ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಸಮಾರೋಪ ಸಮಾರಂಭ: ಸನಾತನ ರಾಷ್ಟ್ರ ಸಂಕಲ್ಪ ಸಭೆ

ಭಾರತ ಮಂಟಪಂ, ದೆಹಲಿ – ಸನಾತನ ಸಂಸ್ಥೆಯು ಹಿಂದೂಗಳಿಗೆ ಸಮಗ್ರ ಧರ್ಮಶಿಕ್ಷಣವನ್ನು ನೀಡುವ ಮೂಲಕ ಮಾಡುತ್ತಿರುವ ಧರ್ಮಜಾಗೃತಿ ಮತ್ತು ಸಂಸ್ಕೃತಿ ಸಂವರ್ಧನೆಯ ಕಾರ್ಯವು ಅದ್ವಿತೀಯವಾಗಿದೆ. ಸನಾತನ ಸಂಸ್ಥೆಯ ಕಾರ್ಯದಿಂದ ರಾಷ್ಟ್ರವು ಬಲಶಾಲಿಯಾಗಲಿದೆ. ಇಂದು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಬಂದಿರುವ ಪ್ರತಿಯೊಬ್ಬರೂ ಇಲ್ಲಿಂದ ಮುಂದೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸನಾತನ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡುವ ಸುಸಂಕಲ್ಪವನ್ನು ಮಾಡಬೇಕು! ಅದಕ್ಕಾಗಿ ಅವಶ್ಯಕವಿರುವ ಸಂಘಟನೆಯನ್ನು ಮಾಡುವುದು, ಕೃತಿಶೀಲರಾಗುವುದು, ಇದೇ ಈ ಮಹೋತ್ಸವದ ನಿಜವಾದ ಫಲಶ್ರುತಿಯಾಗಲಿದೆ ಎಂದು ಛತ್ತೀಸ್‌ಗಢದ ‘ಶದಾಣಿ ದರ್ಬಾರಿನ’ ಒಂಬತ್ತನೇ ಪೀಠಾಧೀಶ್ವರರಾದ ಪ.ಪೂ. ಯುಧಿಷ್ಠಿರಲಾಲ್ ಮಹಾರಾಜರು ಕರೆ ನೀಡಿದರು. ಅವರು ಮಹೋತ್ಸವದ ಸಮಾರೋಪದ ಸಮಯದಲ್ಲಿ ನಡೆದ ‘ಸನಾತನ ರಾಷ್ಟ್ರ ಸಂಕಲ್ಪ ಸಂತಸಭೆ’ಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು, ‘ನಿರ್ವಸಿತ ಹಿಂದೂಗಳ ಪುನರ್ವಸತಿಗಾಗಿ’ ಸರಕಾರವು ಇನ್ನಷ್ಟು ಪ್ರಯತ್ನಿಸಬೇಕು ಎಂದೂ ಕರೆ ನೀಡಿದರು.
ಚಾರಿತ್ರ್ಯವಂತ ಜನರು ಮಾತ್ರ ಯುದ್ಧವನ್ನು ಗೆಲ್ಲಬಲ್ಲರು! – ಪೂ. ಪವನ ಸಿನ್ಹಾ ಗುರುಜಿ, ಸಂಸ್ಥಾಪಕರು, ಪಾವನ ಚಿಂತನಧಾರಾ ಆಶ್ರಮ
ಭಾರತ ಮಂಟಪಂ, ದೆಹಲಿ – ಚಾರಿತ್ರ್ಯವಂತ ಜನರು ಮಾತ್ರ ಧರ್ಮಯುದ್ಧವನ್ನು ಮಾಡಬಲ್ಲರು. ಯಾರಲ್ಲಿ ಚಾರಿತ್ರ್ಯವಿಲ್ಲವೋ, ಅವರು ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ. ಭಾರತಕ್ಕೆ ಚಾರಿತ್ರ್ಯವಿರುವುದರಿಂದಲೇ ಪಾಕಿಸ್ತಾನದ ವಿರುದ್ಧದ ಅನೇಕ ಸಣ್ಣ-ದೊಡ್ಡ ಯುದ್ಧಗಳಲ್ಲಿ ಭಾರತಕ್ಕೆ ಯಶಸ್ಸು ಸಿಕ್ಕಿದೆ. ಚಾರಿತ್ರ್ಯವನ್ನು ನಿರ್ಮಿಸುವುದು ಸುಲಭವಲ್ಲ ಮತ್ತು ಚಾರಿತ್ರ್ಯಕ್ಕೂ ಶಿಕ್ಷಣಕ್ಕೂ ಯಾವುದೇ ಸಂಬಂಧವಿಲ್ಲ. ಅನೇಕ ಉನ್ನತ ವಿದ್ಯಾಭ್ಯಾಸ ಮಾಡಿದ ಜನರು ಭ್ರಷ್ಟಾಚಾರಿಗಳಾಗಿದ್ದಾರೆ. ಇಂದಿನ ಶಿಕ್ಷಣವು ಯುವಕರಲ್ಲಿ ಚಾರಿತ್ರ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ. ಶಿಕ್ಷಕರಿಗೆ ಅದಕ್ಕಾಗಿ ಸಮಯವೇ ಇಲ್ಲ. ದೇಶದಲ್ಲಿ ಅನೇಕ ವಿದ್ಯಾಲಯಗಳಿದ್ದರೂ, ಯುವಕರಲ್ಲಿನ ಚಾರಿತ್ರ್ಯವು ಕುಗ್ಗುತ್ತಿದೆ. ಚಾರಿತ್ರ್ಯ ನಿರ್ಮಾಣವಾಗಲು ಸಮಾಜ ಮತ್ತು ರಾಷ್ಟ್ರದ ಬಗ್ಗೆ ಪ್ರೀತಿ ಇರಬೇಕಾಗುತ್ತದೆ. ಅದಕ್ಕಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಜೊತೆಗೆ ಅವರ ಮುಂದೆ ಉತ್ತಮ ಆದರ್ಶಗಳನ್ನು ಇಡಬೇಕಾಗುತ್ತದೆ. ಅದಕ್ಕಾಗಿ ಅವರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗುತ್ತದೆ ಎಂದು ‘ಪಾವನ ಚಿಂತನಧಾರಾ ಆಶ್ರಮದ’ ಸಂಸ್ಥಾಪಕರಾದ ಪೂ. ಪವನ ಸಿನ್ಹಾ ಗುರುಜಿಯವರು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಮಾರ್ಗದರ್ಶನ ಮಾಡಿದರು.
‘ಸನಾತನ ರಾಷ್ಟ್ರ ಮತ್ತು ಯುವಕರ ಜಾಗೃತಿ’ ವಿಷಯದ ಕುರಿತು ಮಾತನಾಡುತ್ತಾ ಅವರು, “ನಮ್ಮ ದೇಶದಲ್ಲಿ ಮಹಾರಾಣಾ ಪ್ರತಾಪ, ಛತ್ರಪತಿ ಶಿವಾಜಿ ಮಹಾರಾಜ, ಸ್ವಾಮಿ ವಿವೇಕಾನಂದರಂತಹ ಅನೇಕ ಚಾರಿತ್ರ್ಯವಂತ ಮಹಾಪುರುಷರು ಆಗಿ ಹೋಗಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ಕತ್ತಿವರಸೆಯಲ್ಲಿ ನಿಪುಣರಾಗಿದ್ದರು ಎಂದಲ್ಲ, ಅವರು ಚಾರಿತ್ರ್ಯವಂತರಾಗಿದ್ದರೆಂದು ಜಗತ್ತು ಅವರನ್ನು ಗೌರವಿಸುತ್ತದೆ. ಜನರು ಅವರನ್ನು ಆದರ್ಶವಾಗಿ ತೆಗೆದುಕೊಳ್ಳುತ್ತಾರೆ, ಅವರಿಗೆ ಗೌರವ ನೀಡುತ್ತಾರೆ, ಅವರನ್ನು ಛತ್ರಪತಿ ಎಂದು ಕರೆಯುತ್ತಾರೆ ಮತ್ತು ಅವರ ಜಯಘೋಷ ಮಾಡುತ್ತಾರೆ. ಆದ್ದರಿಂದ ಚಿತ್ರರಂಗದ ನಾಯಕರ ಬದಲು ರಾಷ್ಟ್ರಪುರುಷರ ಆದರ್ಶವನ್ನು ಯುವ ಪೀಳಿಗೆಯ ಮುಂದೆ ಇಡುವುದು ಆವಶ್ಯಕವಾಗಿದೆ.”
ಮುಂಬರುವ ಆಪತ್ಕಾಲದಲ್ಲಿ ರಕ್ಷಣೆಯಾಗಲು ಭಗವಂತನ ಭಕ್ತರಾಗಿ! – ಸದ್ಗುರು ನೀಲೇಶ ಸಿಂಗಬಾಳ, ಧರ್ಮಪ್ರಚಾರಕರು, ಹಿಂದೂ ಜನಜಾಗೃತಿ ಸಮಿತಿ
ಭಾರತ ಮಂಟಪಂ, ದೆಹಲಿ – ಭೂಮಿಯಲ್ಲಿ ಅಧರ್ಮವು ಹೆಚ್ಚಾದಾಗ, ಶಾಂತಿಯನ್ನು ಸ್ಥಾಪಿಸಲು ಯುದ್ಧವನ್ನು ಮಾಡಲೇಬೇಕಾಗುತ್ತದೆ. ಅದನ್ನೇ ‘ಆಪತ್ಕಾಲ’ ಎನ್ನುತ್ತಾರೆ. ಅದು ಹೇಳಿ ಬರುವುದಿಲ್ಲ, ಬದಲಾಗಿ ನಿರ್ಧರಿತ ಕಾಲಚಕ್ರದ ಪ್ರಕಾರ ಬರುತ್ತದೆ. ಕಳೆದ ೨-೩ ವರ್ಷಗಳಿಂದ ಇಡೀ ವಿಶ್ವದಲ್ಲಿ ಯುದ್ಧಜನ್ಯ ಸ್ಥಿತಿ ನಿರ್ಮಾಣವಾಗಿದೆ. ಅನೇಕ ರಾಷ್ಟ್ರಗಳು ಯುದ್ಧದ ಹೊಸ್ತಿಲಿನಲ್ಲಿವೆ. ಮೂರನೇ ಯುದ್ಧ ಯಾವಾಗ ಪ್ರಾರಂಭವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಾಜಿ ಸೇನಾ ಮುಖ್ಯಸ್ಥರಾದ ವಿಪಿನ್ ರಾವತ್ ಅವರು ಹೇಳಿದಂತೆ, ಈ ಸಮಯದಲ್ಲಿ ಭಾರತವು ಯುದ್ಧದ ವೇಳೆ ಕೇವಲ ಗಡಿಗಳಲ್ಲಿ ಮಾತ್ರವಲ್ಲ, ಎರಡೂವರೆ ಸ್ತರಗಳಲ್ಲಿ (ಚೀನಾ, ಪಾಕಿಸ್ತಾನ ಮತ್ತು ಆಂತರಿಕ ಶತ್ರುಗಳು) ಹೋರಾಡಬೇಕಾಗುತ್ತದೆ. ಪ್ರಸ್ತುತ ಭಾರತ ವಿರೋಧಿ ಶಕ್ತಿಗಳು ವಿವಿಧ ಮಾಧ್ಯಮಗಳ ಮೂಲಕ ದೇಶದಲ್ಲಿ ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ. ವಿವಿಧ ಸಂತರು, ದಾರ್ಶನಿಕರು ಮತ್ತು ಸಪ್ತರ್ಷಿಗಳು ನುಡಿದ ಭವಿಷ್ಯವು ನಿಜವಾಗುತ್ತಿರುವುದು ಕಾಣಿಸುತ್ತಿದೆ. ಅವರು ಹೇಳಿದಂತೆ ಆಪತ್ಕಾಲದಲ್ಲಿ ಯುದ್ಧ, ಪ್ರವಾಹ, ಭೂಕಂಪ, ರೋಗರುಜಿನಗಳು ಇತ್ಯಾದಿಗಳ ಘೋರ ಆಪತ್ಕಾಲವು ಬರುತ್ತದೆ ಮತ್ತು ಅದರಲ್ಲಿ ಅಪಾರ ಪ್ರಮಾಣದಲ್ಲಿ ಮನುಷ್ಯ ಹಾನಿಯಾಗಲಿದೆ. ಹೀಗಿದ್ದರೂ, ‘ನಮೇ ಭಕ್ತ: ಪ್ರಣಶ್ಯತಿ ।’, ಅಂದರೆ ‘ನನ್ನ ಭಕ್ತನ ನಾಶವಾಗುವುದಿಲ್ಲ’, ಎಂದು ಭಗವಂತನ ವಚನವಿದೆ. ಆದ್ದರಿಂದ ಆಪತ್ಕಾಲದಿಂದ ರಕ್ಷಣೆಯಾಗಲು ವಿವಿಧ ಸುರಕ್ಷಾತ್ಮಕ ಉಪಾಯಗಳ ಜೊತೆಗೆ ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ಆತನ ಭಕ್ತರಾಗುವುದು ಅವಶ್ಯಕವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಸದ್ಗುರು ನೀಲೇಶ ಸಿಂಗಬಾಳ ಅವರು ‘ಭಾವಿ ಆಪತ್ಕಾಲ ಮತ್ತು ಸುರಕ್ಷಾತ್ಮಕ ಉಪಾಯಗಳು’ ಎಂಬ ವಿಷಯದ ಮೇಲೆ ಮಾತನಾಡುತ್ತಾ ಮಾರ್ಗದರ್ಶನ ಮಾಡಿದರು.
ಹಿಂದೂಗಳು ತಮ್ಮ ನಿಜವಾದ ಶತ್ರುವನ್ನು ಗುರುತಿಸಿ ಛತ್ರಪತಿ ಶಿವಾಜಿಯವರ ಶೌರ್ಯಪೂರ್ಣ ಮಾರ್ಗದಲ್ಲಿ ಕಾರ್ಯಪ್ರವೃತ್ತರಾಗಬೇಕು! – ಉದಯ ಮಾಹೂರಕರ್, ಸಂಸ್ಥಾಪಕರು, ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್
‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಸಮಾರೋಪ ಸತ್ರದಲ್ಲಿ ಸನಾತನ ಸಂಸ್ಥೆಯ ಮೇಲೆ ಪ್ರಶಂಸೆಯ ಸುರಿಮಳೆ

ಭಾರತ ಮಂಟಪಂ, ದೆಹಲಿ (ಸುದ್ದಿ.) – ಹಿಂದೂಗಳು ತಮ್ಮ ನಿಜವಾದ ಶತ್ರುವನ್ನು ಗುರುತಿಸಬೇಕು. ಅದಕ್ಕಾಗಿ ಕೆಲವು ಕೃತಿಗಳನ್ನು ಮಾಡಬೇಕು ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯ ಘಟನೆಗಳಿಂದ ಪ್ರೇರಣೆ ಪಡೆದು ಅವರು ಅಳವಡಿಸಿಕೊಂಡ ಶೌರ್ಯಯುಕ್ತ ಮಾರ್ಗದಲ್ಲಿ ಕಾರ್ಯ ಮಾಡಬೇಕು ಎಂದು ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ನ ಸಂಸ್ಥಾಪಕರು ಹಾಗೂ ಮಾಜಿ ಮಾಹಿತಿ ಆಯುಕ್ತರಾದ ಶ್ರೀ. ಉದಯ ಮಾಹೂರಕರ್ ಅವರು ಮಾರ್ಗದರ್ಶನ ನೀಡಿದರು. ಅವರು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ‘ಸನಾತನ ರಾಷ್ಟ್ರ ಸಂಕಲ್ಪ ಸಂತ ಸಭೆ’ಯಲ್ಲಿ ‘ಚಕ್ರವರ್ತಿ ಸಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ’ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು. ಈ ಸಮಾರೋಪದ ಸತ್ರದಲ್ಲಿ ಉಪಸ್ಥಿತರಿದ್ದ ಅನೇಕ ಸಂತರು, ಹಾಗೆಯೇ ಶ್ರೀ. ಮಾಹೂರಕರ್ ಅವರು ಸನಾತನ ಸಂಸ್ಥೆಯ ಕಾರ್ಯವನ್ನು ಹೆಮ್ಮೆಯಿಂದ ಉಲ್ಲೇಖಿಸಿದರು.
ಶ್ರೀ. ಮಾಹೂರಕರ್ ಅವರು ಮಾತನಾಡುತ್ತಾ, “ಛತ್ರಪತಿ ಶಿವಾಜಿ ಮಹಾರಾಜರು ೫ ಬಾರಿ ಔರಂಗಜೇಬನಿಗೆ ಕ್ಷಮಾಪತ್ರಗಳನ್ನು ಕಳುಹಿಸಿದರು. ೫ ಬಾರಿ ಸಂಧಾನವನ್ನು ಮಾಡಿಕೊಂಡರು; ಆದರೆ ಅದರಲ್ಲಿ ೩ ಸಂಧಾನದ ಷರತ್ತುಗಳು ಅವರ ಸ್ವರಾಜ್ಯ ಸ್ಥಾಪನೆಯ ಗುರಿಯ ಅಡ್ಡಿಗೆ ಬಂದಾಗ ಮಹಾರಾಜರು ಅವುಗಳನ್ನು ಮುರಿದರು. ಅಫಜಲಖಾನನ ಯೋಜನಾಬದ್ಧ ವಧೆಯಿಂದ ಶಿವಛತ್ರಪತಿಯವರ ಪ್ರಭಾವ ಇಡೀ ಭಾರತದಲ್ಲಿ ಹೆಚ್ಚಾಯಿತು. ಸೂರತ್ ಲೂಟಿಯ ನಂತರ ಶಿವಛತ್ರಪತಿಯವರು ಸಿಂಧುದುರ್ಗ ಮತ್ತು ರಾಯಗಡ ಮುಂತಾದ ಕೋಟೆಗಳನ್ನು ಕಟ್ಟಿ ರಾಷ್ಟ್ರಹಿತವನ್ನು ಸಾಧಿಸಿದರು. ಔರಂಗಜೇಬನ ಸೆರೆಯಲ್ಲಿರುವಾಗಲೂ ಮಹಾರಾಜರು ಅಲ್ಲಿನ ರಾಜಪುತ್ರರನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದರು. ಶಿವ ಛತ್ರಪತಿಯವರ ಇದೇ ಯಶಸ್ವಿ ರಾಜನೀತಿಯನ್ನು ಇಂದೂ ಉಪಯೋಗಿಸಿದರೆ ಸನಾತನ ರಾಷ್ಟ್ರದ ಸ್ಥಾಪನೆ ದೂರವಿಲ್ಲ,” ಎಂದರು.
ಶ್ರೀ. ಮಾಹೂರಕರ್ ಅವರು ಮಂಡಿಸಿದ ಇತರ ಪ್ರಮುಖ ಅಂಶಗಳು,
೧. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ಯಾರಿಸ್ಟರ್ ಜಿನ್ನಾ ಅವರು ಪ್ರತ್ಯೇಕ ಪಾಕಿಸ್ತಾನವನ್ನು ಕೇಳಿದರು; ಆದರೆ ಅವರು ‘ಭಾರತದಲ್ಲಿನ ಮುಸಲ್ಮಾನರಿಗೆ ಹೇಗೆ ಗೌರವ ದೊರಕಬೇಕು’ ಎಂಬುದಕ್ಕಾಗಿ ನೀಡಿದ ಇನ್ನೊಂದು ಪರ್ಯಾಯವನ್ನೂ ಗಾಂಧಿ ಮತ್ತು ನೆಹರೂ ಅವರು ಸ್ವೀಕರಿಸಿದರು. ಇದರಿಂದ ಪಂಥದ ಆಧಾರದಲ್ಲಿ ಸ್ವತಂತ್ರ ದೇಶವನ್ನು ನೀಡಿದ್ದರೂ ಇನ್ನೊಂದು ಪರ್ಯಾಯವನ್ನು ಸ್ವೀಕರಿಸಿದ್ದರಿಂದ ಭಾರತವು ಹಿಂದೂ ರಾಷ್ಟ್ರವಾಗಲು ಸಾಧ್ಯವಾಗಲಿಲ್ಲ, ಇದು ಹಿಂದೂಗಳಿಗಾದ ವಂಚನೆಯಾಗಿತ್ತು.
೨. ಈ ದೇಶದಲ್ಲಿ ಗಾಂಧಿಯವರ ವಿಚಾರಗಳ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು. ಗಾಂಧಿಯವರ ‘ಸಂಪೂರ್ಣ ಅಹಿಂಸೆ’ ಮತ್ತು ‘ಹಿಂದೂಗಳ ಬಲಿದಾನದಿಂದ ಹಿಂದೂ-ಮುಸ್ಲಿಂ ಐಕ್ಯ’ ಎಂಬ ವಿಚಾರಗಳು ರಾಷ್ಟ್ರಘಾತಕವಾಗಿದ್ದವು.
೩. ಹಿಂದೂಗಳು ಭಾವನಾಶೀಲ ಹಿಂದೂತ್ವದ ಜೊತೆಗೆ, ಅದಕ್ಕಿಂತಲೂ ಹೆಚ್ಚು ಮಹತ್ವವನ್ನು ಕೃತಿಶೀಲ ಹಿಂದೂತ್ವಕ್ಕೆ ನೀಡಬೇಕು!
೪. ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿಯವರಂತಹ ರಾಷ್ಟ್ರರಕ್ಷಣೆಗಾಗಿ ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳುವ ನಾಯಕತ್ವ ದೊರಕಿರುವುದು ನಮ್ಮ ಭಾಗ್ಯವಾಗಿದೆ!
ಸನಾತನ ಸಂಸ್ಥೆ ಭಾರತದಲ್ಲಿನ ಏಕೈಕ ಸಾತ್ತ್ವಿಕ ಸಂಸ್ಥೆ!ಶ್ರೀ. ಉದಯ ಮಾಹೂರಕರ್ ಅವರು, “ಸನಾತನ ಸಂಸ್ಥೆ ನಿಜವಾದ ಅರ್ಥದಲ್ಲಿ ಭಾರತದಲ್ಲಿನ ನಂಬರ್ ಒನ್ ಏಕೈಕ ಸಾತ್ತ್ವಿಕ ಸಂಸ್ಥೆಯಾಗಿದೆ. ಸನಾತನ ಸಂಸ್ಥೆಯು ದೆಹಲಿಗೆ ಬಂದು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸಿರುವುದು ಅತ್ಯಂತ ಮಹತ್ವಪೂರ್ಣ ಘಟನೆಯಾಗಿದೆ. ಕೇವಲ ಪ್ರದರ್ಶನಕ್ಕಾಗಿ ಹಿಂದುತ್ವದ ಕಾರ್ಯ ಮಾಡುವ ನಕಲಿ ಸಂಸ್ಥೆಗಳ ಮೇಲೆ ಪಡೆದ ಒಂದು ರೀತಿಯ ವಿಜಯವೇ ಇದಾಗಿದೆ ಎಂದು ಹೇಳಬಹುದು!” ಎಂದರು. |
ಸಾಂಧರ್ಭಿಕ ಚಿತ್ರಗಳು
೧. ಈ ಸತ್ರದಲ್ಲಿ ಸಂತಗಣ ಮತ್ತು ಗಣ್ಯರ ಕರಕಮಲದಿಂದ ಅವರ ‘ಅಪೂರ್ವ ಭಾರತಮ್’ ಎಂಬ ಕನ್ನಡ ಭಾಷೆಯ ಗ್ರಂಥವನ್ನು ಪ್ರಕಾಶಿಸಲಾಯಿತು. ಈ ಪುಸ್ತಕದಲ್ಲಿ ವಿಷಯದ ಕುರಿತು ಮಾಹಿತಿ ನೀಡಲಾಗಿದೆ.
೨. ವಿಶ್ವ ಹಿಂದೂ ಪರಿಷತ್ತಿನ ಸಹ-ಪ್ರಧಾನ ಕಾರ್ಯದರ್ಶಿಗಳಾದ ಪೂ. ವಿಜ್ಞಾನಾನಂದ ಮಹಾರಾಜರು ತಮ್ಮ ಮಾರ್ಗದರ್ಶನವನ್ನು ಸ್ವತಃ ಶಂಖನಾದ ಮಾಡಿ ಪ್ರಾರಂಭಿಸಿದರು.
೩. ಮಹೋತ್ಸವವನ್ನು ಸಂಪೂರ್ಣ ‘ವಂದೇ ಮಾತರಂ’ (ಗೀತ ಗಾಯನ ದಿಂದ) ನಿಂದ ಸಮಾರೋಪಗೊಳಿಸಲಾಯಿತು !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು
‘ಭಾರತದಲ್ಲಿ ವಾಸಿಸಲು ನನಗೆ ನಾಚಿಕೆಯಾಗುತ್ತದೆ !’
ದೆಹಲಿ: ಹಳೇ ವೈಷಮ್ಯದ ಹಿನ್ನೆಲೆ: ೧೭ ವರ್ಷದ ಹಿಂದೂ ಹುಡುಗನ ಹತ್ಯೆ
ಸುಪ್ರೀಂ ಕೋರ್ಟ್ಗೆ 5 ಹೊಸ ನ್ಯಾಯಾಧೀಶರ ಸೇರ್ಪಡೆ; ಒಂದು ಹುದ್ದೆ ಮಾತ್ರ ಖಾಲಿ!