
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಪ್ರೀತಿ ಎಂಬ ಗುಣದಿಂದ ರಾಮನಾಥಿ ಆಶ್ರಮದಲ್ಲಿರುವಾಗ ಅಲ್ಲಿ ಬಂದ ಮತ್ತು ನಂತರ ಭಾರತಾದ್ಯಂತ ಪ್ರವಾಸ ಮಾಡುವಾಗ ಭೇಟಿಯಾದ ವಿವಿಧ ಕ್ಷೇತ್ರಗಳ ಸಂತರು ಮತ್ತು ಗಣ್ಯರನ್ನು ಸನಾತನ ಸಂಸ್ಥೆಗೆ ಹೇಗೆ ಜೋಡಿಸಿದರು. ನಾವು ಅದನ್ನು ನೋಡಿದೆವು. ಇಲ್ಲಿ ನಾವು ತಮಿಳುನಾಡಿನ ಕಂಚೀಪುರಂನಲ್ಲಿನ ‘ವೆಡಾಲ್’ ಎಂಬ ಚಿಕ್ಕ ಊರಿನಲ್ಲಿ ಹೊಸದಾಗಿ ವಾಸಿಸಲು ಹೋದನಂತರ ಅಲ್ಲಿ ಮಾಡಿದ ಜನಸಂಪರ್ಕದ ಬಗ್ಗೆ ತಿಳಿದುಕೊಳ್ಳೋಣ.
ತಮಿಳುನಾಡಿನ ಕಂಚೀಪುರಂನ ‘ವೇಡಾಲ್’ ಎಂಬ ಹಳ್ಳಿಗೆ ಹೊಸದಾಗಿ ವಾಸಿಸಲು ಹೋದಾಗ ಮಾಡಿದ ಜನಸಂಪರ್ಕ!
೧. ೪-೫ ತಿಂಗಳುಗಳಲ್ಲಿಯೇ ಮನೆಬಾಗಿಲಿಗೆ ಬರುವ ತರಕಾರಿ ಮಾರುವವರು, ಹಾಲು ಮಾರುವವರು ಇವರನ್ನೆಲ್ಲ ತಮ್ಮವರನ್ನಾಗಿ ಮಾಡಿಕೊಳ್ಳುವುದು: ಅಕ್ಟೋಬರ್ ೨೦೨೩ ರಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ತಮಿಳುನಾಡಿನ ಚೆನ್ನೈಯಿಂದ ೬೦ ಕಿ.ಮೀ. ದೂರದಲ್ಲಿರುವ ಕಂಚಿಪುರಂನಲ್ಲಿನ ‘ವೇಡಾಲ್’ ಎಂಬ ಚಿಕ್ಕ ಊರಿನಲ್ಲಿ ವಾಸಿಸಲು ಹೋದರು. ನಿಜ ಹೇಳಬೇಕೆಂದರೆ ಹೊಸ ಜಾಗದಲ್ಲಿ ವಾಸಿಸಲು ಹೋದಾಗ ಇತರ ಜನರೊಂದಿಗೆ ನಮ್ಮ ಪರಿಚಯವಾಗುವುದು ಕಠಿಣವಿರುತ್ತದೆ; ಆದರೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ತಮ್ಮಲ್ಲಿನ ‘ಪ್ರೀತಿ’ ಈ ಗುಣದಿಂದ ೪-೫ ತಿಂಗಳುಗಳಲ್ಲಿಯೇ ಮನೆಬಾಗಿಲಿಗೆ ಬರುವ ತರಕಾರಿ ಮಾರುವವರನ್ನು, ಹಾಲು ಮಾರುವವರನ್ನು, ಹೂವು ಮತ್ತು ಮಾಲೆ ಮಾರಲು ಬರುವ ಮಹಿಳೆಯರನ್ನು, ಅಲ್ಲಿನ ಅಟೋರಿಕ್ಷಾ ಚಾಲಕರು ಮುಂತಾದವರನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರು ಅವರೆಲ್ಲರ ಯೋಗಕ್ಷೇಮವನ್ನು ಪ್ರೀತಿಯಿಂದ ವಿಚಾರಿಸುತ್ತಾರೆ. ತಮಿಳುನಾಡಿನಲ್ಲಿ ತುಂಬಾ ಬಿಸಿಲು ಇರುವುದರಿಂದ ಅವರನ್ನು ಮನೆಯಲ್ಲಿ ಒಳಗೆ ಕರೆದು ನೀರು ಕೊಡುತ್ತಾರೆ, ಕೆಲವೊಮ್ಮೆ ಅವರಿಗೆ ವಿಭೂತಿಯನ್ನು ಕೊಡುತ್ತಾರೆ. ಹಬ್ಬಹರಿದಿನಗಳಲ್ಲಿ ಅವರಿಗೆ ದೇವರ ಪ್ರಸಾದವನ್ನು ಕೊಡುತ್ತಾರೆ, ಯಾವುದಾದರೊಂದು ದೇವತೆಯ ಚಿತ್ರವನ್ನು ಕೊಡುತ್ತಾರೆ.

೨. ಆತ್ಮೀಯತೆ ಬೆಳೆಸಿದ ವ್ಯಕ್ತಿಗಳ ಮನಸ್ಸಿನಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರ ಬಗ್ಗೆ ‘ಮಾತಾಜಿ’, ಅಂದರೆ ‘ಗುರು’ ಎಂಬ ಭಾವವಿರುವುದು: ಪರಿಚಯವಾದ ಈ ವ್ಯಕ್ತಿಗಳು ಪಕ್ಕದ ಊರಿನ ಮತ್ತು ನಿರ್ಮಲ ಮನಸ್ಸಿನವರಾಗಿದ್ದಾರೆ. ಅವರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರ ಶ್ರೇಷ್ಠತೆಯು ಗಮನಕ್ಕೆ ಬರುತ್ತದೆ. ಆ ವ್ಯಕ್ತಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರ ಮನೆಯ ಮುಂದಿರುವ ಅಂಗಳದಿಂದ ಮನೆಯಲ್ಲಿ ಬರುವಾಗ ಅವರ ಪಾದರಕ್ಷೆಗಳನ್ನು ಅಂಗಳದ ಹೊರಗೆ ಇಡುತ್ತಾರೆ; ಏಕೆಂದರೆ ಅವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರನ್ನು ‘ಮಾತಾಜಿ’, ಅಂದರೆ ‘ಗುರು’ ಎಂದು ಭಾವಿಸುತ್ತಾರೆ. ‘ಮಾತಾಜಿಯವರ ಆಶ್ರಮದಲ್ಲಿ ಪಾದರಕ್ಷೆಗಳನ್ನು ಹಾಕಿಕೊಂಡು ಹೇಗೆ ಹೋಗುವುದು!’, ಎಂಬುದು ಅವರ ಭಾವವಾಗಿರುತ್ತದೆ. ಆ ವ್ಯಕ್ತಿಗಳು ಈಗ ಎಷ್ಟು ಪರಿಚಿತರಾಗಿದ್ದಾರೆಂದರೆ, ಆ ವ್ಯಕ್ತಿಗಳ ಮನೆಯಲ್ಲಿ ಏನಾದರೂ ಶುಭಕಾರ್ಯವಿದ್ದರೆ, ಅವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರನ್ನೂ ಆಹ್ವಾನಿಸುತ್ತಾರೆ ಮತ್ತು ಅವರಿಗೆ ‘ನಿಮ್ಮ ಆಶೀರ್ವಾದವಿರಲಿ’, ಎಂದು ಪ್ರಾರ್ಥಿಸುತ್ತಾರೆ.

೩. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ಪ್ರಸ್ತುತ ವಾಸಿಸುತ್ತಿರುವ ೨೦೦ ಬಂಗಲೆಗಳಿರುವ ಸಂಕುಲದಲ್ಲಿ ಅವರು ‘ಮಾತಾಜಿ’ ಎಂದು ಪ್ರಸಿದ್ಧರಾಗಿದ್ದಾರೆ!: ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರ ಬಳಿ ಮೊದಲ ಬಾರಿಗೆ ಯಾರಾದರೂ ಬಂದರೆ, ಆ ಸಂಕುಲದ ಕಾವಲುಗಾರನು ‘ಮಾತಾಜಿಯವರ ಮನೆ ನಮಗೆ ಗೊತ್ತಿದೆ’, ಎಂದು ಹೇಳಿ ಅವರ ಬಳಿ ತಕ್ಷಣ ಕರೆದುತಂದು ಬಿಡುತ್ತಾರೆ.
೪. ಕಂಚೀಪುರಂನಲ್ಲಿನ ಒಂದು ಪ್ರಸಿದ್ಧ ದೇವಿಯ ದೇವಸ್ಥಾನದ ಮುಖ್ಯ ಅರ್ಚಕರಲ್ಲಿ ಓರ್ವ ಅರ್ಚಕರಿಗೆ ‘ಸಾಕ್ಷಾತ್ ದೇವಿಯೇ ನಮ್ಮ ಊರಿನಲ್ಲಿ ವಾಸಿಸಲು ಬರಲಿದ್ದಾಳೆ!’, ಎಂಬ ಭಾವವಿರುವುದು ಮತ್ತು ಅವರು ಸ್ವತಃ ಬಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರ ಗೃಹಪ್ರವೇಶದ ಸಮಯದಲ್ಲಿ ವೇದಮಂತ್ರವನ್ನು ಹೇಳುವುದು: ಕಂಚೀಪುರಂದಲ್ಲಿನ ಒಂದು ಪ್ರಸಿದ್ಧ ದೇವಿಯ ದೇವಸ್ಥಾನದ ಮುಖ್ಯ ಅರ್ಚಕರಲ್ಲಿ ಒಬ್ಬ ಅರ್ಚಕರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರು ಕಂಚೀಪುರದಲ್ಲಿ ವಾಸಿಸಲು ಬರಲಿದ್ದಾರೆ, ಎಂದು ತಿಳಿಯಿತು. ಅವರಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರ ಬಗ್ಗೆ ತುಂಬಾ ಭಾವವಿದೆ. ಅವರು, ”ಸಾಕ್ಷಾತ್ ದೇವಿಯೇ ನಮ್ಮ ಊರಿನಲ್ಲಿ ವಾಸಿಸಲು ಬರಲಿದ್ದಾಳೆ! ಆದ್ದರಿಂದ ಅವರ ಗೃಹಪ್ರವೇಶದ ದಿನದಂದು ನಾನು ಸ್ವತಃ ಬರುವೆನು,’’ ಎಂದು ಹೇಳಿದರು. ಅದರಂತೆ ಅವರು ಮತ್ತು ಅವರ ಜೊತೆಯಲ್ಲಿ ಇನ್ನೊಬ್ಬ ಅರ್ಚಕರು ಬಂದರು. ಅವರು ಮಾಡಿದ ವೇದಮಂತ್ರಗಳೊಂದಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರು ಆ ಹೊಸ ಮನೆಯನ್ನು ಪ್ರವೇಶಿಸಿದರು.
೫. ‘ಪ್ರೀತಿ’ ಈ ಗುಣದಿಂದ ಸಾಧನೆಯಲ್ಲಿ ಹೇಗೆ ಸಹಾಯವಾಗುತ್ತದೆ’, ಇದರ ಅನುಭೂತಿಯು ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರ ಜೊತೆಯಲ್ಲಿನ ಸಾಧಕರಿಗೆ ಹೆಜ್ಜೆಹೆಜ್ಜೆಗೂ ಸಿಗುವುದು: ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಅವರೊಂದಿಗೆ ಸಂಪರ್ಕದಲ್ಲಿರುವ ವ್ಯಕ್ತಿಗಳು ಸಾತ್ತ್ವಿಕರಾಗಿರುತ್ತಾರೆ. ಪರಿಚಯವಾದ ವ್ಯಕ್ತಿಯು, ತನಗೆ ಪರಿಚಿತರಿರುವ ಮತ್ತೊಬ್ಬ ಒಳ್ಳೆಯ ವ್ಯಕ್ತಿಯನ್ನು ಪರಿಚಯಿಸುತ್ತಾರೆ. ಮುಂದೆ ಆ ವ್ಯಕ್ತಿ ಇನ್ನೊಬ್ಬರನ್ನು ಪರಿಚಯಿಸುತ್ತಾರೆ. ಈ ರೀತಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳು ಹೆಚ್ಚುತ್ತಾ ಹೋಗಿದ್ದಾರೆ. ಇಂತಹ ವ್ಯಕ್ತಿಗಳಿಂದ ಬಹಳಷ್ಟು ಸಹಾಯ ದೊರೆಯುತ್ತದೆ. ಹಾಗೆಯೇ, ಯೋಗ್ಯ ದರದಲ್ಲಿ ಮತ್ತು ಒಳ್ಳೆಯ ವಸ್ತುಗಳು ತಾನಾಗಿಯೇ ದೊರೆಯುತ್ತವೆ. ಇವರಿಂದ ಈಶ್ವರನೇ ಸಹಾಯ ಮಾಡುತ್ತಾನೆ. ‘ಪ್ರೀತಿ’ ಎಂಬ ಗುಣದಿಂದ ಸಾಧನೆಯಲ್ಲಿ ಹೇಗೆ ಸಹಾಯವಾಗುತ್ತದೆ ಎಂಬುದರ ಅನುಭವವನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಅವರೊಂದಿಗಿರುವ ಸಾಧಕರು ಹೆಜ್ಜೆಹೆಜ್ಜೆಗೂ ಪಡೆಯುತ್ತಿದ್ದಾರೆ. – (ಸದ್ಗುರು) ಡಾ. ಮುಕುಲ ಗಾಡಗೀಳ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಪತಿ), ಪಿಎಚ್.ಡಿ., ಗೋವಾ. (೨೫.೧೧.೨೦೨೪)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !