ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025

ಸನಾತನ ಸಂಸ್ಥೆ ಆಯೋಜಿಸಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ಸಾಂಸ್ಕೃತಿಕ ಪುನರುಜ್ಜೀವನದ ಶಂಖನಾದವಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಇಲ್ಲಿ ಮಾತನಾಡುತ್ತಾ ಗೌರವೋದ್ಗಾರ ತೆಗೆದರು. ‘ಸನಾತನ ಸಂಸ್ಥೆಯ ರಜತ ಮಹೋತ್ಸವದ ವರ್ಷಾಚರಣೆಯ ನಿಮಿತ್ತ ಆಯೋಜಿಸಲಾದ ಈ ಹಿಂದೂ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಭಾಗವಹಿಸುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ. ಸನಾತನ ಸಂಸ್ಕೃತಿಯ ಪ್ರವಾಹವನ್ನು ನಿರಂತರವಾಗಿ ಮುಂದುವರಿಸುವ ಸಂಕಲ್ಪದೊಂದಿಗೆ ಆಯೋಜಿಸಲಾದ ಈ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಭಾಗವಹಿಸುವುದು ಭಾಗ್ಯದ ಕ್ಷಣವಾಗಿದೆ’ ಎಂದು ಶ್ರೀ. ಶೇಖಾವತ್ ಹೇಳಿದರು.
ಶೇಖಾವತ್ ಅವರು, ‘ಧರ್ಮೇಣ ಜಯತಿ ರಾಷ್ಟ್ರಮ್’ ಅಂದರೆ ಧರ್ಮವು ರಾಷ್ಟ್ರಕ್ಕೆ ವಿಜಯವನ್ನು ತರುತ್ತದೆ. ಧರ್ಮದ ಹಾದಿಯಲ್ಲಿ ನಡೆಯುವುದರಿಂದಲೇ ಯಾವುದೇ ರಾಷ್ಟ್ರ ವಿಜಯವನ್ನು ಸಾಧಿಸಬಹುದು. ಒಂದೂವರೆ ತಿಂಗಳ ಹಿಂದೆ ಈ ಕಾರ್ಯಕ್ರಮದ ಕಲ್ಪನೆ ಬಂದಾಗ, ಅಂದಿನಿಂದಲೇ ಈ ಕಾರ್ಯಕ್ರಮಕ್ಕೆ ಹಾಜರಾಗಲು ನಾನು ಸಿದ್ಧತೆ ಮಾಡಿಕೊಂಡಿದ್ದೆ; ಆದರೆ ರಾಜಕೀಯ ಕ್ಷೇತ್ರದಲ್ಲಿ ಜವಾಬ್ದಾರಿಯನ್ನು ಸ್ವೀಕರಿಸಿ ಕಾರ್ಯನಿರ್ವಹಿಸುತ್ತಿರುವುದರಿಂದ ತಾತ್ಕಾಲಿಕ ತುರ್ತು ಸವಾಲುಗಳನ್ನು ಎದುರಿಸಬೇಕಾಯಿತು. ಹಾಗಾಗಿ ನಾನು ಇಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ.
ಭಗವಾನ್ ಶ್ರೀರಾಮನ ದೇವಾಲಯವನ್ನು 500 ವರ್ಷಗಳ ಹಿಂದೆ ಯಾವ ಆಕ್ರಮಣಕಾರರು ಒಡೆದು ಅದರ ಧ್ವಜವನ್ನು ಕೆಳಗಿಳಿಸಿದರೋ, ಆಗ ಭಾರತೀಯ ಸಂಸ್ಕೃತಿಯ ಸೂರ್ಯಾಸ್ತವಾಗಿತ್ತು. ಈ 500 ವರ್ಷಗಳ ಕರಾಳ ರಾತ್ರಿ ಕೊನೆಗೊಂಡು ಶ್ರೀರಾಮನ ಭವ್ಯ ದೇವಾಲಯ ನಿರ್ಮಾಣವಾಗಿ ಅದರಲ್ಲಿ ಶ್ರೀರಾಮಲಲ್ಲಾ ವಿರಾಜಮಾನರಾದರು. ಅಂದಿನಿಂದ ಭಾರತೀಯ ಸಂಸ್ಕೃತಿಯು ಮತ್ತೆ ಉದಯವಾಗುತ್ತಾ ಹೋಯಿತು. ಅಂದಿನಿಂದ ಭಾರತದ ಸಂಸ್ಕೃತಿ ಮತ್ತು ಸಂಸ್ಕೃತಿಯ ಮೌಲ್ಯಗಳು ಹೊಸ ರೂಪದಲ್ಲಿ ವಿಶ್ವದಾದ್ಯಂತ ಹರಡಿಕೊಂಡಿವೆ. ‘ವಂದೇ ಮಾತರಂ’ ಗೀತೆಯಿಂದ ಭಾರತೀಯರ ಕಳೆದುಹೋದ ಆತ್ಮವಿಶ್ವಾಸವು ಜಾಗೃತಗೊಂಡಿತು. ಸಮಾಜವನ್ನು ಸಂಘಟಿಸಲು ಇಂದು ‘ವಂದೇ ಮಾತರಂ’ನ ಅಗತ್ಯವಿದೆ, ಇದು ಒಂದೂವರೆ ಶತಮಾನದ ಹಿಂದೆ ಇದ್ದಷ್ಟೇ ಇದೆ. ‘ವಂದೇ ಮಾತರಂ’ ಕೇವಲ ಗೀತೆಯಾಗಿರಲಿಲ್ಲ, ಅದು ಒಂದು ಮಂತ್ರವಾಗಿತ್ತು. ‘ವಂದೇ ಮಾತರಂ’ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ ನೀಡಿತು. ಅದು ಒಬ್ಬರಿಗೊಬ್ಬರು ಭೇಟಿಯಾಗುವ ಮಾಧ್ಯಮವಾಗಿತ್ತು. ಅದು ಎಲ್ಲರನ್ನೂ ಒಗ್ಗೂಡಿಸುವ ಗೀತೆಯಾಗಿತ್ತು.
ಛತ್ರಪತಿ ಶಿವಾಜಿ ಮಹಾರಾಜರ ಆಯುಧಗಳು ನಮಗೆ ಪ್ರೇರಣೆಯಾಗಿವೆ, ಅವುಗಳು ನಮ್ಮ ಇತಿಹಾಸದ ಸ್ಮರಣೆಗಳನ್ನು ಜಾಗೃತಗೊಳಿಸುವ ಮಾಧ್ಯಮವಾಗಿದೆ. ತನ್ನ ಮೂಲ ಇತಿಹಾಸವನ್ನು ಮರೆತ ಸಮಾಜವು ಪ್ರಗತಿ ಸಾಧಿಸಲಾರದು. ಆಕ್ರಮಣಕಾರರು 2 ಸಾವಿರ ವರ್ಷಗಳಲ್ಲಿ ಭಾರತದ ಮೇಲೆ ಹಲವು ಬಾರಿ ಆಕ್ರಮಣ ಮಾಡಿ ಸನಾತನ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನಿಸಿದರು; ಆದರೆ ಅವರು ಯಶಸ್ವಿಯಾಗಲಿಲ್ಲ. ನಮ್ಮ ಸಂತರು ಸನಾತನ ಸಂಸ್ಕೃತಿಯನ್ನು ರಕ್ಷಿಸಿದರು. ಅವರು ಜನರಲ್ಲಿ ಆ ಚೇತನವನ್ನು ಜೀವಂತವಾಗಿರಿಸಿದರು. ನಾವು ಬಾಲ್ಯದಿಂದಲೂ ನಮ್ಮ ಇತಿಹಾಸದೊಂದಿಗೆ ಬೆಸೆದುಕೊಂಡಿದ್ದೇವೆ. ಮಾತೃಭೂಮಿಗಾಗಿ ಪ್ರಾಣತ್ಯಾಗ ಮಾಡುವ ಪಾಠವನ್ನು ನಾವು ಕಲಿತಿದ್ದೇವೆ. ಬ್ರಿಟಿಷರು ಇದನ್ನು ಅರಿತು ಭಾರತೀಯರ ಇತಿಹಾಸವನ್ನು ನಾಶಮಾಡಲು ಪ್ರಯತ್ನಿಸಿದರು.
ಸಂಸ್ಕೃತಿಯ ರಕ್ಷಣೆಗಾಗಿ ಶ್ರಮಿಸುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಅಭಿನಂದನೆಗಳು!ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸನಾತನದ ಸಾವಿರಾರು ಸಾಧಕರನ್ನು ಸಾಧನೆಯ ಮಾರ್ಗದಲ್ಲಿ ಒಗ್ಗೂಡಿಸಿ, ಸಂಸ್ಕೃತಿಯ ರಕ್ಷಣೆಗಾಗಿ ಎಲ್ಲರನ್ನೂ ಯೋಜಿತ ರೀತಿಯಲ್ಲಿ ಸಂಘಟಿಸಿರುವ ಕುರಿತು ನಾನು ಅವರ ಚರಣಗಳಿಗೆ ನಮಸ್ಕರಿಸುತ್ತೇನೆ. ಅವರ ಈ ಸಾರ್ಥಕ ಪ್ರಯತ್ನಕ್ಕಾಗಿ ಭಾರತದ ಸಂಸ್ಕೃತಿ ಸಚಿವನಾಗಿ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ, ಅವರನ್ನು ಅಭಿನಂದಿಸುತ್ತೇನೆ. ಕಳೆದ 25 ವರ್ಷಗಳಲ್ಲಿ ಸನಾತನ ಸಂಸ್ಥೆಯು ಜನರನ್ನು ಕೇವಲ ಅಧ್ಯಾತ್ಮದ ಉನ್ನತಿಯ ಮಾರ್ಗದಲ್ಲಿ ಮುನ್ನಡೆಸಿಲ್ಲ, ಜೊತೆಗೆ ಸಮಾಜದ ನೈತಿಕ ಬಲ ಮತ್ತು ರಾಷ್ಟ್ರಬಲವನ್ನು ಹೆಚ್ಚಿಸುವ ಹಾಗೂ ಧರ್ಮ ಜಾಗೃತಿಯ ಮಹಾನ್ ಕಾರ್ಯವನ್ನು ಮಾಡಿದೆ. ಈ ಮಹೋತ್ಸವದ ಆಯೋಜನೆಯು ಕೇವಲ ‘ಶಂಖನಾದ’ ಎಂಬ ಪದಕ್ಕೆ ಸೀಮಿತವಾಗಿಲ್ಲ, ಬದಲಾಗಿ ಇದು ಭಾರತದ ಪುನರುಜ್ಜೀವನದ ಘೋಷಣೆಯಾಗಿದೆ. ಭಾರತದ ಕಳೆದುಹೋದ ಸಂಸ್ಕೃತಿಯು ಮತ್ತೆ ಉದಯವಾಗುತ್ತಿದೆ ಎಂಬುದು ಈ ಮಹೋತ್ಸವದಿಂದ ಕಾಣಿಸುತ್ತಿದೆ, ಎಂದು ಹೇಳಿದರು. |
ಭಾರತವನ್ನು ಶಕ್ತಿಶಾಲಿ ದೇಶವನ್ನಾಗಿ ಮಾಡುವ ಸನಾತನ ಸಂಸ್ಥೆಯ ಪ್ರಯತ್ನಗಳು ಶ್ಲಾಘನೀಯ!ಇಂದು ಭಾರತವು ಸಾಂಸ್ಕೃತಿಕ ವಿಕಾಸದ ಹಾದಿಯಲ್ಲಿದೆ. ನಮ್ಮ ದೇಶವು ಪರಿವರ್ತನೆಯ ಸ್ಥಿತಿಯಲ್ಲಿದೆ. ‘ವಂದೇ ಮಾತರಂ’ನ ಪರಿಚಯವನ್ನು ಎಲ್ಲರಿಗೂ ಮಾಡಿಕೊಟ್ಟ ಸನಾತನ ಸಂಸ್ಥೆಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ‘ವಂದೇ ಮಾತರಂ’ ಮತ್ತೊಮ್ಮೆ ಎಲ್ಲರನ್ನು ಜೋಡಿಸಿ, ಅದರ ಮೂಲಕ ಭಾರತವನ್ನು ಮತ್ತೊಮ್ಮೆ ಸಮೃದ್ಧ ಮತ್ತು ಶಕ್ತಿಶಾಲಿ ದೇಶವನ್ನಾಗಿ ಮಾಡುವ ಸನಾತನ ಸಂಸ್ಥೆಯ ಪ್ರಯತ್ನಗಳು ಶ್ಲಾಘನೀಯವಾಗಿವೆ!, ಎಂದು ಹೇಳಿದರು. |
ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಂದ ಶಸ್ತ್ರ ಪ್ರದರ್ಶನಕ್ಕೆ ಭೇಟಿ!

ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಡಿಸೆಂಬರ್ 14 ರಂದು ಭಾರತ ಮಂಡಪಂನಲ್ಲಿರುವ ಶಿವಾಜಿಕಾಲದ ಶಸ್ತ್ರಾಸ್ತ್ರಗಳ ಪ್ರದರ್ಶನಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಜೀವನವನ್ನು ಆಧರಿಸಿದ ಪ್ರದರ್ಶನ, ಹಾಗೆಯೇ ರುದ್ರಾಕ್ಷಿ ಮತ್ತು ಶಾಲಿಗ್ರಾಮಗಳ ಪ್ರದರ್ಶನಕ್ಕೂ ಭೇಟಿ ನೀಡಿದರು. ಪ್ರದರ್ಶನದ ಕುರಿತು ಅವರು ಸಂತೋಷ ವ್ಯಕ್ತಪಡಿಸಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ