ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಂದ ಹಿಂದೂ ದೇವತೆಗಳ ಕುರಿತು ಆಕ್ಷೇಪಾರ್ಹ ಹೇಳಿಕೆ

ಭಾಗ್ಯನಗರ (ತೆಲಂಗಾಣ) – ಹಿಂದೂಗಳು ಎಷ್ಟು ದೇವರ ಮೇಲೆ ನಂಬಿಕೆ ಇಡುತ್ತಾರೆ? 3 ಕೋಟಿ ದೇವತೆಗಳಿವೆಯೇ? ಮತ್ತು ಇಷ್ಟೊಂದು ದೇವರುಗಳು ಏಕೆ ಇವೆ? ಅವಿವಾಹಿತರಿಗಾಗಿ ಒಂದು ದೇವರು ಅಂದರೆ ಹನುಮಂತ. ಎರಡು ಬಾರಿ ಮದುವೆಯಾಗುವವರಿಗಾಗಿ ಒಂದು ಪ್ರತ್ಯೇಕ ದೇವರು, ಮದ್ಯಪಾನ ಮಾಡುವವರಿಗಾಗಿ ಇನ್ನೊಂದು ಪ್ರತ್ಯೇಕ ದೇವರು. ಯಲ್ಲಮ್ಮ, ಪೋಚಮ್ಮ, ಮೈಸಮ್ಮ – ಮದ್ಯ ಅರ್ಪಣೆಗಾಗಿ ಒಂದು, ಕೋಳಿ ಬಲಿಗೆ ಒಂದು, ಮತ್ತು ದಾಲ್-ಬಾತ್ (ಬೇಳೆ-ಅನ್ನ) ಅರ್ಪಣೆಗಾಗಿ ಒಂದು. ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ದೇವರು ಇದೆ, ಎಂದು ತೆಲಂಗಾಣದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿಕೆ ನೀಡಿದರು. ಅವರು ಇಲ್ಲಿನ ಗಾಂಧಿ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ಅವರ ಈ ಹೇಳಿಕೆಗಳಿಗಾಗಿ ಭಾಜಪ ಮತ್ತು ವಿಶ್ವ ಹಿಂದೂ ಪರಿಷತ್ ಟೀಕಿಸಿವೆ. ಜೊತೆಗೆ, ಭಾಗ್ಯನಗರದ ಗೋಶಾಮಹಲ್ ವಿಧಾನಸಭಾ ಕ್ಷೇತ್ರದ ಪ್ರಖರ ಹಿಂದೂತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್ ಅವರು ಸಹ ತೀವ್ರವಾಗಿ ಟೀಕಿಸಿದ್ದಾರೆ.
ರೇವಂತ್ ರೆಡ್ಡಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆಯೇ? – ಶಾಸಕ ಟಿ. ರಾಜಾ ಸಿಂಗ್

ಪ್ರಖರ ಹಿಂದೂತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್ ಅವರು ನಾರಾಯಣಪೇಟೆ ಜಿಲ್ಲೆಯ ಮಕ್ಕತ್ತಲ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡುವಾಗ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಮೇಲೆ ತೀವ್ರ ಟೀಕೆ ಮಾಡಿದರು. ಅವರು , ಭಾಜಪ ವಿದ್ಯಾರ್ಥಿ ಸಂಘಟನೆಯಿಂದ ಬಂದ ವ್ಯಕ್ತಿಯಿಂದ ಇಂತಹ ಹೇಳಿಕೆಗಳು ಬರುವುದು ಆಘಾತಕಾರಿಯಾಗಿದೆ. ರೇವಂತ್ ರೆಡ್ಡಿ ಅವರು ಅಸದುದ್ದೀನ್ ಓವೈಸಿ ಅವರೊಂದಿಗೆ ನಡೆದ ರಹಸ್ಯ ಸಭೆಯ ನಂತರ ಮತಾಂತರದ ಯೋಜನೆಯನ್ನು ರೂಪಿಸಿದ್ದಾರೆಯೇ? ಆ ಭೇಟಿಯ ನಂತರ ಅವರು ಹಿಂದೂ ದೇವತೆಗಳನ್ನು ಗುರಿಯಾಗಿಸಲು ಮತ್ತು ಕಳಂಕಿತಗೊಳಿಸಲು ಯೋಚಿಸುತ್ತಿದ್ದಾರೆಯೇ? ರೇವಂತ್ ರೆಡ್ಡಿ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆಯೇ? ಎಂದು ಪ್ರಶ್ನೆಗಳನ್ನು ಕೇಳಿದರು.
ರಾಜಾ ಸಿಂಗ್ ಅವರು ಮಾತು ಮುಂದುವರೆಸಿ, ತೆಲಂಗಾಣದ ಹಿಂದೂಗಳು ಈಗಲಾದರೂ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ನಿಜ ಸ್ವರೂಪವನ್ನು ಗುರುತಿಸಬೇಕು. ಹಿಂದೂ ದೇವತೆಗಳನ್ನು ಅವಮಾನಿಸುವ ವ್ಯಕ್ತಿಯನ್ನು ಅಧಿಕಾರಕ್ಕೆ ತಂದಿದ್ದೇವೆ ಎಂಬ ಅರಿವು ಜನರಿಗೆ ಇರಬೇಕು ಎಂದರು.
ಭಾಜಪ ಮತ್ತು ವಿಹಿಂಪಯಿಂದ ಟೀಕೆ
ಭಾಜಪ ನಾಯಕ ಮತ್ತು ಕೇಂದ್ರ ಗೃಹ ರಾಜ್ಯ ಸಚಿವ ಬಂಡಿ ಸಂಜಯ ಕುಮಾರ್ ಅವರು, ಕಾಂಗ್ರೆಸ್ ಅಥವಾ ಭಾರತ ರಾಷ್ಟ್ರ ಸಮಿತಿ ಅಧಿಕಾರಕ್ಕೆ ಬಂದರೆ ಹಿಂದೂಗಳ ಸ್ವಾಭಿಮಾನಕ್ಕೆ ಅಪಾಯ ಎದುರಾಗುತ್ತದೆ ಎಂದು ಭಾಜಪ ಈಗಾಗಲೇ ಎಚ್ಚರಿಕೆ ನೀಡಿತ್ತು ಎಂದು ಹೇಳಿದರು. ರೇವಂತ್ ರೆಡ್ಡಿ ಅವರ ಹೇಳಿಕೆಯಿಂದ ಈ ಎಚ್ಚರಿಕೆ ನಿಜವಾಗಿದೆ.
ವಿಶ್ವ ಹಿಂದೂ ಪರಿಷತ್ ಈ ಹೇಳಿಕೆಗಾಗಿ ಮುಖ್ಯಮಂತ್ರಿಗಳು ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.
ಸಂಪಾದಕೀಯ ನಿಲುವುಇತರ ಧರ್ಮದವರು ಹಿಂದೂ ಧರ್ಮವನ್ನು ಎಷ್ಟು ವಿರೂಪಗೊಳಿಸುವುದಿಲ್ಲವೋ, ಅದಕ್ಕಿಂತ ಹೆಚ್ಚು ವಿರೂಪಗೊಳಿಸುವುದನ್ನು ಹಿಂದೂ ಧರ್ಮೀಯರು, ಅದರಲ್ಲೂ ಪ್ರಗತಿ(ಅಧೋಗತಿ)ಪರರು, ಕಾಂಗ್ರೆಸ್ಸಿಗರು, ಸಮಾಜವಾದಿ ಪಕ್ಷ ಮುಂತಾದ ರಾಜಕೀಯ ಪಕ್ಷಗಳ ನಾಯಕರು ಮಾಡುತ್ತಿದ್ದಾರೆ! ಇದನ್ನು ಗಮನಿಸಿದರೆ, ಪಾಕಿಸ್ತಾನದಲ್ಲಿ ಧರ್ಮಕ್ಕೆ ಅಪಮಾನ ಮಾಡಿದವರಿಗೆ ಗಲ್ಲು ಶಿಕ್ಷೆ ಇರುವಂತೆ, ಭಾರತದಲ್ಲಿಯೂ ಅಂತಹದೇ ಕಾನೂನು ಜಾರಿಗೊಳಿಸುವುದು ಅತ್ಯಂತ ಅವಶ್ಯಕವಾಗಿದೆ. ಆಗಲೇ ಇಂತಹವರ ಮೇಲೆ ನಿಯಂತ್ರಣ ಬರುತ್ತದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!