20 ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸ್

ಫತೇಪುರ್ (ಉತ್ತರ ಪ್ರದೇಶ) – ಫತೇಪುರ್ ಜಿಲ್ಲೆಯ ಅಬು ನಗರದಲ್ಲಿರುವ ನವಾಬ್ ಅಬ್ದುಲ್ ಸಮದ್ ಗೋರಿಯನ್ನು ದೇವಸ್ಥಾನವೆಂದು ಹೇಳಿ, ದೇವದೀಪಾವಳಿಯ ದಿನ ಕೆಲವು ಹಿಂದೂ ಮಹಿಳೆಯರು ಅಲ್ಲಿ ಪೂಜೆ ಮಾಡಲು ಪ್ರಯತ್ನಿಸಿದರು. ಈ ಮಾಹಿತಿ ತಿಳಿದ ಕೂಡಲೇ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಹಿಳೆಯರನ್ನು ತಡೆಯಲು ಯತ್ನಿಸಿದರು; ಆದರೆ, ಮಹಿಳೆಯರು ಸಿಟ್ಟಿಗೆದ್ದು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು.
🛕 On Dev Diwali, a group of Hindu women performed puja at the maqbara of Nawab Abdul Samad in Fatehpur, UP, claiming it to be an ancient Hindu temple.
🚨 Police intervened to stop the ritual; women resisted & raised slogans.
⚖️ FIR filed against 20 women.
📜 Locals now demand… pic.twitter.com/ZouYcbSzTB
— Sanatan Prabhat (@SanatanPrabhat) November 7, 2025
ಗೋರಿಯನ್ನು ದೇವಸ್ಥಾನ ಎಂದು ಹೇಳುತ್ತಾ ಮಹಿಳೆಯರು ಆರತಿ ಮಾಡಲು ಸಿದ್ಧತೆ ನಡೆಸಿದರು ಮತ್ತು ಅಲ್ಲಿದ್ದ ಕೆಲವರು ಘೋಷಣೆಗಳನ್ನು ಕೂಗಿದ್ದರಿಂದ ಆ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಅವರನ್ನು ತಡೆಯಲು ಯತ್ನಿಸಿದಾಗ, ಮಹಿಳೆಯರು ಘೋಷಣೆಗಳನ್ನು ಕೂಗುತ್ತಾ ವಿರೋಧಿಸಿದರು ಮತ್ತು ಕೆಲವರು ಪೊಲೀಸರನ್ನು ತಳ್ಳಲು ಸಹ ಪ್ರಯತ್ನಿಸಿದರು. ಈ ಎಲ್ಲಾ ಬೆಳವಣಿಗೆಗಳ ನಂತರ ಪರಿಸ್ಥಿತಿ ಕೈಮೀರಿ ಹೋಗಬಾರದೆಂದು ಪೊಲೀಸರು ಕ್ರಮ ಕೈಗೊಂಡು ಒಟ್ಟು 20 ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಂಪಾದಕೀಯ ನಿಲುವುಈ ಗೋರಿಯ ಜಾಗದಲ್ಲಿ ಹಿಂದೂ ದೇವಸ್ಥಾನವಿದೆ ಎಂದು ಹಿಂದೂಗಳು ವಾದಿಸುತ್ತಿದ್ದರೆ, ಪುರಾತತ್ವ ಇಲಾಖೆಯು ಸಮೀಕ್ಷೆ ನಡೆಸಿ ಸತ್ಯವನ್ನು ಹೊರತರಬೇಕು! |
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಶ್ರೀರಾಮನ ಮೇಲಿನ ಆಘಾತ !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena