(ಹಿಜಾಬ್ ಎಂದರೆ ಮುಸ್ಲಿಂ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳಲು ಬಳಸುವ ವಸ್ತ್ರ)

ಪಾಟಲಿಪುತ್ರ (ಬಿಹಾರ) – ನಗರದಲ್ಲಿ ನೇಮಕಾತಿ ಪತ್ರಗಳನ್ನು ವಿತರಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ ಕುಮಾರ ಅವರು ಮಹಿಳಾ ವೈದ್ಯೆಯೊಬ್ಬರ ಹಿಜಾಬ್ ತೆಗೆಯಲು ಪ್ರಯತ್ನಿಸಿದ್ದರು. ಈ ಘಟನೆಯ ನಂತರ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಿತೀಶ ಕುಮಾರ ಅವರಿಗೆ ಬೆಂಬಲ ಸೂಚಿಸಿದೆ. ಬಿಜೆಪಿಯ ಹಿರಿಯ ನಾಯಕ ಹರಿಭೂಷಣ್ ಠಾಕೂರ ಬಚೌಲ್ ಅವರು, “ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸರಕಾರಿ ಉದ್ಯೋಗಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಬೇಕು. ಇದರೊಂದಿಗೆ ಇಡೀ ಭಾರತದಲ್ಲಿ ಹಿಜಾಬ್ ಮೇಲೆ ನಿಷೇಧ ಹೇರಬೇಕು” ಎಂದು ಹೇಳಿದ್ದಾರೆ.
“Wearing Hijab in Public Should Be Banned in India!” — Haribhushan Thakur Bachaul, BJP Leader (See Video)
In a related development, Union Minister Giriraj Singh backed Nitish Kumar in the hijab incident, saying: “India is not an Islamic country; it follows the rule of law.”
The… pic.twitter.com/XkvDKfrNSm
— Sanatan Prabhat (@SanatanPrabhat) December 19, 2025
ಕೇಂದ್ರ ಸಚಿವ ಗಿರಿರಾಜ್ ಸಿಂಹ ಕೂಡ ನಿತೀಶ ಕುಮಾರ ಅವರನ್ನು ಬೆಂಬಲಿಸಿದ್ದು, “ಮುಖ್ಯಮಂತ್ರಿ ನಿತೀಶ ಕುಮಾರ ಯಾವುದೇ ತಪ್ಪು ಮಾಡಿಲ್ಲ. ಭಾರತವು ಇಸ್ಲಾಮಿಕ್ ರಾಷ್ಟ್ರವಲ್ಲ. ಭಾರತದಲ್ಲಿ ಕಾನೂನಿನ ಆಡಳಿತವಿದೆ. ನಿತೀಶ ಕುಮಾರ ಅವರು ಮಾಡಿದ್ದು ಸರಿಯಾಗಿದೆ” ಎಂದು ಹೇಳಿದ್ದಾರೆ.
ಹರಿಭೂಷಣ್ ಠಾಕೂರ ಬಚೌಲ್ ಅವರು,
1. ಹಿಜಾಬ್ ಹೆಸರಿನಲ್ಲಿ ಭಯೋತ್ಪಾದನೆ ಮಾತ್ರ ಬೆಳೆಯುತ್ತಿದೆ. ಭಯೋತ್ಪಾದಕರು ದಾಳಿ ನಡೆಸಿ ಹಿಜಾಬ್ ಧರಿಸಿ ಪರಾರಿಯಾಗುತ್ತಾರೆ. ಯಾರಿಗೆ ಹಿಜಾಬ್ ಧರಿಸಬೇಕೆಂದಿದೆಯೋ ಅವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿದರು.
2. ಹಿಜಾಬ್ ಧರಿಸಿ ನೇಮಕಾತಿ ಪತ್ರ ಪಡೆಯಲು ಬಂದ ಮಹಿಳಾ ವೈದ್ಯೆ ಬಿಹಾರವನ್ನು ತೊರೆಯಬೇಕು. ಆಕೆ ಮುಖ ಮರೆಮಾಚಿ ನೇಮಕಾತಿ ಪತ್ರ ಪಡೆಯಲು ಹೋಗಿದ್ದಳು.
ಹಿಂದೂ ಮತ್ತು ಮುಸ್ಲಿಮರ ನಡುವೆ ಸಂಘರ್ಷಕ್ಕೆ ಪ್ರಯತ್ನ! – (ಅಂತೆ) ರಾಷ್ಟ್ರೀಯ ಜನತಾ ದಳ
ಬಚೌಲ್ ಅವರ ಹೇಳಿಕೆಯ ನಂತರ ಬಿಹಾರದಲ್ಲಿ ರಾಜಕೀಯ ವಾತಾವರಣ ಬಿಸಿಯಾಗಿದೆ. ರಾಷ್ಟ್ರೀಯ ಜನತಾ ದಳದ ನಾಯಕ ಮುಖೇಶ ಕುಮಾರ ರೋಷನ್ ಅವರು ಬಚೌಲ್ ಅವರನ್ನು ಗುರಿಯಾಗಿಸಿ, “ಅವರು ಹಿಂದೂ ಮತ್ತು ಮುಸ್ಲಿಮರ ನಡುವೆ ಸಂಘರ್ಷ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ತಕ್ಷಣವೇ ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ