ದೀಪು ಚಂದ್ರ ದಾಸ್ ಅವರ ಹತ್ಯೆಯ ವಿರುದ್ಧ ವಿಶ್ವಸಂಸ್ಥೆಯಲ್ಲಿ ವಕೀಲ ವಿನೀತ ಜಿಂದಾಲ್ ದೂರು !

ನವ ದೆಹಲಿ – ಬಾಂಗ್ಲಾದೇಶದಲ್ಲಿ ನಡೆದ ದೀಪು ಚಂದ್ರ ದಾಸ್ ಅವರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಬಾಂಗ್ಲಾದೇಶದ ಸರಕಾರದ ವಿರುದ್ಧ ಅಂತರಾಷ್ಟ್ರೀಯ ಹಿಂದೂ ಸೇವಾ ಸಂಘದ ಅಧ್ಯಕ್ಷ ಹಾಗೂ ವಕೀಲರಾದ ವಿನೀತ ಜಿಂದಾಲ್ ಅವರು ಔಪಚಾರಿಕ ದೂರನ್ನು ದಾಖಲಿಸಿದ್ದಾರೆ.

ಬಾಂಗ್ಲಾದೇಶದ ಯೂನಸ್ ಸರಕಾರವು ಇಸ್ಲಾಮಿಕ್ ಕಟ್ಟರವಾದಿಗಳು ಮತ್ತು ಭಯೋತ್ಪಾದಕರ ಕೈಯಲ್ಲಿದೆ ಎಂದು ಈ ದೂರಿನಲ್ಲಿ ಆರೋಪಿಸಲಾಗಿದೆ.

ದೇಶದಲ್ಲಿ ಹಿಂದೂಗಳನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಲಾಗುತ್ತಿದೆ ಮತ್ತು ಅವರನ್ನು ರಕ್ಷಿಸಲು ಯಾರೂ ಉಳಿದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. (ಇತರ ಹಿಂದೂಗಳು ಈ ವಿಷಯದಲ್ಲಿ ಏನನ್ನೂ ಮಾಡದಿರುವಾಗ, ನ್ಯಾಯವಾದಿ ಜಿಂದಾಲ ಅವರು ಅಲ್ಪಪ್ರಮಾಣದಲ್ಲಾದರೂ ಪ್ರಯತ್ನ ನಡೆಸಿರುವುದು ಅಭಿನಂದನೀಯವಾಗಿದೆ ! – ಸಂಪಾದಕರು)

ಈ ದೂರಿನಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹತ್ಯೆಗಳು ಮತ್ತು ದೌರ್ಜನ್ಯಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಹಾಗೆಯೇ ಬಾಂಗ್ಲಾದೇಶ ಸರಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಸಂಪಾದಕೀಯ ನಿಲುವು

ವಿಶ್ವಸಂಸ್ಥೆಯು ಕೇವಲ ಒಂದು ಪ್ರದರ್ಶನದ ಬೊಂಬೆಯಾಗಿದೆ. ಅದರಲ್ಲೂ ಹಿಂದೂಗಳಿಗಾಗಿ ಯಾವುದೇ ಕೆಲಸ ನಡೆಯುವುದಿಲ್ಲ ಎಂಬುದು ವಾಸ್ತವವಾಗಿದೆ!