ದೆಹಲಿ ಬಾಂಬ್ ಸ್ಫೋಟದ ಭಯೋತ್ಪಾದಕ ತುರ್ಕಿಯಲ್ಲಿ ಸಿರಿಯಾದ ಭಯೋತ್ಪಾದಕನನ್ನು ಭೇಟಿಯಾಗಿದ್ದು ಬಹಿರಂಗ – Delhi Terrorist Met Syrian Terrorist

ನವದೆಹಲಿ – ದೆಹಲಿಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟವನ್ನು ನಡೆಸಿದ ಡಾ. ಉಮರ, 2022 ರಲ್ಲಿ ತುರ್ಕಿಯಲ್ಲಿ ಸಿರಿಯಾದ ಭಯೋತ್ಪಾದಕನೊಬ್ಬನನ್ನು ಭೇಟಿಯಾಗಿದ್ದನು ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಡಾ. ಮುಜಮ್ಮಿಲ್ ಶಕೀಲ್ ಗನಿ ಮತ್ತು ಡಾ. ಮುಜಫ್ಫರ್ ರಾಯದರ್ ಕೂಡ ಆ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದರು. ಈ ಮೂವರು ತಮ್ಮ ಪಾಕಿಸ್ತಾನಿ ಸಂಚಾಲಕ ಉಕಾಶಾ ಎಂಬಾತನ ಸೂಚನೆಯ ಮೇರೆಗೆ ಸಿರಿಯಾದ ಭಯೋತ್ಪಾದಕನನ್ನು ಭೇಟಿಯಾಗಿದ್ದರು. ಅವರು ನಿರಂತರವಾಗಿ ಆತನ ಸಂಪರ್ಕದಲ್ಲಿದ್ದರು.

ಡಾ. ಉಮರ್, ಡಾ. ಮುಜಫ್ಫರ್ ಮತ್ತು ಡಾ. ಮುಜಮ್ಮಿಲ್ ಅವರು ತುರ್ಕಿಯಲ್ಲಿ ಬರೋಬ್ಬರಿ 20 ದಿನಗಳ ಕಾಲ ತಂಗಿದ್ದರು. ಅವರು ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿ ವಾಸಿಸುವ ಉಕಾಶಾನನ್ನು ಭೇಟಿಯಾಗಲು ಹೋಗಿದ್ದರು. ಮುಜಫ್ಫರ್ ಸಂಯುಕ್ತ ಅರಬ್ ಎಮಿರೇಟ್ಸ್ ಮೂಲಕ ಅಫ್ಘಾನಿಸ್ತಾನಕ್ಕೆ ಪರಾರಿಯಾಗಿ ನೇರವಾಗಿ ಅಲ್-ಖೈದಾಕ್ಕೆ ಸೇರಿಕೊಂಡನು. ಡಾ. ಉಮರನನ್ನು ತುರ್ಕಿ ಮಾರ್ಗವಾಗಿ ಅಫ್ಘಾನಿಸ್ತಾನಕ್ಕೆ ಹೋಗದೇ, ಭಾರತಕ್ಕೆ ಮರಳಿ ಕಳುಹಿಸಲಾಯಿತು. ‘ಜೈಷ್’ ಸಂಘಟನೆಯು ಆತನನ್ನು ಭಾರತದಲ್ಲಿ ದಾಳಿ ನಡೆಸಲು ಕಳುಹಿಸಿತ್ತು.

ಸಂದೇಹ ಬಾರದಿರಲು ಡಾ. ಉಮರ್ ಅಲ್-ಫಲಾಹ್ ನಲ್ಲಿ ಕೆಲಸಕ್ಕೆ ಸೇರಿದ್ದನು

ನಿಯೋಜನೆಯಂತೆ ಯಾರಿಗೂ ಅನುಮಾನ ಬಾರದಂತೆ, ಸಂಚು ರೂಪಿಸಲು ಮತ್ತು ಇನ್ನೂ ಕೆಲವರನ್ನು ಈ ಸಂಚಿನಲ್ಲಿ ಸೇರಿಸಲು ಸಾಧ್ಯವಾಗಲು ಡಾ. ಉಮರ್ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ನಿರ್ಧಾರ ತೆಗೆದುಕೊಂಡನು.

ಏಜಂಟ್ ನಿಂದ ಬಾಂಬ್ ತಯಾರಿಕೆಯ 42 ವೀಡಿಯೋಗಳು ಕಳಿಸಿದ್ದ!

ಡಾ. ಉಮರನ ವಿದೇಶಿ ಸಂಚಾಲಕ ಉಕಾಶಾ, ಬಾಂಬ್ ಗಳನ್ನು ಹೇಗೆ ತಯಾರಿಸಬೇಕು ಎಂಬ ಮಾಹಿತಿಯನ್ನು ಒಳಗೊಂಡ 42 ವೀಡಿಯೋಗಳನ್ನು ಆತನಿಗೆ ಕಳುಹಿಸಿದ್ದಾನೆ ಎಂಬ ಮಾಹಿತಿ ಕೂಡ ವಿಚಾರಣೆಯಲ್ಲಿ ಬಹಿರಂಗಗೊಂಡಿದೆ. ಆತ ‘ಹನಝುಲ್ಲಾಹ’, ‘ನಿಸಾರ್’ ಮತ್ತು ‘ಉಕಾಶಾ’ ಎಂಬ ಗುಪ್ತನಾಮಗಳಿಂದ ಉಮರನೊಂದಿಗೆ ಸಂಭಾಷಣೆ ನಡೆಸಿದ್ದನು.
ಉಕಾಶಾನ ಗುರುತು ಪತ್ತೆ ಹಚ್ಚುವ ಪ್ರಯತ್ನ

ಸಧ್ಯ ತನಿಖಾ ಸಂಸ್ಥೆಗಳು ಉಕಾಶಾನ ಗುರುತು ಪತ್ತೆಹಚ್ಚುವ ಪ್ರಯತ್ನದಲ್ಲಿವೆ. ಇದರ ಜೊತೆಗೆ, ಮತ್ತೊಬ್ಬ ಏಜೆಂಟ್‌ ಮಾಹಿತಿಯೂ ಲಭ್ಯವಾಗಿದೆ. ಆತ ‘ಕರ್ನಲ್’, ‘ಲ್ಯಾಪ್ಟಾಪ್ ಭಾಯ್’ ಅಥವಾ ‘ಭಾಯ್’ ಎಂಬ ಗುಪ್ತನಾಮಗಳಿಂದ ಸಂಪರ್ಕದಲ್ಲಿದ್ದನು. ಆತನ ಹೆಸರು ಮಹಮ್ಮದ್ ಶಾಹಿದ್ ಫೈಝಲ್ ಎಂದು ಹೇಳಲಾಗುತ್ತಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಬಾಂಬ್ ಸ್ಫೋಟ ನಡೆಸುವ ಸಂಚಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಆತ ಸಮನ್ವಯದ ಕೆಲಸ ಮಾಡುತ್ತಿದ್ದನು. ಫೈಝಲ್ ಇಂಜಿನಿಯರಿಂಗ್ ಶಿಕ್ಷಣವನ್ನು ಪೂರ್ಣಗೊಳಿಸಿದ್ದು, 2012 ರಲ್ಲಿ, 28 ನೇ ವಯಸ್ಸಿನಲ್ಲಿ ನಾಪತ್ತೆಯಾಗಿದ್ದನು. ಆ ಸಮಯದಲ್ಲಿ ಲಷ್ಕರ್-ಎ-ತೊಯ್ಬಾದಿಂದ ಬೆಂಗಳೂರಿನಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಂಚಿನಲ್ಲಿ ಅನೇಕ ಯುವ ಇಂಜಿನಿಯರ್‍‌ಗಳನ್ನು ಮತ್ತು ವೈದ್ಯರ ಜೊತೆಗೆ ಫೈಝಲ್ ಹೆಸರೂ ಮುನ್ನೆಲೆಗೆ ಬಂದಿತ್ತು. ಫೈಝಲ್ ಪಾಕಿಸ್ತಾನಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಸಂಪಾದಕೀಯ ನಿಲುವು

ಇದರಿಂದ ಬಾಂಬ್ ಸ್ಫೋಟದ ಹಿಂದಿರುವ ಭಯೋತ್ಪಾದಕರು ಅಂತಾರಾಷ್ಟ್ರೀಯ ಸಂಚು ರೂಪಿಸುತ್ತಿದ್ದರು ಎಂಬುದು ಗಮನಕ್ಕೆ ಬರುತ್ತದೆ!