ಆಸ್ಪತ್ರೆಯ ಸಿಬ್ಬಂದಿ ಕ್ವಾರಂಟೈನ್ ನಲ್ಲಿ

ತಿರುವನಂತಪುರಂ (ಕೇರಳಮ್‌ಮ್) – ಕೇರಳಮ್‌ದಲ್ಲಿ ಈ ವರ್ಷ ನಿಪಾ ವೈರಸ್ ನ ಮೊದಲ ರೋಗಿ ಪತ್ತೆಯಾಗಿದ್ದಾನೆ. ಈ ರೋಗಿ 43 ವರ್ಷದವನಾಗಿದ್ದು, ಕೋಝಿಕ್ಕೋಡ ಇಲ್ಲಿನ ನಿವಾಸಿಯಾಗಿದ್ದಾನೆ. ಅವನ ತಪಾಸಣಾ ವರದಿ ಪಾಸಿಟಿವ್ ಬಂದ ನಂತರ ಸರಕಾರ ಇಡೀ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿದೆ.
ಪ್ರಾರಂಭದಲ್ಲಿ ಈ ರೋಗಿಗೆ ಸಣ್ಣ ಜ್ವರ ಬಂದಿದ್ದರಿಂದ ಅವನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವನನ್ನು ‘ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು’ ಆಸ್ಪತ್ರೆಗೆ ಕಳುಹಿಸಲಾಯಿತು. ಅವನ ಪರಿಸ್ಥಿತಿ ಗಂಭೀರವಾಗಿದ್ದು ಸಧ್ಯಕ್ಕೆ ‘ವೆಂಟಿಲೇಟರ್’ನಲ್ಲಿದ್ದಾನೆ. ಈ ಬಗ್ಗೆ ಆರೋಗ್ಯ ಸಚಿವ ಕೆ. ಮುರಳೀಧರನ್ ಮಾತನಾಡಿ, ”ರೋಗಿಯು ಅನೇಕ ಜನರ ಸಂಪರ್ಕಕ್ಕೆ ಬಂದಿದ್ದನು. ಆಸ್ಪತ್ರೆಯ ಸಿಬ್ಬಂದಿಯೂ ಆತನ ಸಂಪರ್ಕಕ್ಕೆ ಬಂದಿದ್ದರು. ಹಾಗಾಗಿ ಈ ಸಿಬ್ಬಂದಿ ಸೇರಿದಂತೆ ಹಲವರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಆದಾಗ್ಯೂ ಯಾರೂ ಭಯಪಡುವ ಅಗತ್ಯವಿಲ್ಲ” ಎಂದು ಹೇಳಿದರು.
2018 ರಿಂದ ಕೇರಳಮ್‌ದಲ್ಲಿ ಆರನೇ ಬಾರಿಗೆ ಈ ಸೋಂಕು ಹರಡಿದೆ. 2024 ರಲ್ಲಿ ಇದರ 2 ರೋಗಿಗಳು ಪತ್ತೆಯಾಗಿದ್ದರು. ಅವರಲ್ಲಿ ಒಬ್ಬರು ಸಾವನ್ನಪ್ಪಿದ್ದರು. ನಿಪಾ ಸೋಂಕು ಮುಖ್ಯವಾಗಿ ‘ಫ್ರೂಟ್ ಬ್ಯಾಟ್ಸ್’ (ಹಣ್ಣು ತಿನ್ನುವ ಬಾವಲಿಗಳು) ನಿಂದ ಹರಡುತ್ತದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ