ಭಾಜಪ ಸಂಸದೆ ಪ್ರೊ.ಡಾ.(ಸೌ.) ಮೇಧಾ ಕುಲಕರ್ಣಿ ಅವರಿಂದ ‘ಎಫ್.ಎಸ್.ಎಸ್.ಎ.ಐ.’ ಬಳಿ ಒತ್ತಾಯ
(ಎಫ್.ಎಸ್.ಎಸ್.ಎ.ಐ. ಎಂದರೆ ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ, ಅಂದರೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ)

ನವದೆಹಲಿ – ಭಾರತದಲ್ಲಿ ಹೆಚ್ಚುತ್ತಿರುವ ಹಲಾಲ್ ಪ್ರಮಾಣೀಕರಣದ ಅನಿಯಂತ್ರಿತ ಪ್ರಸಾರವು ಗಂಭೀರ ಚಿಂತೆಯ ವಿಷಯವಾಗಿದೆ. ಈ ಪ್ರಮಾಣೀಕರಣವು ಕೇವಲ ಮಾಂಸಾಹಾರಿ ಪದಾರ್ಥಗಳಿಗೆ ಸೀಮಿತವಾಗದೆ, ಈಗ ಹಿಟ್ಟು, ಸಸ್ಯಾಹಾರಿ ಆಹಾರ ಪದಾರ್ಥಗಳು, ಸೌಂದರ್ಯವರ್ಧಕಗಳು ಮತ್ತು ಔಷಧಿಗಳಂತಹ ಸಾಮಾನ್ಯ ಉತ್ಪನ್ನಗಳಿಗೂ ಅನ್ವಯಿಸುವಂತೆ ಒತ್ತಾಯಿಸಲಾಗುತ್ತಿದೆ. ಇದರಿಂದ ಗ್ರಾಹಕರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ, ಈ ಪ್ರಕಾರವು ಒಂದು ಸಮಾಂತರ ಮತ್ತು ಖಾಸಗಿ ಪ್ರಮಾಣೀಕರಣ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ತತ್ವಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ಮಾಂಸಾಹಾರಿ ಉತ್ಪನ್ನಗಳನ್ನು ಹೊರತುಪಡಿಸಿ ಇತರ ಉತ್ಪನ್ನಗಳ ಮೇಲಿನ ಹಲಾಲ್ ಪ್ರಮಾಣಪತ್ರದ ಬಳಕೆಯನ್ನು ತಕ್ಷಣವೇ ನಿಷೇಧಿಸಬೇಕು ಎಂದು ಪುಣೆಯ ಭಾಜಪ ಸಂಸದೆ ಪ್ರೊ.ಡಾ.(ಸೌ.) ಮೇಧಾ ಕುಲಕರ್ಣಿ ಅವರು ‘ಎಫ್.ಎಸ್.ಎಸ್.ಎ.ಐ.’ನ (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಿತ ಪುನ್ಹಾನಿ ಅವರಿಗೆ ಲಿಖಿತ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದ್ದಾರೆ.
यह कदम उपभोक्ता अधिकारों की सुरक्षा, निष्पक्ष व्यापार और भारत के बाजार की धर्मनिरपेक्ष व तटस्थ प्रकृति को बनाए रखने के लिए अत्यंत महत्वपूर्ण है।
— Dr. Medha Kulkarni (@Medha_kulkarni) December 27, 2025
ಈ ಸಂದರ್ಭದಲ್ಲಿ ಕುಲಕರ್ಣಿಯವರು ಮಾತನಾಡುತ್ತಾ, ಹಲಾಲ್ ಪ್ರಮಾಣೀಕರಣವನ್ನು ಕೇವಲ ಸರಕಾರ ಅಥವಾ ಸರಕಾರಿ ಮಾನ್ಯತೆ ಪಡೆದ ಸಂಸ್ಥೆಗಳು ಮಾತ್ರ ನೀಡಬೇಕು ಎಂಬುದು ನನ್ನ ಸ್ಪಷ್ಟ ಬೇಡಿಕೆಯಾಗಿದೆ. ಹಾಗೆಯೇ ಅದು ಕೇವಲ ಮಾಂಸ ಮತ್ತು ಮಾಂಸಾಧಾರಿತ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರಬೇಕು. ಮಾಂಸಾಹಾರಿ ಉತ್ಪನ್ನಗಳ ಹೊರತಾಗಿ ಇನ್ನಿತರ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು. ಗ್ರಾಹಕರ ಹಕ್ಕುಗಳ ರಕ್ಷಣೆ, ನಿಷ್ಪಕ್ಷಪಾತ ವ್ಯಾಪಾರ ಮತ್ತು ಭಾರತದ ಮಾರುಕಟ್ಟೆಯ ಜಾತ್ಯತೀತ ಹಾಗೂ ತಟಸ್ಥ ಸ್ವರೂಪವನ್ನು ಕಾಪಾಡಲು ಈ ಕ್ರಮವು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
‘ಹಲಾಲ್’ ಪ್ರಮಾಣಪತ್ರ ಎಂದರೇನು?
ಇಸ್ಲಾಂ ಪ್ರಕಾರ ‘ಹಲಾಲ್’ ಎಂದರೆ ಯಾವುದು ಸಮ್ಮತ ಎಂದರ್ಥ. ಈ ಹಿಂದೆ ‘ಹಲಾಲ್’ ಕೇವಲ ಮಾಂಸಕ್ಕೆ ಮಾತ್ರ ಸೀಮಿತವಾಗಿತ್ತು; ಆದರೆ ಈಗ ಮತಾಂಧರು ತಮ್ಮದೇ ಆದ ಸ್ವತಂತ್ರ ಆರ್ಥಿಕತೆಯನ್ನು ಸ್ಥಾಪಿಸಲು ಬಯಸುತ್ತಿರುವುದರಿಂದ ಗೃಹಸಂಸ್ಥೆಗಳು, ಔಷಧಿಗಳು, ಸೌಂದರ್ಯವರ್ಧಕಗಳು ಮುಂತಾದ ವಿವಿಧ ವಸ್ತುಗಳಿಗೆ ‘ಹಲಾಲ್’ ಪ್ರಮಾಣಪತ್ರವನ್ನು, ಅಂದರೆ ‘ಇದು ಇಸ್ಲಾಂ ಧರ್ಮದ ಪ್ರಕಾರ ಪ್ರಮಾಣೀಕರಿಸಲ್ಪಟ್ಟಿದೆ’ ಎಂಬ ಅರ್ಥದ ಪ್ರಮಾಣಪತ್ರವನ್ನು ಪಡೆಯುವಂತೆ ಮಾಡಲಾಗುತ್ತಿದೆ. ಇದಕ್ಕಾಗಿ ಕೆಲವು ಇಸ್ಲಾಮಿಕ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅವರು ಅನುಮೋದಿಸುವ ಪ್ರಮಾಣಪತ್ರವನ್ನೇ ‘ಹಲಾಲ್’ ಪ್ರಮಾಣಪತ್ರ ಎನ್ನಲಾಗುತ್ತದೆ. ದೇಶಕ್ಕೆ ಸಮಾಂತರವಾಗಿ ಇಸ್ಲಾಮಿಕ್ ಆರ್ಥಿಕತೆಯನ್ನು ಸೃಷ್ಟಿಸುವ ಮೂಲಕ ಪ್ರಚಲಿತ ಆರ್ಥಿಕತೆಯನ್ನು ದುರ್ಬಲಗೊಳಿಸಲು ಮತಾಂಧರು ‘ಹಲಾಲ್’ ಪ್ರಮಾಣಪತ್ರದ ಮೂಲಕ ಹೂಡಿರುವ ಪಿತೂರಿ ಇದಾಗಿದೆ. |
ಸಂಪಾದಕೀಯ ನಿಲುವುಈ ಬೇಡಿಕೆಗೆ ರಾಷ್ಟ್ರವ್ಯಾಪಿ ಸ್ವರೂಪವನ್ನು ನೀಡಲು ಹಿಂದೂ ಜನತೆಯು ತಮ್ಮ ತಮ್ಮ ಕ್ಷೇತ್ರಗಳ ಸಂಸದರ ಮೇಲೆ ಇಂತಹದೇ ಬೇಡಿಕೆಯನ್ನು ಮಂಡಿಸಲು ಒತ್ತಡ ಹೇರಬೇಕು. ಇದರಿಂದಲೇ ಇದೊಂದು ಸಾಮೂಹಿಕ ಚಳವಳಿಯಾಗಿ ರೂಪಗೊಂಡು ‘ಹಲಾಲ್’ ಅನ್ನು ಶಾಶ್ವತವಾಗಿ ನಿಷೇಧ ಹೇರಲು ಸಾಧ್ಯವಾಗುವುದು ಎಂಬುದನ್ನು ನೆನಪಿಡಬೇಕು! |

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ