ಮತ ಕಳ್ಳತನದ ಆರೋಪ: ಚುನಾವಣಾ ಆಯೋಗದ ಮೇಲೆ ವಾಗ್ದಾಳಿ; ಮಾಜಿ ನಿವೃತ್ತ ನ್ಯಾಯಾಧೀಶರು, ಮಿಲಿಟರಿ ಮತ್ತು ಸರಕಾರಿ ಅಧಿಕಾರಿಗಳಿಂದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ಮೇಲೆ ಟೀಕಾಪ್ರಹಾರ

ನವದೆಹಲಿ – ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳ ಘನತೆಯನ್ನು ನಿರಂತರವಾಗಿ ಕುಗ್ಗಿಸಲು ಪ್ರಯತ್ನಿಸುತ್ತಿದೆ, ಇದರಿಂದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅನಗತ್ಯ ಅಪನಂಬಿಕೆಯನ್ನು ಸೃಷ್ಟಿಸುತ್ತಿದೆ. ಚುನಾವಣಾ ಆಯೋಗವು ದೇಶದ ಚುನಾವಣಾ ವ್ಯವಸ್ಥೆಯ ಪ್ರಮುಖ ಆಧಾರಸ್ತಂಭವಾಗಿದ್ದು ಅದನ್ನು ಪ್ರಶ್ನಿಸುವುದರಿಂದ ಸಾರ್ವಜನಿಕರಲ್ಲಿ ವಿಶ್ವಾಸ ಕಡಿಮೆಯಾಗುತ್ತದೆ, ಈ ನಿಟ್ಟಿನಲ್ಲಿ, ದೇಶಾದಲ್ಲಿನ ೨೭೨ ನಿವೃತ್ತ ನ್ಯಾಯಾಧೀಶರು, ನಿವೃತ್ತ ಸರಕಾರಿ ಅಧಿಕಾರಿಗಳು ಮತ್ತು ನಿವೃತ್ತ ಮಿಲಿಟರಿ ಅಧಿಕಾರಿಗಳು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ಟೀಕೆಗಳನ್ನು ಒಳಗೊಂಡಿರುವ ಬಹಿರಂಗ ಪತ್ರವೊಂದನ್ನು ಪ್ರಸಾರ ಮಾಡಿದ್ದಾರೆ.
⚠️ 272 Eminent Voices Call Out Congress: After Targeting the Armed Forces, Judiciary & Parliament – Now the ECI
🇮🇳📜 A group of 272 distinguished Indians – including 16 Judges, 123 retired bureaucrats (14 Ambassadors), and 133 retired Armed Forces officers have issued a… pic.twitter.com/HaV7WWuaOC
— Sanatan Prabhat (@SanatanPrabhat) November 19, 2025
೧೬ ಮಾಜಿ ನ್ಯಾಯಾಧೀಶರು, ೧೨೩ ನಿವೃತ್ತ ಸರಕಾರಿ ಅಧಿಕಾರಿಗಳು (೧೪ ಮಾಜಿ ರಾಯಭಾರಿಗಳು ಸೇರಿದಂತೆ) ಮತ್ತು ೧೩೩ ನಿವೃತ್ತ ಮಿಲಿಟರಿ ಅಧಿಕಾರಿಗಳು ಸೇರಿ ಈ ಪಾತ್ರ ಬರೆದಿದ್ದಾರೆ. ಈವರೆಗೆ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ಮೇಲೆ ‘ಮತಗಳ ಕಳ್ಳತನದ’ ಆರೋಪ ಹೊರಿಸುವ ಮೂರು ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ. ಈ ಪತ್ರಿಕಾಗೋಷ್ಠಿಗಳಲ್ಲಿ ಅವರು ಚುನಾವಣಾ ಆಯೋಗವನ್ನು ಮೋದಿ ಸರಕಾರದ ‘ಬಿ-ಟೀಮ್’ (ಸಹಾಯಕ ಪಕ್ಷ) ಎಂದು ಹೇಳಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಭಾಗವಾಗಿವೆ; ಆದರೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಪದೇ-ಪದೇ ಆರೋಪಗಳನ್ನು ಮಾಡುವುದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಈ ಪತ್ರದ ಮೂಲಕ ಹೇಳಲಾಗಿದೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ