ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರೂ ಭಯೋತ್ಪಾದಕರನ್ನು ಬೆಂಬಲಿಸುವ ಹೇಳಿಕೆ

ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಭಾಜಪ ಸರಕಾರವು ಜಗತ್ತಿಗೆ ಹೇಳಿದೆ; ಆದರೆ ಕಾಶ್ಮೀರದ ಸಮಸ್ಯೆಗಳು ಕೆಂಪುಕೋಟೆಯ ಮುಂದೆ ಪ್ರತಿಧ್ವನಿಸುತ್ತಿವೆ. ನೀವು (ಸರಕಾರ) ಜಮ್ಮು-ಕಾಶ್ಮೀರವನ್ನು ಸುರಕ್ಷಿತಗೊಳಿಸುವುದಾಗಿ ಭರವಸೆ ನೀಡಿದ್ದೀರಿ; ಆದರೆ ಆ ಭರವಸೆಯನ್ನು ಪೂರೈಸುವ ಬದಲು, ನಿಮ್ಮ ನೀತಿಗಳಿಂದಾಗಿ ದೆಹಲಿ ಅಸುರಕ್ಷಿತವಾಗಿದೆ ಎಂದು ಟೀಕಿಸುತ್ತಾ, ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಜಿಹಾದಿ ಭಯೋತ್ಪಾದಕರನ್ನು ಬೆಂಬಲಿಸಿದರು. ದೆಹಲಿ ಬಾಂಬ್ ಸ್ಫೋಟದ ಪ್ರಕರಣದ ಬಗ್ಗೆ ಅವರು ಮಾತನಾಡುತ್ತಿದ್ದರು.
🚨 Mehbooba’s Spin on the Red Fort Terror Attack
After Farooq Abdullah’s recent comment, now Mehbooba Mufti steps forward with a statement that dangerously normalises extremist violence:
“The echo of Kashmir’s problems was heard in front of the Red Fort”If “Kashmir’s issues”… https://t.co/0jI90lvRfH pic.twitter.com/3ACi7wjjNe
— Sanatan Prabhat (@SanatanPrabhat) November 17, 2025
ಮೆಹಬೂಬಾ ಅವರು ಮಾತು ಮುಂದುವರೆಸಿ,
ಹಿಂದೂ-ಮುಸಲ್ಮಾನ ರಾಜಕಾರಣ ಮಾಡುವುದರಿಂದ ಮತಗಳು ಸಿಗಬಹುದು; ಆದರೆ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ದೆಹಲಿಯ ಜನರಿಗೆ ಬಹುಶಃ ಹಿಂದೂ-ಮುಸಲ್ಮಾನ ವಿಭಜನೆ ಎಷ್ಟು ಹೆಚ್ಚಾಗುತ್ತದೆಯೋ ಅಷ್ಟು ಹೆಚ್ಚು ರಕ್ತಪಾತವಾಗುತ್ತದೆ, ಅವರಿಗೆ ಹೆಚ್ಚು ಮತಗಳು ಸಿಗುತ್ತವೆ ಎಂದು ಅನಿಸುತ್ತದೆ. ಅವರು ಪುನರ್ವಿಮರ್ಶೆ ಮಾಡಬೇಕು ಎಂದು ನನಗೆ ಅನಿಸುತ್ತದೆ. ದೇಶವು ಕುರ್ಚಿಗಿಂತಲೂ ಬಹಳ ದೊಡ್ಡದಾಗಿದೆ.
ಕಾಶ್ಮೀರಿ ಯುವಕರು ಸ್ಫೋಟಗಳನ್ನು ನಡೆಸಬಾರದು! – ಮೆಹಬೂಬಾ ಅವರ ಕರೆ
ಮೆಹಬೂಬಾ ಮುಫ್ತಿ ಅವರು, ಸ್ಫೋಟ ನಡೆಸುವ ಯುವಕರಿಗೆ ನಾನು, ನೀವು ಏನು ಮಾಡುತ್ತಿದ್ದೀರೋ, ಅದೆಲ್ಲವೂ ತಪ್ಪು. ಇದು ಕೇವಲ ನಿಮಗಾಗಿ ಅಲ್ಲ, ನಿಮ್ಮ ಕುಟುಂಬಕ್ಕಾಗಿ, ಜಮ್ಮು-ಕಾಶ್ಮೀರಕ್ಕಾಗಿ ಮತ್ತು ಇಡೀ ದೇಶಕ್ಕಾಗಿ ಅಪಾಯಕಾರಿ. ನೀವು ದೊಡ್ಡ ಅಪಾಯವನ್ನು ಎದುರಿಸುತ್ತಿದ್ದೀರಿ; ಏಕೆಂದರೆ ನೀವು ನಿಮ್ಮ ಪ್ರೀತಿಪಾತ್ರರ ಜೀವನವನ್ನು ನಾಶ ಮಾಡುತ್ತಿದ್ದೀರಿ. ಅನೇಕ ಅಮಾಯಕ ಜನರ ಜೀವನ ಅಪಾಯದಲ್ಲಿದೆ, ಎಂದು ನಾನು ನಿಮಗೆ ಮತ್ತೊಮ್ಮೆ ಹೇಳುತ್ತಿದ್ದೇನೆ, ಎಂದು ಕರಿ ನೀಡಿದರು.(ಇದು ಈ ಯುವಕರಿಗೆ ತಿಳಿದಿದೆ, ಆದರೂ ಅವರು ಸ್ಫೋಟಗಳನ್ನು ನಡೆಸುತ್ತಿದ್ದಾರೆ. ಇದರರ್ಥ ಅವರ ಉದ್ದೇಶ ಅದಕ್ಕಿಂತ ಭಿನ್ನವಾಗಿದೆ ಎಂಬುದು ಸ್ಪಷ್ಟವಾಗಿದೆ. ಮೆಹಬೂಬಾ ಎಷ್ಟೇ ಮನವಿ ಮಾಡಿದರೂ, ಅದು ಮನಃಪೂರ್ವಕವಾಗಿಲ್ಲ, ಕೇವಲ ತೋರಿಕೆಯ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬರುತ್ತದೆ! – ಸಂಪಾದಕರು)
ಸಂಪಾದಕೀಯ ನಿಲುವು
|
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !