿದೆ. ಭಗವಾನ ಶಿವನು ಯಾವ  ಪರಮ ದೈವಿ, ವೇಗ ಮತ್ತು ಆವೇಶಪೂರ್ಣ ನೃತ್ಯವನ್ನು ಮಾಡಿದನೋ ಅದಕ್ಕೆ ‘ತಾಂಡವ’, ಎಂದು ಕರೆಯುತ್ತಾರೆ. ಭಗವಾನ ಶಿವನ ಈ ಅದ್ಭುತ ನೃತ್ಯವನ್ನು ಶಬ್ದಗಳಲ್ಲಿ ವರ್ಣಿಸಲು ಕಠಿಣವಾಗಿದೆ. ಸೃಷ್ಟಿಯ ನಿರ್ಮಿತಿಯು ಭಗವಾನ ಶಿವನ ‘ತಾಂಡವ’ ನೃತ್ಯದಿಂದಾಗಿದೆ. ಸೃಷ್ಟಿಯ ಸಮತೋಲನವು ಭಗವಾನ ಶಂಕರನ ತಾಂಡವ ನೃತ್ಯದಿಂದಲೇ ಕಾಪಾಡಲ್ಪಡುತ್ತದೆ, ಹಾಗೆಯೇ ಸೃಷ್ಟಿಯ ಅಂತಿಮ ಸಮಯದಲ್ಲಿಯೂ (ಪ್ರಳಯ ಕಾಲದಲ್ಲಿಯೂ) ಭಗವಾನ ಶಿವನ ತಾಂಡವ ನೃತ್ಯವಿತ್ತು. ಇದರ ಅರ್ಥವೇನೆಂದರೆ ಸೃಷ್ಟಿಯ ನಿರ್ಮಿತಿ, ಸ್ಥಿತಿ ಮತ್ತು ಲಯ ಇವುಗಳು ತಾಂಡವ ನೃತ್ಯದಲ್ಲಿ ಅಡಗಿವೆ.’ (ಆಧಾರ : ಶ್ರೀ ಆದಿ ಶಂಕರಾಚಾರ್ಯರು ರಚಿಸಿದ ‘ಸೌಂದರ್ಯಲಹರಿ’ ಮತ್ತು ‘ಅರ್ಧನಾರೀಶ್ವರಸ್ತೋತ್ರ’ ಮತ್ತು ‘ಲಲಿತಾಸಹಸ್ರನಾಮ ಸ್ತೋತ್ರ’)

ಸೌ. ಸಾವಿತ್ರಿ ಇಚಲಕರಂಜಿಕರ

೧ ಆ. ಸೌಂದರ್ಯ ಮತ್ತು ಲಾಲಿತ್ಯದ ಪ್ರತೀಕವಾಗಿರುವ ದೇವಿ ಪಾರ್ವತಿಯ ಲಾಸ್ಯ ನೃತ್ಯ ! : ‘ಭಗವಾನ ಶಿವನ ರೌದ್ರರಸಯುಕ್ತ ಮತ್ತು ಪ್ರಳಯಕಾರಿ ತಾಂಡವ ನೃತ್ಯದಿಂದ ಸಂಪೂರ್ಣ ಪೃಥ್ವಿಯು ನಡುಗತೊಡಗಿತು. ಆದ್ದರಿಂದ ಅದರ ಸಮತೋಲನವಾಗಲು ದೇವಿ ಪಾರ್ವತಿಯು ತಾಂಡವ ನೃತ್ಯದ ಗುಣಗಳಿಗೆ ವಿರುದ್ಧವಾದ ಕೋಮಲ, ನಾಜೂಕು ಚಲನವಲನ ಮತ್ತು ಲಾಲಿತ್ಯಪೂರ್ಣ ಪದನ್ಯಾಸಗಳಿಂದ ಯುಕ್ತ ನೃತ್ಯವನ್ನು ಮಾಡಿದಳು. ಅದಕ್ಕೆ ‘ಲಾಸ್ಯ’ ನೃತ್ಯವೆನ್ನುತ್ತಾರೆ. ಈ ನೃತ್ಯದಿಂದ ಪೃಥ್ವಿಯ ಸಮತೋಲನ ಕಾಯ್ದಿಡಲಾಯಿತು. ಲಾಸ್ಯ ನೃತ್ಯವು ಪೃಥ್ವಿಯ ಉತ್ಪತ್ತಿಗೆ ಸಂಬಂಧಿಸಿದೆ.’

(ಆಧಾರ: ಅರ್ಧನಾರೀಶ್ವರಸ್ತೋತ್ರ ಮತ್ತು ಭರತಮುನಿಗಳು ರಚಿಸಿದ ‘ನಾಟ್ಯಶಾಸ್ತ್ರ’)

೧ ಇ. ಶ್ರೀವಿಷ್ಣುವಿನ ‘ಮೋಹಿನಿ ಅವತಾರ’ದ ನೃತ್ಯ : ‘ಅಮೃತಮಂಥನದ ನಂತರ ‘ಭಸ್ಮಾಸುರ’ ಎಂಬ ದೈತ್ಯನು ಅಹಂಕಾರಿಯಾಗಿದ್ದನು. ಅವನಿಗೆ ‘ಅವನು ಯಾರ ತಲೆಯ ಮೇಲೆ ಕೈ ಇಡುತ್ತಾನೆಯೋ, ಅವನು ಭಸ್ಮನಾಗುವನು’, ಎಂಬ ವರವಿತ್ತು. ಈ ವರದಿಂದಾಗಿ ಪೃಥ್ವಿಯಲ್ಲಿ ನಿರ್ಮಾಣವಾಗಿರುವ ಹಾಹಾಕಾರವನ್ನು ನೋಡಿ ದೇವತೆಗಳು ಶ್ರೀವಿಷ್ಣುವಿಗೆ ಮೊರೆ ಹೋದರು. ಅನಂತರ ಭಗವಾನ ಶ್ರೀವಿಷ್ಣುವು ಪರಮ ಸುಂದರ ಸ್ತ್ರೀ ‘ಮೋಹಿನಿ ರೂಪ’ವನ್ನು ಧರಿಸಿ ಭಸ್ಮಾಸುರನನ್ನು ಮೋಹಿತಗೊಳಿಸಿದನು. ಭಸ್ಮಾಸುರನು ಅವಳ ಮುಂದೆ ವಿವಾಹದ ಪ್ರಸ್ತಾವನೆಯನ್ನು ಇಟ್ಟನು. ಆಗ ಅವಳು, “ನಾನು ಹೇಗೆ ನೃತ್ಯ ಮಾಡುತ್ತೇನೆಯೋ, ಅದೇ ರೀತಿ ನೀನೂ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ನಾನು ನಿನ್ನೊಂದಿಗೆ ಮದುವೆ ಮಾಡಿಕೊಳ್ಳುವೆನು,” ಎಂದು ಹೇಳಿದಳು. ಭಸ್ಮಾಸುರನು ಆ ಪ್ರಸ್ತಾವನೆಯನ್ನು ಒಪ್ಪಿಕೊಂಡನು. ಮೋಹಿನಿ ಮತ್ತು ಭಸ್ಮಾಸುರ ಈ ಇಬ್ಬರೂ ನೃತ್ಯವನ್ನು ಮಾಡುವಾಗ ಮೋಹಿನಿಯು ಅವನು ನೃತ್ಯದಲ್ಲಿ ಮೈಮರೆಯುವಂತೆ ಮಾಡಿದಳು ಮತ್ತು ಅವಳು ತನ್ನ ತಲೆಯ ಮೇಲೆ ಕೈ ಇಟ್ಟಳು. ಅದೇ ರೀತಿ ನೃತ್ಯ ಮಾಡುವ ಭಸ್ಮಾಸುರನೂ ಸಹ ತನ್ನ ತಲೆಯ ಮೇಲೆ ಕೈಯನ್ನಿಡುವ ಮುದ್ರೆಯನ್ನು ಮಾಡಿರುವುದರಿಂದ ಅವನು ಭಸ್ಮನಾದನು. ಈ ರೀತಿ ನೃತ್ಯದ ಮಾಧ್ಯಮದಿಂದ ಭಗವಾನ ಶ್ರೀವಿಷ್ಣುವು (ಮೋಹಿನಿಯು) ಸೃಷ್ಟಿಯನ್ನು ಭಸ್ಮಾಸುರನ ಸಂಕಟ ದಿಂದ ರಕ್ಷಿಸಿದನು.’ (ಆಧಾರ : ಭಾಗವತಪುರಾಣ ಮತ್ತು ಶ್ರೀವಿಷ್ಣುಪುರಾಣ)

೧ ಈ. ವೇದಕಾಲದಲ್ಲಿನ ನೃತ್ಯ : ವೇದಗಳಲ್ಲಿಯೂ ನೃತ್ಯದ ಉಲ್ಲೇಖವು ಕಂಡುಬರುತ್ತದೆ. ಇದರಿಂದ ನೃತ್ಯದ ಶೋಧನೆಯು ಪ್ರಾಗೌತಿಹಾಸಿಕ ಕಾಲದಲ್ಲಿಯೂ (ಮನುಷ್ಯನ ಸಂಸ್ಕೃತಿಕ ಇತಿಹಾಸದ ಮೊದಲನೇ ಕಾಲಖಂಡದಲ್ಲಿ) ಆಗಿತ್ತು. ಯಜುರ್ವೇದ, ಸಾಮವೇದ ಮತ್ತು ಅಥರ್ವವೇದದಲ್ಲಿಯೂ ನೃತ್ಯದ ವಿಸ್ತೃತ ವರ್ಣನೆಯಿದೆ.

೧ ಉ. ಶ್ರೀಮದ್ಭಾಗವತ ಮಹಾಪುರಾಣ, ಶಿವಪುರಾಣ, ಹಾಗೆಯೇ ಕೂರ್ಮಪುರಾಣದಲ್ಲಿನ ಅನೇಕ ವಿವರಣೆಗಳಲ್ಲಿ ನೃತ್ಯದ ಬಗ್ಗೆ ಉಲ್ಲೇಖಿಸಲಾಗಿದೆ.

೨. ತ್ರೇತಾಯುಗದಲ್ಲಿನ ನೃತ್ಯ   

೨ ಅ. ತ್ರೇತಾಯುಗದಲ್ಲಿ ಬ್ರಹ್ಮದೇವನು ನಾಟ್ಯಶಾಸ್ತ್ರವನ್ನು ನಿರ್ಮಿಸಿದನು : ಸತ್ಯಯುಗದಲ್ಲಿ ಮನುಷ್ಯನು ‘ಸೋಹಂ’ಭಾವದಲ್ಲಿ ಇದ್ದನು. ಯಾವಾಗ ಸತ್ಯಯುಗವು ಮುಗಿದು ತ್ರೇತಾಯುಗ ಆರಂಭವಾಯಿತೋ, ಆಗ ಮನುಷ್ಯನ ಸಾತ್ತ್ವಿಕತೆಯು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಆಯಿತು. ಅವನ ಅಧರ್ಮವು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಯಿತು. ವೇದಗಳ ಅಧ್ಯಯನ ಅಥವಾ ಜ್ಞಾನವು ಮನುಷ್ಯನಿಗೆ ಅವನ ಬುದ್ಧಿಯ ಆಚೆಗಿದ್ದು ಎಂದೆನಿಸತೊಡಗಿತು. ಪೃಥ್ವಿಯ ಈ ಸ್ಥಿತಿಯನ್ನು ನೋಡಿ ದೇವಲೋಕದಲ್ಲಿನ ಇಂದ್ರಾದಿ ದೇವತೆಗಳು ‘ಮಾನವನಲ್ಲಿ ಈಶ್ವರಪ್ರಾಪ್ತಿ ಭಾವ-ಭಕ್ತಿಯು ಪುನಃ ಹೆಚ್ಚಾಗಬೇಕು ಮತ್ತು ಅವನಿಗೆ ಈಶ್ವರಪ್ರಾಪ್ತಿಯು ಸುಲಭವಾಗಬೇಕು’, ಎಂದು ಬ್ರಹ್ಮ ದೇವರ ಕಡೆಗೆ ಹೋದರು. ಬ್ರಹ್ಮದೇವನು ನಾಲ್ಕೂ ವೇದಗಳಿಂದ ವಿವಿಧ ಅಂಶಗಳನ್ನು ತೆಗೆದುಕೊಂಡು ‘ನಾಟ್ಯಶಾಸ್ತ್ರ’ ಎಂಬ ಪಂಚಮವೇದವನ್ನು ನಿರ್ಮಿಸಿದನು ಮತ್ತು ಅವನು ಭರತಮುನಿಗಳಿಗೆ ನೀಡಿದನು.

ಭರತಮುನಿಗಳಿಂದ ನಾಟ್ಯಶಾಸ್ತ್ರವು ಸಿದ್ಧವಾಗಿ ಅವರು ಅದನ್ನು ತಂಡುಮುನಿಗಳಿಗೆ ಕಲಿಸಿದರು. ಅನಂತರ ಭರತಮುನಿಗಳ ೧೦೦ ಮಕ್ಕಳು ಮತ್ತು ಅಪ್ಸರೆಯರು ಸೇರಿ ಬ್ರಹ್ಮ, ವಿಷ್ಣು ಮತ್ತು ಮಹೇಶ ಹಾಗೆಯೇ ಇಂದ್ರಾದಿ ದೇವತೆಗಳ ಮುಂದೆ ‘ತ್ರಿಪುರದಾಹ’ ಮತ್ತು ‘ಅಮೃತಮಂಥನ’, ಈ ನೃತ್ಯನಾಟ್ಯಗಳನ್ನು ಪ್ರಸ್ತುತಪಡಿಸಿದರು. ಇದನ್ನು ನೋಡಿ ಭಗವಾನ ಶಿವನು ಅತ್ಯಂತ ಪ್ರಸನ್ನನಾದನು ಮತ್ತು ಅವನಿಗೆ ತನ್ನದೇ ಆದ ಅದ್ಭುತ ನೃತ್ಯದ ಸ್ಮರಣೆ ಆಯಿತು. ನಂತರ ಭಗವಾನ ಶಿವನು ಸ್ವತಃ ತಂಡುಮುನಿಗಳಿಗೆ ನೃತ್ಯದ ಪಾಠಗಳನ್ನು ಕಲಿಸಿದನು. ಅದೇ ‘ತಾಂಡವ’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಯಿತು. ಭರತಮುನಿಗಳ ನಾಟ್ಯಶಾಸ್ತ್ರದ ಕಾಲದ ವರೆಗೆ ಭಾರತೀಯ ಸಮಾಜದಲ್ಲಿ ಅನೇಕ ರೀತಿಯ ಕಲೆಗಳು ಸಂಪೂರ್ಣವಾಗಿ ವಿಕಸಿತಗೊಂಡಿದ್ದವು.

೨ ಆ. ರಾಮಾಯಣದಲ್ಲಿಯೂ ನೃತ್ಯದ ಉಲ್ಲೇಖಗಳು ಕಂಡುಬರುತ್ತವೆ.  

೩. ದ್ವಾಪರಯಗದಲ್ಲಿನ ನೃತ್ಯ 

೩ ಅ. ದ್ವಾಪರಯುಗದಲ್ಲಿ ಪಾರ್ವತಿಯು ಬಾಣಾಸುರನ ಕನ್ಯೆ ‘ಉಷಾ’ ಇವಳಿಗೆ ಲಾಸ್ಯ ನೃತ್ಯವನ್ನು ಕಲಿಸಿದಳು ಮತ್ತು ಅವಳು ಸೌರಾಷ್ಟ್ರದಲ್ಲಿನ ಸ್ತ್ರೀಯರಿಗೆ ಅದರ ಜ್ಞಾನವನ್ನು ನೀಡಿದಳು.

೩ ಆ. ದೈವೀ ರಾಸಲೀಲೆ : ಭಗವಾನ ಶ್ರೀಕೃಷ್ಣನು ಗೋಪಿಕೆಯರು ಮತ್ತು ರಾಧೆಯೊಡನೆ ಕೊಜಾಗಿರಿ ಹುಣ್ಣಿಮೆಯ ರಾತ್ರಿ ಅದ್ವೈತದ ಅನುಭೂತಿಯನ್ನು ನೀಡುವ ರಾಸಲೀಲೆಯನ್ನು ಮಾಡಿದನು.

೩ ಇ. ಊರ್ವಶಿ ಅಪ್ಸರೆಯು ಅರ್ಜುನನಿಗೆ ನೃತ್ಯದ ಶಿಕ್ಷಣ ವನ್ನು ನೀಡಿದಳು : ದ್ವಾಪರಯುಗದಲ್ಲಿ ಪಾಂಡವರು ವನವಾಸ ದಲ್ಲಿರುವಾಗ ದಿವ್ಯಾಸ್ತ್ರವನ್ನು ಪಡೆಯಲು ಅರ್ಜುನನು ಇಂದ್ರ ದೇವತೆಯ ತಪಶ್ಚರ್ಯವನ್ನು ಮಾಡಿದನು. ಇಂದ್ರಲೋಕಕ್ಕೆ ಹೋದ ನಂತರ ಅವನಿಗೆ ‘ಊರ್ವಶಿ’ ಹೆಸರಿನ ಅಪ್ಸರೆಯ ಭೇಟಿ ಆಯಿತು. ಅವಳು ಅರ್ಜುನನಿಗೆ ನೃತ್ಯದ ಶಿಕ್ಷಣವನ್ನು ನೀಡಿದಳು. ಆ ನೃತ್ಯವು ಅರ್ಜುನನಿಗೆ ಅಜ್ಞಾತವಾಸದಲ್ಲಿರುವಾಗ ಉಪಯುಕ್ತವಾಯಿತು. ಅರ್ಜುನನು ‘ಬೃಹನ್ನಳೆ’ಯ ರೂಪದಲ್ಲಿ ಅಭಿಮನ್ಯುವಿನ ಪತ್ನಿ ಉತ್ತರೆಗೆ ನೃತ್ಯದ ಶಿಕ್ಷಣವನ್ನು ನೀಡಿದನು.

೩ ಈ. ಮಹಾಭಾರತದ ಕಾಲದ ವರೆಗೆ ‘ನೃತ್ತ, ನೃತ್ಯ ಮತ್ತು ನಾಟ್ಯ’ (ಟಿಪ್ಪಣಿ), ಈ ಮೂರು ವಿಕಸನಗೊಂಡಿದ್ದವು.

ಟಿಪ್ಪಣಿ – ನರ್ತನದ ನೃತ್ತ, ನಾಟ್ಯ ಮತ್ತು ನೃತ್ಯ ಹೀಗೆ ಮೂರು ವಿಧಗಳಿವೆ.

ನೃತ್ತ : ಭಾವ ಮತ್ತು ಅಭಿನಯವಿಲ್ಲದೇ ಕೇವಲ ತಾಲ-ಲಯಕ್ಕೆ ಅನುಗುಣವಾಗಿ ಶರೀರದ ಚಲನೆ ಮತ್ತು ಪದನ್ಯಾಸ ಒಟ್ಟಿಗೆ ಮಾಡುವುದು.

ನೃತ್ಯ : ರಸ, ಭಾವ ಮತ್ತು ತಾಲಗಳಿಂದ ಕೂಡಿದ ನರ್ತನೆ

ನಾಟ್ಯ : ಯಾವುದು ಪೂರ್ವಕಥೆಗಳ ಆಧಾರಿತವಾಗಿದ್ದು ರಸ ಪ್ರಧಾನವಾಗಿದೆಯೋ, ಅದು ನಾಟ್ಯವಾಗಿದೆ. ನರ್ತನೆಯ ಈ ವಿಧಗಳಲ್ಲಿ ಅಭಿನಯಕ್ಕೆ ಪ್ರಾಧಾನ್ಯತೆ ಇದೆ ಮತ್ತು ಇದರಲ್ಲಿ ರಸೋತ್ಕರ್ಷ ಸಾಧಿಸುವುದು ಮಹತ್ವದ್ದಾಗಿದೆ ಎಂದು ನಂಬಲಾಗಿದೆ.

೪. ಕಲಿಯುಗದಲ್ಲಿನ ನೃತ್ಯ 

೪ ಅ. ಕಾಳಿದಾಸನ ‘ಶಾಕುಂತಲೆ’ ಮತ್ತು ‘ಮೇಘದೂತ’, ಹಾಗೆಯೇ ವಾತ್ಸ್ಯಯನನ ‘ಕಾಮಸೂತ್ರ’ ಮತ್ತು ‘ಮೃಚ್ಛಕಟಿಕಮ್’ ಮುಂತಾದವುಗಳು ಪ್ರಾಚೀನ ಸಂಸ್ಕೃತಿ ಗ್ರಂಥಗಳಲ್ಲಿ ನೃತ್ಯದ ವರ್ಣನೆ ಕಂಡುಬರುತ್ತದೆ.

೪ ಆ. ಶಾಸ್ತ್ರೀಯ ನೃತ್ಯ ಮತ್ತು ಲೋಕನೃತ್ಯದ ನಿರ್ಮಿತಿ : ಪೃಥ್ವಿಲೋಕಕ್ಕೆ ನೃತ್ಯ ಬಂದ ನಂತರ ಆಯಾ ಪ್ರದೇಶಗಳಿಗನುಸಾರ ಅವು ರೂಪುಗೊಳ್ಳುತ್ತ ಹೋದವು. ಕೆಲವು ನೃತ್ಯಗಳಿಗೆ ಶಾಸ್ತ್ರದ ಆಧಾರ ದೊರೆಯಿತು ಮತ್ತು ಆ ನೃತ್ಯಗಳು ಶಾಸ್ತ್ರದ ನಿಯಮಗಳಿಗೆ ಒಳಪಟ್ಟವು. ಅವುಗಳು ಶಾಸ್ತ್ರೀಯ ನೃತ್ಯಗಳಲ್ಲಿ ರೂಪಾಂತರಗೊಂಡವು.

ಕೆಲವು ಪ್ರದೇಶಗಳಲ್ಲಿ ಅಲ್ಲಿನ ಪ್ರಾದೇಶಿಕ ಪರಂಪರೆಗಳಿಗನುಸಾರ ಲೋಕನೃತ್ಯಗಳ ನಿರ್ಮಿತಿ ಆಯಿತು.

೪ ಇ. ಯವನರ ಆಕ್ರಮಣಗಳಿಂದ ನೃತ್ಯಕಲೆಯ ಪಾವಿತ್ರ್ಯ ನಾಶವಾಗುವುದು ಮತ್ತು ರಾಜರು ಹಾಗೂ ಸಂತರ ಕೊಡುಗೆಯಿಂದ ನೃತ್ಯಕ್ಕೆ ಪುನಶ್ಚೇತನ ದೊರೆಯುವುದು : ಈ ಕಾಲದಲ್ಲಿ ದೇವಸ್ಥಾನ ಗಳು ನೃತ್ಯದ ಮುಖ್ಯ ಕೇಂದ್ರಗಳಾಗಿದ್ದವು. ದೇವದಾಸಿ ಪರಂಪರೆ ಯಲ್ಲಿ ನೃತ್ಯವು ದೇವರ ಸೇವೆ ಮತ್ತು ಭಕ್ತಿಭಾವವನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದ್ದವು; ಆದರೆ ಉತ್ತರಭಾರತ ಹಾಗೂ ಗುಜರಾತ ಮುಂತಾದ ಕ್ಷೇತ್ರಗಳಲ್ಲಿ ಯವನರ ಆಕ್ರಮಣಗಳಿಂದ ನೃತ್ಯಕಲೆಯು ತನ್ನ ಆಧ್ಯಾತ್ಮಿಕ ಉದ್ದೇಶದಿಂದ ವಿಮುಖವಾಯಿತು ಮತ್ತು ಅದನ್ನು ಮನೋರಂಜನೆ, ದರ್ಬಾರಿ ಕಲೆ ಮತ್ತು ಧನಾರ್ಜನೆಯ ಸಾಧನೆ ಎಂದು ನೋಡಲಾರಂಭಿಸಿದರು. ಅದೇ ಕಾಲದಲ್ಲಿನ ದಕ್ಷಿಣ ಭಾರತದಲ್ಲಿನ ಅನೇಕ ಮಹಾನ ರಾಜರು (ಕೃಷ್ಣದೇವರಾಯ, ಚೋಳರು, ಪಾಂಡ್ಯರು), ಹಾಗೆಯೇ ಕೆಲವು ಸತ್ಪುರುಷರು ಕಲೆಯ ಆಧ್ಯಾತ್ಮಿಕ ಪರಂಪರೆಯನ್ನು  ಉಳಿಸಿಕೊಂಡರು ಮತ್ತು ಕಲೆಗಳ ಶಾಸ್ತ್ರೀಯ ಪದ್ಧತಿಯನ್ನು ಪ್ರಸ್ತುತಗೊಳಿಸಲು ಪ್ರೋತ್ಸಾಹ ನೀಡಿದರು. ಸಂಗೀತಾದಿ ಕಲೆಗಳ ಕಡೆಗೆ ಗೌರವದಿಂದ ನೋಡತೊಡಗಿದರು. ಇದೇ ಅವಧಿಯಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಪೂರಕವಾಗಿರುವ ಅನೇಕ ರಚನೆ, ಕಾವ್ಯಗಳು, ಪದಗಳ ಬರವಣಿಗೆಗಳನ್ನು ಮಹಾನ ಸಂತರು ಮತ್ತು ಕವಿಗಳು ಮಾಡಿದರು, ಉದಾ. ಸಂತ ಪುರಂದರದಾಸರು, ಸಂತ ಮೀರಾಬಾಯಿ ಮುಂತಾದವರು.

೫. ನೃತ್ಯ ಮತ್ತು ಸಾಧನೆ 

ನೃತ್ಯವನ್ನು ಪ್ರಾಚೀನ ಕಾಲದಲ್ಲಿ ಯೋಗಸಾಧನೆಯ ಒಂದು ವಿಧವೆಂದು ನಂಬಲಾಗುತ್ತಿತ್ತು. ಇದರಿಂದ ದೇಹ, ಮನಸ್ಸು ಮತ್ತು ಆತ್ಮದ ಸಂಗಮವನ್ನು ಸಾಧಿಸಲಾಗುತ್ತದೆ. ಭಾರತೀಯ ನೃತ್ಯವು ಕೇವಲ ಕಲೆಯಾಗಿರದೇ ಅದು ಭಕ್ತಿ, ಧ್ಯಾನ ಮತ್ತು ಆತ್ಮಸಾಧನೆಯ ಮಾರ್ಗವಾಗಿದೆ. ಅದರ ಪ್ರವಾಸವು ದೇವತೆಗಳ ನೃತ್ಯದಿಂದ ಆರಂಭವಾಗಿ ವೇದಕಾಲದ ಯಜ್ಞಮಂಟಪ, ನಾಟ್ಯಶಾಸ್ತ್ರದ ಸಿದ್ಧಾಂತಗಳಿಂದ ಹಿಡಿದು ಮಧ್ಯಯುಗದ ದೇವಸ್ಥಾನ ಪರಂಪರೆಯಿಂದ ಮತ್ತು ಅಲ್ಲಿಂದ ಇಂದಿನ ಜಾಗತಿಕ ವೇದಿಕೆಯವರೆಗೆ ತಲುಪಿದೆ. ನೃತ್ಯದಲ್ಲಿನ ಪ್ರತಿಯೊಂದು ಮುದ್ರೆ, ಹಾವಭಾವ ಮತ್ತು ಲಯವು ಈಶ್ವರಪ್ರಾಪ್ತಿಯ ಸಮರ್ಪಣೆಯ ಭಾವವನ್ನು ವ್ಯಕ್ತಪಡಿಸುತ್ತಾರೆ.

ಇಂದಿಗೂ ಭಾರತೀಯ ಸಮಾಜದಲ್ಲಿ ನೃತ್ಯ ಮತ್ತು ಸಂಗೀತಕ್ಕೆ ತುಂಬಾ ಮಹತ್ವವನ್ನು ನೀಡಲಾಗುತ್ತದೆ. ನೃತ್ಯಕಲೆಯ ಪ್ರವಾಸವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದರೂ, ಅದರ ಮೂಲ ತಿರುಳು ಇಂದಿಗೂ ‘ಈಶ್ವರನ ಆರಾಧನೆ’ಯೇ ಆಗಿದೆ. ಪ್ರಾಚೀನ ಕಾಲದಲ್ಲಿನ ದೇವರ ಪೂಜೆಯಿಂದ ಆರಂಭವಾದ ಈ ಕಲೆಯು ಇಂದಿನ ಆಧುನಿಕ ವೇದಿಕೆಯ ಮೇಲೆಯೂ ಅಂತರ್ಮನದಲ್ಲಿನ ದಿವ್ಯತ್ವವನ್ನು ಜಾಗೃತಗೊಳಿಸುವಂತದ್ದಾಗಿದೆ. ಎಲ್ಲಿ ಶಬ್ದಗಳು ಮುಗಿಯುತ್ತವೆಯೋ, ಅಲ್ಲಿ ನೃತ್ಯ ಮಾತನಾಡುತ್ತದೆ. ಇಂದಿಗೂ ನೃತ್ಯವು ನಮ್ಮನ್ನು ಅಂತರ್ಮನಕ್ಕೆ ಮತ್ತು ಅನಂತದೊಂದಿಗೆ (ಈಶ್ವರನೊಂದಿಗೆ) ಜೋಡಿಸುತ್ತದೆ.’

– ಸೌ. ಸಾವಿತ್ರಿ ಇಚಲಕರಂಜಿಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೧.೧೧.೨೦೨೫)