‘ಆಪರೇಷನ್ ಸಿಂದೂರ್’ ನಿಲ್ಲಿಸಿ ಪಾಕಿಸ್ತಾನದೊಂದಿಗೆ ಚರ್ಚೆ ನಡೆಸಿ !’ – cong. Manishankar ayyar

ನವ ದೆಹಲಿ – ಭಾರತವು ಕೂಡಲೇ ‘ಆಪರೇಷನ್ ಸಿಂದೂರ’ ನಿಲ್ಲಿಸಬೇಕು ಮತ್ತು ಪಾಕಿಸ್ತಾನದೊಂದಿಗೆ ಯಾವುದೇ ವಿಳಂಬವಿಲ್ಲದೆ ಮಾತುಕತೆ ನಡೆಸಬೇಕು ಎಂದು ಕಾಂಗ್ರೆಸ್ಸಿನ ಪಾಕಿಸ್ತಾನಪ್ರೇಮಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ ಅಯ್ಯರ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಭಾಜಪವು ತೀವ್ರವಾಗಿ ಟೀಕಿಸಿದೆ.

ಕಾಂಗ್ರೆಸ್ ಈಗ ‘ಇಸ್ಲಾಮಾಬಾದ್ ನ್ಯಾಷನಲ್ ಕಾಂಗ್ರೆಸ್’ ಆಗಿದೆ ! – ಭಾಜಪ

ಭಾಜಪದ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಮಾತನಾಡಿ, ಕಾಂಗ್ರೆಸ್ ಈಗ ‘ಇಸ್ಲಾಮಾಬಾದ್ ನ್ಯಾಷನಲ್ ಕಾಂಗ್ರೆಸ್’ ಆಗಿದೆ. ಕಾಂಗ್ರೆಸ್ ಪದೇ ಪದೇ ಪಾಕಿಸ್ತಾನವನ್ನು ನಿರ್ದೋಷಿ ಎಂದು ಬಿಂಬಿಸುತ್ತದೆ ಮತ್ತು ಭಯೋತ್ಪಾದನೆಯ ವಿರುದ್ಧದ ಕಠಿಣ ಕ್ರಮಗಳನ್ನು ವಿರೋಧಿಸುತ್ತದೆ. ಕಾಂಗ್ರೆಸ್ಸಿನ ಗುರುತು ಈಗ ‘ಪಾಕ್ ನನ್ನ ಭಾಯಿಜಾನ್ (ಸಹೋದರ), ಸೈನ್ಯಕ್ಕೆ ಮಾಡಿ ಅಪಮಾನ’ ಎಂದಂತಾಗಿದೆ, ಎಂದು ಕಿಡಿಕಾರಿದ್ದಾರೆ.

ಪ್ರತಿಯೊಬ್ಬರಿಗೂ ತಮ್ಮ ಹಕ್ಕು ಚಲಾಯಿಸುವ ಅಧಿಕಾರವಿದೆಯಂತೆ! – ಮಾಕಪನ ನುಡಿಮುತ್ತು

ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ (ಮಾಕಪ) ನಾಯಕ ಹನ್ನಾನ್ ಮೊಲ್ಲಾಹ ಅವರು ಅಯ್ಯರ್ ಅವರ ಹೇಳಿಕೆಯನ್ನು ಸಮರ್ಥಿಸುತ್ತಾ, ಇದು ಒಂದು ತರ್ಕಬದ್ಧವಾದ ಅಭಿಪ್ರಾಯವಾಗಿದೆ. ಪ್ರತಿಯೊಬ್ಬರಿಗೂ ತಮ್ಮ ಸ್ವಂತ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅಧಿಕಾರವಿದೆ. ಇದು ಅವರ ವೈಯಕ್ತಿಕ ಅಭಿಪ್ರಾಯ. ಇದರಲ್ಲಿ ಏನಾದರೂ ಸತ್ಯಾಂಶವಿದ್ದರೆ ಜನರು ಅದನ್ನು ಸ್ವೀಕರಿಸುತ್ತಾರೆ; ಇಲ್ಲದಿದ್ದರೆ ತಿರಸ್ಕರಿಸುತ್ತಾರೆ, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಮಾರ್ಕಿಸ್ಟ ಕಮ್ಯುನಿಸ್ಟ ಪಕ್ಷದ ಮಾನಸಿಕತೆಯು ಯಾವಾಗಲೂ ಭಾರತವಿರೋಧಿಯೇ ಆಗಿರುವುದರಿಂದ ಇಂತಹ ಪಕ್ಷದ ಮೇಲೆ ಈಗ ನಿಷೇಧ ಹೇರುವುದೇ ಅಗತ್ಯವಾಗಿದೆ!

 

ಸಂಪಾದಕೀಯ ನಿಲುವು

ಪಾಕಿಸ್ತಾನ ಪ್ರೇಮದಿಂದ ತುಂಬಿರುವ ಮಣಿಶಂಕರ್ ಅವರ ಇತಿಹಾಸದಿಂದ ಇಷ್ಟರೊಳಗೆ ಅವರು ಸೆರೆಮನೆಯಲ್ಲಿ ಇರುವುದು ಅಗತ್ಯವಾಗಿತ್ತು. ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಅವರನ್ನು ಆಜನ್ಮ ಕಾರಾಗೃಹಕ್ಕೆ ತಳ್ಳಬೇಕು ಎಂದೇ ರಾಷ್ಟ್ರಪ್ರೇಮಿಗಳಿಗೆ ಎನಿಸುತ್ತದೆ!