|
(ಹನುಮಾನ್ ಮಾಲಾಧಾರಿ ಎಂದರೆ ಹನುಮಾನ್ ವ್ರತ ಆಚರಿಸುವ ಭಕ್ತರು)

ಮಂಡ್ಯ – ಇಲ್ಲಿ ಹನುಮಾನ್ ಮಾಲಾಧಾರಿಗಳು ಬೃಹತ್ ಸಂಕೀರ್ತನಾ ಯಾತ್ರೆಯನ್ನು ಕೈಗೊಂಡಿದ್ದರು. ಈ ಯಾತ್ರೆಯಲ್ಲಿ ಹನುಮನ ಮೂರ್ತಿ ಮತ್ತು ಕೇಸರಿ ಧ್ವಜಗಳನ್ನು ಕೈಯಲ್ಲಿ ಹಿಡಿದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಈ ಯಾತ್ರೆಯು ಶ್ರೀರಂಗಪಟ್ಟಣಂನ ಜಾಮಿಯಾ ಮಸೀದಿ ಮುಂದೆ ತಲುಪುತ್ತಿದ್ದಂತೆ, ಯಾತ್ರೆಯಲ್ಲಿದ್ದ ಮಾಲಾಧಾರಿಗಳು ‘ಜೈ ಶ್ರೀರಾಮ್, ಜೈ ಹನುಮಾನ್’, ‘ನಾವು ಎಲ್ಲರೂ ಹಿಂದೂಗಳು’, ‘ಹನುಮನ ಪ್ರತಿಜ್ಞೆ, ಮಂದಿರ ಇಲ್ಲೇ ಕಟ್ಟುತ್ತೇವೆ’ ಎಂಬ ಘೋಷಣೆಗಳನ್ನು ಕೂಗಿದರು. ಇದರ ನಂತರ ಕೆಲವು ಮಾಲಾಧಾರಿಗಳು ಇದ್ದಕ್ಕಿದ್ದಂತೆ ಮಸೀದಿಯೊಳಗೆ ನುಗ್ಗಲು ಪ್ರಯತ್ನಿಸಿದರು. ಇದರಿಂದ ಜಾಮಿಯಾ ಮಸೀದಿ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಡಿಸೆಂಬರ್ 3 ರಂದು ಮಧ್ಯಾಹ್ನ ಈ ಘಟನೆ ನಡೆಯಿತು. ಈ ಘಟನೆ ತಿಳಿಯುತ್ತಿದ್ದಂತೆ, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹನುಮಾನ್ ಮಾಲಾಧಾರಿಗಳು ಜಮಾಯಿಸಿದರು. ಈ ವೇಳೆ ಮಾಲಾಧಾರಿಗಳು ಮತ್ತು ಪೊಲೀಸರ ನಡುವೆ ನೂಕುನುಗ್ಗಲು ಉಂಟಾಯಿತು. ಇದರ ನಂತರ ಪೊಲೀಸರು ಜಾಮಿಯಾ ಮಸೀದಿಯ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದರು. ನಂತರ ಪೊಲೀಸರು ಮಾಲಾಧಾರಿಗಳನ್ನು ಸಮಾಧಾನಪಡಿಸಿ ವಾಪಸ್ ಕಳುಹಿಸಿದರು. ಈ ಸಂಕೀರ್ತನಾ ಯಾತ್ರೆಗೆ ರಂಗನಾಥಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಮುಕ್ತಾಯಗೊಂಡಿತು.
ಸಂಪಾದಕೀಯ ನಿಲುವುಮುಸಲ್ಮಾನ ಆಕ್ರಮಣಕಾರರು ಹಿಂದೂಗಳ ಅಸಂಖ್ಯಾತ ಮಂದಿರಗಳನ್ನು ಕೆಡವಿ ಅಲ್ಲಿ ತಮ್ಮ ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಿದರು, ಇದು ಇತಿಹಾಸವಾಗಿದೆ. ಆದ್ದರಿಂದ, ಈ ಮಸೀದಿಯ ಬಗ್ಗೆಯೂ ಕೂಲಂಕುಷ ತನಿಖೆ ನಡೆಸಿ ಸತ್ಯವನ್ನು ಹಿಂದೂಗಳ ಮುಂದೆ ತರಬೇಕು! ರಾಜ್ಯದ ಹಿಂದೂದ್ವೇಷಿ ಕಾಂಗ್ರೆಸ್ ಸರಕಾರದಿಂದ ತನಿಖೆ ಅಸಾಧ್ಯವಾಗಿರುವುದರಿಂದ, ಈಗ ಕೇಂದ್ರ ಸರಕಾರವೇ ಇದಕ್ಕಾಗಿ ಮುಂದಾಳತ್ವ ವಹಿಸಬೇಕು ಎಂಬುದು ಹಿಂದೂಗಳ ನಿರೀಕ್ಷೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!