
ತೆಲ್ ಅವಿವ್ (ಇಸ್ರೇಲ್) – ಇಸ್ರೇಲ್ ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಸಂಬಂಧ ಔಪಚಾರಿಕವಾಗಿ ರಾಷ್ಟ್ರಪತಿ ಇಸಾಕ್ ಹರ್ಜೋಗ್ ಅವರಲ್ಲಿ ಕ್ಷಮೆ ಯಾಚಿಸಿದ್ದಾರೆ. ನೆತನ್ಯಾಹು ಅವರ ನ್ಯಾಯವಾದಿ ಅಮಿತ ಹದಾದ್ ಅವರು 111 ಪುಟಗಳ ಅರ್ಜಿಯನ್ನು ಸಲ್ಲಿಸಿದ್ದಾರೆ.
1. ಇಸ್ರೇಲ್ ನಲ್ಲಿ, ರಾಷ್ಟ್ರಪತಿಗಳಿಗೆ ನ್ಯಾಯಾಲಯದಿಂದ ತಪ್ಪಿತಸ್ಥರೆಂದು ಘೋಷಿಸಲ್ಪಟ್ಟ ಜನರನ್ನು ಕ್ಷಮಿಸುವ ಅಧಿಕಾರ ಇದೆ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಳ್ಳುವ ಮೊದಲೇ ಕ್ಷಮೆ ನೀಡಬಹುದು.
2. ನೆತನ್ಯಾಹು ವಿರುದ್ಧ ಈ ಮೊಕದ್ದಮೆಯು ಮೇ 2020 ರಲ್ಲಿ ಪ್ರಾರಂಭವಾಯಿತು. ಅವರ ಮೇಲೆ ವಂಚನೆ, ವಿಶ್ವಾಸದ್ರೋಹ ಮತ್ತು ಲಂಚ ಸ್ವೀಕರಿಸುವುದು ಸೇರಿದಂತೆ 3 ಪ್ರತ್ಯೇಕ ಪ್ರಕರಣಗಳಲ್ಲಿ ವಿಚಾರಣೆ ನಡೆಯುತ್ತಿದೆ.
ನೆತನ್ಯಾಹುಗೆ ಶಿಕ್ಷೆಯಾದರೆ ಸಹಿಸುವುದಿಲ್ಲ! – ಟ್ರಂಪ್ ನಿಂದ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡ ಕಳೆದ ವಾರ ಹರ್ಜೋಗ್ ಇವರಿಗೆ ಪತ್ರ ಬರೆದು, ನೆತನ್ಯಾಹು ಅವರ ಪರವಾಗಿ ಕ್ಷಮೆಗಾಗಿ ಮನವಿ ಮಾಡಿದ್ದರು. ಇದಕ್ಕೂ ಮೊದಲು ಟ್ರಂಪ್ ಅವರು ಒಂದು ವೇಳೆ ನೆತನ್ಯಾಹು ಅವರಿಗೆ ಶಿಕ್ಷೆಯಾದರೆ, ನಾವು ಅದನ್ನು ಸಹಿಸುವುದಿಲ್ಲ ಎಂದು ಹೇಳಿದ್ದರು.
ನೆತನ್ಯಾಹು ವಿರುದ್ಧದ 3 ಪ್ರಕರಣಗಳು
1. ನೆತನ್ಯಾಹು ಅವರ ಮೇಲೆ ಹಾಲಿವುಡ್ ಚಲನಚಿತ್ರ ನಿರ್ಮಾಪಕ ಅರ್ನೋನ್ ಮಿಲ್ಚನ್ ಮತ್ತು ಆಸ್ಟ್ರೇಲಿಯಾದ ಬಿಲಿಯನೇರ್ ಜೇಮ್ಸ್ ಪ್ಯಾಕರ್ ಅವರಿಂದ ದುಬಾರಿ ಉಡುಗೊರೆಗಳನ್ನು ಪಡೆದ ಆರೋಪವಿದೆ. ಇದರಲ್ಲಿ 2 ಲಕ್ಷ ಡಾಲರ್ ಮೌಲ್ಯದ ಸಿಗಾರ್ ಗಳು,(ಒಂದು ರೀತಿಯ ಸಿಗರೇಟ್) ಶಾಂಪೇನ್, ಆಭರಣಗಳು ಇತ್ಯಾದಿಗಳು ಸೇರಿವೆ. ಇದಕ್ಕೆ ಪ್ರತಿಯಾಗಿ ನೆತನ್ಯಾಹು ಅವರಿಗೆ ರಾಜಕೀಯ ಲಾಭವನ್ನು ಒದಗಿಸಿದರು ಎಂಬ ಆರೋಪಿಸಲಾಗಿದೆ.
2. ನೆತನ್ಯಾಹು ಅವರು ‘ಯೇಡಿಯೋಟ್ ಅಹರೊನೋತ್’ ಎಂಬ ವಾರ್ತಾಪತ್ರಿಕೆಯ ಪ್ರಕಾಶಕರೊಂದಿಗೆ ತಮ್ಮ ಪರವಾಗಿ ಸಕಾರಾತ್ಮಕ ವರದಿಗಳನ್ನು ಪ್ರಕಟಿಸಲು ಒಪ್ಪಂದ ಮಾಡಿಕೊಂಡರು. ಇದಕ್ಕೆ ಪ್ರತಿಯಾಗಿ, ಪ್ರತಿಸ್ಪರ್ಧಿ ಪತ್ರಿಕೆ ‘ಇಸ್ರೇಲ್ ಹಯೋಮ್’ ಅನ್ನು ದುರ್ಬಲಗೊಳಿಸುವ ಕಾನೂನನ್ನು ಅಂಗೀಕರಿಸುವ ಷರತ್ತನ್ನು ಒಪ್ಪಿಕೊಂಡರು.
3. ನೆತನ್ಯಾಹು ಅವರು ಬಿಜೆಕ್ ಎಂಬ ಟೆಲಿಕಾಂ ಸಂಸ್ಥೆಗೆ ಲಾಭ ಒದಗಿಸಿದರು ಮತ್ತು ಪ್ರತಿಯಾಗಿ ಅದರ ಮಾಲೀಕ ಶಾವುಲ್ ಎಲೋವಿಚ್ ಅವರ ‘ವಲ್ಲಾ’ ಎಂಬ ಸುದ್ದಿ ಜಾಲತಾಣದಲ್ಲಿ ತಮ್ಮ ಪರವಾಗಿ ಸುದ್ದಿಗಳನ್ನು ಪ್ರಕಟಿಸುವಂತೆ ಮಾಡಿದರು.
ನೆತನ್ಯಾಹು ಈ ಎಲ್ಲ ಆರೋಪಗಳು ಸುಳ್ಳು ಹಾಗೂ ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ. ಪ್ರಸ್ತುತ, ಈ ಪ್ರಕರಣದ ತೀರ್ಪು 2026 ರವರೆಗೆ ಬರುವ ಸಾಧ್ಯತೆ ಇಲ್ಲ. ಇದರ ನಂತರವೂ ನೆತನ್ಯಾಹು ಸರ್ವೋಚ್ಚ ನ್ಯಾಯಾಲಯದಲ್ಲಿ ತೀರ್ಪನ್ನು ಪ್ರಶ್ನಿಸಬಹುದು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation