ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು; ಮಹಿಳೆಯರ ಮೇಲೂ ಹಲ್ಲೆ!

ಮುಂಬಯಿ – ದೀಪು ಚಂದ್ರ ದಾಸ್ ಅವರ ಕ್ರೂರ ಹತ್ಯೆಯನ್ನು ಖಂಡಿಸಿ ಮತ್ತು ಈ ವಿಷಯದಲ್ಲಿ ಭಾರತ ಸರಕಾರವು ಕಠಿಣ ನಿಲುವು ತಳೆಯಬೇಕು ಎಂದು ಆಗ್ರಹಿಸಿ, ಕಫ್ ಪರೇಡ್‌ನಲ್ಲಿರುವ ಬಾಂಗ್ಲಾದೇಶಿ ರಾಯಭಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಹಿಂದುತ್ವನಿಷ್ಠುರ ಮೇಲೆ ಪೊಲೀಸರು ಅಮಾನುಷವಾಗಿ ಲಾಠಿ ಪ್ರಹಾರ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಮೇಲೂ ಲಾಠಿ ಚಾರ್ಜ್ ಮಾಡಲಾಗಿದೆ. ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುಮಾರು 35 ರಿಂದ 40 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಪ್ರತಿಭಟನಾಕಾರರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಆರಂಭಿಸಿದರು. ಜನಸಂದಣಿಯನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ವಶಕ್ಕೆ ಪಡೆದ ಹಿಂದುತ್ವನಿಷ್ಠರನ್ನು ಆಜಾದ್ ಮೈದಾನಕ್ಕೆ ಕರೆತರಲಾಯಿತು. ಪೊಲೀಸರ ಈ ಲಾಠಿ ಪ್ರಹಾರದಲ್ಲಿ ಹಲವಾರು ಮಹಿಳಾ ಮತ್ತು ಪುರುಷ ಕಾರ್ಯಕರ್ತರು ಗಾಯಗೊಂಡಿದ್ದಾರೆ.
ಇಂತಹ ಪೊಲೀಸರು ಭಾರತದವರೋ ಅಥವಾ ಬಾಂಗ್ಲಾದೇಶದವರೋ? – ಮೋಹನ್ ಸಾಲೇಕರ್ ಸಚಿವರು, ಕೊಂಕಣ ಪ್ರಾಂತ, ವಿಶ್ವ ಹಿಂದೂ ಪರಿಷತ್

ಪೊಲೀಸರ ಹಲ್ಲೆಯಿಂದಾಗಿ ಮಂಜು ಖರಾತ್, ಮಾಯಾ ಪರ್ಮಾರ್ ಮತ್ತು ಶಂಕರ್ ಸಂಕಪಾಳ್ ಎಂಬ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಈ ಕುರಿತು ಮಾತನಾಡಿದ ಮೋಹನ್ ಸಾಲೇಕರ್, “ನಮ್ಮ ಪ್ರತಿಭಟನೆಯು ಭಾರತದ ಯಾವುದೇ ಸಮುದಾಯದ ವಿರುದ್ಧವಾಗಿರಲಿಲ್ಲ, ಬದಲಿಗೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆಯನ್ನು ಖಂಡಿಸುವುದಾಗಿತ್ತು. ಆದರೆ ಪೊಲೀಸರು ನಡೆದುಕೊಂಡ ರೀತಿಯನ್ನು ನೋಡಿದರೆ, ಇವರು ಭಾರತದ ಪೊಲೀಸರೋ ಅಥವಾ ಬಾಂಗ್ಲಾದೇಶದವರೋ ಎಂಬ ಪ್ರಶ್ನೆ ಮೂಡುತ್ತಿದೆ. ಬಾಂಗ್ಲಾದೇಶದ ‘ಸುಪಾರಿ’ ಪಡೆದವರಂತೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಪೊಲೀಸರು ಎಷ್ಟೇ ದಮನ ಮಾಡಲು ಪ್ರಯತ್ನಿಸಿದರೂ ನಾವು ಇಲ್ಲಿಗೆ ನಿಲ್ಲಿಸುವುದಿಲ್ಲ. ಈ ಚಳುವಳಿಯನ್ನು ನಾವು ಮನೆಮನೆಗೆ ತಲುಪಿಸುತ್ತೇವೆ. ಲಾಠಿ ಪ್ರಹಾರಕ್ಕೆ ಆದೇಶ ನೀಡಿದ ಆಜಾದ್ ಮೈದಾನ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ಗಾಯಕ್ವಾಡ್ ಅವರನ್ನು ಅಮಾನತುಗೊಳಿಸಬೇಕು,” ಎಂದು ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವುಕಾನೂನುಬದ್ಧವಾಗಿ ಪ್ರತಿಭಟನೆ ನಡೆಸುವ ಹಿಂದೂಗಳ ಮೇಲೆ ಲಾಠಿ ಬೀಸುವ ಪೊಲೀಸರು, ಮತಾಂಧರನ್ನು ತಡೆಯುವಾಗ ಇಂತಹ ಧೈರ್ಯ ತೋರಿಸುವುದಿಲ್ಲ, ಇದನ್ನು ತಿಳಿಯಿರಿ ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ