ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025
ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ನಿರ್ಣಾಯಕ ಹೋರಾಟ ಎಂಬ ವಿಷಯದ ಮೇಲಿನ ಚರ್ಚಾ ಗೋಷ್ಠಿ!

ನವದೆಹಲಿ – ‘ಜಮಾತ್-ಎ-ಇಸ್ಲಾಮಿ’ಯು ೨೦೪೭ ರವರೆಗೆ ಭಾರತವನ್ನು ಇಸ್ಲಾಮೀ ರಾಷ್ಟ್ರವನ್ನಾಗಿ ಮಾಡುವ ಸಂಚು ರೂಪಿಸಿದೆ. ಈ ಷಡ್ಯಂತ್ರದ ಭಾಗವಾಗಿಯೇ ‘ಜಮಾತ್-ಎ-ಇಸ್ಲಾಮಿ’ಯಿಂದ ಬಾಂಗ್ಲಾದೇಶಿ ನುಸುಳುಕೋರರನ್ನು ಭಾರತದಲ್ಲಿ ನೆಲೆಸುವಂತೆ ಮಾಡಲಾಗುತ್ತಿದೆ. ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸಲಾಗುತ್ತಿದೆ, ಎಂದು ಭಾರತ ರಕ್ಷಾ ಮಂಚ್ ಸಂಘಟನೆಯ ಸಂಸ್ಥಾಪಕರಾದ ಸೂರ್ಯಕಾಂತ ಕೇಳಕರ ಅವರು ಹೇಳಿದರು. ದೆಹಲಿಯ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಡಿಸೆಂಬರ್ ೧೩ ರಂದು ‘ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ನಿರ್ಣಾಯಕ ಹೋರಾಟ’ ಎಂಬ ವಿಷಯದ ಮೇಲಿನ ಚರ್ಚಾ ಗೋಷ್ಠಿಯಲ್ಲಿ ಶ್ರೀ. ಸೂರ್ಯಕಾಂತ ಕೇಳಕರ ಅವರು ಬಾಂಗ್ಲಾದೇಶಿ ನುಸುಳುಕೋರರ ಬಗ್ಗೆ ಗಂಭೀರ ಅಂಶಗಳನ್ನು ಮಂಡಿಸಿದರು. ಪಾಂಚಜನ್ಯ ನಿಯತಕಾಲಿಕೆಯ ಹಿರಿಯ ಪತ್ರಕರ್ತ ಶ್ರೀ. ರಿತೇಶ ಕಶ್ಯಪ ಅವರು ಈ ಚರ್ಚಾ ಗೋಷ್ಠಿಯ ಸಂಚಾಲನೆ ಮಾಡಿದರು.
ಈ ಸಂದರ್ಭದಲ್ಲಿ ಸೂರ್ಯಕಾಂತ ಕೇಳಕರ ಅವರು ಮಾತನಾಡುತ್ತಾ, “ಮೊದಲು ಭಾರತ-ಬಾಂಗ್ಲಾದೇಶ ಗಡಿ ಮುಕ್ತವಾಗಿತ್ತು; ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಗಡಿಯಲ್ಲಿ ಮುಳ್ಳು ತಂತಿಯ ಬೇಲಿ ಹಾಕಲಾಯಿತು. ಗಡಿಯಲ್ಲಿ ‘ಸಿಸಿಟಿವಿ ಕ್ಯಾಮೆರಾಗಳನ್ನು’ ಅಳವಡಿಸಲಾಗಿದೆ. ಇದರಿಂದ ಬಾಂಗ್ಲಾದೇಶಿಯರ ನುಸುಳುಕೋರರ ಪ್ರಮಾಣ ದೊಡ್ಡ ಮಟ್ಟದಲ್ಲಿ ಕಡಿಮೆಯಾಗಿದೆ. ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳಲು ಸದ್ಯ ಯಾವುದೇ ಕಾನೂನು ಇಲ್ಲ. ಅದಕ್ಕಾಗಿ ಸ್ವತಂತ್ರ ಕಾನೂನನ್ನು ರೂಪಿಸುವುದು ಅವಶ್ಯಕವಾಗಿದೆ. ಇದಕ್ಕಾಗಿ ಭಾರತ ರಕ್ಷಾ ಮಂಚ್‌ನಿಂದ ಆಂದೋಲನ ಮಾಡಲಾಗುವುದು, ಎಂದು ಹೇಳಿದರು.
ಲವ್ ಜಿಹಾದ್, ಲ್ಯಾಂಡ್ ಜಿಹಾದ್‌ಗಳ ವಿರುದ್ಧ ಹಿಂದುತ್ವನಿಷ್ಠ ಸಂಘಟನೆಗಳು ಒಗ್ಗೂಡಬೇಕು! – ಅಡ್ವೋಕೇಟ್ ರಾಜೀವ ಕುಮಾರ ನಾಥ, ಭಾರತೀಯ ಮಜದೂರ್ ಸಂಘ, ಆಸ್ಸಾಂ
ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಪ್ರಕರಣಗಳು ಆಸ್ಸಾಂನಲ್ಲಿ ಹೆಚ್ಚಾಗುತ್ತಿವೆ. ವಿವಿಧ ಹಿಂದುತ್ವನಿಷ್ಠರು ಒಗ್ಗೂಡಿದರೆ ಈ ಬಿಕ್ಕಟ್ಟುಗಳನ್ನು ಎದುರಿಸಬಹುದು. ಆಸ್ಸಾಂನ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವ ಸರಮಾ ಅವರು ನುಸುಳುಕೋರರ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಅರಣ್ಯ ಪ್ರದೇಶದ ಭೂಮಿಯಲ್ಲಿ ಅನಧಿಕೃತವಾಗಿ ನೆಲೆಸಿದವರ ಮೇಲೂ ಸರಕಾರವು ಕ್ರಮ ಕೈಗೊಳ್ಳುತ್ತಿದೆ.
ನುಸುಳುವಿಕೆ ಇದು ಸಂಪೂರ್ಣ ಭಾರತದ ಸಮಸ್ಯೆ! – ಪೂ. ನಿರ್ಗುಣಾನಂದ ಪುರಿ, ಬಂಗಾಲ
ನುಸುಳುವಿಕೆ ಕೇವಲ ಗಡಿಭಾಗದ ರಾಜ್ಯಗಳ ಸಮಸ್ಯೆ, ಎಂಬ ಭಾವನೆ ಭಾರತದ ಇತರ ರಾಜ್ಯಗಳಲ್ಲಿದೆ ಎಂದು ಕಂಡುಬರುತ್ತದೆ; ಆದರೆ ನುಸುಳುವಿಕೆ ಸಮಸ್ತ ಭಾರತವರ್ಷದ ಸಮಸ್ಯೆಯಾಗಿದೆ. ಮತದಾನದ ‘ವಿಶೇಷ ಆಳವಾದ ಪುನರಾವಲೋಕನ’ದಿಂದಾಗಿ (‘ಸ್ಪೆಷಲ್ ಇಂಟೆನ್ಸಿವ್ ರಿವಿಜನ್’ನಿಂದಾಗಿ) ನುಸುಳುಕೋರರು ಬಂಗಾಲದಿಂದ ಪಲಾಯನ ಮಾಡುತ್ತಿದ್ದಾರೆ. ವಿಶೇಷ ಆಳವಾದ ಪುನರಾವಲೋಕನದಿಂದ ಮತದಾರರ ಪಟ್ಟಿಯಲ್ಲಿರುವ ೫೮ ಲಕ್ಷ ೧೮ ಸಾವಿರ ೪೦೦ ಜನರ ಹೆಸರುಗಳು ರದ್ದುಗೊಂಡಿವೆ; ಆದರೆ ಈ ನುಸುಳುಕೋರರು ಭಾರತದಿಂದ ಹೊರಗೆ ಹೋಗುವ ಬದಲು ಭಾರತದ ಇತರ ರಾಜ್ಯಗಳಿಗೆ ಹೋಗುತ್ತಿದ್ದಾರೆ.
ಬಂಗಾಲದಲ್ಲಿ ನುಸುಳುಕೋರರ ಸಮಸ್ಯೆ ೨೦೦೨ಕ್ಕಿಂತ ಮೊದಲಿನಿಂದ! – ಸೂರಜ ಸಿಂಗ, ಶ್ರೀರಾಮ ಸ್ವಾಭಿಮಾನ ಸಂಘಟನೆ, ಬಂಗಾಲ
ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಸರಕಾರವು ಬಾಂಗ್ಲಾದೇಶಿ ನುಸುಳುಕೋರರಿಗೆ ಸಹಕಾರ ನೀಡುತ್ತಿದೆ. ವಿಶೇಷ ಆಳವಾದ ಪುನರಾವಲೋಕನದಲ್ಲಿ ೨೦೦೨ ರ ನಂತರದ ನಾಗರಿಕರು ತಮ್ಮ ಜನನ ಪ್ರಮಾಣಪತ್ರವನ್ನು ಪುರಾವೆಯಾಗಿ ತೋರಿಸುವುದು ಅವಶ್ಯಕವಾಗಿದೆ. ಆದರೆ, ವಾಸ್ತವದಲ್ಲಿ ಬಂಗಾಲದಲ್ಲಿ ನುಸುಳುವಿಕೆಯ ಸಮಸ್ಯೆ ೨೦೦೨ ಕ್ಕಿಂತ ಮೊದಲಿನಿಂದಲೂ ಇದೆ. ಆದ್ದರಿಂದ ಮತದಾರರ ಪಟ್ಟಿಯ ವಿಶೇಷ ಆಳವಾದ ಪುನರಾವಲೋಕನ ಮಾಡಿದ ನಂತರವೂ ಬಂಗಾಲದಲ್ಲಿ ೨೦೦೨ ಕ್ಕಿಂತ ಮೊದಲು ಮತದಾರರ ಪಟ್ಟಿಯಲ್ಲಿದ್ದ ಹೆಸರುಗಳು ರದ್ದಾಗಲು ಸಾಧ್ಯವಾಗುವುದಿಲ್ಲ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!