|

ನಾಗಪೂರ – ಮಹಾರಾಷ್ಟ್ರ ರಾಜ್ಯದ ಶಿಕ್ಷಕರ ನೇಮಕಾತಿ ಮತ್ತು ವೇತನ ಪ್ರಕರಣದ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸೈಬರ್ ಸೆಲ್ ನಾಗಪೂರ ಜಿಲ್ಲಾ ಪಂಚಾಯತಿಯ ಮಾಜಿ ಶಿಕ್ಷಣಾಧಿಕಾರಿ ರವೀಂದ್ರ ಕಾಟೋಲಕರ್ ಅವರನ್ನು ಬಂಧಿಸಿದೆ. ಅವರ ವಿರುದ್ಧ ೧೨ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸರಕಾರಿ ವಂಚನೆ ಮಾಡಿದ ಗಂಭೀರ ಆರೋಪ ಹೊರಿಸಲಾಗಿದೆ. ನ್ಯಾಯಾಲಯವು ಅವರಿಗೆ ಡಿಸೆಂಬರ್ ೨೫ ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ವಿಶೇಷ ತನಿಖಾ ತಂಡವು ೨೬ ಜನರನ್ನು ಬಂಧಿಸಿದ್ದು, ಅದರಲ್ಲಿ ಶಿಕ್ಷಣ ಉಪನಿರ್ದೇಶಕರು, ಶಿಕ್ಷಣಾಧಿಕಾರಿಗಳು, ಗುಮಾಸ್ತರು, ಶಾಲೆಗಳ ಮುಖ್ಯೋಪಾಧ್ಯಾಯರು, ಸಂಚಾಲಕರು ಮತ್ತು ಶಿಕ್ಷಕರು ಸೇರಿದ್ದಾರೆ.
೧. ಆರೋಪಿಗಳು ‘ಶಾಲಾರ್ಥ’ ಎಂಬ ಆನ್ ಲೈನ್ ವೇತನ ವ್ಯವಸ್ಥೆಯನ್ನು ಅನಧಿಕೃತವಾಗಿ ಬಳಸಿ ನಕಲಿ ‘ಶಾಲಾರ್ಥ’ ಐಡಿ (ಗಣಕಯಂತ್ರದ ವಿಳಾಸ) ಮತ್ತು ಕರಡು ಪ್ರತಿಗಳನ್ನು ಸಿದ್ಧಪಡಿಸಿದ್ದರು.
೨. ಅಸ್ತಿತ್ವದಲ್ಲಿಲ್ಲದ ಅಥವಾ ನಕಲಿ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳ ಹೆಸರಿನಲ್ಲಿ ವೇತನ ಮತ್ತು ಇತರ ಭತ್ಯೆಗಳನ್ನು ಪಡೆಯಲಾಗಿತ್ತು.
೩. ಈ ಪ್ರಕ್ರಿಯೆಯಲ್ಲಿ ಸರಕಾರಕ್ಕೆ ೧೨ ಕೋಟಿ ೩ ಲಕ್ಷ ರೂಪಾಯಿಗಳ ನಷ್ಟ ಉಂಟಾಗಿದೆ. ರವೀಂದ್ರ ಕಾಟೋಲಕರ್ ಅವರು ೨೦೨೧ ರಿಂದ ೨೦೨೨ ರ ಅವಧಿಯಲ್ಲಿ ಇಲ್ಲಿನ ಜಿಲ್ಲಾ ಪಂಚಾಯತಿಯಲ್ಲಿ ಶಿಕ್ಷಣಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
೪. ಆ ಸಮಯದಲ್ಲಿ ನಕಲಿ ವಿದ್ಯಾರ್ಥಿ ಗುರುತಿನ ಚೀಟಿಗಳು ಮತ್ತು ನಕಲಿ ಶಿಕ್ಷಕರ ಮಾಹಿತಿಯ ಬಗ್ಗೆ ತಿಳಿದಿದ್ದರೂ ಸಹ, ಅವರು ಯಾವುದೇ ವಿಚಾರಣೆ ನಡೆಸದೆ ವೇತನದ ಪ್ರಸ್ತಾವನೆಗಳನ್ನು ಮಂಜೂರು ಮಾಡಿದ್ದರು.
೫. ವೈಯಕ್ತಿಕ ಲಾಭಕ್ಕಾಗಿ ಅವರು ತಮ್ಮ ಪದವಿಯನ್ನು ದುರುಪಯೋಗಪಡಿಸಿಕೊಂಡು ಸರಕಾರಕ್ಕೆ ವಂಚಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಸಂಪಾದಕೀಯ ನಿಲುವುಶಿಕ್ಷಣ ಕ್ಷೇತ್ರದಲ್ಲಿ ಹಗರಣ ನಡೆದು ಅದರಲ್ಲಿ ಶಿಕ್ಷಣಾಧಿಕಾರಿಗಳೊಂದಿಗೆ ಶಾಲೆಗಳ ಮುಖ್ಯೋಪಾಧ್ಯಾಯರು, ಸಂಚಾಲಕರು ಮತ್ತು ಶಿಕ್ಷಕರು ಭಾಗಿಯಾಗಿರುವುದು ಅತ್ಯಂತ ಖೇದಕರ ಸಂಗತಿ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ