
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಹಮಾಸ್ ಮತ್ತು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಗಳ ನಾಯಕರ ಸಭೆ ನಡೆದ ವಿಡಿಯೋ ಬೆಳಕಿಗೆ ಬಂದಿದೆ. ಈ ಸಭೆಯು ಗುಜ್ರನ್‌ವಾಲಾ ನಗರದಲ್ಲಿ ನಡೆದಿದ್ದು, ಅದರಲ್ಲಿ ಹಮಾಸ್ ನ ಕಮಾಂಡರ್ ನಾಜಿ ಜಹೀರ್ ಮತ್ತು ಲಷ್ಕರ್-ಎ-ತೊಯ್ಬಾ ಕಮಾಂಡರ್ ರಶೀದ್ ಅಲಿ ಸಂಧು ಇಬ್ಬರೂ ಭಾಗವಹಿಸಿದ್ದರು. ಲಷ್ಕರ್-ಎ-ತೊಯ್ಬಾದ ರಾಜಕೀಯ ಮುಖ ಎಂದು ಪರಿಗಣಿಸಲಾದ ‘ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್’ ಆಯೋಜನೆ ಮಾಡಿದ್ದ ಒಂದು ಕಾರ್ಯಕ್ರಮದಲ್ಲಿ ಈ ಸಭೆ ನಡೆದಿದೆ.
ಫೆಬ್ರವರಿ ೨೦೨೫ ರಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕೆಲವೇ ವಾರಗಳ ಮೊದಲು, ನಾಜಿ ಜಹೀರ್ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಬಂದಿದ್ದನು. ಅಲ್ಲಿಯೇ ಅವನು ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್‌ನ ಕಮಾಂಡರ್‌ಗಳೊಂದಿಗೆ ಭಾರತ ವಿರೋಧಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದನು.
ಸಂಪಾದಕೀಯ ನಿಲುವುಇಸ್ರೇಲ್ ಹಮಾಸ್ ನ ಗುಂಪನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮುಂದಾಗಿದೆ. ಇದರಿಂದ ಹಮಾಸ್‌ನ ಶಕ್ತಿ ಕುಗ್ಗಿದೆ. ಇನ್ನೊಂದೆಡೆ ಭಾರತವು ‘ಆಪರೇಷನ್ ಸಿಂದೂರ’ ದ ಮೂಲಕ ಲಷ್ಕರ್-ಎ-ತೊಯ್ಬಾದ ಕೆಲವು ನೆಲೆಗಳನ್ನು ನಾಶಪಡಿಸಿದೆ. ಆದರೂ ಅದನ್ನು ಇನ್ನೂ ಸಂಪೂರ್ಣವಾಗಿ ನಾಶ ಮಾಡಿಲ್ಲ. ಆದ್ದರಿಂದ, ಈಗ ಸರಕಾರವು ಇಸ್ರೇಲಿ ಧೋರಣೆಯನ್ನು ಸ್ವೀಕರಿಸಿ ಲಷ್ಕರ್-ಎ-ತೊಯ್ಬಾದ ಸಂಪೂರ್ಣ ನಾಶ ಮಾಡಬೇಕು, ಹೀಗೆ ನಿರೀಕ್ಷೆ ಇದೆ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು