‘ವಂದೇ ಮಾತರಂ’ ರಾಷ್ಟ್ರಗೀತೆಗೆ 150 ವರ್ಷಗಳು ಪೂರ್ಣ ವಿಶೇಷ ಸಂಪಾದಕೀಯ…!

ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳಿಗೆ ಆಂಗ್ಲರ ವಿರುದ್ಧ ಹೋರಾಡಲು ಶಕ್ತಿ ನೀಡಿದ ಮಹಾಮಂತ್ರವೇ ‘ವಂದೇ ಮಾತರಂ’ ಆಗಿದೆ. ಸಮರ್ಥಕರು, ವಿರೋಧಿಗಳು ಮತ್ತು ತಟಸ್ಥರು ಎಲ್ಲರಿಗೂ ‘ವಂದೇ ಮಾತರಂ’ ಮಂತ್ರದ ಅರಿವಿದೆ. ಹಾಗೆ ನೋಡಿದರೆ, ಈ ಪದದ ಅರ್ಥ, ‘ನಾನು ಮಾತೆಗೆ ವಂದಿಸುತ್ತೇನೆ’ ಎಂಬುದಾಗಿದೆ; ಆದರೆ ಈ ಅರ್ಥವನ್ನು ಕೇವಲ ಉಚ್ಚರಿಸುವುದು ಬೇರೆ, ಹಾಗೂ ‘ವಂದೇ ಮಾತರಂ’ ಎಂದು ಘೋಷಿಸುವುದು ಬೇರೆ! ‘ಈ ಘೋಷಣೆಯನ್ನು ಮಾಡುತ್ತಿದ್ದಂತೆ ಇಂದಿಗೂ ರಾಷ್ಟ್ರಾಭಿಮಾನಿಗಳ ಮೈಮೇಲೆ ರೋಮಾಂಚನ ಉಂಟಾಗುತ್ತದೆ, ಆದರೆ ದೇಶ ವಿರೋಧಿಗಳು, ಮತಾಂಧರು, ಸಾಮ್ಯವಾದಿಗಳು ಮತ್ತು ತಥಾಕಥಿತ ಪ್ರಗತಿಪರರ ಕಾಲಡಿಯಲ್ಲಿನ ಭೂಮಿ ಕುಸಿಯುತ್ತದೆ ಮತ್ತು ಅವರಲ್ಲಿನ ಶತ್ರುತ್ವವು ಜಾಗೃತವಾಗುತ್ತದೆ’, ಇದೇ ಈ ಮಂತ್ರದ ಸಾಮರ್ಥ್ಯವಾಗಿದೆ.
‘ಹರ ಹರ ಮಹಾದೇವ’ ಎಂಬ ಘೋಷಣೆಯನ್ನು ಕೇಳಿದರೂ ಯುದ್ಧರಂಗಕ್ಕೆ ಇಳಿದಂತಾಗುತ್ತದೆ! ‘ವಂದೇ ಮಾತರಂ’ ಘೋಷಣೆಯೊಂದಿಗೆ ಈ ರಾಷ್ಟ್ರಗೀತೆಯನ್ನು ಹಾಡಿದರೆ ಭಾರತಮಾತೆ ಸಾಕ್ಷಾತ್ ಎದುರಿಗೆ ನಿಲ್ಲುತ್ತಾಳೆ; ಆದರೆ ಇದೇ ಘೋಷಣೆಯನ್ನು ಕೇಳಿ ಮತಾಂಧರು ಕೆರಳುತ್ತಾರೆ. ಇಂದು ಇದೇ ಘೋಷಣೆಯು ರಾಷ್ಟ್ರಭಕ್ತರಿಗೆ ಇಡೀ ವಿಶ್ವದಲ್ಲಿ ಹಿಂದೂ ರಾಷ್ಟ್ರ, ಅಂದರೆ ರಾಮರಾಜ್ಯವನ್ನು ಸ್ಥಾಪಿಸುವ ಪ್ರೇರಣೆಯನ್ನು ನೀಡುತ್ತಿದೆ.

ಇಂದಿನ ಜಾಗತಿಕ ಮಟ್ಟದ ಅಶಾಂತಿಯ ಹಿನ್ನೆಲೆಯಲ್ಲಿ, ಬಂಕಿಮಚಂದ್ರರ ‘ವಂದೇ ಮಾತರಂ’ ಶಬ್ದಗಳು ಮನಸ್ಸಿಗೆ ಉಲ್ಲಾಸ ನೀಡುವ ಮತ್ತು ಶತ್ರುಗಳಿಗೆ ನಡುಕ ಹುಟ್ಟಿಸುವಂತಿವೆ; ಆದ್ದರಿಂದಲೇ ಯಾರಿಗೆ ಈ ಭಾರತ ಭೂಮಿಯೊಂದಿಗೆ ಸಂಬಂಧವಿಲ್ಲವೋ, ಅಂತಹವರು ಈ ರಾಷ್ಟ್ರಗೀತೆಯನ್ನು ಹಾಡಲು ವಿರೋಧಿಸುತ್ತಾರೆ. ಇಂತಹ ಮತಾಂಧ ಪ್ರವೃತ್ತಿಗಳಿಗೆ ಸರಕಾರವು ಅವರ ಸ್ಥಾನವನ್ನು ತೋರಿಸಿಕೊಡಬೇಕು, ಇದು ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ, ಇಲ್ಲವಾದರೆ ಬರುವ ಕಾಲವೇ ಇಂತಹ ದುಷ್ಪ್ರವೃತ್ತಿಗಳನ್ನು ಸರಿದಾರಿಗೆ ತರುತ್ತದೆ. ಆದರೆ, ಮತ್ತೊಮ್ಮೆ ಇಡೀ ವಿಶ್ವದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕಾದರೆ, ರಾಷ್ಟ್ರಪ್ರೇಮಿಗಳಿಗೆ ‘ವಂದೇ ಮಾತರಂ’ನ ಅವಶ್ಯಕತೆ ಇದೆ, ಎಂಬುದು ಖಚಿತವಾಗಿದೆ.
ಸ್ವದೇಶವೇ ಸರ್ವಸ್ವ !
ಗಾಂಧಿವಾದದ ಮುಖವಾಡ ಕಳಚಿದ ಭಾರತ !
‘ಸ್ಮಾರ್ಟ್’ ಮತ್ತು ಅಭೇದ್ಯ ಭಾರತ ?
ಜಿರಳೆ ಮತ್ತು ಬೋಧನೆ : ಸಂಪಾದಕೀಯ
ಆರ್ಥಿಕ ಶಿಸ್ತು
ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !