
ನವದೆಹಲಿ – ಇಲ್ಲಿನ ‘ಭಾರತ ಮಂಟಪಮ್’ ಈ ಭವ್ಯ ಕಟ್ಟಡದ ಸಭಾಂಗಣದಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ದ ಪ್ರಚಾರವನ್ನು ‘ರೆಡ್ ಎಫ್.ಎಂ. ೯೩.೫’ ಮತ್ತು ‘ರೇಡಿಯೋ ಮಿರ್ಚಿ ೯೮.೩’ ಮೂಲಕ ಮಾಡಲಾಗುತ್ತಿದೆ. ‘ಸನಾತನ ಸಂಸ್ಥೆ ಆಯೋಜಿಸಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಮೂಲಕ ದೆಹಲಿಯಲ್ಲಿ ಭದ್ರತೆ, ಸಂಸ್ಕೃತಿ ಮತ್ತು ಶೌರ್ಯಗಳ ಮಹಾಸಂಗಮ ನಡೆಯುತ್ತಿದ್ದು, ಇದರಲ್ಲಿ ಶಿವಾಜಿ ಕಾಲದ ಐತಿಹಾಸಿಕ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇದು ದೆಹಲಿಯಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರಿ,’ ಎಂಬ ಕರೆಯನ್ನು ರೇಡಿಯೋ (ನಭೋವಾಣಿ) ಮೂಲಕ ನೀಡಲಾಗುತ್ತಿದೆ.
🚩Sanatan Rashtra Shankhnad Mahotsav: FM Radio Spreading the Word in Delhi!
Listeners in Delhi can hear about the grand festival at Bharat Mandapam on Red FM 93.5 & Radio Mirchi 98.3. Featuring Shivaji-era weapons and celebrating culture, valor & tradition, the 15-sec ad airs 20… pic.twitter.com/6EfCaRZWRl
— Sanatan Prabhat (@SanatanPrabhat) December 11, 2025
ಡಿಸೆಂಬರ್ ೭ ರಿಂದ ೧೪ ರವರೆಗೆ ಈ ಪ್ರಚಾರವು ಎರಡೂ ರೇಡಿಯೋಗಳಲ್ಲಿ ನಡೆಯುತ್ತಿದ್ದು, ಬೆಳಿಗ್ಗೆ ೭ ರಿಂದ ೧೧, ಮಧ್ಯಾಹ್ನ ೨ ರಿಂದ ಸಂಜೆ ೫ ಮತ್ತು ಸಂಜೆ ೬ ರಿಂದ ರಾತ್ರಿ ೯ ರವರೆಗೆ ಒಟ್ಟು ೨೦ ಬಾರಿ ೧೫ ಸೆಕೆಂಡುಗಳ ಜಾಹೀರಾತನ್ನು ಪ್ರಸಾರ ಮಾಡಲಾಗುತ್ತಿದೆ. ‘ರೆಡ್ ಎಫ್.ಎಂ. ೯೩.೫’ ಮತ್ತು ‘ರೇಡಿಯೋ ಮಿರ್ಚಿ ೯೮.೩’ ಇವು ಭಾರತದ ಪ್ರಸಿದ್ಧ ‘ರೇಡಿಯೋ ಕೇಂದ್ರ’ಗಳಾಗಿವೆ (ನಭೋವಾಣಿ ಕೇಂದ್ರ). ನವದೆಹಲಿಯಲ್ಲಿ ‘ರೆಡ್ ಎಫ್.ಎಂ. ೯೩.೫’ ಮತ್ತು ‘ರೇಡಿಯೋ ಮಿರ್ಚಿ ೯೮.೩’ ಕೇಳುಗರ ಸಂಖ್ಯೆ ದೊಡ್ಡದಾಗಿರುವುದರಿಂದ, ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ವಿಷಯವು ದೆಹಲಿಯ ಲಕ್ಷಾಂತರ ಜನರನ್ನು ತಲುಪಲಿದೆ.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!