ಶ್ರೀರಾಮ ಮಂದಿರದ ಧ್ವಜಾರೋಹಣದ ದಿನದಂದೇ ಫಲಕಗಳ ಅಳವಡಿಕೆ

ಮುರ್ಷಿದಾಬಾದ್ (ಪಶ್ಚಿಮ ಬಂಗಾಳ) – ಇಲ್ಲಿನ ಬೆಲ್ಡಾಂಗಾದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂ ಕಬೀರ್ ಅವರು ಡಿಸೆಂಬರ್ ೬, ೨೦೨೫ ರಂದು ಬಾಬರಿ ಮಸೀದಿಯ ಶಂಕುಸ್ಥಾಪನೆ ಮಾಡುವುದಾಗಿ ಘೋಷಿಸಿದ್ದರು. ಈಗ ಅವರು ಈ ಸಂಬಂಧದ ಫಲಕಗಳನ್ನು ಎಲ್ಲೆಡೆ ಅಳವಡಿಸಿದ್ದಾರೆ. ಈ ಫಲಕಗಳನ್ನು ನವೆಂಬರ್ ೨೫ ರಂದು, ಅಂದರೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಮೇಲೆ ಧ್ವಜಾರೋಹಣ ನಡೆಯುತ್ತಿರುವಾಗಲೇ ಅಳವಡಿಸಲಾಗಿದೆ.
೧. ಕಬೀರ್ ಅವರು, “ನಾವು ಡಿಸೆಂಬರ್ ೬ ರಂದು ಬಾಬರಿ ಮಸೀದಿಗೆ ಶಂಕುಸ್ಥಾಪನೆ ಮಾಡುತ್ತೇವೆ. ಮೂರು ವರ್ಷಗಳಲ್ಲಿ ಅದರ ನಿರ್ಮಾಣ ಪೂರ್ಣಗೊಳ್ಳಲಿದೆ. ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅನೇಕ ಮುಸ್ಲಿಂ ನಾಯಕರು ಭಾಗವಹಿಸಲಿದ್ದಾರೆ”, ಮತ್ತೊಮ್ಮೆ ಹೇಳಿದ್ದಾರೆ.
೨. ಡಿಸೆಂಬರ್ ೬, ೧೯೯೨ ರಂದು ಶ್ರೀರಾಮ ಜನ್ಮಭೂಮಿಯಲ್ಲಿದ್ದ ಬಾಬರಿ ಕಟ್ಟಡವನ್ನು ಕೆಡವಲಾಯಿತು. ಆ ಕಾರಣಕ್ಕಾಗಿಯೇ ಶಂಕುಸ್ಥಾಪನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಕಬೀರ್ ಹೇಳಿದ್ದಾರೆ.
ಮಸೀದಿಯಲ್ಲ, ಬಾಂಗ್ಲಾದೇಶದ ಶಂಕುಸ್ಥಾಪನೆ ಆಗುತ್ತಿದೆ! – ಗಿರಿರಾಜ್ ಸಿಂಗ್, ಕೇಂದ್ರ ಸಚಿವ ಭಾಜಪ

ಭಾಜಪದ ನಾಯಕ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು, “ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಮಸೀದಿಗೆ ಅಲ್ಲ, ಬದಲಿಗೆ ಬಾಂಗ್ಲಾದೇಶದ ಶಂಕುಸ್ಥಾಪನೆ ಮಾಡುತ್ತಿದೆ,” ಎಂದು ಆರೋಪಿಸಿದ್ದಾರೆ. “ಮಮತಾ ಬ್ಯಾನರ್ಜಿ ಸರಕಾರವು ಬಾಂಗ್ಲಾದೇಶೀಯರು ಮತ್ತು ರೋಹಿಂಗ್ಯಾಗಳ ಬೆಂಬಲವನ್ನು ಅವಲಂಬಿಸಿದೆ. ತೃಣಮೂಲ ಹಿಂದೂಗಳ ಹೆಣಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಅದು ಹೆಚ್ಚು ಕಾಲ ಉಳಿಯುವುದಿಲ್ಲ,” ಎಂದು ಅವರು ಹೇಳಿದ್ದಾರೆ.
ಆಗ್ರಾದಲ್ಲಿ ಹಿಂದೂ ಮಹಾಸಭಾದಿಂದ ಕಬೀರ್ ಅವರ ಸಾಂಕೇತಿಕ ಗೋರಿಯ ಅಗೆತ!
ಉತ್ತರ ಪ್ರದೇಶದ ಆಗ್ರಾದಲ್ಲಿ ಹಿಂದೂ ಮಹಾಸಭಾದವರು ಕಠಿಣ ನಿಲುವು ತೆಗೆದುಕೊಂಡು ತಾಜ್‌ಮಹಲ್‌ನ ಹಿಂಭಾಗದಲ್ಲಿ ಯಮುನಾ ನದಿಯ ದಡದಲ್ಲಿ ಗುಂಡಿ ತೋಡಿ ಅದನ್ನು ಸಾಂಕೇತಿಕ ಗೋರಿಯ ರೂಪಕ್ಕೆ ತಂದು ಶಾಸಕ ಹುಮಾಯೂ ಕಬೀರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ‘ಬಾಬರಿ ಮಸೀದಿಯನ್ನು ಮತ್ತೆ ನಿರ್ಮಿಸುವ ಭಾಷೆ ಮಾಡುವವರ ಅಂತ್ಯ ಹೇಗಾಗಲಿದೆ’ ಎಂಬುದರ ಎಚ್ಚರಿಕೆಯ ಸಂಕೇತವಾಗಿ ಈ ಗುಂಡಿಯನ್ನು ಅಗೆದಿದ್ದೇವೆ ಎಂದು ಕಾರ್ಯಕರ್ತರು ಹೇಳಿದ್ದಾರೆ.
ಕಬೀರ್ ಅವರನ್ನು ಜೀವಂತ ಅಥವಾ ಮೃತವಾಗಿ ಕರೆತಂದವರಿಗೆ ಚಿನ್ನದ ಕಡಗ ನೀಡುವುದಾಗಿ ಘೋಷಣೆ!
ದೂ ಮಹಾಸಭಾದ ಆಗ್ರಾ ಜಿಲ್ಲಾಧ್ಯಕ್ಷೆ ಮೀರಾ ರಾಠೋಡ್ ಅವರು, ‘ಹುಮಾಯೂ ಕಬೀರ್ ಅವರನ್ನು ಜೀವಂತ ಅಥವಾ ಮೃತ ಸ್ಥಿತಿಯಲ್ಲಿ ಆಗ್ರಾಗೆ ಕರೆತಂದವರಿಗೆ ನಾನು ಚಿನ್ನದ ಕಡಗವನ್ನು ನೀಡುತ್ತೇನೆ. ಬಾಬರಿಯ ಕನಸು ಕಾಣುವವರಿಗೆ ಈ ಗೋರಿಯೇ ತಕ್ಕ ಉತ್ತರ,’ ಎಂದು ಹೇಳಿದ್ದಾರೆ.
|
ಹುಮಾಯು ಕಬೀರ್ ಅವರು ಮಸೀದಿಗೆ ಅಡಿಪಾಯ ಹಾಕಿ ಅದನ್ನು ನಿರ್ಮಿಸಲು ಹೊರಟಿರುವ ಭೂಮಿ ತಮ್ಮದಲ್ಲ ಎಂದು ಆ ಭೂಮಿಯ ಮಾಲೀಕರು ಹೇಳಿದ್ದಾರೆ. ಅವರು ಇಲ್ಲಿ ನಿರ್ಮಾಣ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ‘ಝೀ ನ್ಯೂಸ್’ ಹಿಂದಿ ಸುದ್ದಿ ವಾಹಿನಿಯ ವರದಿಯಲ್ಲಿ, ಇಲ್ಲಿ ಆಸ್ಪತ್ರೆ ಮತ್ತು ಮಸೀದಿ ನಿರ್ಮಿಸಲಾಗುತ್ತಿದೆ ಎಂಬ ಹೇಳಿಕೆಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿಳಿಸಲಾಗಿದೆ. ಮಸೀದಿಯ ಬಗ್ಗೆ ದೊಡ್ಡ ಹಕ್ಕುಗಳನ್ನು ಮಂಡಿಸಿರುವ ವ್ಯಕ್ತಿಯ ಹೆಸರಿನಲ್ಲಿ ಒಂದು ಇಂಚು ಭೂಮಿ ಕೂಡ ಇಲ್ಲ ಎಂದು ಭೂ ಮಾಲೀಕರು ಹೇಳಿದ್ದಾರೆ.
ಈ ಮಾಲೀಕರು ಭೂಮಿಯ ಮುರಿದ ಬೇಲಿಯ ಗೋಡೆಯ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಅವರು, “ನಾವು ಭೂಮಿಯನ್ನು ಮಾರಿಲ್ಲ, ಒಂದು ರೂಪಾಯಿ ಕೂಡ ತೆಗೆದುಕೊಂಡಿಲ್ಲ. ಭೂಮಿ ನಮ್ಮದೇ ಆಗಿದೆ, ಆದ್ದರಿಂದ ನಾವು ಅದನ್ನು ಸಂರಕ್ಷಿಸುತ್ತಿದ್ದೇವೆ.” ಎಂದು ಹೇಳಿದ್ದಾರೆ.
ಕಬೀರ್ ವಿರುದ್ಧ ಪೊಲೀಸ್ ದೂರು
ಭೂ ಮಾಲೀಕರು ಶಾಸಕ ಹುಮಾಯು ಕಬೀರ್ ಅವರ ಮಸೀದಿ ನಿರ್ಮಾಣದ ಹೇಳಿಕೆಯ ಬಗ್ಗೆ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಕಬೀರ್ ಅವರು ಬಾಬರಿ ಮಸೀದಿಯ ಜೊತೆಗೆ ಹೋಟೆಲ್ ಮತ್ತು ಶಾಲೆಯನ್ನು ಸಹ ನಿರ್ಮಿಸುವ ಹಕ್ಕುಗಳನ್ನು ಮಂಡಿಸಿದ್ದರು. ಗ್ರಾಮದ ಒಬ್ಬ ಮಾಲೀಕರು, “ಮೊದಲು ಭೂಮಿ ಎಲ್ಲಿದೆ ಎಂದು ತೋರಿಸಿ? ಈ ಭೂಮಿ ನಮ್ಮದು. ಮಸೀದಿಯನ್ನು ಎಲ್ಲಿ ನಿರ್ಮಿಸಲಾಗುವುದು?”, ಎಂದು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ
ಸಂಪಾದಕೀಯ ನಿಲುವುಇಂತಹ ಎಷ್ಟೇ ಫಲಕಗಳನ್ನು ಹಾಕಿದರೂ, ಬಾಬರಿ ಹೆಸರಿನಲ್ಲಿ ಯಾವುದೇ ಕಟ್ಟಡವನ್ನು ದೇಶದಲ್ಲಿ ಮತ್ತೆ ನಿರ್ಮಿಸಲು ಸಾಧ್ಯವಿಲ್ಲ ಎಂಬುದನ್ನು ಮತಾಂಧರು ನೆನಪಿನಲ್ಲಿಡಬೇಕು! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”