ಭಜನೆಯಲ್ಲಿ ತಲ್ಲೀನರಾಗುವ ಹಾಗೂ ಗುರು ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಬಗ್ಗೆ ಕೃತಜ್ಞತಾಭಾವವಿರುವ ಪೂ. (ಶ್ರೀಮತಿ) ಸೀತಾಬಾಯಿ ಜೋಶಿ (ಸನಾತನದ ೧೦೦ ನೇ ಸಂತರು, ವಯಸ್ಸು ೧೦೦ ವರ್ಷ) !

ಪೂ. (ಶ್ರೀಮತಿ) ಸೀತಾಬಾಯಿ ಜೋಶಿ

ಪೂ. (ಶ್ರೀಮತಿ) ಸೀತಾಬಾಯಿ ಶ್ರೀಧರರಾವ್‌ ಜೋಶಿ ಇವರ ಜನ್ಮಶತಾಬ್ದಿ ಸಮಾರಂಭದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು !

೭.೧೨.೨೦೨೫ ರಂದು ಹುಬ್ಬಳ್ಳಿ ಇಲ್ಲಿ ನನ್ನ ತಾಯಿ ಪೂ. (ಶ್ರೀಮತಿ) ಸೀತಾಬಾಯಿ ಶ್ರೀಧರ ಜೋಶಿ (ಸನಾತನದ ೧೦೦ ನೇ ಸಂತರು) ಇವರ ಜನ್ಮ ಶತಾಬ್ದಿ ಸಮಾರಂಭ ಜರುಗಿತು. ಈ ನಿಮಿತ್ತ ನನಗೆ ಪೂ. ತಾಯಿಯವರಲ್ಲಿ ಕಂಡುಬಂದ ಗುಣವೈಶಿಷ್ಟ್ಯಗಳನ್ನು ಮುಂದೆ ನೀಡಲಾಗಿದೆ.

ಶ್ರೀಮತಿ ಮೀರಾ ಕರಿ

೧. ಉತ್ತಮ ಸ್ಮರಣಶಕ್ತಿ

ಪೂ. ತಾಯಿಯವರ ಸ್ಮರಣಶಕ್ತಿ ೧೦೦ ನೇ ವಯಸ್ಸಿನಲ್ಲಿಯೂ ಉತ್ತಮವಾಗಿದೆ. ಅವರು ಪುರಾಣಗಳ ಕಥೆಗಳು ಮತ್ತು ನೀತಿಕಥೆಗಳನ್ನು ಹೇಳುತ್ತಾರೆ.

೨. ನಿಯಮಿತವಾಗಿ ಭಜನೆ ಹಾಡುವುದು

ಅವರು ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ನಿಯಮಿತವಾಗಿ ಭಜನೆಗಳನ್ನು ಹಾಡುತ್ತಾರೆ. ಅವರು ಭಜನೆಗಳನ್ನು ತಲ್ಲೀನರಾಗಿ ಹಾಡುತ್ತಾರೆ. ಯಾರಾದರೂ ಮನೆಗೆ ಬಂದಾಗ ಪೂ. ತಾಯಿಯವರು ಅವರೊಂದಿಗೆ ಮಾತನಾಡುತ್ತಿರುವಾಗಲೂ ನಡುವೆಯೇ ಭಜನೆ ಹಾಡುವುದರಲ್ಲಿ ತಲ್ಲೀನರಾಗುತ್ತಾರೆ.

೩. ಮಗ ಮತ್ತು ಸೊಸೆಯ ಬಗ್ಗೆ ಕೃತಜ್ಞತಾಭಾವ

ಪೂ. ತಾಯಿಯವರಿಗೆ ತಮ್ಮ ಮಗ (ಶ್ರೀ. ಕೃಷ್ಣಾಜಿ ಜೋಶಿ, ಆಧ್ಯಾತ್ಮಿಕ ಮಟ್ಟ ಶೇಕಡಾ ೬೧, ವಯಸ್ಸು ೮೦ ವರ್ಷ) ಮತ್ತು ಸೊಸೆ (ಸೌ. ಪುಷ್ಪಾ ಜೋಶಿ, ಆಧ್ಯಾತ್ಮಿಕ ಮಟ್ಟ ಶೇಕಡಾ ೬೧ ವಯಸ್ಸು ೭೪ ವರ್ಷ) ಇವರ ಬಗ್ಗೆ ಕೃತಜ್ಞತಾಭಾವವಿದೆ.

೪. ಪೂ. ತಾಯಿಯವರಿಗೆ ಈಶ್ವರ ಮತ್ತು ಗುರು (ದೊಡ್ಡೆರಿ, ಕರ್ನಾಟಕದ ಸದ್ಗುರು ಮಲ್ಲಯ್ಯ) ಇವರ ಬಗ್ಗೆ ಅಪಾರ ಕೃತಜ್ಞತಾಭಾವವಿದೆ.

೫. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬಗ್ಗೆ ಕೃತಜ್ಞತಾಭಾವವಿದೆ !

ಅ. ಪೂ. ತಾಯಿಯವರಿಗೆ ಸ್ನಾನ ಮಾಡಿಸಲು ಮತ್ತು ಅವರ ವೈಯಕ್ತಿಕ ಕೆಲಸಗಳಿಗಾಗಿ ಒಬ್ಬರು ಗೃಹಕೃತ್ಯ ಸಹಾಯಕಿ (ಕೇರ್‌ ಟೇಕರ್) ಮನೆಗೆ ಬರುತ್ತಾರೆ. ಅವರು ಪೂ. ತಾಯಿಯವರಿಗೆ ಸ್ನಾನ ಮಾಡಿಸಿ ಅವರನ್ನು ಪಡಸಾಲೆಗೆ ಕರೆದುಕೊಂಡು ಬರುತ್ತಾರೆ. ಆಗ ಪೂ. ತಾಯಿಯವರು ಮೊದಲು ಪ.ಪೂ. ಗುರುದೇವರ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ) ಛಾಯಾಚಿತ್ರವನ್ನು ವಸ್ತ್ರದಿಂದ ಒರೆಸಿ, ಪ್ರಾರ್ಥನೆ ಮಾಡಿ ಆ ಛಾಯಾಚಿತ್ರವನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ.

ಆ. ನಾನು ವಾರಕ್ಕೊಮ್ಮೆ ಪೂ. ತಾಯಿಯವರೊಂದಿಗೆ ದೂರವಾಣಿಯ ಮೂಲಕ ಮಾತನಾಡುತ್ತೇನೆ. ಆಗ ಅವರು ಹೆಚ್ಚಾಗಿ ಭಗವಂತನ ಲೀಲೆ ಮತ್ತು ಪ.ಪೂ. ಗುರುದೇವರ ಬಗ್ಗೆ ಮಾತನಾಡುತ್ತಾರೆ.

ಇ. ಅವರು ಪ.ಪೂ. ಗುರುದೇವರನ್ನು ‘ಗೋವಾದ ಕೃಷ್ಣ’ ಎಂದು ಕರೆಯುತ್ತಾರೆ.

೬. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಬಗ್ಗೆ ಶ್ರದ್ಧೆ

ಅವರು ನನಗೆ ಹೇಳುತ್ತಾರೆ, ”ನೀವು ಬಹಳ ಭಾಗ್ಯಶಾಲಿಗಳು. ನಿಮಗೆ ಭಗವಂತನ ಆಶ್ರಯ ದೊರಕಿದೆ. ನಿಮಗೆ ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನೀವು ಅತ್ಯಂತ ಸುರಕ್ಷಿತ ಸ್ಥಳದಲ್ಲಿದ್ದೀರಿ.’’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಅವರಿಗೆ ಅಪಾರ ಶ್ರದ್ಧೆಯಿದೆ.

‘ಪ.ಪೂ. ಗುರುದೇವರ ಕೃಪೆಯಿಂದಲೇ ನನಗೆ ಪೂ. ತಾಯಿಯವರ ಬಗ್ಗೆ ಬರೆಯಲು ಸಾಧ್ಯವಾಯಿತು’, ಇದಕ್ಕಾಗಿ ನಾನು ಪ.ಪೂ. ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’

– ಶ್ರೀಮತಿ ಮೀರಾ ಕರಿ (ಪೂ. (ಶ್ರೀಮತಿ) ಸೀತಾಬಾಯಿ ಜೋಶಿ ಇವರ ಮಗಳು, ಆಧ್ಯಾತ್ಮಿಕ ಮಟ್ಟ ಶೇಕಡಾ ೬೫, ವಯಸ್ಸು ೬೮ ವರ್ಷ), ಫೋಂಡಾ, ಗೋವಾ.