
ಲಾಹೋರ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಪ್ರಸ್ತುತ ಸಂಸ್ಕೃತ ಮಂತ್ರಗಳ ಉಚ್ಚಾರಣೆ ಕೇಳಿಬರುತ್ತಿದೆ. ‘ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್ಮೆಂಟ್ ಸೈನ್ಸಸ್’ ಸಂಸ್ಥೆಯು ೩ ತಿಂಗಳ ಸಂಸ್ಕೃತ ಕಾರ್ಯಾಗಾರದ ನಂತರ ಈಗ ಸಂಸ್ಕೃತದ ಔಪಚಾರಿಕ ಅಧ್ಯಯನವನ್ನು ಪ್ರಾರಂಭಿಸಿದೆ. ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಸ್ಕೃತ ವ್ಯಾಕರಣದಿಂದ ಹಿಡಿದು ಪುರಾಣ ಪರಂಪರೆಯವರೆಗೆ ವಿವಿಧ ಆಯಾಮಗಳ ಮೇಲೆ ಚರ್ಚೆ ನಡೆಯಿತು. ಪಾಕಿಸ್ತಾನದಲ್ಲಿ ಸ್ವಾತಂತ್ರ್ಯದ ನಂತರ ಇಂತಹ ರೀತಿಯ ಸಂಸ್ಕೃತ ಅಧ್ಯಯನ ಇದೇ ಮೊದಲ ಬಾರಿಗೆ ನಡೆದಿದೆ. ಈ ಉತ್ತಮ ಪ್ರತಿಕ್ರಿಯೆಯ ನಂತರ ವಿಶ್ವವಿದ್ಯಾಲಯವು ಈ ಕೋರ್ಸ್ ಅನ್ನು ಪ್ರಾರಂಭಿಸಿದೆ. ಮುಂದಿನ ಹಂತದಲ್ಲಿ ರಾಮಾಯಣ ಮತ್ತು ಮಹಾಭಾರತಗಳ ಬಗ್ಗೆ ಸಂಶೋಧನೆಯನ್ನು ಪ್ರಾರಂಭಿಸುವ ಸಿದ್ಧತೆ ನಡೆಯುತ್ತಿದೆ.
ವಿಶ್ವವಿದ್ಯಾಲಯ ಮಟ್ಟದಲ್ಲಿ ಔಪಚಾರಿಕ ಅಧ್ಯಯನ
ಕಾರ್ಯಾಗಾರದ ನಂತರ ವಿಶ್ವವಿದ್ಯಾಲಯವು ನಿಯಮಿತ ಸಂಸ್ಕೃತ ಅಧ್ಯಯನ ಕೋರ್ಸ್ ಅನ್ನು ಆರಂಭಿಸಿದೆ. ಈ ಕೋರ್ಸ್ ಗೆ ಪ್ರವೇಶ ಸೀಮಿತವಾಗಿದ್ದರೂ, ೨೦೨೭ ರಲ್ಲಿ ಪ್ರವೇಶ ಸಂಖ್ಯೆಯನ್ನು ಹೆಚ್ಚಿಸುವ ಆಯೋಜನೆಯಿದೆ. ಮುಂದಿನ ದಿನಗಳಲ್ಲಿ ಈ ಅಧ್ಯಯನ ಕೋರ್ಸ್ ಅನ್ನು ಸಂಸ್ಕೃತ ಡಿಪ್ಲೊಮಾ (ಕಡಿಮೆ ಅವಧಿಯ ಕೋರ್ಸ್) ರೂಪದಲ್ಲಿಯೂ ಕಲಿಸುವ ಉದ್ದೇಶವಿದೆ.
ರಾಮಾಯಣ, ಗೀತೆ ಮತ್ತು ಮಹಾಭಾರತಗಳ ಅಧ್ಯಯನಕ್ಕೆ ಹೊಸ ದಿಕ್ಕು
ಲಾಹೋರನಲ್ಲಿರುವ ಗುರಮಾನಿ ಕೇಂದ್ರದ ನಿರ್ದೇಶಕರಾದ ಡಾ. ಅಲಿ ಉಸ್ಮಾನ್ ಕಾಸಮಿ ಅವರ ಪ್ರಕಾರ, ಮುಂಬರುವ ೧೦ ರಿಂದ ೧೫ ವರ್ಷಗಳಲ್ಲಿ ಪಾಕಿಸ್ತಾನದಿಂದ ಸಂಸ್ಕೃತ, ಗೀತೆ (ಭಗವದ್ಗೀತೆ) ಮತ್ತು ಮಹಾಭಾರತ ವಿಷಯಗಳಲ್ಲಿ ಸಂಶೋಧನೆ ಮಾಡುವ ವಿದ್ವಾಂಸರು ಹೊರಹೊಮ್ಮಲಿದ್ದಾರೆ. ಈ ಅಧ್ಯಯನ ಕೋರ್ಸ್ಗ ಗಳ ಮೂಲಕ ಪ್ರಾಚೀನ ಸಾಹಿತ್ಯದ ಅಧ್ಯಯನಕ್ಕೆ ಹೊಸ ದಿಕ್ಕು ದೊರೆಯಲಿದೆ.
ಸಂಸ್ಕೃತ ಮತ್ತು ವೇದಗಳ ಅಧ್ಯಯನದ ಮಹತ್ವ
ಅನೇಕ ಇತಿಹಾಸಕಾರರು ಈ ಭೂಭಾಗದಲ್ಲಿಯೇ ವೇದಗಳನ್ನು ರಚಿಸಲಾಗಿದೆ ಎಂದು ನಂಬುತ್ತಾರೆ. ಆದ್ದರಿಂದ ಸಂಸ್ಕೃತ ಮತ್ತು ವೇದಗಳ ಅಧ್ಯಯನವು ಪಾಕಿಸ್ತಾನಕ್ಕೆ ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಪ್ರಸ್ತುತ ಪಂಜಾಬಿ, ಪಶ್ತೋ, ಸಿಂಧಿ, ಬಲೂಚಿ, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳನ್ನು ಕಲಿಸಲಾಗುತ್ತದೆ. ಸಂಸ್ಕೃತವು ಅನೇಕ ಶಬ್ದಗಳಿಗೆ ಮೂಲ ಭಾಷೆಯಾಗಿದೆ. ಸಂಸ್ಕೃತದಿಂದಾಗಿ ಸಂಪೂರ್ಣ ಭಾಷಾ ಪರಿಸರ ವ್ಯವಸ್ಥೆಯು ಇನ್ನಷ್ಟು ಸಕ್ಷಮವಾಗುತ್ತದೆ ಎಂದು ಡಾ. ಕಾಸಮಿ ಅವರ, ಅಭಿಪ್ರಾಯವಾಗಿದೆ.
ಸಂಸ್ಕೃತ ಪಾಂಡುಲಿಪಿಗಳ(ಹಸ್ತಪ್ರತಿಗಳ) ಅಮೂಲ್ಯ ಸಂಗ್ರಹ
ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದ ಪ್ರಾಚೀನ ಪಾಂಡುಲಿಪಿಗಳನ್ನು (ಹಸ್ತಪ್ರತಿಗಳನ್ನು) ಸಂರಕ್ಷಿಸಿಡಲಾಗಿದೆ. ೧೯೩೦ ರ ದಶಕದಲ್ಲಿ ವಿದ್ವಾಂಸರಾದ ಜೆ.ಸಿ.ಆರ್. ವೂಲ್ನರ್ ಅವರು ತಾಳೆಗರಿಗಳ ಮೇಲೆ ಈ ಪಾಂಡುಲಿಪಿಗಳನ್ನು ಸಂಕಲನಗೊಳಿಸಿದ್ದರು; ಆದರೆ ೧೯೪೭ ರ ನಂತರ ಅವುಗಳ ಅಧ್ಯಯನ ನಡೆದಿರಲಿಲ್ಲ. ಈಗ ಹೊಸದಾಗಿ ಸಂಶೋಧನಾ ಪ್ರಕ್ರಿಯೆ ಪ್ರಾರಂಭವಾಗುವ ಸಾಧ್ಯತೆ ಇದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !