
ನವ ದೆಹಲಿ, ಡಿಸೆಂಬರ್ 16 (ವಾರ್ತೆ.) – ಭಾರತೀಯ ಜ್ಞಾನ ಪರಂಪರೆಯಲ್ಲಿ ಮುಟ್ಟದಿರುವ ಮತ್ತು ಕೆಲವು ಅಜ್ಞಾತ ಆಯಾಮಗಳಿವೆ. ನಾವು ಪುಸ್ತಕಗಳಲ್ಲಿ ವಿವಿಧ ವಿಷಯಗಳನ್ನು ನೋಡುತ್ತೇವೆ; ಆದರೆ ಶಸ್ತ್ರಾಸ್ತ್ರಗಳಲ್ಲಿ ಏನು ವಿಜ್ಞಾನವಿದೆ, ಯುದ್ಧ ಕಲೆಯ ವಿಷಯ ಏನು ಎಂಬುದನ್ನು ನೋಡಲು ಈ ಪ್ರದರ್ಶನದ ಮೂಲಕ ಉತ್ತಮ ಅವಕಾಶ ದೊರೆತಿದೆ. ಈ ಮಾಹಿತಿ ಹಲವರಿಗೆ ತಿಳಿದಿಲ್ಲದಿರಬಹುದು. ಹಾಗಾಗಿ ಭಾರತದಲ್ಲಿ ಇಂತಹ ಪ್ರದರ್ಶನಗಳು ಎಲ್ಲಿ ನಡೆಯುತ್ತವೆಯೋ, ಅಲ್ಲಿಗೆ ಹೋಗಿ ಅದನ್ನು ನೋಡಬೇಕು. ಇದರಿಂದ ನಮ್ಮ ಜ್ಞಾನ ಹೆಚ್ಚುತ್ತದೆ ಮತ್ತು ನಮ್ಮ ಗೌರವವೂ ಹೆಚ್ಚುತ್ತದೆ. ಈ ವಿಷಯವನ್ನು ಮಕ್ಕಳ ಪಠ್ಯಕ್ರಮದಲ್ಲಿ ಸೇರಿಸಬೇಕು. ಮಕ್ಕಳಿಗೆ ಮಾತ್ರವಲ್ಲ, ಇಡೀ ಕುಟುಂಬಕ್ಕೆ ಈ ಬಗ್ಗೆ ತಿಳಿದಿರಬೇಕು. ನಾವು ರಾಮಾಯಣ-ಮಹಾಭಾರತವನ್ನು ಪಠ್ಯಕ್ರಮಗಳಲ್ಲಿ ಕಲಿಯದಿದ್ದರೆ, ತಂದೆ-ತಾಯಿ ಇಂತಹ ವಿಷಯಗಳ ಬಗ್ಗೆ ಮಾಹಿತಿ ತಿಳಿದು ಮಕ್ಕಳಿಗೆ ನೀಡಬೇಕು ಎಂದು ಭಾಜಪ ರಾಷ್ಟ್ರೀಯ ವಕ್ತಾರರಾದ ಶ್ರೀ. ಸುಧಾಂಶು ತ್ರಿವೇದಿ ಅವರು ‘ಸನಾತನ ಪ್ರಭಾತ’ದೊಂದಿಗೆ ಮಾತನಾಡುತ್ತಾ ಹೇಳಿದರು. ‘ಭಾರತ್ ಮಂಡಪಂ’ನಲ್ಲಿ ಆಯೋಜಿಸಲಾಗಿದ್ದ ಶಸ್ತ್ರಾಸ್ತ್ರ ಪ್ರದರ್ಶನವನ್ನು ವೀಕ್ಷಿಸಿದ ನಂತರ ಅವರು ‘ಸನಾತನ ಪ್ರಭಾತ’ದ ಪ್ರತಿನಿಧಿಯೊಂದಿಗೆ ಮಾತನಾಡಿದರು.
ಶ್ರೀ. ಸುಧಾಂಶು ತ್ರಿವೇದಿ ಅವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನಾ ಕಾರ್ಯದ ಬಗ್ಗೆ ಮಾಹಿತಿ ನೀಡುವ ಪ್ರದರ್ಶನವನ್ನು ಸಹ ಆಸಕ್ತಿಯಿಂದ ತಿಳಿದುಕೊಂಡರು ಮತ್ತು ತಮ್ಮ ಸಮಕಾಲೀನ ಅನುಭವಗಳನ್ನು ಹಂಚಿಕೊಂಡರು.
ಕೇಂದ್ರ ರಾಜ್ಯ ಸಚಿವ ಶ್ರೀಪಾದ ನಾಯ್ಕ ಅವರಿಂದ ಶಸ್ತ್ರಾಸ್ತ್ರ ಪ್ರದರ್ಶನಕ್ಕೆ ಭೇಟಿ!
ಕೇಂದ್ರ ಇಂಧನ ರಾಜ್ಯ ಸಚಿವ ಶ್ರೀ. ಶ್ರೀಪಾದ ನಾಯಿಕ ಅವರು ಪ್ರದರ್ಶನ ಕೊಠಡಿಗೆ ಭೇಟಿ ನೀಡಿದರು. ಈ ವೇಳೆ ಅವರು ರುದ್ರಾಕ್ಷಿಗಳ ಕುರಿತ ಮಾಹಿತಿಯ ಛಾಯಾಚಿತ್ರಗಳನ್ನು ತೆಗೆದುಕೊಂಡು, ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡರು.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !