‘ಪ್ರಾರಬ್ಧ’ ಎಂಬ YouTube ವಾಹಿನಿಯ ಸಂಪಾದಕರಾದ ಶ್ರೀ. ಅವನೀಶ್ ಶರ್ಮಾ ಅವರು, ಡಿಸೆಂಬರ್ ೧೩ ಮತ್ತು ೧೪ ರಂದು ದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಹಿನ್ನೆಲೆಯಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ್ ರಾಜಹಂಸ ಅವರ ಸಂದರ್ಶನ ಮಾಡಿದರು. ಈ ಮಹೋತ್ಸವದ ಬಗ್ಗೆ ಶ್ರೀ. ಚೇತನ್ ರಾಜಹಂಸ ಅವರು ವಿವರವಾದ ಮಾಹಿತಿಯನ್ನು ನೀಡಿದರು. ಈ ಸಂದರ್ಶನದ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.

೧. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ಆಯೋಜನೆಯ ಹಿಂದಿನ ಪರಿಕಲ್ಪನೆ !
ಸನಾತನ ಸಂಸ್ಥೆಯು ೧೯೯೯ ರಲ್ಲಿ ಸ್ಥಾಪನೆಯಾಗಿ ೨೫ ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸಲಾಗಿದೆ. ಸನಾತನ ಸಂಸ್ಥೆಯ ಸ್ಥಾಪನೆಯು ಆಧ್ಯಾತ್ಮಿಕ ಮಟ್ಟದಲ್ಲಿಯಾಗಿದ್ದರೂ ಕೂಡ, ‘ಸನಾತನ ರಾಷ್ಟ್ರ’ ಎಂಬ ಪರಿಕಲ್ಪನೆಯು ಕೆಲವರಿಗೆ ಸಾಂಸ್ಕೃತಿಕ, ರಾಷ್ಟ್ರೀಯ ಮತ್ತು ರಾಜಕೀಯವೆಂದು ಅನಿಸಬಹುದು; ಆದರೆ ಸಂಸ್ಥೆಯು ತನ್ನ ಮೂಲ ಗುರಿಯ ಪ್ರಕಾರ ಮುಂದುವರಿಯುತ್ತಿದೆ. ೧೯೮೭ ರಲ್ಲಿ, ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಜೀವನದಲ್ಲಿ ಸಂತ ಭಕ್ತರಾಜ ಮಹಾರಾಜರು ‘ಗುರು’ಗಳಾಗಿ ಬಂದರು. ಅವರ ಮಾರ್ಗದರ್ಶನದಲ್ಲಿ ಡಾ. ಆಠವಲೆ ಅವರು ಆಧ್ಯಾತ್ಮಿಕ ಸಾಧನೆಯನ್ನು ಮಾಡಿದರು. ೧೯೯೫ ರಲ್ಲಿ, ಗುರುಗಳು ತಮ್ಮ ಅಂತಿಮ ಕ್ಷಣಗಳಲ್ಲಿ ಶಿಷ್ಯ ಡಾ. ಜಯಂತ ಆಠವಲೆ ಅವರಿಗೆ ಹೇಳಿದರು: “೨೦೧೨ ರ ನಂತರ ತಾಮಸಿಕ ರಾಜಕೀಯ ಶಕ್ತಿಗಳು ಪರಾಭವಗೊಳ್ಳಲು ಪ್ರಾರಂಭಿಸುತ್ತವೆ. ೨೦೨೦ ರಲ್ಲಿ ಸಾಂಕ್ರಾಮಿಕ ರೋಗ ಬರುತ್ತದೆ. ೨೦೨೫ ರ ನಂತರ ಭಾರತದಲ್ಲಿ ಹಿಂದೂ ರಾಷ್ಟ್ರಕ್ಕೆ ಅನುಕೂಲಕರ ಸಮಯ ಬರುತ್ತದೆ.
ನೀವು ಯಾವ ಸನಾತನ ಧರ್ಮವನ್ನು ಅಧ್ಯಯನ ಮಾಡಿದ್ದೀರೋ, ಆ ಅಧ್ಯಾತ್ಮವನ್ನು ಆಧರಿಸಿ ರಾಷ್ಟ್ರ ನಿರ್ಮಾಣದ ಸಿದ್ಧಾಂತವನ್ನು ಸ್ಥಾಪಿಸಬೇಕಾಗಿದೆ. ನಮ್ಮ ಸನಾತನ ಪರಂಪರೆ, ಸನಾತನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ನಾವು ಪುನರುಜ್ಜೀವನಗೊಳಿಸಬೇಕಾಗಿದೆ. ಅದಕ್ಕಾಗಿ ನೀವು ವೈಜ್ಞಾನಿಕವಾಗಿ ಸಂಶೋಧನೆ ಮಾಡಿ.” ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ೧೯೯೫ ರಲ್ಲಿ ಬರೆದ ‘ಈಶ್ವರಿ ರಾಜ್ಯದ ಸ್ಥಾಪನೆ’ ಎಂಬ ಗ್ರಂಥದಲ್ಲಿ ಇದರ ಉಲ್ಲೇಖವಿದೆ. ೨೦೨೫ ರಲ್ಲಿ ಗೋವಾದಲ್ಲಿ ಮೊದಲ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ೩೦,೦೦೦ ಕ್ಕೂ ಹೆಚ್ಚು ಸಾಧಕರು ಮತ್ತು ಧರ್ಮಪ್ರೇಮಿಗಳು ಈ ಮಹೋತ್ಸವದಲ್ಲಿ ಉಪಸ್ಥಿತರಿದ್ದರು. ಅದರ ನಂತರ ಈಗ ದೆಹಲಿಯಲ್ಲಿ ಎರಡನೆಯ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ಜರಗುತ್ತಿದೆ. ಸನಾತನ ಪರಂಪರೆ, ನಾಗರಿಕತೆ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಈ ವಿಷಯಗಳನ್ನು ಸಾಂಸ್ಕೃತಿಕ ರಾಷ್ಟ್ರೀಯತೆಯ ರೂಪದಲ್ಲಿ ಸ್ಥಾಪಿಸುವುದು ಈ ಆಯೋಜನೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ.

೨. ಶಂಖನಾದ ಮಹೋತ್ಸವದಲ್ಲಿನ ವಿವಿಧ ಚರ್ಚಾಗೋಷ್ಠಿಗಳು ಮತ್ತು ಸಂವಾದಗಳು
ಅ. ಛತ್ರಪತಿ ಶಿವಾಜಿ ಮಹಾರಾಜರ ಸ್ವರಾಜ್ಯವು ಮೂಲತಃ ಸನಾತನ ರಾಷ್ಟ್ರ ಮತ್ತು ಆದರ್ಶ ರಾಜ್ಯವಾಗಿತ್ತು ಎಂಬುದನ್ನು ಗಮನದಲ್ಲಿಟ್ಟುಕೊಂಡು ಶಂಖನಾದ ಮಹೋತ್ಸವದ ಮೊದಲ ದಿನ ಡಿಸೆಂಬರ್ ೧೩ ರಂದು ‘ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಸಂಸ್ಕೃತಿ ರಕ್ಷಣೆ ‘ ಎಂಬ ಸಂಕಲ್ಪನೆ ನೀಡಲಾಗಿದೆ. ಸುವ್ಯವಸ್ಥೆ, ಸಂಸ್ಕೃತಿ, ದೇವಸ್ಥಾನಗಳು ಮತ್ತು ನ್ಯಾಯ ವ್ಯವಸ್ಥೆ ಈ ದೃಷ್ಟಿಕೋನದಿಂದ ‘ಛತ್ರಪತಿ ಶಿವಾಜಿ ಮಹಾರಾಜರ ಕಾರ್ಯಶೈಲಿ ಮತ್ತು ಇಂದಿನ ಭಾರತ’ ಈ ವಿಷಯದ ಕುರಿತು ‘ ಸನಾತನ ಸಂವಾದ ‘ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಉದಯ್ ಲಲಿತ್, ಮಂದಿರ ವಿಮೋಚನಾ ಸಂಗ್ರಾಮಕ್ಕೆ ಸಂಬಂಧಿಸಿದ ವಕೀಲ ವಿಷ್ಣು ಶಂಕರ್ ಜೈನ್, ಮತ್ತು ಲೇಖಕಿ ಶೇಫಾಲಿ ವೈದ್ಯ ಸಹಭಾಗಿಯಾಗಲಿದ್ದಾರೆ. ಇದೇ ದಿನದಂದು ‘ ಸಂಸ್ಕೃತಿ ಸಂವಾದ’ ಕೂಡ ಆಯೋಜಿಸಲಾಗಿದೆ. ಇದರಲ್ಲಿ ಭಾರತೀಯ ಸಂಸ್ಕೃತಿಯ ಅವನತಿಗೆ ಕಾರಣವಾಗುವ ಅಂಶಗಳ ಮೇಲೆ ಬೆಳಕು ಚೆಲ್ಲುವುದು ಮತ್ತು ‘ಸಾಂಸ್ಕೃತಿಕ ಜಾಗೃತಿ’ ಕುರಿತು ಚರ್ಚೆ ನಡೆಯಲಿದೆ. ಇದರ ಜೊತೆಗೆ ‘ಮಂದಿರ ಸಂವಾದ’ ಕಾರ್ಯಕ್ರಮ ಕೂಡ ನಡೆಯಲಿದೆ. ಈಗಾಗಲೇ ಪೂರ್ಣಗೊಂಡಿರುವ ಮತ್ತು ನಡೆಯುತ್ತಿರುವ ಹಿಂದೂ ದೇವಸ್ಥಾನಗಳಿಗೆ ಸಂಬಂಧಿಸಿದ ಕಾರ್ಯಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಗಣ್ಯರು ಮಾರ್ಗದರ್ಶನ ನೀಡುವರು.
ಆ. ಡಿಸೆಂಬರ್ ೧೪: ‘ರಾಷ್ಟ್ರೀಯ ಭದ್ರತೆ’ -ಈ ವಿಷಯದ ಕುರಿತು ಚರ್ಚೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ಸನಾತನ ಧರ್ಮದ ರಕ್ಷಣೆಯಲ್ಲಿ ಭಾರತದ ಭದ್ರತೆ’ ಎಂಬ ಪರಿಕಲ್ಪನೆ ನೀಡಲಾಗಿದೆ. ಸನಾತನ ರಾಷ್ಟ್ರದ ಮೂಲ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ನೀಡಬೇಕಾಗಿದೆ. ಆಂತರಿಕ ಭದ್ರತೆ ಮತ್ತು ಬಾಹ್ಯ ಭದ್ರತೆಯ ಕುರಿತು ‘ರಣಸಂವಾದ’ ನಡೆಯುವುದು. ಇದರಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ನಿವೃತ್ತ ಅಧಿಕಾರಿಗಳು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ನಿವೃತ್ತ ವಿಜ್ಞಾನಿಗಳು ಸಹಭಾಗಿಯಾಗುವವರು. ನಕ್ಸಲಿಸಂ ಮತ್ತು ನಗರ ನಕ್ಸಲಿಸಂ ಕುರಿತು ಚರ್ಚೆ ನಡೆಯಲಿದೆ. ಇದರ ಜೊತೆಗೆ ‘ಭಾರತದ ಪ್ರಗತಿಯಲ್ಲಿ ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ವ್ಯಕ್ತಿಗಳ ಕೊಡುಗೆ ಏನಿರಬೇಕು?’ ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಕೊನೆಯಲ್ಲಿ ‘ವಿಶ್ವಕಲ್ಯಾಣಕಾರಿ ಸನಾತನ ರಾಷ್ಟ್ರದ ದಿಕ್ಕು ಏನಾಗಿರಬೇಕು?’ ಎಂಬುದರ ಕುರಿತು ಪ.ಪೂ. ಸ್ವಾಮಿ ಗೋವಿಂದದೇವ್ ಗಿರಿ ಅವರು ಮಾರ್ಗದರ್ಶನ ಮಾಡಲಿದ್ದಾರೆ.
೩. ‘ಸ್ವರಾಜ್ಯದ ಶೌರ್ಯನಾದ’ ಪ್ರದರ್ಶನ
ಡಿಸೆಂಬರ್ ೧೩, ೧೪ ಮತ್ತು ೧೫ ರ ಅವಧಿಯಲ್ಲಿ ‘ಸ್ವರಾಜ್ಯದ ಶೌರ್ಯನಾದ’ ಎಂಬ ಪ್ರದರ್ಶನವನ್ನು ಏರ್ಪಡಿಸಲಾಗುವುದು. ಐತಿಹಾಸಿಕ ಶಸ್ತ್ರಾಸ್ತ್ರಗಳ ಅಪರೂಪದ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಈ ಪ್ರದರ್ಶನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಾಲದ ವಿವಿಧ ಶಸ್ತ್ರಾಸ್ತ್ರಗಳನ್ನು ತೋರಿಸಲಾಗುವುದು. ಮಹಾರಾಜರು ಬಳಸಿದ ೮ ಶಸ್ತ್ರಾಸ್ತ್ರಗಳು ಮತ್ತು ಅವರ ಭವಾನಿ ಖಡ್ಗದ ಪ್ರತ್ಯಕ್ಷ ದರ್ಶನವನ್ನು ಪಡೆಯಬಹುದು. ಇದರ ಜೊತೆಗೆ ಮರಾಠಾ ಸಾಮ್ರಾಜ್ಯದ ಇತರ ಸೇನಾಪತಿಗಳು ಬಳಸಿದ ಶಸ್ತ್ರಾಸ್ತ್ರಗಳನ್ನು ಸಹ ತೋರಿಸಲಾಗುವುದು. ಸರ್ದಾರ್ ಹಂಬೀರರಾವ್ ಮೋಹಿತೆ ಅವರ ಈಟಿ ಸೇರಿದಂತೆ ವಿವಿಧ ಶಸ್ತ್ರಗಳನ್ನು ನೋಡಬಹುದು. ಮಹಾರಾಣಾ ಪ್ರತಾಪ್ ಮತ್ತು ವಿಜಯನಗರ ಸಾಮ್ರಾಜ್ಯ ಕಾಲದ ಕೆಲವು ಶಸ್ತ್ರಾಸ್ತ್ರಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿರಲಿದೆ.
೪. ೧೦೦೦ ವರ್ಷಗಳ ನಂತರ ಪ್ರಥಮ ಬಾರಿಗೆ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ದರ್ಶನ
೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ಜ್ಯೋತಿರ್ಲಿಂಗವು ಗುಜರಾತಿನ ಸೌರಾಷ್ಟ್ರದಲ್ಲಿದೆ. ಸೋಮ, ಎಂದರೆ ಚಂದ್ರ ಭಗವಾನ್! ಚಂದ್ರನ ಭಗವಾನ್ ನನ್ನು ‘ ಸೋಮನಾಥ’ ಎನ್ನುತ್ತಾರೆ. ಈ ಜ್ಯೋತಿರ್ಲಿಂಗವು ಗಾಳಿಯಲ್ಲಿ ತೇಲಾಡುತ್ತಿತ್ತು. ಈ ಲಿಂಗದ ಅಡಿಯಲ್ಲಿ ಗಾಳಿ ಪ್ರವಹಿಸುತ್ತಿತ್ತು. ಲಿಂಗದಲ್ಲಿ ಹೆಚ್ಚಿನ ಲೋಹ ಕಾಂತೀಯ ಅಂಶವಿತ್ತು. ಈ ಲಿಂಗವು ಭೂಮಿಯಲ್ಲಿ ಸಿಗುವ ಧಾತುಗಳಿಂದ ತಯಾರಾಗಿಲ್ಲ, ಚಂದ್ರನಲ್ಲಿ ಸಿಗುವ ಧಾತುಗಳಿಂದ ತಯಾರಾಗಿದೆ ಎಂದು ಹಿಂದೂಗಳ ಶ್ರದ್ಧೆಯಾಗಿತ್ತು. ಆದ್ದರಿಂದ ಸುಮಾರು ೧೦೦೦ ವರ್ಷಗಳ ಹಿಂದೆ, ಮಹಮ್ಮದ್ ಘಜ್ನಿ ಈ ಜ್ಯೋತಿರ್ಲಿಂಗವನ್ನು ಧ್ವಂಸಗೊಳಿಸಿದ್ದನು. ಅದರ ನಂತರ, ಆ ದೇವಾಲಯದ ಪೂಜಾರಿ ಕುಟುಂಬವು ಶಿವಲಿಂಗದ ಎಲ್ಲಾ ಅವಶೇಷಗಳನ್ನು ಸಂಗ್ರಹಿಸಿ ತಮಿಳುನಾಡಿಗೆ ಕೊಂಡೊಯ್ದು, ೧೦೦೦ ಸಾವಿರ ವರ್ಷಗಳ ಕಾಲ ತಮ್ಮ ವಂಶದಲ್ಲಿ ಸುರಕ್ಷಿತವಾಗಿರಿಸಿದ್ದರು. ಈ ದಿವ್ಯ ಶಿವಲಿಂಗವನ್ನು ಕಂಚಿ ಶಂಕರಾಚಾರ್ಯರು ಸುರಕ್ಷಿತವಾಗಿಡಲು ಸಾಧ್ಯವಾಗುತ್ತದೆ ಎಂದು ಭಾವಿಸಿ, ಅವರು ೧೯೨೪ ರಲ್ಲಿ ಸ್ವಾಮಿ ಶಂಕರಾಚಾರ್ಯರ ಬಳಿಗೆ ಹೋದರು. ಸ್ವಾಮೀಜಿಯವರು ಅವರಿಗೆ “ಈ ಅವಶೇಷಗಳನ್ನು ಇನ್ನೂ ೧೦೦ ವರ್ಷಗಳ ಕಾಲ ನೀವು ಸಂರಕ್ಷಿಸಿ; ಏಕೆಂದರೆ, ೧೦೦ ವರ್ಷಗಳ ನಂತರ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತದೆ. ಅದೇ ರೀತಿ, ೨೦೨೫ ರಲ್ಲಿ ಪ್ರಯಾಗರಾಜದಲ್ಲಿ ಮಹಾಕುಂಭ ನಡೆಯುತ್ತದೆ. ಆ ಕುಂಭದಲ್ಲಿ ಈ ಅವಶೇಷಗಳಿಗೆ ಸ್ನಾನ ಮಾಡಿಸಿ. ನಂತರ, ಹಿಂದೂ ರಾಷ್ಟ್ರಕ್ಕೆ ಅನುಕೂಲಕರ ಸಮಯ ಬಂದಾಗ, ಅದರ ದರ್ಶನವನ್ನು ಎಲ್ಲೆಡೆ ಲಭ್ಯವಾಗುವಂತೆ ಮಾಡಿ.” ಈ ಶಂಖನಾದ ಮಹೋತ್ಸವದ ನಿಮಿತ್ತ ಮೊದಲ ಬಾರಿಗೆ ಭಾರತ್ ಮಂಟಪಂನಲ್ಲಿ ಈ ದಿವ್ಯ ಜ್ಯೋತಿರ್ಲಿಂಗದ ಅವಶೇಷಗಳ ದರ್ಶನವನ್ನು ಎಲ್ಲರಿಗೂ ಪಡೆಯಲು ಅವಕಾಶ ಸಿಗಲಿದೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !