
ಪ್ರಶ್ನೆ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಶೀರ್ಷಾಸನ ಮಾಡಿ ಅಮೃತರಸದ ರಕ್ಷಣೆಯನ್ನು ಹೇಗೆ ಮಾಡಬಹುದು ?
ಉತ್ತರ
ಶ್ರೀ.ರಾಮ ಹೊನಪ :

೧. ಸಹಸ್ರಾರಚಕ್ರದ ವೈಶಿಷ್ಟ್ಯ
‘ಸಹಸ್ರಾರಚಕ್ರದ ಜಾಗದಲ್ಲಿ ಈಶ್ವರೀ ಆನಂದದ ವಾಸವಿರುತ್ತದೆ. ಈ ಆನಂದಕ್ಕೇ ‘ಅಮೃತ’ದ ಉಪಮೆಯನ್ನು ನೀಡಲಾಗಿದೆ.
೨. ಸಹಸ್ರಾರಚಕ್ರದಲ್ಲಿ ‘ಅಮೃತರಸ’ವು ಹೇಗೆ ತಯಾರಾಗುತ್ತದೆ ?
ಸಾಧನೆ ಮಾಡುತ್ತಿರುವಾಗ ಸಾಧಕನ ಕುಂಡಲಿನಿಶಕ್ತಿಯು ಕುಂಡಲಿನಿಯ ಮೂಲಕ ಮುಂದಿನ ಪ್ರವಾಸ ಮಾಡುತ್ತದೆ ಹಾಗೂ ಕೊನೆಗೆ ಅದು ಸಹಸ್ರಾರಚಕ್ರದ ವರೆಗೆ ತಲುಪುತ್ತದೆ ಆಗ ಕುಂಡಲಿನಿಶಕ್ತಿ ಹಾಗೂ ಸಹಸ್ರಾರಚಕ್ರದ ಜಾಗದಲ್ಲಿ ಇರುವಂತಹ ಆನಂದದ ಸಂಯೋಗವಾಗುತ್ತದೆ ಆಗ ಆನಂದವು ಸೂಕ್ಷ್ಮರೂಪದಲ್ಲಿ ಕರಗುತ್ತದೆ ಅದಕ್ಕೆ ‘ಅಮೃತರಸ’ ಎಂದು ಹೇಳುತ್ತಾರೆ. ಯೋಗಿಗಳು ಈ ಅಮೃತರಸದ ಅನುಭೂತಿಯನ್ನು ಪಡೆಯುತ್ತಾರೆ ಅದಕ್ಕೆ ‘ಯೋಗಿ ಜೀವಗಳ ಅಮೃತಪಾನ’, ಎಂದು ಹೇಳಿದ್ದಾರೆ.
೩. ಅಮೃತರಸವು ಹೇಗೆ ನಷ್ಟವಾಗುತ್ತದೆ ?
ಯೋಗಿಗಳು ಸತತವಾಗಿ ಅಮೃತರಸದ ಅನುಭೂತಿ ಪಡೆಯುತ್ತಿರುತ್ತಾರೆ ಅವರಿಗೆ ಈ ದೈವೀ ಆನಂದದ ಅನುಭವ ಪಡೆದು ಶೀಘ್ರ ಆಧ್ಯಾತ್ಮಿಕ ಪ್ರಗತಿಯನ್ನು ಮಾಡುವುದಿರುತ್ತದೆ. ಅಮೃತದಲ್ಲಿಯ ಸ್ವಲ್ಪ ಕರಗಿದ ಊರ್ಜೆಯು ಮೆದುಳಿಗೆ ಸಂಬಂಧಿಸಿದ ಸೂಕ್ಷ್ಮ ಊರ್ಜೆಯ ಪ್ರವಾಹದ ಮೂಲಕ ಶರೀರದ ಕೆಳಗಿನ ದಿಕ್ಕಿನಲ್ಲಿ ಹರಿಯುತ್ತದೆ ಆಗ ಶರೀರದ ವಿವಿಧ ಕಾರ್ಯವನ್ನು ಮಾಡುವುದಕ್ಕಾಗಿ ಈ ಅಮೃತವು ಖರ್ಚಾಗುತ್ತದೆ. ಈ ವ್ಯಯವನ್ನು ಯೋಗಿ ಜೀವಗಳು ತಡೆಯಬೇಕು.
೪. ಶೀರ್ಷಾಸನದ ಮೂಲಕ ಅಮೃತದ ರಕ್ಷಣೆಯಾಗುವ ಕಾರ್ಯ
೪ ಅ. ಶೀರ್ಷಾಸನದ ಮೂಲಕ ಶರೀರದ ಅಸಂಖ್ಯಾತ ಸೂಕ್ಷ್ಮ ಊರ್ಜಾಪ್ರವಾಹವು ತಲೆಯ ದಿಕ್ಕಿಗೆ ಹರಿಯುವುದು : ಪ್ರತಿಯೊಬ್ಬ ವ್ಯಕ್ತಿಯ ಶರೀರದಲ್ಲಿ ಮೂಲಾಧಾರಚಕ್ರದಲ್ಲಿ ‘ಜೀವನೀಶಕ್ತಿ’ ಇರುತ್ತದೆ. ಜೀವನೀಶಕ್ತಿಯ ಮೂಲಕ ಶರೀರದ ಮೇಲಿನ ಹಾಗೂ ಕೆಳಗಿನ ದಿಕ್ಕಿಗೆ ಅಸಂಖ್ಯಾತ ಊರ್ಜಾಪ್ರವಾಹವು ಕಾರ್ಯನಿರತವಾಗಿರುತ್ತದೆ. ಯೋಗಿಗಳು ಶೀರ್ಷಾಸನದಲ್ಲಿ ತಲೆಯನ್ನು ಕೆಳಗೆ ಭೂಮಿಗೆ ಮುಟ್ಟಿಸಿ ಕಾಲನ್ನು ಮೇಲಿನ ದಿಕ್ಕಿಗೆ ಮಾಡುತ್ತಾರೆ ಆಗ ಶರೀರದಲ್ಲಿಯ ಎಲ್ಲಾ ಸೂಕ್ಷ್ಮ ಊರ್ಜಾ ಪ್ರವಾಹವು ತಲೆಯ ಅಂದರೆ ಮೆದುಳಿನ ದಿಕ್ಕಿಗೆ ಪ್ರವಾಹಿಸುತ್ತದೆ. ಇದರಿಂದ ಎಲ್ಲಾ ಊರ್ಜಾಪ್ರವಾಹದಲ್ಲಿಯ ಸೂಕ್ಷ್ಮಶಕ್ತಿಯು ಒಂದೇ ಸಲ ಮೆದುಳಿನ ಊರ್ಜಾಪ್ರವಾಹದಲ್ಲಿ ಸೇರುತ್ತದೆ.
೪ ಆ. ಮೆದುಳಿಗೆ ಸಂಬಂಧಿಸಿದ ಊರ್ಜಾಪ್ರವಾಹದ ಶಕ್ತಿಯು ಹೆಚ್ಚಾದುದರಿಂದ ಅಲ್ಲಿಯ ಅಮೃತವು ಗಟ್ಟಿಯಾಗಿ ಅದರ ರಕ್ಷಣೆಯಾಗುವುದು : ಮೇಲಿನ ಪ್ರಕ್ರಿಯೆಯಿಂದ ಮೆದುಳಿಗೆ ಸಂಬಂಧಿಸಿದ ಊರ್ಜಾಪ್ರವಾಹದ ಶಕ್ತಿಯು ಹೆಚ್ಚುತ್ತದೆ ಹಾಗೂ ಅಲ್ಲಿಯ ಅಮೃತದ ಸೂಕ್ಷ್ಮ ಊರ್ಜೆಯು ಗಟ್ಟಿಯಾಗುತ್ತದೆ ಈ ಊರ್ಜೆಯು ಗಟ್ಟಿಯಾದುದರಿಂದ ಅಮೃತದ ಕೆಳಗೆ ಹರಿಯುವ ಪ್ರಕ್ರಿಯೆಯು ಕಡಿಮೆಯಾಗುತ್ತದೆ ಹಾಗೂ ಅಮೃತವು ಖರ್ಚಾಗುವುದು ನಿಲ್ಲುತ್ತದೆ. ಶೀರ್ಷಾಸನವನ್ನು ನಿಯಮಿತವಾಗಿ ಮಾಡುವುದರಿಂದ ಯೋಗಿ ಜೀವಗಳ ಸಹಸ್ರಾರಚಕ್ರದಲ್ಲಿಯ ಅಮೃತದ ರಕ್ಷಣೆಯಾಗುತ್ತದೆ’.
– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ಲಭಿಸಿದ ದಿನಾಂಕ, ಸಮಯ ಹಾಗೂ ಒಟ್ಟು ಕಾಲಾವಧಿ :(2.9.2025, ಬೆಳಗ್ಗೆ 10.10 ಸೆಕೆಂಡು)
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ದೇಶದ ದುರ್ದಶೆಗೆ ಇದುವೇ ಕಾರಣ !
ಡಾ. ನರೇಂದ್ರ ದಾತೆ ಅವರಿಂದ ಹಂತಹಂತವಾಗಿ ಸಾಧನೆಯನ್ನು ಮಾಡಿಸಿಕೊಂಡ ಪ.ಪೂ ಭಕ್ತರಾಜ ಮಹಾರಾಜರು !