ಓಡುವ (ರನ್ನಿಂಗ್) ವ್ಯಾಯಾಮದ ಪ್ರಮುಖ ಲಾಭಗಳು

ಆರೋಗ್ಯಪೂರ್ಣ ಜೀವನಕ್ಕಾಗಿ ವ್ಯಾಯಾಮ – ಭಾಗ ೨೯

ಆಧುನಿಕ ಜೀವನಶೈಲಿಯಿಂದ ಉಂಟಾಗುವ ದೈಹಿಕ ಸಮಸ್ಯೆ ಗಳಿಗೆ ‘ವ್ಯಾಯಾಮ’ ಒಂದು ಪರಿಣಾಮಕಾರಿ ಪರಿಹಾರ ವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ತ್ವಗಳು ಇಂದಿಗೂ ಅಷ್ಟೇ ಉಪಯುಕ್ತವಾಗಿದ್ದು, ನಾವು ಅವುಗಳಿಂದ ಪ್ರೇರಣೆ ಪಡೆಯಬಹುದು. ಈ ಲೇಖನಮಾಲೆಯಲ್ಲಿ ನಾವು ವ್ಯಾಯಾಮದ ಮಹತ್ವ, ವ್ಯಾಯಾಮದ ಬಗ್ಗೆ ಇರುವ ಸಂದೇಹ ನಿವಾರಣೆ, ‘ಎರ್ಗೊನಾಮಿಕ್ಸ್‌’ ತತ್ವ ಮತ್ತು ಕಾಯಿಲೆಗಳಿಗೆ ಅನುಗುಣವಾದ ಸರಿಯಾದ ವ್ಯಾಯಾಮದ ಮಾಹಿತಿಯನ್ನು ನೀಡುತ್ತೇವೆ.

 

೧. ಓಡುವ ವ್ಯಾಯಾಮವನ್ನು ಯಾರು ಮಾಡಬೇಕು ?

‘ಓಡುವ ವ್ಯಾಯಾಮವು ಅತ್ಯಂತ ಉಪಯುಕ್ತ ಮತ್ತು ಆರೋಗ್ಯದ ದೃಷ್ಟಿಯಲ್ಲಿ ತುಂಬಾ ಲಾಭದಾಯಕವಾಗಿದೆ. ಈ ವ್ಯಾಯಾಮದ ಪ್ರಕಾರಗಳು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ (ಪ್ರೌಢರಿಗೆ) ಉಪಯುಕ್ತವಾಗಿವೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಮತ್ತು ಸಾಧನಸಾಮಗ್ರಿಗಳ ಅವಶ್ಯಕತೆ ಇರುವುದಿಲ್ಲ.

೨. ಆರೋಗ್ಯದ ಸುಧಾರಣೆಯ ದೃಷ್ಟಿಯಿಂದ ಓಡುವ ವ್ಯಾಯಾಮದ ಮಹತ್ವ

ಪ್ರಸ್ತುತ ಓಡುವ ಅನೇಕ ಸ್ಪರ್ಧೆ ಅಥವಾ ‘ಮಾರೆಥಾನ್’ ಆಯೋಜಿಸಲಾಗುತ್ತದೆ. ಆದ್ದರಿಂದ ‘ಯೋಗ್ಯ ರೀತಿಯಲ್ಲಿ ಹೇಗೆ ಓಡಬೇಕು ?’, ಎಂಬುದರ ಒಂದು ಕಲೆಯೇ

 

ನಿರ್ಮಾಣ ಆಗಿದೆ; ಆದರೆ ಈ ಶಾಸ್ತ್ರವು ತಿಳಿಯದಿದ್ದರೂ, ಸರಳವಾಗಿ ಓಡಿದರೂ ಲಾಭವಾಗುತ್ತದೆ. ಆರೋಗ್ಯವನ್ನು ಸುಧಾರಿಸುವ ದೃಷ್ಟಿಯಿಂದ ಓಡುವ ವ್ಯಾಯಾಮವು ಬಹಳ ಉಚ್ಚ ಸ್ತರದ್ದಾಗಿದೆ. ಈ ವ್ಯಾಯಾಮದಿಂದ ಹೃದಯ, ಪುಪ್ಪುಸ ಮತ್ತು ದೇಹದಲ್ಲಿನ ಯಕೃತ ಮೊದಲಾದ ಇಂದ್ರಿಯಗಳ ಮೇಲೆ ತುಂಬಾ ಒಳ್ಳೆಯ ಪರಿಣಾಮವಾಗುತ್ತದೆ. ಇದರಿಂದ ಮನುಷ್ಯನು ಗಟ್ಟಿಮುಟ್ಟಾಗುತ್ತಾನೆ. ಬಹಳಷ್ಟು ಕೆಲಸ ಮಾಡಲು ಶಕ್ತಿ ನಮ್ಮ ಶರೀರಕ್ಕೆ ಬರುತ್ತದೆ. ಸ್ನಾಯುಗಳು ದಪ್ಪವಾಗುವುದಿಲ್ಲ; ಅದರ ಬದಲಿಗೆ ಗಟ್ಟಿಮುಟ್ಟಾಗುತ್ತವೆ ಮತ್ತು ಅವುಗಳಲ್ಲಿನ ಜಡತ್ವ ಕಡಿಮೆಯಾಗುತ್ತದೆ.

೩. ಆರೋಗ್ಯ ಮತ್ತು ಶರೀರಸಾಮರ್ಥ್ಯವನ್ನು ಪಡೆಯಲು ಯಾವ ರೀತಿ ಓಡಬೇಕು ?

ಓಟದ ವ್ಯಾಯಾಮದಲ್ಲಿ ೨ ಪ್ರಕಾರಗಳಿರುತ್ತವೆ. ಕಡಿಮೆ ಅಂತರದಲ್ಲಿ ಓಡಲು, ಅಂದರೆ ೧೦೦, ೨೦೦, ೪೦೦ ಯಾರ್ಡ – ೧ ಯಾರ್ಡ ಅಂದರೆ ೩ ಅಡಿ.) ಶಕ್ತಿ ಮತ್ತು ಹುರುಪು ಬೇಕಾಗುತ್ತದೆ ಮತ್ತು ಹೆಚ್ಚು ದೂರದ ಓಟಕ್ಕಾಗಿ (೧ ರಿಂದ ೨೭ ಮೈಲುಗಳ ಓಟಕ್ಕಾಗಿ – ೧ ಮೈಲು ಅಂದರೆ ೧.೬ ಕಿಲೋಮೀಟರ್) ದೇಹದ ಕ್ಷಮತೆಯ (ಶಕ್ತಿ) ಪರೀಕ್ಷೆಯಾಗುತ್ತದೆ. ‘ಆರೋಗ್ಯ ಮತ್ತು ದೇಹಸಾಮರ್ಥ್ಯವನ್ನು ಪಡೆಯಲು ಯಾವ ರೀತಿ ಓಡಬೇಕು ?’, ಎಂಬ ವಿಚಾರವನ್ನು ಇಲ್ಲಿ ಮಾಡಲಾಗಿದೆ.

೩ ಅ. ಓಡುವ ವ್ಯಾಯಾಮವನ್ನು ಹೇಗೆ ಆರಂಭಿಸಬೇಕು ? : ಕೇವಲ ವ್ಯಾಯಾಮದ ದೃಷ್ಟಿಯಿಂದ ಓಡುವ ವ್ಯಾಯಾಮ ಮಾಡುವುದಾದರೆ, ಅದಕ್ಕಾಗಿ ಓಡುವ ಕಲೆಯ ಶಿಕ್ಷಣದ ಅವಶ್ಯಕತೆ ಇಲ್ಲ. ಕೆಲವು ನಿರ್ದಿಷ್ಟ ನಿಯಮಗಳನ್ನು ಪಾಲಿಸಿದರೆ ಸಂಪೂರ್ಣ ಶರೀರಕ್ಕೆ ಅದರ ಲಾಭವು ಸಿಗುತ್ತದೆ. ಆರೋಗ್ಯದ ದೃಷ್ಟಿಯಲ್ಲಿ ಓಡುವುದಾದರೆ ನಿಧಾನವಾಗಿ ಓಡಬೇಕು. ಹೊಸದಾಗಿ ಆರಂಭಿಸುವಾಗ ಸತತವಾಗಿ ನಿಧಾನ ಓಡುವುದಕ್ಕಿಂತ ಸ್ವಲ್ಪ ಅಂತರ ವೇಗವಾಗಿ ನಡೆಯಬೇಕು, ನಂತರ ಓಡಲು ಪ್ರಾರಂಭಿಸಬೇಕು. ಸ್ವಲ್ಪ (ಉಸಿರಾಡಲು ಕಷ್ಟವೆನಿಸಿದರೆ) ಆಯಾಸವೆನಿಸಿದರೆ, ಪುನಃ ನಡೆಯಬೇಕು ಆಗ ದಮ್ಮು ಕಡಿಮೆಯಾದಂತೆ ಪುನಃ ಸ್ವಲ್ಪ ಓಡಬೇಕು. ಈ ರೀತಿ ಮಾಡಿದರೆ ಹೊಸದಾಗಿ ಓಡುವ ವ್ಯಾಯಾಮವನ್ನು ಆರಂಭಿಸಲು ಸ್ವಲ್ಪ ಸುಲಭವಾಗುತ್ತದೆ. ನಂತರ ಸ್ವಲ್ಪ ದಿನ ರೂಢಿಯಾದರೆ, ಒಂದೇ ವೇಗದಲ್ಲಿ ಓಡಬೇಕು.

೩ ಆ. ಓಡಲು ಯೋಗ್ಯ ಸ್ಥಳ : ಮನೆಯ ಅಂಗಳದಲ್ಲಿ ಓಡುವುದು, ಅಂಗಳದಲ್ಲಿ ಅಥವಾ ಮನೆಯಲ್ಲಿನ ದೊಡ್ಡ ಕೋಣೆ ಅಥವಾ ಆಕಾಡಾದಲ್ಲಿನ ಕುಸ್ತಿಯ ಮೈದಾನದಲ್ಲಿಯೂ ಓಡಬಹುದು. ಒಳಾಂಗಣಕ್ಕಿಂತ ಖಾಲಿ ಮೈದಾನದಲ್ಲಿ ಅಥವಾ ಉದ್ಯಾನದಲ್ಲಿ ಊರ ಹೊರಗೆ ಓಡಬೇಕು; ಆದರೆ ಹೊರಗೆ ಹೋಗಿ ಓಡಲು ಆಗದಿದ್ದರೆ, ಒಳಾಂಗಣದಲ್ಲಿ ಓಡುವುದೇ ಒಳ್ಳೆಯದು.

೩ ಇ. ಎಷ್ಟು ಸಮಯ ಓಡಬೇಕು ? : ಶರೀರಕ್ಕೆ ಬೆವರು ಬಂದು ದಣಿವು ಆಗುವವರೆಗೆ ಓಡಬೇಕು. ಓಟದ ವ್ಯಾಯಾಮ ಮಾಡುವುದರಿಂದ ಯಾವ ಲಾಭವಾಗುತ್ತದೆಯೋ, ಅದು ಓಡುವ ಶ್ರಮವನ್ನು ನಿಲ್ಲಿಸಿದರೂ, ಅದು ತುಂಬಾ ದಿನಗಳವರೆಗೆ ಉಳಿಯುತ್ತದೆ.

೪. ಓಡುವ ವ್ಯಾಯಾಮದಿಂದಾಗುವ ಲಾಭಗಳು

ಅ. ಓಡುವ ವ್ಯಾಯಾಮದಿಂದ ದೇಹವು ಹಗುರವಾಗಿ ತುಂಬಾ ಕೆಲಸ ಮಾಡಲು ಶಕ್ತಿ ಬರುತ್ತದೆ.

ಆ. ಕುಸ್ತಿ, ಮಲ್ಲಕಂಬ, ದಂಡ-ಬೈಠಕ ಮುಂತಾದ ಕಠಿಣ ಪ್ರಕಾರಗಳ ವ್ಯಾಯಾಮ ಮಾಡುವವರು ಸಹ ದೇಹದ ಕ್ಷಮತೆ ಮತ್ತು ಹುರುಪು ಹೆಚ್ಚಿಸಲು ಓಟದ ವ್ಯಾಯಾಮವನ್ನು ಮಾಡುತ್ತಾರೆ.

ಇ. ಶುದ್ಧ ಗಾಳಿಯಿಂದ ಪುಪ್ಪುಸಗಳು ಸ್ವಚ್ಛವಾಗಿ ರಕ್ತ ಶುದ್ಧವಾಗುತ್ತದೆ ಮತ್ತು ಸೂರ್ಯಪ್ರಕಾಶದ ಲಾಭವಾಗುತ್ತದೆ.

ಈ. ಓಡುವಾಗ ನಿರ್ದಿಷ್ಟ ರೀತಿಯ ಉಡುಪಿನ ಅವಶ್ಯಕತೆ ಇಲ್ಲ. ಇತ್ತೀಚೆಗೆ ಸಣ್ಣ ತೋಳಿನ ಶರ್ಟಗಳು ಮತ್ತು ಸಣ್ಣ ಚಡ್ಡಿಗಳು ಪ್ರಚಲಿತವಾಗಿವೆ ಮತ್ತು ಈ ಬಟ್ಟೆಗಳು ಅನುಕೂಲಕರವಾಗಿವೆ. ಕೇವಲ ಧೋತರವನ್ನು ಉಟ್ಟು ಗಂಟು ಹಾಕಿ ಓಡಬಹುದು. ಓಡುವಾಗ ಮೈಮೇಲಿನ ಬಟ್ಟೆಗಳು ಸಡಿಲವಾಗಿರಬೇಕು.

೫. ಓಡುವ ವ್ಯಾಯಾಮದ ಸಾಮಾನ್ಯ ಸೂಚನೆಗಳು

ಅ. ಓಡುವುದು ಮುಗಿದ ನಂತರ ಮೈಮೇಲೆ ಧೋತರವನ್ನು ಹೊದ್ದುಕೊಳ್ಳಬೇಕು ಅಥವಾ ಮೈಮೇಲೆ ಜಾಕೆಟನ್ನು ಧರಿಸಬೇಕು, ಅಂದರೆ ದೇಹದಲ್ಲಿನ ಉಷ್ಣತೆ ಶಾಂತವಾಗುವಾಗ ಮೈಗೆ ಗಾಳಿ ತಗಲಿ ತೊಂದರೆಯಾಗುವುದಿಲ್ಲ.

ಆ. ಓಡುವಾಗ ಎದೆಯನ್ನು ಮುಂದೆ ಮಾಡಿ ಕೈಗಳನ್ನು ಮೊಣಕೈಯಲ್ಲಿ ಬಗ್ಗಿಸಿ ದೇಹದ ಬದಿಗೆ ಇಟ್ಟುಕೊಂಡು ಓಡಬೇಕು.

ಇ. ಒಳ್ಳೆಯ ರೂಢಿಯಾದರೆ, ಮಧ್ಯ ಮಧ್ಯದಲ್ಲಿ ಓಡುವ ವೇಗವನ್ನು ಹೆಚ್ಚಿಸಬೇಕು ಮತ್ತು ಪುನಃ ಕಡಿಮೆ ಮಾಡಬೇಕು, ಅಂದರೆ ಕ್ಷಮತೆ ಹೆಚ್ಚಾಗುತ್ತದೆ ಮತ್ತು ಮೈಯಲ್ಲಿ ಉತ್ಸಾಹ ಬರುತ್ತದೆ. ಈ ವ್ಯಾಯಾಮವು ಪುರುಷರಂತೆ ಮಹಿಳೆಯರಿಗಾಗಿಯೂ ಉಪಯುಕ್ತವಾಗಿದೆ.

ಈ. ರಸ್ತೆಯಲ್ಲಿ ಓಡುವಾಗ ನೋಡುವವರು ನಗುವರು; ಎಂದು ಓಡುವುದನ್ನು ನಿಲ್ಲಿಸಬೇಡಿ. ನಾವು ನಮ್ಮ ದೇಹಕ್ಕಾಗಿ (ಆರೋಗ್ಯಕ್ಕಾಗಿ) ಓಡುತ್ತೇವೆ.

ಉ. ಓಡುವಾಗ ರಸ್ತೆ ಸರಿಯಿಲ್ಲದಿದ್ದರೆ, ಬರಿಗಾಲಿನಲ್ಲಿ ಓಡುವುದು ಸರಿಯಲ್ಲ. ಕಾಲುಗಳಲ್ಲಿ ಬಟ್ಟೆಯ ಸಡಿಲ ಬೂಟುಗಳನ್ನು ಹಾಕಬೇಕು. ಚರ್ಮದ ಬೂಟುಗಳಿದ್ದರೂ ಪರವಾಗಿಲ್ಲ; ಆದರೆ ಅವುಗಳಲ್ಲಿ ಕಾಲ್ಬೆರಳುಗಳು ಒತ್ತಡಲ್ಪಡದಂತೆ ಇರಬೇಕು.

ಊ. ವಯಸ್ಸಾದವರು, ಗಂಭೀರ ರೋಗವಿರುವವರು, ಹಾಗೆಯೇ ಅನೇಕ ದಿನಗಳಿಂದ ವ್ಯಾಯಾಮವನ್ನು ಮಾಡದಿರುವವರು ವೈದ್ಯಕೀಯ ಸಲಹೆಯಿಂದಲೇ ಓಡುವ ವ್ಯಾಯಾಮವನ್ನು ಮಾಡಬೇಕು.’

(ಆಧಾರ : ಶಂ.ಧೋಂ. ವಿದ್ವಾಂಸ, ಸಂಪಾದಕರು, ಮಾಸಿಕ ‘ವ್ಯಾಯಾಮ’, ೧೫.೨.೧೯೫೭)