ಇಸ್ಲಾಂನಲ್ಲಿ ಕೇವಲ ಒಬ್ಬ ದೇವರ ಉಪಾಸನೆಗೆ ಮಾತ್ರ ಅನುಮತಿ ಇದೆ! : Zia ur Rahman Barq

ನವದೆಹಲಿ – ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಜಿಯಾವುರ್ರಹಮಾನ್ ಬರ್ಕ್ ಅವರು, “ನಾನು ‘ವಂದೇ ಮಾತರಂ’ ಹಾಡುವುದಿಲ್ಲ; ಏಕೆಂದರೆ ಅದು ಇಸ್ಲಾಂ ಧರ್ಮದ ವಿರೋಧಿಯಾಗಿದೆ. ಇಸ್ಲಾಂನಲ್ಲಿ ಕೇವಲ ಒಬ್ಬ ದೇವರನ್ನು ಮಾತ್ರ ಆರಾಧಿಸಲು ಅನುಮತಿ ಇದೆ, ಆದ್ದರಿಂದ ಇತರ ಯಾವುದೇ ಪ್ರತಿಮೆಯ ಮುಂದೆ ತಲೆಬಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಬರ್ಕ್ ಅವರು ಮಾತು ಮುಂದುವರೆಸಿ, ‘ವಂದೇ ಮಾತರಂ’ ಹಾಡದಿರುವ ಈ ನಿರ್ಧಾರ ಕೇವಲ ವೈಯಕ್ತಿಕವಲ್ಲ, ಬದಲಿಗೆ ನಮ್ಮ ಇಡೀ ಕುಟುಂಬದ ನಿಲುವು ಇದೇ ಆಗಿದೆ. ನನ್ನ ಅಜ್ಜ ಕೂಡ ಈ ಗೀತೆಯನ್ನು ಯಾವಾಗಲೂ ವಿರೋಧಿಸುತ್ತಿದ್ದರು. ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷದ ಸರಕಾರದ ಅವಧಿಯಲ್ಲಿ, ವಿಧಾನಸಭೆ ಅಧಿವೇಶನದಲ್ಲಿ ‘ವಂದೇ ಮಾತರಂ’ ಮೊಳಗುತ್ತಿದ್ದಂತೆಯೇ ಅಜ್ಜ ಶಫೀಕುರ್ರಹಮಾನ್ ಅವರು ಸಭೆಯಿಂದ ಹೊರ ನಡೆದಿದ್ದರು.
ಸರ್ವೋಚ್ಚ ನ್ಯಾಯಾಲಯದ ಉದಾಹರಣೆ
ಸಂಸದ ಬರ್ಕ್ ಅವರು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉದಾಹರಣೆ ನೀಡುತ್ತಾ, “ಯಾರನ್ನೂ ‘ವಂದೇ ಮಾತರಂ’ ಹೇಳಲು ಅಥವಾ ಹಾಡಲು ಬಲವಂತ ಮಾಡುವಂತಿಲ್ಲ” ಎಂದು ಹೇಳಿದೆ. ಅದೇ ಸಮಯದಲ್ಲಿ, ಅವರು ರಾಷ್ಟ್ರಗೀತೆ ಮತ್ತು ರಾಷ್ಟ್ರಗಾನಗಳ ನಡುವೆ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ. ಅವರ ಪ್ರಕಾರ, ರಾಷ್ಟ್ರಗಾನದ ಪದಗಳಲ್ಲಿ ಯಾವುದೇ ಆಕ್ಷೇಪಾರ್ಹ ಅಂಶವಿಲ್ಲ; ಆದ್ದರಿಂದ ಅದನ್ನು ಶಾಲೆಗಳು ಮತ್ತು ಮದರಸಾಗಳಲ್ಲಿ ಹಾಡಲಾಗುತ್ತದೆ.
ಸಂಪಾದಕೀಯ ನಿಲುವುಸಮಾಜವಾದಿ ಪಕ್ಷವು ‘ಇಸ್ಲಾಮವಾದಿ ಪಕ್ಷ’ ವಾಗಿರುವುದರಿಂದ, ಅದರ ಮುಖ್ಯಸ್ಥರಿಂದ ಹಿಡಿದು ಎಲ್ಲರೂ ‘ವಂದೇ ಮಾತರಂ’ಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಇಂತಹ ಪಕ್ಷಗಳನ್ನು ನಿಷೇಧಿಸುವ ಕಾನೂನು ಈಗ ಆವಶ್ಯಕವಾಗಿದೆ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ