
೧. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ‘ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿ, ‘ನಿಮ್ಮಲ್ಲಿ ಎಷ್ಟು ಅಹಂ ಇದೆ?’ ಎಂಬುದನ್ನು ಅಭ್ಯಾಸ ಮಾಡಲು ಹೇಳಿ ಸಾಧಕರಿಗೆ ಅಹಂ ನಿರ್ಮೂಲನೆಯ ಪ್ರಯತ್ನಗಳನ್ನು ಮಾಡಲು ಹೇಳುವುದು: ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ಶ್ರೀಮಂತ ಮನೆತನದಿಂದ ಬಂದವರು. ಆದರೂ ಅವರು ಗೋವಾದ ಫೋಂಡಾದಲ್ಲಿರುವ ‘ಸುಖಸಾಗರ’ ಆಶ್ರಮದಲ್ಲಿ ವಾಸಿಸಲು ಬಂದಾಗ, ಅವರು ಆಶ್ರಮದ ಜೀವನವನ್ನು ಅತ್ಯಂತ ಸಹಜವಾಗಿ ಸ್ವೀಕರಿಸಿದರು. ಆಗ (ವರ್ಷ ೨೦೦೧ ರಲ್ಲಿ) ಈಗಿನಂತೆ ವರದಿ ಸತ್ಸಂಗಗಳು ಇತ್ಯಾದಿ ತೆಗೆದುಕೊಂಡು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಗಳನ್ನು ನಡೆಸುವ ಪದ್ಧತಿ ಇರಲಿಲ್ಲ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ನೇರವಾಗಿ ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಲು ಹೇಳಿ, ‘ತಮ್ಮಲ್ಲಿ ಎಷ್ಟು ಅಹಂಕಾರ ಇದೆ ಎಂಬುದು ಅರಿವಾಗುತ್ತದೆಯೇ?’ ಎಂಬುದನ್ನು ಅಭ್ಯಾಸ ಮಾಡಲು ಹೇಳುತ್ತಿದ್ದರು. ಅಹಂಕಾರ ಇಲ್ಲದ ಸಾಧಕರೊಂದಿಗೆ ಹೋಲಿಕೆ ಮಾಡಿಕೊಳ್ಳಲು ಹೇಳಿ, ಅವರಂತೆಯೇ ಆಗಲು ಪ್ರಯತ್ನಿಸಲು ಹೇಳುತ್ತಿದ್ದರು. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಗೂ ಅದೇ ರೀತಿಯಲ್ಲಿ ಕಲಿಸಿದರು. ಅಂದರೇ ಅವರಲ್ಲಿ ಅಷ್ಟೊಂದು ಸಿದ್ಧತೆ ಇರುವುದರಿಂದ ಅವರು ಅದನ್ನು ಅಷ್ಟೇ ಸಹಜವಾಗಿ ಸ್ವೀಕರಿಸಿ ಗುರುಗಳ ಆಜ್ಞೆಪಾಲಿಸಿದರು.

೨. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ಅಹಂ ನಿರ್ಮೂಲನೆಯ ಪ್ರಕ್ರಿಯೆ ನಡೆಸುವಾಗ ಮಾಡಿದ ಪ್ರಯತ್ನಗಳು!: ಆಶ್ರಮಜೀವನದಲ್ಲಿ ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸುವುದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಂದಲೇ ಆರಂಭವಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಡಿಯಲ್ಲಿ ಅವರು ಸ್ವತಃ ಮೊತ್ತಮೊದಲು ಆ ಪ್ರಕ್ರಿಯೆಯನ್ನು ನಿಯಮಬದ್ಧವಾಗಿ ಅನುಸರಿಸಿದರು ಮತ್ತು ಅನಂತರ ಸಮಷ್ಟಿಯಲ್ಲಿಯೂ ಅದೇ ರೀತಿಯಲ್ಲಿ ಅನುಸರಿಸಲಾಯಿತು. ಈ ಪ್ರಕ್ರಿಯೆಯ ಅಡಿಯಲ್ಲಿ ಅವರು ಬಹಳಷ್ಟು ಶ್ರಮಪಟ್ಟರು. ತಮ್ಮಲ್ಲಿನ ಸ್ವಭಾವದೋಷಗಳನ್ನು ಹೋಗಲಾಡಿಸಿ ಗುಣಗಳನ್ನು ಬೆಳೆಸಿಕೊಳ್ಳಲು ಅವರು ತಮ್ಮ ಸಣ್ಣ ಸಣ್ಣ ಕೃತಿಗಳ ಬಗ್ಗೆ ನಿರೀಕ್ಷಣೆ ಮಾಡುತ್ತಿದ್ದರು. ಮನಸ್ಸಿನಲ್ಲಿ ಅಯೋಗ್ಯ ವಿಚಾರ ಬಂದರೆ ಅವರು ಕ್ಷಮಾಯಾಚನೆ ಮಾಡುತ್ತಿದ್ದರು. ಅವರ ಪ್ರಯತ್ನಗಳಿಂದಲೇ ಮೊದಲು ‘ಅಹಂ ನಿರ್ಮೂಲನೆಗಾಗಿ ಸಾಧನೆ’ ಎಂಬ ಗ್ರಂಥವನ್ನು ಬರೆಯಲಾಯಿತು.

ದೊಡ್ಡ ಕೆಟ್ಟ ಶಕ್ತಿಯು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರವರ ಲಿಂಗದೇಹವನ್ನು ದೇಹದಿಂದ ಹೊರಗೆ ಒಯ್ಯಲು ಪ್ರಯತ್ನಿಸುವುದು!
೨೦೦೩-೨೦೦೪ ರಲ್ಲಿ ವರ್ಷವಿಡಿ ಆಧ್ಯಾತ್ಮಿಕ ತೊಂದರೆಗಳಿರುವ ಸಾಧಕರಿಗೆ ಮಿರಜ ಆಶ್ರಮದಲ್ಲಿ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡಲಾಗುತ್ತಿತ್ತು. ಆಗ ಓರ್ವ ಸಾಧಕಿಗೆ ಕೆಟ್ಟ ಶಕ್ತಿಗಳ ತೀವ್ರ ತೊಂದರೆ ಆಗುತ್ತಿತ್ತು. ಅದೇ ಅವಧಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರೂ ಕೂಡ ಒಮ್ಮೆ ಉಪಾಯಗಳಿಗಾಗಿ ಮಿರಜ ಆಶ್ರಮಕ್ಕೆ ಬಂದಿದ್ದರು. ಆಗ ಕೆಟ್ಟ ಶಕ್ತಿಗಳ ತೀವ್ರ ತೊಂದರೆ ಇರುವ ಸಾಧಕಿಯು ಅವರಿಗೆ, ”ನಾನು ನಿಮಗೆ ಉಚ್ಚ ಲೋಕಗಳಲ್ಲಿನ ರಾಗಗಳ ಜ್ಞಾನವನ್ನು ಕೊಡುತ್ತೇನೆ,’’ ಎಂದಳು. ಅನಂತರ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಮುಂದೆ ಧ್ಯಾನ ಮಾಡುತ್ತ ಕುಳಿತಳು ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಗೂ ಧ್ಯಾನ ಮಾಡಲು ಹೇಳಿದಳು. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಗೆ ಧ್ಯಾನ ಮಾಡುವಾಗ ಆದ ತೊಂದರೆಯ ಬಗ್ಗೆ ಅವರು ಸ್ವತಃ ಹೇಳಿದ್ದನ್ನು ಮುಂದೆ ಕೊಡಲಾಗಿದೆ, ‘ನಾನು ಧ್ಯಾನ ಮಾಡಲು ಕುಳಿತು ಕೊಂಡೆನು ಮತ್ತು ನನಗೆ ತುಂಬಾ ತೊಂದರೆ ಆಗತೊಡಗಿತು. ನನ್ನ ತಲೆಯ ಮೇಲೆ ದೊಡ್ಡ ತೊಂದರೆ ಬಂದಂತೆ ಅನಿಸಿತು ಮತ್ತು ನನಗೆ ಉಸಿರಾಡಲು ಕಷ್ಟವಾಗತೊಡಗಿತು. ನಾನು ತಕ್ಷಣ ಪರಾತ್ಪರ ಗುರು ಡಾಕ್ಟರರಿಗೆ ಮೊರೆ ಹೋದೆನು ಮತ್ತು ಕೆಲವೇ ಕ್ಷಣಗಳಲ್ಲಿ ನನಗೆ ಉಸಿರಾಡಲು ಬರತೊಡಗಿತು ಮತ್ತು ನಂತರ ನಾನು ಮೊದಲಿನ ಸ್ಥಿತಿಗೆ ಬಂದೆನು.’ ಈ ಕುರಿತು ನಾನು ನಂತರ ಪರಾತ್ಪರ ಗುರು ಡಾಕ್ಟರರಿಗೆ ಹೇಳಿದೆನು. ಆಗ ಅವರು, ”ಕೆಟ್ಟ ಶಕ್ತಿಯು ನಿಮ್ಮ ಲಿಂಗದೇಹವನ್ನು ದೇಹದ ಹೊರಗೆ ಒಯ್ಯಲು ಪ್ರಯತ್ನಿಸುತ್ತಿತ್ತು. ಆದ್ದರಿಂದ ನಿಮಗೆ ಈ ತೊಂದರೆ ಆಯಿತು. ಕೆಟ್ಟ ಶಕ್ತಿಗಳು ದೇಹದ ಹೊರಗೆ ಲಿಂಗದೇಹವನ್ನು ಒಯ್ದು ಅದರ ಮೇಲೆ ನಿಯಂತ್ರಣವನ್ನಿಡುತ್ತವೆ ಮತ್ತು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತವೆ,’’ ಎಂದು ಹೇಳಿದರು. ಕೇವಲ ಪರಾತ್ಪರ ಗುರು ಡಾಕ್ಟರರ ಕೃಪೆಯಿಂದಲೇ ಕೆಟ್ಟ ಶಕ್ತಿಗಳ ಈ ಪ್ರಯತ್ನವು ವಿಫಲವಾಯಿತು’.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಶ್ರೀ ರಾಜಮಾತಂಗಿ ಮಹಾಯಜ್ಞ !