
ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !
೨೭/೬ ರಿಂದ ಮುದ್ರಿತವಾಗುತ್ತಿರುವ ಲೇಖನಮಾಲೆಯಲ್ಲಿನ ಮುಂದಿನ ಕೆಲವು ಭಾಗದಲ್ಲಿ ನಾವು ‘ಗಾಯನ, ವಾದನ ನೃತ್ಯ ಮತ್ತು ನಾಟ್ಯ’ ಇದರ ಆಧ್ಯಾತ್ಮಿಕ ಇತಿಹಾಸವನ್ನು ನೋಡುತ್ತಿದ್ದೇವೆ, ಈ ಲೇಖನದಲ್ಲಿ ಭಾರತೀಯ ಕಲೆಗಳ ನಿರ್ಮಿತಿಯ ಬಗ್ಗೆ ತಿಳಿದುಕೊಳ್ಳೋಣ’ (ಲೇಖನ ಸಂಖ್ಯೆ ೮)
ವಾದನ ಕಲೆಯ ಆಧ್ಯಾತ್ಮಿಕ ಇತಿಹಾಸ !
‘ವಾದನಕಲೆ’ಯು ಎಂತಹ ದಿವ್ಯ ಮಾಧ್ಯಮವೆಂದರೆ, ಅದು ನಾದದ ಮೂಲಕ ವಾದಕರಿಗೆ ಮತ್ತು ಶ್ರೋತೃಗಳಿಗೆ ಭಗವಂತನ ಅಸ್ತಿತ್ವದ ಅನುಭೂತಿ ನೀಡುತ್ತದೆ. ‘ನಾದ’ವು ಸಾಕ್ಷಾತ್ ‘ಬ್ರಹ್ಮತತ್ತ್ವ’ಕ್ಕೆ ಜೊತೆಗೂಡಿದೆ. ಆದ್ದರಿಂದಲೇ ನಾದವನ್ನು ‘ನಾದಬ್ರಹ್ಮ’ ಎನ್ನುತ್ತಾರೆ. ಈ ಲೇಖನದಲ್ಲಿ ನಾವು ‘ಪ್ರಾಚೀನ ಕಾಲದಿಂದ ವಾದ್ಯವಾದನಗಳ ಉದ್ದೇಶ, ದೇವತೆಗಳಿಗೆ ಸಂಬಂಧಿಸಿದ ವಾದ್ಯಗಳು ಮತ್ತು ವಾದನದ ಆಧ್ಯಾತ್ಮಿಕ ಹಿನ್ನೆಲೆ’ಯನ್ನು ತಿಳಿದುಕೊಳ್ಳಲಿದ್ದೇವೆ.
‘ಆಹತನಾದದಿಂದ(ಆಘಾತ ಅಥವಾ ಬಡಿತದಿಂದ ಹೊರ ಹೊಮ್ಮುವ ನಾದ)ಅನಾಹತ ನಾದದ (ಯಾವುದೇ ಬಡಿತವಿಲ್ಲದೆ ಕೇಳಿಸುವ ದೈವಿಕ ನಾದ) ಅನುಭೂತಿಯನ್ನು ನೀಡುವ ಭಾರತೀಯ ವಾದ್ಯಗಳ ಇತಿಹಾಸವು ದೈವಿಕ ಹಾಗೂ ಸಮೃದ್ಧವಾಗಿದೆ.’
೧. ವೈದಿಕ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ವಿವಿಧವಾದ್ಯಗಳು ಮತ್ತು ಅವುಗಳ ಉಪಯೋಗ !
ವೈದಿಕ ಕಾಲದಲ್ಲಿ ವಿವಿಧ ಉತ್ಸವ, ಮಂಗಲ ಕಾರ್ಯ, ಯಜ್ಞ ಮತ್ತು ಧ್ವಜಪೂಜೆ ಇತ್ಯಾದಿಗಳ ಸಂದರ್ಭಗಳಲ್ಲಿ ವಾದ್ಯವಾದನವು ನಡೆಯುತ್ತಿತ್ತು. ವೈದಿಕ ಸಾಹಿತ್ಯದಲ್ಲಿ ‘ಆಘಾಟಿ (ಕಾಂಡವೀಣಾ)’, ಘಾಟಲಿಕಾ’, ‘ಪಿಚ್ಛೋರಾ’, ‘ಕರ್ಕರಿ’ ಇತ್ಯಾದಿ ವೀಣೆಗಳ ಉಲ್ಲೇಖವಿದೆ. ಆ ಕಾಲದಲ್ಲಿ ಶತತಂತ್ರಿ ವೀಣೆ, ಅಂದರೆ ೧೦೦ ತಂತಿಗಳಿರುವ ವಾದ್ಯಗಳೂ ಇದ್ದವು. ‘ಯಜ್ಞದ ಸಮಯದಲ್ಲಿ ಸಾಮಗಾಯನದೊಂದಿಗೆ ವೀಣಾ ವಾದನವೂ ನಡೆಯುತ್ತಿತ್ತು’, ಎಂಬ ಉಲ್ಲೇಖ ಪುರಾಣಗಳಲ್ಲಿ ಕಂಡುಬರುತ್ತದೆ. ವೈದಿಕ ಕಾಲದಲ್ಲಿ ‘ವೇಣು (ಕೊಳಲು), ವಂಶ, ನಾಡಿ’, ಇಂತಹ ಸುಷಿರ ವಾದ್ಯಗಳ (ಟಿಪ್ಪಣಿ) ವರ್ಣನೆಯೂ ಕಂಡುಬರುತ್ತದೆ.
(ಆಧಾರ : ಭಾರತೀಯ ಸಂಗೀತದ ಇತಿಹಾಸ, ಲೇಖಕರು : ಡಾ. ಠಾಕುರ ಜಯದೇವ ಸಿಂಹ)
ಟಿಪ್ಪಣಿ – ಸುಷಿರ ವಾದ್ಯಗಳು : ಗಾಳಿಯನ್ನು ಬಳಸಿಕೊಂಡು ಧ್ವನಿಯನ್ನು ಹೊರಡಿಸುವ ವಾದ್ಯಗಳು.
೨.ದೇವತೆಗಳು ಮತ್ತು ಅವರಿಗೆ ಸಂಬಂಧಿಸಿದ ವಾದ್ಯಗಳು ನಾದಬ್ರಹ್ಮನ ಅನುಭೂತಿಯನ್ನು ನೀಡುವ ಪ್ರಾಚೀನ ಮತ್ತು ದೈವೀ ವಾದ್ಯಗಳನ್ನು ದೇವತೆಗಳೂ ಧರಿಸಿದ್ದಾರೆ.
ಅ.ಭಗವಾನ ಶಿವನ ಕೈಯಲ್ಲಿ ಡಮರು ಇದೆ. ಭಗವಾನ ಶಂಕರನು ಡಮರುವಿನ ನಾದದ ಮೂಲಕವೇ ಸೃಷ್ಟಿಯನ್ನು ನಿರ್ಮಿಸಿದನು’, ಎಂದು ಶಿವಪುರಾಣದಲ್ಲಿ ಹೇಳಲಾಗಿದೆ.
ಆ.‘ಭಗವಾನ ಶ್ರೀ ಗಣೇಶನು ಮೃದಂಗವಾದನ ಮಾಡುತ್ತಾನೆ’ ಎಂದು ಶಿವಪುರಾಣದ ಅನೇಕ ಕಡೆಗಳಲ್ಲಿ ಉಲ್ಲೇಖವಿದೆ.
ಇ. ಸಂಗೀತ ದೇವಿ ಸರಸ್ವತಿದೇವಿಯು ವೀಣೆಯನ್ನು ಧರಿಸಿದ್ದಾಳೆ.
ಈ. ಭಗವಾನ ಶ್ರೀಕೃಷ್ಣನ ಬಳಿ ಕೊಳಲಿದೆ. ‘ಗೋಪ-ಗೋಪಿ ಯರು ಶ್ರೀಕೃಷ್ಣನ ಕೊಳಲಿನ ದೈವೀ ನಾದದಿಂದ ಉಚ್ಚತಮ ನಾದಬ್ರಹ್ಮನ ಅನುಭೂತಿಯನ್ನು ಪಡೆಯುತ್ತಿದ್ದರು’, ಎಂದು ಶ್ರೀ ಭಾಗವತ ಪುರಾಣದಲ್ಲಿ ಹೇಳಲಾಗಿದೆ.
ಉ. ಭಗವಾನ ಶ್ರೀಕೃಷ್ಣನು ಪಾಂಚಜನ್ಯ ಶಂಖವನ್ನು ಧರಿಸಿದ್ದು ಮಹಾಭಾರತ ಯುದ್ಧದಲ್ಲಿ ಈ ಶಂಖನಾದದೊಂದಿಗೆ ಯುದ್ಧವು ಆರಂಭವಾಗುತ್ತಿತ್ತು ಮತ್ತು ಈ ಶಂಖನಾದದಿಂದ ಯುದ್ಧದಲ್ಲಿ ವೀರರಲ್ಲಿ ಹೋರಾಡುವ ಸ್ಫೂರ್ತಿಯು ಉಂಟಾಗುತ್ತಿತ್ತು.
ದೇವತೆಗಳಿಗೆ ಸಂಬಂಧಿಸಿದ ವಾದ್ಯಗಳ ನಾದದಿಂದ ನಾವು ಆಧ್ಯಾತ್ಮಿಕ ಅನುಭೂತಿಗಳನ್ನು ಪಡೆಯಬಹುದು. ‘ಆಹತನಾದ’ದಿಂದ (ಆಘಾತದಿಂದ ಉಂಟಾಗುವ ನಾದದಿಂದ) ‘ಅನಾಹತನಾದ’ ದ (ಯಾವುದೇ ಆಘಾತವಿಲ್ಲದೆ ಕೇಳಿ ಬರುವ ದೈವೀ ನಾದದ) ಅನುಭೂತಿ’, ನೀಡುವ ಭಾರತೀಯ ವಾದ್ಯಗಳ ಇತಿಹಾಸವು ದೈವೀ ಮತ್ತು ಸಮೃದ್ಧವಾಗಿದೆ.’

೩. ಪುರಾಣಗಳಲ್ಲಿನ ವಾದ್ಯಗಳು ಮತ್ತು ವಾದನದ ಉದ್ದೇಶ
ಅ. ಕೆಲವು ವಾದ್ಯಗಳ ನಾದದಿಂದ ಮಂಗಲಮಯ ವಾತಾವರಣ ಉಂಟಾಗುತ್ತದೆ. ಆದ್ದರಿಂದಲೇ ಪುರಾತನ ಕಾಲದಿಂದ ಇಂದಿನವರೆಗೂ ಯಜ್ಞದ ಸಮಯದಲ್ಲಿ ಅಥವಾ ಮಂಗಲ ಪ್ರಸಂಗಗಳಲ್ಲಿ ವಿವಿಧ ವಾದ್ಯಗಳ ಆನಂದವನ್ನು ನೀಡುವ ಸಂಗೀತವನ್ನು ಹಾಕಲಾಗುತ್ತದೆ, ಉದಾ. ವೀಣೆ, ಕೊಳಲು ಇತ್ಯಾದಿ.
‘ರಾವಣನನ್ನು ವಧಿಸಿದ ನಂತರ ಪ್ರಭು ಶ್ರೀರಾಮನು ಅಯೋಧ್ಯೆಗೆ ಬಂದಾಗ, ಅಯೋಧ್ಯಾವಾಸಿಗಳು ಶ್ರೀರಾಮನನ್ನು ಶಂಖ, ದುಂದುಭಿ (ದೊಡ್ಡ ನಗಾರಿ) ಮತ್ತು ಮಂಗಲ ವಾದ್ಯಗಳನ್ನು ಬಾರಿಸುತ್ತಾ ಸ್ವಾಗತಿಸಿದರು’, ಎಂಬ ಉಲ್ಲೇಖ ಪುರಾಣದಲ್ಲಿದೆ. (ಆಧಾರ : ಭಾರತೀಯ ಸಂಗೀತದ ಇತಿಹಾಸ ತೃತೀಯ ಅಧ್ಯಾಯ, ರಾಮಾಯಣ ಕಾಲದ ಸಂಗೀತ, ಲೇಖಕರು : ಡಾ. ಶರದಚಂದ್ರ ಶ್ರೀಧರ ಪರಾಂಜಪೆ)
ಆ. ದ್ವಾಪರ ಯುಗದಲ್ಲಿಯೂ ವಾದ್ಯವಾದನಗಳ ಉಲ್ಲೇಖ ಇದೆ. ಸ್ವತಃ ಭಗವಾನ ಶ್ರೀಕೃಷ್ಣನು ‘ಮುರಲಿ’ಯನ್ನು ಊದುತ್ತಿದ್ದನು. ಭಗವದ್ಗೀತೆಯ ಮೊದಲ ಅಧ್ಯಾಯದಲ್ಲಿ ‘ಶಂಖ, ನಗಾರಿ, ಪಣವ (ಸಣ್ಣ ಗಾತ್ರದ ಮೃದಂಗ ಅಥವಾ ಡೋಲು, ಆನಕ (ದೊಡ್ಡ ಗಾತ್ರದ ನಗಾರಿ), ಗೋಮುಖ’, ಇಂತಹ ರಣವಾದ್ಯಗಳ ಹೆಸರು ಗಳಿವೆ. ಆ ಸಮಯದಲ್ಲಿ ಯೋಧರಿಗೆ ಯುದ್ಧಕಲೆಯಲ್ಲಿ ವಿಶಿಷ್ಟ ಸ್ವರಗಳಲ್ಲಿ ಶಂಖವನ್ನು ಊದುವ ತರಬೇತಿಯನ್ನು ನೀಡ ಲಾಗುತ್ತಿತ್ತು. ಶ್ರೀಕೃಷ್ಣನ ‘ಪಾಂಚಜನ್ಯ ಶಂಖ’, ಅರ್ಜುನನ ‘ದೇವದತ್ತ ಶಂಖ’, ಯುಧಿಷ್ಠಿರನ ‘ಅನಂತವಿಜಯ ಶಂಖ’ ಹೀಗೆ ಶಂಖಗಳ ಹೆಸರುಗಳಿದ್ದವು. ಇದರಿಂದ ‘ಆ ಸಮಯದಲ್ಲಿಯೂ ಯುದ್ಧಾರಂಭದಲ್ಲಿ ಶಂಖನಾದಕ್ಕೆ ಅಸಾಧಾರಣ ಮಹತ್ವವಿತ್ತು’, ಎಂಬುದು ಗಮನಕ್ಕೆ ಬರುತ್ತದೆ.
ಇ. ಕೆಲವು ಪುರಾಣಗಳಲ್ಲಿ ಉಲ್ಲೇಖವಿರುವಂತೆ, ವಾದ್ಯಗಳ ನಾದವನ್ನು ಶತ್ರುಗಳನ್ನು ಭಯಭೀತಗೊಳಿಸಲು ಮತ್ತು ಯೋಧರಲ್ಲಿ ವೀರರಸವನ್ನು ಜಾಗೃತಗೊಳಿಸಿ ಶತ್ರುಗಳನ್ನು ಪರಾಜಯ ಗೊಳಿಸುವ ಶಕ್ತಿಯನ್ನು ತುಂಬಲು ಬಳಸಲಾಗುತ್ತಿತ್ತು. ಇದಕ್ಕಾಗಿ ಮಾರಕಭಾವವನ್ನು ಉಂಟು ಮಾಡುವ ವಾದ್ಯಗಳು, ಉದಾ. ದುಂದುಭಿ, ಭೇರಿ ರಣಕಹಳೆಗಳನ್ನು ಬಾರಿಸಲಾಗುತ್ತಿತ್ತು.
೪. ಪುರಾಣಕಾಲದ ನಾದೋಪಾಸನೆಯ ಉದಾಹರಣೆ
ವಾದ್ಯಗಳ ನಾದವು ಕೇವಲ ಕೇಳುವುದಕ್ಕಷ್ಟೇ ಇಲ್ಲ, ಅವು ಭಗವಂತನ ಆರಾಧನೆಗಾಗಿಯೂ ಪೂರಕ ಸಾಧನವಾಗಿವೆ. ಆದುದರಿಂದಲೇ ಅನೇಕ ಋಷಿಮುನಿಗಳು ಮತ್ತು ಸಂಗೀತದಲ್ಲಿನ ಪ್ರಸಿದ್ಧ ಪಂಡಿತರ ನಾದೋಪಾಸನೆಯ ಉಲ್ಲೇಖ ಪುರಾಣದಲ್ಲಿದೆ.
ಒಂದು ಕಥೆಯ ಪ್ರಕಾರ, ಭಗವಾನ ಶಿವನ ಪ್ರಾಣಲಿಂಗವನ್ನು ಪಡೆಯಲು ರಾವಣನು ತನ್ನ ಸಂಗೀತದ ಮಾಧ್ಯಮದಿಂದ ಶಿವನನ್ನು ಸ್ತುತಿಸಿ ಉಪಾಸನೆ ಮಾಡಿದ್ದನು. ಆ ಸಮಯದಲ್ಲಿ ಅವನು ತನ್ನ ಶರೀರದಲ್ಲಿನ ನಾಡಿಗಳನ್ನು ವೀಣೆಯ ತಂತಿಗಳಂತೆ ನುಡಿಸಿಅದರಿಂದ ಉಂಟಾದ ನಾದದಿಂದ ಶಿವನ ಕಠೋರ ಆರಾಧನೆ ಮಾಡಿದನು. ಅವನ ಈ ನಾದೋಪಾಸನೆಯಿಂದ ಭಗವಾನ ಶಂಕರನು ರಾವಣನ ಮೇಲೆ ಪ್ರಸನ್ನಗೊಂಡಿದ್ದನು. ಇದು ವಾದ್ಯಗಳ ನಾದದಿಂದ ಈಶ್ವರೋಪಾಸನೆ ಮಾಡಿದ ಉತ್ತಮ ಉದಾಹರಣೆಯಾಗಿದೆ.
೫. ಐತಿಹಾಸಿಕ ಕಾಲದಲ್ಲಿನ ವಾದ್ಯಗಳು
ಅಜಂತಾ, ಎಲ್ಲೋರಾ, ಖುಜೊರಾಹೊ ಮುಂತಾದ ವಿವಿಧ ಗುಹೆಗಳಲ್ಲಿ ಐತಿಹಾಸಿಕ ಕಾಲದಲ್ಲಿ ಬಳಸಲ್ಪಡುವ ವಿವಿಧ ವಾದ್ಯಗಳನ್ನು ನುಡಿಸುತ್ತಿರುವ ಶಿಲ್ಪಗಳಿವೆ. ಇದರಿಂದ ಆ ಕಾಲದಲ್ಲಿಯೂ ವಿವಿಧ ಸಂದರ್ಭಗಳಲ್ಲಿ ವಾದ್ಯಗಳನ್ನು ಬಳಸಲಾಗುತ್ತಿತ್ತು ಎಂಬುದು ನಮ್ಮ ಗಮನಕ್ಕೆ ಬರುತ್ತದೆ.
೬. ಸಂತರಿಂದ ಭಗವಂತನ ಸ್ತುತಿಗೆ ವಾದ್ಯಗಳ ಬಳಕೆ !
ಅ. ವಾದ್ಯಗಳ ಮಾಧ್ಯಮದಿಂದ ಭಕ್ತನ ಮನಸ್ಸಿನಲ್ಲಿನ ಭಾವವು ‘ನಾದ’ದ ರೂಪದಲ್ಲಿ ಪ್ರಕಟವಾಗಿ ಅವನಿಗೆ ಈಶ್ವರೀ ಅನುಭೂತಿ ಬರುತ್ತದೆ; ಆದುದರಿಂದಲೇ ಭಾರತಾದ್ಯಂತದ ಅನೇಕ ಸಂತ-ಮಹಾತ್ಮರು ವಿವಿಧ ವಾದ್ಯಗಳನ್ನು ನುಡಿಸಿ ಭಗವಂತನ ಸ್ತುತಿಗಾನ, ಭಜನೆ ಅಥವಾ ಕೀರ್ತನೆ ಮಾಡಿದ್ದಾರೆ. ಸಂತ ಮೀರಾಬಾಯಿಯು ಶ್ರೀಕೃಷ್ಣನ ಗುಣಗಾನಕ್ಕಾಗಿ ಒಂದುತಂತಿ ವಾದ್ಯವನ್ನು ಬಳಸುತ್ತಿದ್ದಳು. ಸಂತ ನಾಮದೇವ ಮಹಾರಾಜರು ಮತ್ತು ಸಂತ ತುಕಾರಾಮ ಮಹಾರಾಜರ ಕೈಯಲ್ಲಿ ಒಂದುತಂತಿ, ಚಿಪಳಿ(ಭಜನೆಯಲ್ಲಿ ಬಳಸುವ ಮರದ ವಾದ್ಯ), ತಾಳಗಳು ಇತ್ಯಾದಿ ವಾದ್ಯಗಳು ಇದ್ದವು. ಈ ವಾದ್ಯಗಳ ನಾದದಿಂದ ಭಗವಂತನ ಗುಣಗಾನ ಮಾಡುವಲ್ಲಿ ಈ ಸಂತರು ಮಗ್ನರಾಗುತ್ತಿದ್ದರು.
ಆ. ವೈಷ್ಣವ ಸಂಪ್ರದಾಯದಲ್ಲಿ ಕೀರ್ತನೆಗಳಲ್ಲಿ ಮೃದಂಗ ಮತ್ತು ಕರತಾಳ(ಕೈತಾಳ)’, ಈ ವಾದ್ಯಗಳನ್ನು ಬಳಸಲಾಗುತ್ತಿತ್ತು.
೭. ಸಾರಾಂಶ
ಭಾರತೀಯ ವಾದ್ಯಗಳ ಇತಿಹಾಸದಿಂದ ಕಲಿತು ಈ ವಾದ್ಯಗಳ ಮಾಧ್ಯಮದಿಂದ ನಾವೂ ನಾದಬ್ರಹ್ಮನ ಅನುಭೂತಿಯನ್ನು ಪಡೆಯ ಬಹುದು; ಆದರೆ ಪ್ರಸ್ತುತ ವಾದನ ಕಲೆಯನ್ನು ಕೇವಲ ಮನೋರಂಜನೆ ಅಥವಾ ಕಲೆಯ ಪ್ರದರ್ಶನದ ದೃಷ್ಟಿಯಿಂದ ನೋಡುವುದರಿಂದ ನಾದದ ಮಾಧ್ಯಮದ ದೈವೀ ಅನುಭೂತಿ ಗಳಿಂದ ವಾದಕರು ಮತ್ತು ಶ್ರೋತೃಗಳು ವಂಚಿತರಾಗುತ್ತಿದ್ದಾರೆ.
ಭಾರತೀಯ ವಾದ್ಯಗಳ ‘ನಾದ’ವು ಸಂಗೀತ-ಉಪಾಸಕನಿಗೆ ಸಾಧನೆಗಾಗಿ ಪೂರಕವಾಗಿರುವುದು ಅನೇಕ ಸಂಶೋಧನೆಗಳಿಂದ ತಿಳಿದುಬಂದಿದೆ. ಆದ್ದರಿಂದಲೇ ವಾದಕನು ವಾದನ ಕಲೆಯನ್ನು ಕೇವಲ ಬಾಹ್ಯ ದೃಷ್ಟಿಯಿಂದ ನೋಡದೇ ಆ ನಾದದ ಮಾಧ್ಯಮ ದಿಂದ ಭಗವಂತನನ್ನು ಅನುಭವಿಸಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಮಾರ್ಗದರ್ಶನ ನೀಡಲಾಗುತ್ತದೆ.’
ಸಂಕಲನಕಾರರು : ಶ್ರೀ. ಮನೋಜ ಸಹಸ್ರಬುದ್ಧೆ, ವಾದ್ಯಗಳ ಅಧ್ಯಯನಕಾರರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೨೪.೧೦.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !