|

ಫತೇಹಪುರ (ಉತ್ತರ ಪ್ರದೇಶ) – ಇಲ್ಲಿನ ದೇವಿಗಂಜ್ ಪ್ರದೇಶದಲ್ಲಿರುವ ‘ಇಂಡಿಯಾ ಪ್ರೆಸ್ಬಿಟೇರಿಯನ್ ಚರ್ಚ್’ನಲ್ಲಿ ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಕ್ರೈಸ್ತರು ಬಡ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪೊಲೀಸರಿಗೆ ನೀಡಲಾದ ದೂರಿನ ಪ್ರಕಾರ,
೧. ಡಿಸೆಂಬರ್ 28 ರಂದು ಬೆಳಗ್ಗೆ 10 ಗಂಟೆಗೆ ದೇವಪ್ರಕಾಶ ಪಾಸ್ವಾನ್, ನೀರಜ ಪಾಸ್ವಾನ್ ಮತ್ತು ಸುಶೀಲ ರೈದಾಸ್ ಅವರನ್ನು ಚರ್ಚ್ ಗೆ ಕರೆಯಲಾಗಿತ್ತು. ಅಲ್ಲಿ ನಡೆಯುತ್ತಿದ್ದ ಪ್ರಾರ್ಥನಾ ಸಭೆಯಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಲಾಯಿತು ಮತ್ತು ಉಪಸ್ಥಿತರಿದ್ದವರ ಮೇಲೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ಒತ್ತಡ ಹೇರಲಾಯಿತು. ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರೆ ಹಣ, ಗೃಹೋಪಯೋಗಿ ಸೌಲಭ್ಯಗಳು, ಉದ್ಯೋಗ ಮತ್ತು ಮಕ್ಕಳ ಶಿಕ್ಷಣದ ಉಚಿತ ವ್ಯವಸ್ಥೆ ಮಾಡುತ್ತೇವೆ ಎಂದು ಹಿಂದೂಗಳಿಗೆ ಆಮಿಷ ಒಡ್ಡಲಾಯಿತು.
೨. ಈ ಕೃತ್ಯವನ್ನು ದೇವಪ್ರಕಾಶ್ ಮತ್ತು ಅವರ ಸಹಚರರು ವಿರೋಧಿಸಿದಾಗ, ಅವರಿಗೆ 1,100 ರೂಪಾಯಿ ನೀಡಿ ಸುಮ್ಮನಿರುವಂತೆ ಹೇಳಲಾಯಿತು. ನಡೆದ ಘಟನೆಯನ್ನು ಎಲ್ಲಿಯೂ ಹೇಳದಂತೆ ಇನ್ನೂ ಹೆಚ್ಚು ಹಣ ನೀಡುವುದಾಗಿ ಆಮಿಷ ತೋರಿಸಲಾಯಿತು ಎಂಬ ಆರೋಪ ಕೇಳಿಬಂದಿದೆ.
೩. ಹಳ್ಳಿಯ ಜನರು ತಮ್ಮ ಮನೆಗಳಲ್ಲಿ ಯೇಸು ಕ್ರಿಸ್ತನ ಚಿತ್ರವನ್ನು ಹಾಕಿಕೊಳ್ಳುವಂತೆ ಮತ್ತು ಪ್ರತಿ ಭಾನುವಾರ ಚರ್ಚ್ ಗೆ ಬರುವಂತೆ ಆರೋಪಿಗಳು ಒತ್ತಾಯಿಸುತ್ತಿದ್ದರು. ಹೊಸ ಜನರನ್ನು ಚರ್ಚ್ ಗೆ ಕರೆತರುವವರಿಗೆ ಬಹುಮಾನದ ಭರವಸೆ ನೀಡಲಾಗುತ್ತಿತ್ತು, ಆದರೆ ನಿರಾಕರಿಸಿದವರಿಗೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗುತ್ತಿತ್ತು.
೪. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಭೀತಿ ನಿರ್ಮಾಣವಾಗಿದೆ. ಮಾನಸಿಕ ಕಿರುಕುಳದಿಂದಾಗಿ ಕೆಲವರು ಗ್ರಾಮವನ್ನೇ ತೊರೆದರೆ, ಇನ್ನು ಕೆಲವರು ತೀವ್ರ ಒತ್ತಡದಲ್ಲಿ ಬದುಕುತ್ತಿದ್ದಾರೆ.
೫. ಈ ಪ್ರಕರಣದಲ್ಲಿ ಥರಿಯಾವ್ ವಿಭಾಗದ ಉಪ ಅಧೀಕ್ಷಕ ವೀರ ಸಿಂಗ್ ಅವರ ನೇತೃತ್ವದಲ್ಲಿ ಪೊಲೀಸರು ಚರ್ಚ್ ಗೆ ತೆರಳಿ ಪಾದ್ರಿ ಡೇವಿಡ್ ಗ್ಲೆಡ್ವಿನ್ ಮತ್ತು ಅವರ ಮಗ ಅಭಿಷೇಕ್ ಗ್ಲೆಡ್ವಿನ್ ನನ್ನು ಡಿಸೆಂಬರ್ 28 ರಂದು ಬಂಧಿಸಿದರು. ಇನ್ನೂ ಕೆಲವರ ವಿರುದ್ಧ ಕೂಡ ಪ್ರಕರಣ ದಾಖಲಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ.
೬. ದೇವಿಗಂಜ ಪ್ರದೇಶದಲ್ಲಿರುವ ‘ಇಂಡಿಯಾ ಪ್ರೆಸ್ಬಿಟೇರಿಯನ್ ಚರ್ಚ್’ನಲ್ಲಿ ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಮತಾಂತರದ ಪ್ರಯತ್ನ ನಡೆಯುತ್ತಿದೆ ಎಂದು ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ದೂರು ನೀಡಿದ್ದವು. ಅದರ ನಂತರ ಪೊಲೀಸರು ಕ್ರಮ ಕೈಗೊಂಡು ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಚರ್ಚ್ ಮುಂದೆ ಹಿಂದೂಗಳ ಪ್ರತಿಭಟನೆ!
ಮತಾಂತರದ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆಯೇ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಯ ಕಾರ್ಯಕರ್ತರು ಚರ್ಚ್ ಮುಂದೆ ಪ್ರತಿಭಟನೆ ನಡೆಸಿದರು. ಚರ್ಚ್ ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಿಂದೂ ಮಹಿಳೆಯರಿದ್ದು, ಅವರಿಗೆ ಉದ್ಯೋಗ, ಚಿಕಿತ್ಸೆ, ಹಣ ಮತ್ತು ಶಿಕ್ಷಣದ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಈ ಘಟನೆಯ ಬೆನ್ನಲ್ಲೇ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳನ್ನು ಮತಾಂತರ ಮಾಡುವವರಿಗೆ ಕಾನೂನು, ಸರಕಾರ, ಪೊಲೀಸರ ಬಗ್ಗೆ ಕಿಂಚಿತ್ತೂ ಭಯವಿಲ್ಲದಿರುವುದರಿಂದಲೇ ಅವರು ಇಂತಹ ಸಾಹಸಕ್ಕೆ ಕೈಹಾಕುತ್ತಿದ್ದಾರೆ! ಇಂತಹವರನ್ನು ಆಜೀವ ಕಾರಾಗೃಹಕ್ಕೆ ತಳ್ಳುವ ಕಾನೂನನ್ನು ಸರಕಾರ ತರಬೇಕು, ಆಗ ಮಾತ್ರ ಇಂತಹವರ ಮೇಲೆ ನಿಯಂತ್ರಣ ಸಾಧ್ಯ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ