ಜಾಗೋ ಮಾ ! – ಸಂಪಾದಕೀಯ

ಗಾಯಕಿ ಲಗ್ನಜಿತಾ ಚಕ್ರವರ್ತಿ ಮತ್ತು ತೃಣಮೂಲ ಕಾಂಗ್ರೆಸನ ಕಾರ್ಯಕರ್ತ ಮಹಬೂಬ ಮಲೀಕ

ಗಾಯಕಿ ಲಗ್ನಜಿತಾ ಚಕ್ರವರ್ತಿಯವರು ಬಂಗಾಳದ ಭಗವಾನಪುರದ ಒಂದು ಖಾಸಗಿ ಶಾಲೆಯಲ್ಲಿ ‘ಜಾಗೋ ಮಾ’ ಎಂಬ ಗೀತೆಯನ್ನು ಹಾಡುತ್ತಿದ್ದಾಗ, ತೃಣಮೂಲ ಕಾಂಗ್ರೆಸ್‌ನ ಕಾರ್ಯಕರ್ತ ಮೆಹಬೂಬ್‌ ಮಲಿಕ್‌ ವೇದಿಕೆಯ ಮೇಲೆ ಬಂದು ಅವರಿಗೆ ಹಾಡನ್ನು ನಿಲ್ಲಿಸುವಂತೆ ಒತ್ತಾಯಿಸಿದನು. ಈ ಖಾಸಗಿ ಶಾಲೆಯು ಮೆಹಬೂಬ್‌ ಮಲಿಕ್‌ ಇವರ ಒಡೆತನದಲ್ಲಿದೆ. ಅದರಲ್ಲೂ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದಾರೆ.  ಹೀಗಿರುವಾಗ ಆತನೇ ವೇದಿಕೆಗೆ ಬಂದು ವಿರೋಧಿಸಿದರೆ ಆತನನ್ನು ಕೇಳುವವರು ಯಾರು ? ‘ಮಾ’ ಅಂದರೆ ‘ತಾಯಿ’ಯ ಬಗ್ಗೆ ಯಾರಾದರೂ ಮಾತನಾಡಿದರೆ ಅಥವಾ ಹಾಡಿದರೆ ಮುಸಲ್ಮಾನರು ಕೆರಳುತ್ತಾರೆ. ‘ಅಲ್ಲಾಹನ ಹೊರತು ನಾವು ಬೇರೆಯವರ ಮುಂದೆ ತಲೆ ಬಾಗುವುದಿಲ್ಲ’ ಎಂದು ಹೇಳುತ್ತಾ ಮುಸಲ್ಮಾನರು ‘ವಂದೇ ಮಾತರಮ್‌’ ಹಾಡುವುದಿಲ್ಲ. ಅವರ ಈ ಉದ್ಧಟತನದ ಬೇಡಿಕೆಯನ್ನು ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ ಮತ್ತು ಇತರ ಜಾತ್ಯತೀತ ರಾಜಕೀಯ ಪಕ್ಷಗಳು ಬೆಂಬಲಿಸುತ್ತವೆ. ‘ವಂದೇ ಮಾತರಮ್‌’ ವಿರೋಧವು ರಾಜಕೀಯ ಪ್ರೇರಿತವಾಗಿರಬಹುದು; ಆದರೆ ‘ಜಾಗೋ ಮಾ’ ಗೀತೆಯ ವಿಷಯದಲ್ಲಿ ಏಕೆ ಹೀಗೆ ?

ಈ ಗೀತೆಯನ್ನು ವಿರೋಧಿಸುವ ಮೊದಲು ಮೆಹಬೂಬ್‌ ಮಲಿಕ್‌ ಇದನ್ನು ಎಂದಾದರೂ ಕೇಳಿದ್ದಾರೆಯೇ, ಇಲ್ಲವೇ ಎಂದು ತಿಳಿಯಲು ಯಾವುದೇ ಮಾರ್ಗವಿಲ್ಲ. ಇದನ್ನು  ಆಲಿಸುವ ಕಷ್ಟವನ್ನು ಅವರು ತೆಗೆದುಕೊಂಡಿದ್ದರೆ,  ಬಹುಶಃ ಆ ಹಾಡನ್ನು ನಿಲ್ಲಿಸುತ್ತಿರಲಿಲ್ಲ. ‘ವಂದೇ ಮಾತರಮ್‌’ ಗೀತೆಯು ಮಾತೃಭೂಮಿಯನ್ನು ಉದ್ದೇಶಿಸಿದೆ, ಆದರೆ ‘ಜಾಗೋ ಮಾ’ ಹಾಡು ಹಾಗಿಲ್ಲ. ಇದು ಮಾತೃಶಕ್ತಿ ಮತ್ತು ಸ್ತ್ರೀಶಕ್ತಿಯನ್ನು ಜಾಗೃತಗೊಳಿಸುವ ಕುರಿತಾಗಿದೆ. ಈ ಗೀತೆಯು ‘ದೇವಿ ಚೌಧುರಾನಿ’ ಚಲನಚಿತ್ರದ್ದಾಗಿದೆ. ವಿರೋಧದ ಈ ಹಿನ್ನೆಲೆಯನ್ನು ನೋಡಿದರೆ ಇದಕ್ಕೆ ಯಾವುದೇ ಸೈದ್ಧಾಂತಿಕ ಆಧಾರವಿದೆ ಎಂದು ತೋರುವುದಿಲ್ಲ. ಈ ಚಿತ್ರವು ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಕಾದಂಬರಿ ಆಧಾರಿತವಾಗಿದೆ. ಬಂಕಿಮಚಂದ್ರರು ‘ವಂದೇ ಮಾತರಮ್‌’ ಬರೆದಿದ್ದಾರೆ ಎಂಬ ಕಾರಣಕ್ಕೆ ಅವರ ಪ್ರತಿಯೊಂದು ಕೃತಿಯನ್ನು ಮುಸಲ್ಮಾನರು ವಿರೋಧಿಸುತ್ತಾರೆಯೇ ? ಆದ್ದರಿಂದ ಈ ವಿರೋಧವು ಕೇವಲ ‘ವಿರೋಧಕ್ಕಾಗಿ ವಿರೋಧ’ ಮತ್ತು ಮತಾಂಧತೆಯನ್ನು ಪೋಷಿಸಲು ಮಾಡುತ್ತಿರುವುದು ಎಂಬುದು ಸ್ಪಷ್ಟವಾಗುತ್ತದೆ. ಲಗ್ನಜಿತಾ ಚಕ್ರವರ್ತಿ ಅವರು ವೇದಿಕೆಯಲ್ಲಿ ಧಾರ್ಮಿಕ ಹಾಡುಗಳನ್ನು ಹಾಡುವ ಬದಲು ಜಾತ್ಯತೀತ ಹಾಡುಗಳನ್ನು ಹಾಡಲಿ ಎಂದು ಮಲಿಕ್‌ ಬೆದರಿಸಿದ್ದಾರೆ. ಮುಸಲ್ಮಾನರಿಗೆ ಇಷ್ಟವಿಲ್ಲ ಎಂಬ ಕಾರಣಕ್ಕೆ ಹಿಂದೂಗಳ ಜೀವನಶೈಲಿ, ಆಹಾರ, ಗಾಯನ, ಭಾಷೆ – ಇವೆಲ್ಲವನ್ನೂ ಜಾತ್ಯತೀತಗೊಳಿಸಬೇಕೇ ? ಹಿಂದೂಗಳು ಮಾತ್ರ ಎಲ್ಲವನ್ನೂ ತ್ಯಾಗ ಮಾಡಬೇಕು, ಆದರೆ ಮುಸಲ್ಮಾನರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳುವುದಿಲ್ಲ; ಇದೇ ಅವರ ‘ಜಾತ್ಯತೀತತೆ’ಯಾಗಿದೆ. ಬಂಗಾಳದ ಸದ್ಯದ ಸ್ಥಿತಿಯನ್ನು ನೋಡಿದರೆ, ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮ ನಡೆಸಬೇಕಾದರೂ ಮೊದಲು ಮತಾಂಧ ಮುಸಲ್ಮಾನರಿಂದ ‘ನಿರಾಕ್ಷೇಪಣಾ (ಅನುಮೋದನೆ) ಪತ್ರ’ ಪಡೆಯುವುದನ್ನು ಕಡ್ಡಾಯಗೊಳಿಸಬಹುದು. ಈ ಕಾರ್ಯಕ್ರಮದಲ್ಲಿ ‘ಹಿಂದೂ ಧರ್ಮ’, ‘ಹಿಂದೂ ದೇವತೆಗಳು’, ‘ಹಿಂದೂ ಧರ್ಮಗ್ರಂಥಗಳ’ ಬಗ್ಗೆ ಯಾವುದೇ ಉಲ್ಲೇಖವಿಲ್ಲ, ಎಂದು ದೃಢಪಡಿಸಿಕೊಂಡ ಬಳಿಕವಷ್ಟೇ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಬಹುದು. ‘ಜಾಗೋ ಮಾ’ ಹಾಡಿನ ಕಾರಣದಿಂದ ಬಂಗಾಳದಲ್ಲಿ ವಾತಾವರಣ ಹಾಳಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಲಗ್ನಜಿತಾ ಚಕ್ರವರ್ತಿ ಅವರು ಶೀಘ್ರದಲ್ಲೇ ಅಮರಬಾಗ್‌ ನಗರದಲ್ಲಿ ಗಾಯನ ಕಾರ್ಯಕ್ರಮ ನೀಡಲಿದ್ದಾರೆ. ‘ಈ ಕಾರ್ಯಕ್ರಮದಲ್ಲಿಯೂ ನಾನು ಜಾಗೋ ಮಾ ಹಾಡನ್ನು ಹಾಡುತ್ತೇನೆ’ ಎಂದು ಅವರು ಹೇಳಿದ್ದಾರೆ. ಭಗವಾನಪುರದಲ್ಲಿ ಮಲಿಕ್‌ ವೇದಿಕೆಯ ಮೇಲೆ ಬಂದು  ಭಯದ ವಾತಾವರಣವನ್ನು ನಿರ್ಮಿಸಿದನು. ಇದರಿಂದ ಗಾಯನ ಕಾರ್ಯಕ್ರಮವನ್ನು ನಿಲ್ಲಿಸಬೇಕಾಯಿತು. ಅಮರಬಾಗ್‌ನಲ್ಲಿ  ಶೇ. ೨೦ ಕ್ಕಿಂತ ಹೆಚ್ಚು ಮುಸಲ್ಮಾನ ಜನಸಂಖ್ಯೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಮುಸಲ್ಮಾನರು ವಿರೋಧಿಸಿದರೆ ಆಡಳಿತ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧವಿದೆಯೇ ? ಈ ಸಂಪೂರ್ಣ ಪ್ರಕರಣದ ನಂತರ ಲಗ್ನಜಿತಾ ಚಕ್ರವರ್ತಿ ಅವರು ಇದಕ್ಕೆ ‘ಧಾರ್ಮಿಕ ಬಣ್ಣ’ ನೀಡಬೇಡಿ ಎಂದು ಹೇಳಿದ್ದಾರೆ. ‘ಸರ್ವಧರ್ಮಸಮಭಾವ’ದ ಅಮಲಿನಲ್ಲಿರುವ ಪ್ರತಿಯೊಬ್ಬ ಹಿಂದೂವಿಗೂ ಇಂತಹ ಘಟನೆಗಳಿಗೆ ಧಾರ್ಮಿಕ ಬಣ್ಣ ನೀಡಲು ಇಷ್ಟವಿರುವುದಿಲ್ಲ. ಆದರೆ ‘ಜಾಗೋ ಮಾ’ ಹಾಡುವಾಗ ಚಕ್ರವರ್ತಿಯವರ ಮನಸ್ಸಿನಲ್ಲಿ ಧಾರ್ಮಿಕತೆಯಿತ್ತೇ ?  ಆದರೆ ಎದುರಾಳಿಯು ‘ಹಸಿರು’ ಮನಃಸ್ಥಿತಿಯವನಾಗಿರುವಾಗ ಹಿಂದೂಗಳು ಸರ್ವಧರ್ಮಸಮ ಭಾವಿಗಳಾಗಿದ್ದರೂ ಏನು ಪ್ರಯೋಜನ ? ಈ ಘಟನೆಯು ಸರ್ವಧರ್ಮಸಮಭಾವದ ಜೈಕಾರ ಹಾಕುವವರಿಗೆ ಕಪಾಳಮೋಕ್ಷ ಮಾಡಿದಂತಿದೆ. ಬಂಗಾಳದಲ್ಲಿ ಹಿಂದೂಗಳ ಗಾಯದ ಮೇಲೆ ಉಪ್ಪು ಸವರಲು ಬಾಬರಿ ಮಸೀದಿ ಮಾದರಿಯ ಕಟ್ಟಡ ಕಟ್ಟಲಾಗುತ್ತಿದೆ, ದುರ್ಗಾಪೂಜೆಗೆ ವಿರೋಧ ವ್ಯಕ್ತವಾಗುತ್ತಿದೆ, ಬಾಂಗ್ಲಾದೇಶಿ ನುಸುಳುಕೋರರಿಂದ ಹಿಂದೂಗಳ ಅಸ್ತಿತ್ವಕ್ಕೇ ಸಂಚಕಾರ ಬಂದಿದೆ. ಬಂಗಾಳವು ಬಾಂಗ್ಲಾದೇಶವಾಗಬಾರದು ಎಂದರೆ ಮುಂಬರುವ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಸರಕಾರವನ್ನು ಕಿತ್ತೆಸೆಯುವುದು ಅನಿವಾರ್ಯವಾಗಿದೆ.

ತಥ್ಯಹೀನ ವಿರೋಧ !

ಸ್ತ್ರೀಶಕ್ತಿಯನ್ನು ಜಾಗೃತಗೊಳಿಸುವುದು ಅಥವಾ ಸ್ತ್ರೀಗೆ ಅವರ ಸ್ವಶಕ್ತಿಯ ಅರಿವು ಮೂಡಿಸುವುದರಲ್ಲಿ ಮುಸಲ್ಮಾನರಿಗೆ ಎಂದಿನಿಂದ ‘ಹಿಂದುತ್ವ’ ಕಾಣಿಸತೊಡಗಿತು ? ಹಾಗೆ ನೋಡಿದರೆ ಹೆಚ್ಚಿನ ಮುಸಲ್ಮಾನರು ಸ್ತ್ರೀಯರನ್ನು ಭೋಗದ ವಸ್ತುವಾಗಿ ನೋಡುತ್ತಾರೆ. ಇದರಿಂದಾಗಿ ಮುಸಲ್ಮಾನ ಮಹಿಳೆಯರನ್ನು ವಿವಿಧ ನಿರ್ಬಧಗಳಲ್ಲಿ ಬಂಧಿಸಿಡುವುದು, ಅವರ ಮೇಲೆ ಅತ್ಯಾಚಾರ ಮಾಡುವುದು ಈ ಸಮಾಜದಲ್ಲಿ ಕಂಡುಬರುತ್ತದೆ. ಇದೇ ಮನಸ್ಥಿತಿಯಿಂದ ಮಲಿಕ್‌ ಈ ಹಾಡನ್ನು ವಿರೋಧಿಸಿರಬಹುದೇ ? ‘ಮುಸಲ್ಮಾನ ಮಹಿಳೆಯರಲ್ಲಿ ಸ್ತ್ರೀ ಶಕ್ತಿ ಜಾಗೃತಗೊಂಡರೆ ಅವರು ಎಲ್ಲಾ ಕಟ್ಟುಪಾಡುಗಳನ್ನು ಮುರಿದು ಹೊರಬರುತ್ತಾರೆ, ಆಗ ತಮ್ಮ ಕಥೆ ಏನಾಗಬಹುದು? ಎಂಬ ಭಯ ಮಲಿಕನಂತಹವರಿಗೆ ಕಾಡಿರಬಹುದು.

ಮುಸಲ್ಮಾನರು ಅಲ್ಲಾಹನ ಹೊರತು ಬೇರೆಯವರ ಮುಂದೆ ತಲೆ ಬಾಗುವುದಿಲ್ಲ ಎಂಬುದು ವ್ಯವಹಾರದಲ್ಲಿ ಹೇಗೆ ಸಾಧ್ಯ ? ಹೆಚ್ಚಿನ ಮುಸಲ್ಮಾನರು ತಮ್ಮ ತಂದೆ-ತಾಯಿಯ ಮುಂದೆ ತಲೆ ಬಾಗಿಸುವುದಿಲ್ಲವೇ ? ಇಷ್ಟೇ ಏಕೆ ? ನಾವು ನೌಕರಿ ಅಥವಾ  ಕೆಲಸ ಮಾಡುವ ಸ್ಥಳದಲ್ಲಿ ಆ ಸಂಸ್ಥೆಯ ಮಾಲೀಕರು ಅಥವಾ ಮುಖ್ಯಸ್ಥರ ಮುಂದೆ ತಲೆಬಾಗುವುದಿಲ್ಲವೇ ?  ಹೀಗಿರುವಾಗ ‘ನಾವು ಅಲ್ಲಾಹನನ್ನು ಹೊರತುಪಡಿಸಿ ಯಾರ ಎದುರಿಗೂ ತಲೆ ಬಾಗುವುದಿಲ್ಲ’, ಎನ್ನುವ  ಮುಸಲ್ಮಾನರ ಹೇಳಿಕೆಯ ಮೇಲೆ ಯಾರು ವಿಶ್ವಾಸವಿಡುತ್ತಾರೆ ? ಕೆಲವು ದಿನಗಳ ಹಿಂದೆ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಮುಸಲ್ಮಾನರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಅವು ನಿಜವಾಗಿಯೂ ಚಿಂತನಶೀಲವಾಗಿವೆ. ಹಿಂದೂಗಳು ನದಿಯನ್ನು ಪೂಜಿಸುತ್ತಾರೆ, ಸೂರ್ಯನಿಗೆ ನಮಸ್ಕರಿಸುತ್ತಾರೆ, ಪ್ರಕೃತಿಯನ್ನು ಪೂಜಿಸುತ್ತಾರೆ. ಅದೇ ರೀತಿ ಮುಸಲ್ಮಾನರು ನದಿ ಪೂಜೆ ಮಾಡಿದರೆ ಅಥವಾ ಸೂರ್ಯನಿಗೆ ನಮಸ್ಕರಿಸಿದರೆ ಅವರಿಗೆ ಏನೂ ನಷ್ಟವಾಗುವುದಿಲ್ಲ. ಹೀಗೆ ಮಾಡುವುದರಿಂದ ಯಾರಿಗೂ ಹಾನಿಯಾಗದಿದ್ದರೆ ಅಥವಾ ಏನೂ ನಷ್ಟವಾಗದಿದ್ದರೆ, ಹಾಗೆ ಮಾಡುವುದರಲ್ಲಿ ಅವರಿಗೆ ಏನು ಸಮಸ್ಯೆಯಿದೆ ?  ಹೊಸಬಾಳೆ ಅವರ ಪ್ರಶ್ನೆಯಲ್ಲಿ ತಥ್ಯವಿದೆ. ಆದರೆ ಇಲ್ಲಿಯವರೆಗೆ ಯಾವ ಮುಸಲ್ಮಾನನೂ ಇದಕ್ಕೆ ವೈಚಾರಿಕ ಉತ್ತರ ನೀಡಿಲ್ಲ. ‘ವಂದೇ ಮಾತರಮ್‌’ ವಿರೋಧಿಸುವ ಮೂಲಕ ಮುಸಲ್ಮಾನರು ತಮ್ಮ ವೈಚಾರಿಕ ಕುಬ್ಜತೆಯನ್ನು ಪ್ರದರ್ಶಿಸಿದ್ದಾರೆ.

ಇದು ಹಿಂದೂಗಳ ಭೂಮಿ !

ಸಮಾಜದಲ್ಲಿ ವಿವಿಧ ಪ್ರವೃತ್ತಿಯ ಜನರು ವಾಸಿಸುತ್ತಿರುತ್ತಾರೆ. ಒಂದು ಆರೋಗ್ಯವಂತ ಮತ್ತು ಸಮೃದ್ಧ ಸಮಾಜದಲ್ಲಿ ಜನರು ಬೇರೆ ಬೇರೆ ಪ್ರಕೃತಿಯವರಾಗಿದ್ದರೂ ಅವರು ರಾಷ್ಟ್ರೀಯತೆಯ ಭಾವನೆಯಿಂದ ಒಂದಾಗಿರುತ್ತಾರೆ. ಆದುದರಿಂದ ಅವರಲ್ಲಿ ಎಷ್ಟೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಅದರ ಪರಿಣಾಮವು ಸಾಮಾಜಿಕ ಶಾಂತಿಯನ್ನು ಕದಡುವಲ್ಲಿ ಪರ್ಯಾವಸಾನವಾಗುವುದಿಲ್ಲ. ಆದರೆ ಬಹುತೇಕ ಮುಸಲ್ಮಾನರಲ್ಲಿ ಈ ರಾಷ್ಟ್ರೀಯತೆಯ ಭಾವನೆಯೇ ಇಲ್ಲದ ಕಾರಣ, ಹಿಂದೂಗಳಿಗೆ ಈ ಸಮೂಹದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅತ್ಯಂತ ಕಠಿಣವಾಗುತ್ತಿದೆ. ಹಿಂದೂ-ಮುಸಲ್ಮಾನರಲ್ಲಿ ಭ್ರಾತೃತ್ವದ ಘೋಷಣೆ ಮಾಡುವ ಸಮಾಜದ ಮುಖಂಡರು ಇದನ್ನು ಗಮನಿಸಬೇಕು. ಅದಕ್ಕಿಂತಲೂ ಮಿಗಿಲಾಗಿ, ಇಂತಹ ಹಿಂಸಾತ್ಮಕ ಹಾಗೂ ಮೂಲಭೂತವಾದಿ ವಿಚಾರಧಾರೆಯ ಜನರನ್ನು ದಾರಿಗೆ ತರುವುದು ಹೇಗೆ ? ಎಂಬ ಬಗ್ಗೆ ತಕ್ಷಣವೇ ಉಪಾಯಗಳನ್ನು ಕಂಡುಕೊಳ್ಳಬೇಕಿದೆ; ಇಲ್ಲವಾದಲ್ಲಿ ಭಾರತದಲ್ಲಿ ಹಿಂದೂಗಳಿಗೆ ಬದುಕುವುದು ಅಸಹನೀಯವಾಗಿ ಹೋಗಲಿದೆ !