ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಕಳವಳಕಾರಿ! – ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್

ಬಾಂಗ್ಲಾದೇಶದಲ್ಲಿ ದೀಪು ಚಂದ್ರ ದಾಸ್ ಹತ್ಯೆಯ ನಂತರ ಭಾರತದ ಮೃದು ಪ್ರತಿಕ್ರಿಯೆ!

ನವದೆಹಲಿ – ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಹಿಂಸಾಚಾರವು ಕಳವಳಕಾರಿಯಾಗಿದೆ. ಅಲ್ಪಸಂಖ್ಯಾತರಲ್ಲಿ ಹಿಂದೂ, ಕ್ರೈಸ್ತ ಮತ್ತು ಬೌದ್ಧ ಸಮುದಾಯದ ಜನರಿದ್ದು, ಅವರ ವಿರುದ್ಧ ನಿರಂತರವಾಗಿ ಹಿಂಸೆ ನಡೆಯುತ್ತಿದೆ. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ದೀಪು ದಾಸ್ ಅವರ ಹತ್ಯೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಮತ್ತು ತಪ್ಪಿತಸ್ಥರನ್ನು ಕಾನೂನಿನ ಅಡಿಯಲ್ಲಿ ತರಲಾಗುವುದು ಎಂದು ನಿರೀಕ್ಷಿಸುತ್ತೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿದ್ದಾರೆ.

ಜೈಸ್ವಾಲ್ ಮಾತು ಮುಂದುವರೆಸಿ, ‘ಬಾಂಗ್ಲಾದೇಶದ ಈಗಿನ ಮಧ್ಯಂತರ ಸರರ್ಕಾಕಾರದ ಅವಧಿಯಲ್ಲಿ ಹಿಂದೂಗಳ ವಿರುದ್ಧ ಹತ್ಯೆ, ಬೆಂಕಿ ಹಚ್ಚುವುದು ಮತ್ತು ಭೂಮಿ ಕಬಳಿಸುವ ಸುಮಾರು 2 ಸಾವಿರದ 900 ಘಟನೆಗಳು ದಾಖಲಾಗಿವೆ. ಇಂತಹ ಘಟನೆಗಳನ್ನು ಲಘುವಾಗಿ ನೋಡುವುದು ಸರಿಯಲ್ಲ. ಬಾಂಗ್ಲಾದೇಶದ ಪರಿಸ್ಥಿತಿಯ ಮೇಲೆ ಸತತವಾಗಿ ನಿಗಾ ಇಡಲಾಗುತ್ತಿದೆ. ಈ ಘಟನೆಗಳನ್ನು ಕೇವಲ ಮಾಧ್ಯಮಗಳ ಸುದ್ದಿ ಅಥವಾ ರಾಜಕೀಯ ಹಿಂಸಾಚಾರ ಎಂದು ಪರಿಗಣಿಸಿ ತಳ್ಳಿಹಾಕಲು ಸಾಧ್ಯವಿಲ್ಲ’ ಎಂದು ಹೇಳಿದರು.

ಬಾಂಗ್ಲಾದೇಶದ ಹಿಂದೂಗಳಿಗಾಗಿ ಕೇವಲ 5 ಸೆಕೆಂಡುಗಳನ್ನು ನೀಡಿ! 🚩

ಬಾಂಗ್ಲಾದೇಶದ ಹಿಂದೂಗಳು ಇಂದು ಭಯ ಮತ್ತು ಹಿಂಸಾಚಾರದ ನಡುವೆ ಬದುಕುತ್ತಿದ್ದಾರೆ. ಕೇವಲ ಹಿಂದೂ ಎಂಬ ಕಾರಣಕ್ಕಾಗಿ ಅವರನ್ನು ಗುರಿಯಾಗಿಸಲಾಗುತ್ತಿದೆ. ಇದು ಕೇವಲ ಒಂದು ದೇಶದ ವಿಷಯವಲ್ಲ, ಬದಲಾಗಿ ಮಾನವ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ.

ನಿಮ್ಮ ಒಂದು ಸಹಿಯು ಅವರಿಗೆ ರಕ್ಷಣೆ ಮತ್ತು ನ್ಯಾಯದ ಧ್ವನಿಯಾಗಬಲ್ಲದು.

👉 ‘ಬಾಂಗ್ಲಾದೇಶದ ಹಿಂದೂಗಳು ಒಬ್ಬಂಟಿಯಲ್ಲ,’ ಎಂಬ ಸಂದೇಶವನ್ನು ನೀಡಲು ಈಗಲೇ ಅರ್ಜಿಗೆ (Petition) ಸಹಿ ಮಾಡಿ!

Sign Petition : https://www.hindujagruti.org/hindi/save-bangladeshi-hindus

ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಸೇರಿ : HinduJagruti.org/join

ಬಾಂಗ್ಲಾದೇಶದಲ್ಲಿ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಒಳಗೊಳ್ಳುವಿಕೆಯ ಚುನಾವಣೆಗಳು ನಡೆಯಲಿ! – ಭಾರತದ ನಿರೀಕ್ಷೆ

ಬರುವ ಫೆಬ್ರವರಿ 12 ರಂದು ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಈ ಬಗ್ಗೆ ಜೈಸ್ವಾಲ್ ಅವರು, ‘ಭಾರತವು ಬಾಂಗ್ಲಾದೇಶದಲ್ಲಿ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಎಲ್ಲರನ್ನೂ ಒಳಗೊಂಡ ಚುನಾವಣೆಗಳು ನಡೆಯಲಿ ಎಂದು ನಿರೀಕ್ಷಿಸುತ್ತದೆ. ಭಾರತವು ಬಾಂಗ್ಲಾದೇಶದ ಜನರೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬದ್ಧವಾಗಿದೆ. ಅಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಲಿ ಮತ್ತು ಎಲ್ಲಾ ಪಕ್ಷಗಳ ವ್ಯಾಪಕ ಸಹಭಾಗಿತ್ವವಿರಲಿ, ಇದರಿಂದ ಜನರು ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಎಂಬುದು ಭಾರತದ ನಿರೀಕ್ಷೆಯಾಗಿದೆ’ ಎಂದು ತಿಳಿಸಿದರು.

ಸಂಪಾದಕೀಯ ನಿಲುವು

  • ಇಂತಹ ಪ್ರತಿಕ್ರಿಯೆಯಿಂದ ಬಾಂಗ್ಲಾದೇಶದ ಮತಾಂಧ ಮುಸ್ಲಿಮರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ; ಏಕೆಂದರೆ ಕಳೆದ ವರ್ಷವೂ ಅಲ್ಲಿನ ಹಿಂಸಾಚಾರದ ಸಮಯದಲ್ಲಿ ಭಾರತವು ಇದೇ ರೀತಿಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿತ್ತು!
  • ‘ಒಂದು ವೇಳೆ ಹಿಂದೂಗಳ ಮೇಲೆ ದಾಳಿ ನಡೆದರೆ, ಭಾರತದಿಂದ ಪೂರೈಸಲಾಗುವ ವಿದ್ಯುತ್ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯನ್ನು ನಿಲ್ಲಿಸುತ್ತೇವೆ’ ಅಥವಾ ‘ಬಾಂಗ್ಲಾದೇಶದ ಮೇಲೆ ಮಿಲಿಟರಿ ಕ್ರಮ ಕೈಗೊಳ್ಳುತ್ತೇವೆ’ ಎಂಬ ಎಚ್ಚರಿಕೆಯನ್ನು ಭಾರತ ನೀಡುವ ಅಗತ್ಯವಿದೆ! ಇದಕ್ಕಾಗಿ ಭಾರತವು ಅಮೇರಿಕಾ ಮತ್ತು ಇಸ್ರೇಲ್ ಮಾದರಿಯನ್ನು ಎದುರಿಟ್ಟುಕೊಳ್ಳಬೇಕು!