೧೩ ನವೆಂಬರ್ ೨೦೨೫ ರಂದು ಕಾರ್ತಿಕ ಕೃಷ್ಣ ನವಮಿಯಂದು ಪ.ಪೂ. ಭಕ್ತರಾಜ ಮಹಾರಾಜರ ಮಹಾನಿರ್ವಾಣೋತ್ಸವ ನಿಮಿತ್ತ…..

೧. ಪ.ಪೂ. ಭಕ್ತರಾಜ ಮಹಾರಾಜರು (ಪ.ಪೂ. ಬಾಬಾ) ಬರೆದಿರುವ ಮತ್ತು ಹುಡುಕಿದರೂ ಯಾರಿಗೂ ಸಿಗದಿರುವ ಗ್ರಂಥವನ್ನು ಪ.ಪೂ. ಬಾಬಾರವರು ಆಶ್ರಮದಿಂದ ಹುಡುಕಿ ತರುವುದು
೧ ಅ. ಪ.ಪೂ. ಬಾಬಾರವರು ಬರೆದಿರುವ ‘ಮಿರಜದಲ್ಲಿನ ಸಂತರಾದ ಪ.ಪೂ. ಗ್ಯಾನಗಿರಿ ಮಹಾರಾಜರ ಚರಿತ್ರೆಯನ್ನು ಓದೋಣ’, ಎಂದೆನಿಸುವುದು ಮತ್ತು ಸಾಂಗಲಿ ಮತ್ತು ಮಿರಜದಲ್ಲಿ ಪ್ರತ್ಯಕ್ಷ ಹೋಗಿ ಹುಡುಕಿದರೂ ಸಿಗದಿರುವುದು : ‘ಈ ಹಿಂದೆ ‘ಪ.ಪೂ. ಬಾಬಾರವರು ಮಿರಜನ ಸಂತರಾದ ಪ.ಪೂ. ಗ್ಯಾನಗಿರಿ ಮಹಾರಾಜರ ಚರಿತ್ರೆಯನ್ನು ಬರೆದಿದ್ದಾರೆ’, ಎಂದು ನನಗೆ ತಿಳಿಯಿತು. ಆಗ ನನಗೆ ‘ನಾನು ಅದನ್ನು ಓದಬೇಕು’, ಎಂದು ಅನಿಸಿತು. ಒಂದು ದಿನ ಆ ಪುಸ್ತಕವನ್ನು ಮಧ್ಯಾಹ್ನದಿಂದ ರಾತ್ರಿಯ ವರೆಗೆ ಪೂರ್ಣ ಸಮಯ ಸಾಂಗಲಿ ಮತ್ತು ಮಿರಜಗೆ ಹೋಗಿ ಹುಡುಕಿದರೂ ಅದು ಸಿಗಲಿಲ್ಲ.
೧ ಆ. ಮಿರಜನ ಪ.ಪೂ. ಗ್ಯಾನಗಿರಿ ಮಹಾರಾಜರ ಮಠಕ್ಕೆ ಹೋದಾಗ ಅಲ್ಲಿನ ಓರ್ವ ಸನ್ಯಾಸಿಯು ಅವರ ಬಳಿಯಲ್ಲಿನ ಪುಸ್ತಕದ ಪ್ರತಿಯನ್ನು ತೋರಿಸುವುದು; ಆದರೆ ಅವರ ಬಳಿ ಅದೊಂದೇ ಪ್ರತಿ ಇರುವುದರಿಂದ ಅವರು ‘ಅದನ್ನು ಕೊಡುವುದಿಲ್ಲ’, ಎಂದು ಹೇಳುವುದು : ನಂತರ ನಾವು ಮಿರಜದಲ್ಲಿನ ಪ.ಪೂ. ಗ್ಯಾನಗಿರಿ ಮಹಾರಾಜರ ಮಠಕ್ಕೆ ಹೋದೆವು. ಅಲ್ಲಿ ನಮಗೆ ಓರ್ವ ಯುವಕನು ಭೇಟಿಯಾದನು. ನಾವು ಅವನಿಗೆ ಪುಸ್ತಕದ ಬಗ್ಗೆ ಕೇಳಿದಾಗ ಅವನು, ”ಈ ಮಠದಲ್ಲಿನ ಆ ಸನ್ಯಾಸಿಯು ಇದೇ ಓಣಿಯಲ್ಲಿರುತ್ತಾರೆ. ಅವರು ವೃದ್ಧರಿದ್ದಾರೆ. ಅವರಿಗೆ ಗೊತ್ತಿರಬಹುದು’’ ಎಂದು ಹೇಳಿದನು. ನಾವು ಆ ಸನ್ಯಾಸಿಯ ಮನೆಗೆ ಹೋದೆವು. ಅವರಿಗೆ ಪುಸ್ತಕದ ಬಗ್ಗೆ ಕೇಳಿದೆವು. ಅವರು, ”ಪುಸ್ತಕ ಹೀಗಿದೆ. ನಾನು ಓದಿದ್ದೇನೆ; ಆದರೆ ಈಗ ಅದು ಮಾರಾಟಕ್ಕೂ ಇಲ್ಲ ಮತ್ತು ಯಾರ ಬಳಿ ಇದೆ, ಎಂದು ಹೇಳಲಿಕ್ಕೂ ಸಾಧ್ಯವಿಲ್ಲ. ನನ್ನ ಬಳಿಯಲ್ಲಿ ಆ ಪುಸ್ತಕದ ಛಾಯಾಚಿತ್ರದ ಪ್ರತಿ ಇದೆ’’ ಎಂದು ಹೇಳಿದರು. ಅವರು ಮಹಡಿಯ ಮೇಲೆ ಹೋಗಿ ಆ ಛಾಯಾಚಿತ್ರದ ಪ್ರತಿಯನ್ನು ತಂದು ತೋರಿಸಿದರು. ಅದನ್ನು ನೋಡಿದ ನಂತರ ನಾನು ಅವರಿಗೆ, ”ನೀವು ಎರಡು ದಿನದ ಮಟ್ಟಿಗೆ ಈ ಪುಸ್ತಕವನ್ನು ನನಗೆ ಕೊಡುತ್ತೀರಾ ?’’ ಎಂದು ಕೇಳಿದೆನು. ನಾವು ಅಪರಿಚಿತರಾಗಿರುವುದರಿಂದ ಅವರು, ‘ನ್ಯಾಸದ ಬಳಿ ಈಗ ಇದೊಂದೇ ಪುಸ್ತಕವಿದೆ. ನಾನು ಅದನ್ನು ಕೊಡಲಾರೆನು’’ ಎಂದು ಹೇಳಿದರು.
೧ ಇ. ಪ.ಪೂ. ಬಾಬಾರವರು ಭಕ್ತರಿಗೆ ಭಕ್ತವಾತ್ಸಲ್ಯ ಆಶ್ರಮದಲ್ಲಿರುವ ಪುಸ್ತಕವನ್ನು ತರಲು ಹೇಳಿದ ನಂತರ ಭಕ್ತರಿಗೆ ಅದು ಸಿಗದಿರುವುದು ಮತ್ತು ಪ.ಪೂ. ಬಾಬಾರವರು ಹೇಳಿದ ಜಾಗದಲ್ಲಿ ಆ ಪುಸ್ತಕ ಸಿಗುವುದು : ಕೆಲವು ದಿನಗಳ ನಂತರ ನಾನು ಪ.ಪೂ. ಬಾಬಾರವರಿಗೆ ದೂರವಾಣಿ ಮಾಡಿದೆನು ಮತ್ತು ಅವರಿಗೆ ಆ ಪುಸ್ತಕದ ಬಗ್ಗೆ ಹೇಳಿದೆನು. ಮುಂದೆ ಕೆಲವು ವಾರಗಳ ನಂತರ ಪ.ಪೂ. ಬಾಬಾರವರು ಈಶ್ವರಪುರಕ್ಕೆ ಬಂದರು. ನಾವು ಅವರ ಬಳಿ ದರ್ಶನಕ್ಕೆ ಹೋದಾಗ ಅವರು ಓರ್ವ ಭಕ್ತನಿಗೆ, ”ಡಾಕ್ಟರಿಗಾಗಿ ತಂದಿರುವ ಪುಸ್ತಕವನ್ನು ಅವರಿಗೆ ತಂದುಕೊಡು’’ ಎಂದು ಹೇಳಿದರು. ಆ ಭಕ್ತನಿಗೆ ಆ ಪುಸ್ತಕವು ಸಿಗಲಿಲ್ಲ. ಆಗ ಪ.ಪೂ. ಬಾಬಾರವರೇ ಅವರಿಗೆ ‘ಪುಸ್ತಕವು ವಾಹನದಲ್ಲಿ ಎಲ್ಲಿದೆ’, ಎಂಬುದನ್ನು ಹೇಳಿದರು. ಆ ಭಕ್ತನು ನನಗೆ ಪುಸ್ತಕವನ್ನು ತಂದುಕೊಟ್ಟನು ಮತ್ತು ಅವರು, ”ನಾವು ಈ ಪುಸ್ತಕವನ್ನು ಎಂದಿಗೂ ನೋಡಿರಲಿಲ್ಲ. ಕೇವಲ ಪ.ಪೂ. ಬಾಬಾರವರಿಗೆ ಮಾತ್ರ ಗೊತ್ತಿತ್ತು.
ನೀವು ದೂರವಾಣಿ ಮಾಡಿದ ನಂತರ ನಾವು ಭಕ್ತವಾತ್ಸಲ್ಯ ಆಶ್ರಮದಲ್ಲಿ ಈ ಪುಸ್ತಕವನ್ನು ತುಂಬಾ ಹುಡುಕಿದೆವು. ಕೊನೆಗೆ ಪ.ಪೂ. ಬಾಬಾರವರೇ ನಮಗೆ ‘ಅದು ಎಲ್ಲಿದೆ ?’, ಎಂಬುದನ್ನು ಹೇಳಿದರು ಮತ್ತು ಅಲ್ಲಿಯೇ ಆ ಪುಸ್ತಕ ನಮಗೆ ಸಿಕ್ಕಿತು. ಆಶ್ರಮದಲ್ಲಿ ಈ ಪುಸ್ತಕದ ಒಂದೇ ಪ್ರತಿ ಇತ್ತು’’ ಎಂದು ಹೇಳಿದರು. ನಾನು ಅಚ್ಚರಿಗೊಂಡೆನು. ಆ ಪುಸ್ತಕವು ಒಳ್ಳೆಯ ಸ್ಥಿತಿಯಲ್ಲಿತ್ತು. ಪುಸ್ತಕದ ಎಲ್ಲ ಪುಟಗಳು ಸರಿಯಾಗಿದ್ದವು.
ನಂತರ ಆ ಪುಸ್ತಕವನ್ನು ಸನಾತನ ಸಂಸ್ಥೆಯ ಸಂಗ್ರಹದಲ್ಲಿ ಸೇರಿಸಿದೆವು. ಇದರ ಒಂದು ಮೋಜಿನ ಸಂಗತಿ ಎಂದರೆ ಆ ಪುಸ್ತಕದ ಲೇಖಕರು ‘ಪ.ಪೂ. ಭಕ್ತರಾಜ ಮಹಾರಾಜ’, ಎಂದು ಮುದ್ರಿಸಿದ್ದರೂ, ‘ಅದರಲ್ಲಿನ ಬಹಳಷ್ಟು ಬರವಣಿಗೆ ಪ.ಪೂ. ಝುರಳೆ ಮಹಾರಾಜರು ಬರೆದಿದ್ದರು’, ಎಂದು ನನಗೆ ಪ.ಪೂ. ಡಾಕ್ಟರರಿಂದ ತಿಳಿಯಿತು. ಅದರಲ್ಲಿ ಪ.ಪೂ. ಝುರಳೆ ಮಹಾರಾಜರ ಮನೋಗತವಿದ್ದರೂ, ಲೇಖಕರೆಂದು ಪ.ಪೂ. ಬಾಬಾರವರ ಹೆಸರು ಇದೆ.

೨. ೨೫ ದಿನ ವ್ಯವಸಾಯವನ್ನು ನಿಲ್ಲಿಸಿ ಪ.ಪೂ. ಬಾಬಾರವರ ಅಮೃತಮಹೋತ್ಸವಕ್ಕೆ ಹೋಗಿ ಬಂದನಂತರ ಬ್ಯಾಂಕಿನಲ್ಲಿನ ಓರ್ವ ಸಿಬ್ಬಂದಿಯು ಇಂದೂರಿಗೆ ಹೋಗದಿದ್ದರೂ ‘ಪ.ಪೂ. ಬಾಬಾರಲ್ಲಿ ಅವರಿಗೆ ನನಗಿಂತ ಹೆಚ್ಚು ಶ್ರದ್ಧೆಯಿದೆ’, ಎಂದು ಗಮನಕ್ಕೆ ಬರುವುದು
ನಾವು ಸುಮಾರು ೨೫ ದಿನಗಳ ಕಾಲ ಪ.ಪೂ. ಬಾಬಾರವರ ಅಮೃತಮಹೋತ್ಸವಕ್ಕಾಗಿ ವ್ಯವಸಾಯವನ್ನು ನಿಲ್ಲಿಸಿ ಇಂದೂರಿಗೆ ಹೋಗಿದ್ದೆವು. ಇಂದೂರಿನಿಂದ ಬಂದನಂತರ ನಾನು ಕೆಲವೊಂದು ಕೆಲಸಕ್ಕಾಗಿ ಬ್ಯಾಂಕಿಗೆ ಹೋಗಿದ್ದೆನು. ಆಗ ಅಲ್ಲಿನ ಓರ್ವ ಸಿಬ್ಬಂದಿಯು ನನಗೆ, ”ಇಷ್ಟು ದಿನ ಕಾಣಿಸಲಿಲ್ಲ ?’’ ಎಂದು ಹೇಳಿದರು. ಇಷ್ಟು ವರ್ಷಗಳಲ್ಲಿ ನಮ್ಮ ಮಾತುಕತೆಯೇ ನಡೆಯಲಿಲ್ಲ. ಅವರು ಇತರರೊಂದಿಗೆ ಅಗತ್ಯವಿದ್ದಷ್ಟೇ ಮಾತನಾಡುತ್ತಿದ್ದರು. ನಾನು, ”ಇಂದೂರಿನಲ್ಲಿ ನಮ್ಮ ಗುರುಗಳ ಅಮೃತಮಹೋತ್ಸವ ಇತ್ತು. ಅಲ್ಲಿಗೆ ಹೋಗಿದ್ದೆನು’’ ಎಂದು ಹೇಳಿದೆನು. ಅವರು, ”ಯಾರು ನಿಮ್ಮ ಗುರುಗಳು ?’’ ಎಂದು ಕೇಳಿದರು. ನಾನು ಅವರಿಗೆ ‘ಪ.ಪೂ. ಭಕ್ತರಾಜ ಮಹಾರಾಜರು’, ಎಂದು ಹೇಳಿದೆನು. ‘ಪ.ಪೂ. ಭಕ್ತರಾಜ ಮಹಾರಾಜರು’ ಎಂಬ ಹೆಸರನ್ನು ಕೇಳಿದ ಕೂಡಲೇ ಆ ಸಿಬ್ಬಂದಿಯು ಕೈಯಲ್ಲಿನ ಪೆನ್ನನ್ನು ಕೆಳಗಿಟ್ಟು ತಕ್ಷಣ ನಿಂತುಕೊಂಡನು ಮತ್ತು ಕೈ ಜೋಡಿಸಿ, ”ಭಕ್ತರಾಜ ಮಹಾರಾಜರೆಂದರೆ ಸಾಕ್ಷಾತ್ ದತ್ತನ ಅವತಾರ !’’ ಎಂದು ಹೇಳಿದನು. ನನಗೆ ತುಂಬಾ ಆಶ್ಚರ್ಯವಾಯಿತು. ಆ ಸಮಯದಲ್ಲಿ ನನಗೆ ‘ನಾನು ಎಷ್ಟು ಒಳ್ಳೆಯವನಾಗಿದ್ದೇನೆ ! ನಾನು ಪ.ಪೂ. ಬಾಬಾರವರ ಉತ್ಸವಕ್ಕಾಗಿ ೨೫ ದಿನ ಎಲ್ಲವನ್ನು ಬಿಟ್ಟು ಹೋದೆನು’, ಅನಿಸಿತ್ತು. ಈ ವಿಚಾರಗಳೆಂದರೆ ನನ್ನ ಅಹಂಕಾರವಾಗಿದೆ’, ಎಂದು ನನಗೆ ತೀವ್ರವಾಗಿ ಅರಿವಾಯಿತು. ‘ಈ ವ್ಯಕ್ತಿಯು ಇಂದೂರಿಗೆ ಹೋಗದಿದ್ದರೂ, ‘ಅವನಿಗೆ ಪ.ಪೂ. ಬಾಬಾರವರ ಮೇಲಿನ ಶ್ರದ್ಧೆ ನನಗಿಂತ ಹೆಚ್ಚಿದೆ’, ಎಂಬುದು ನನ್ನ ಗಮನಕ್ಕೆ ಬಂದಿತು. ನಂತರ ನಾನು ಅವರಿಗೆ ಅಮೃತಮಹೋತ್ಸವದ ಪ್ರಸಾದವನ್ನು ಕೊಟ್ಟೆನು.
೩. ‘ಸರ್ವಸ್ವವನ್ನು ಅರ್ಪಿಸೋಣ’, ಎಂಬ ವಿಚಾರವು ಮನಸ್ಸಿನಲ್ಲಿ ಬಂದ ಕೂಡಲೇ ಪ.ಪೂ. ಬಾಬಾರವರು ಕರೆದು ತಾವು ತಿನ್ನುತ್ತಿದ್ದ ಪೇಡಾದ ಅರ್ಧಭಾಗವನ್ನು ಪ್ರಸಾದವೆಂದು ನನಗೆ ಕೊಡುವುದು !
ಪ.ಪೂ. ಬಾಬಾರವರು ಈಶ್ವರಪುರದಲ್ಲಿನ ಅವರ ಓರ್ವ ಭಕ್ತನ ಮಗಳ ನಿಶ್ಚಿತಾರ್ಥಕ್ಕಾಗಿ ಬಂದಿದ್ದರು. ನಮಗೂ ನಿಶ್ಚಿತಾರ್ಥಕ್ಕೆ ಕರೆದಿದ್ದರು. ಪ.ಪೂ. ಬಾಬಾರವರ ಇಬ್ಬರು-ಮೂವರ ಭಕ್ತರ ಹೊರತು ನನಗೆ ಇತರರ ಪರಿಚಯವಿರಲಿಲ್ಲ. ನಿಶ್ಚಿತಾರ್ಥದ ಕಾರ್ಯಕ್ರಮವು ಕಲ್ಯಾಣಮಂಟಪದಲ್ಲಿತ್ತು. ನಾವು ಆ ಸ್ಥಳಕ್ಕೆ ತಲುಪಿದ ನಂತರ ಮಧ್ಯಾಹ್ನ ೪ ಗಂಟೆಗೆ ಪ.ಪೂ. ಬಾಬಾರವರು ಬಂದಿದ್ದರು. ಅವರಿಗೆ ಕುಳಿತುಕೊಳ್ಳಲು ಸಭಾಗೃಹದಲ್ಲಿ ಮಧ್ಯದಲ್ಲಿ ಒಂದು ಕುರ್ಚಿಯನ್ನು ಇಟ್ಟಿದ್ದರು. ನಾನು ಅವರಿಗೆ ನಮಸ್ಕಾರ ಮಾಡಿದೆನು ಮತ್ತು ದೂರದಲ್ಲಿ ನಿಂತುಕೊಂಡೆನು. ಏನು ಮಾಡಿದರೂ ನನ್ನ ದೃಷ್ಟಿ ಪ.ಪೂ. ಬಾಬಾರವರ ಮುಖದಿಂದ ಕದಲುತ್ತಿರಲಿಲ್ಲ. ಅಷ್ಟರಲ್ಲಿ ನನ್ನ ಓರ್ವ ಸ್ನೇಹಿತನು ಅಲ್ಲಿಗೆ ಬಂದನು. ಯಾರಿಗೂ ಅವನ ಪರಿಚಯ ಅಷ್ಟೊಂದು ಇಲ್ಲದಿರುವುದರಿಂದ ಅವನು ನನ್ನ ಪಕ್ಕದಲ್ಲಿ ಬಂದು ಮಾತನಾಡತೊಡಗಿದನು. ನನ್ನ ಗಮನವು ವಿಚಲಿತವಾಗುತ್ತಿತ್ತು. ಆದ್ದರಿಂದ ನನಗೆ ಅವನೊಂದಿಗೆ ಮಾತನಾಡಲು ಅಥವಾ ಅವನ ಕಡೆಗೆ ನೋಡಲು ಇಷ್ಟವಾಗಲಿಲ್ಲ. ನನ್ನ ಮನಸ್ಸಿನಲ್ಲಿ ಪ.ಪೂ. ಬಾಬಾರವರ ವಿಚಾರವೇ ನಡೆದಿತ್ತು. ಕೆಲವರು ಪ.ಪೂ. ಬಾಬಾರವರ ಚರಣಗಳ ಮೇಲೆ ಮಸ್ತಕವನ್ನು ಇಡುತ್ತಿದ್ದರು, ಕೆಲವರು ಮಾತನಾಡುತ್ತಿದ್ದರು. ಆಗ ನನ್ನ ಮನಸ್ಸಿನಲ್ಲಿ, ‘ನಾನು ಪ.ಪೂ. ಬಾಬಾರವರಿಗೆ ಏನು ಅರ್ಪಿಸಲಿ ?’
‘ನನ್ನ ಜೇಬಿನಲ್ಲಿರುವ ಎಲ್ಲ ಹಣವನ್ನು ಮತ್ತು ಬೆರಳಿನಲ್ಲಿನ ಉಂಗುರವನ್ನೂ ಅವರ ಚರಣಗಳಲ್ಲಿ ಇಡಬೇಕು’, ಎಂಬ ವಿಚಾರ ಬಂದಿತು. ಆಗ ‘ಇದೆಲ್ಲ ಅಂದರೆ ಧನ ಅರ್ಪಿಸಿದಂತೆ ಆಗುತ್ತದೆ. ಅದರಿಂದ ‘ಸರ್ವಸ್ವವನ್ನು ಅರ್ಪಿಸಿದೆನು’, ಎಂದು ಅರ್ಥವಾಗುವುದಿಲ್ಲ ಅಲ್ಲವೇ ? ಎಂಬ ವಿಚಾರ ಬಂದಿತು. ಆ ಸಮಯದಲ್ಲಿ ಮನಸ್ಸಿನಲ್ಲಿ ‘ಮನಸ್ಸನ್ನು ಹೇಗೆ ಅರ್ಪಿಸಬೇಕು ?’, ಎಂಬುದು ನನಗೆ ಗೊತ್ತಿಲ್ಲ’, ಎಂಬ ವಿಚಾರ ಬಂದಿತು. ಅದೇ ಸಮಯದಲ್ಲಿ ಪ.ಪೂ. ಬಾಬಾರವರ ಓರ್ವ ಭಕ್ತನು (ಶ್ರೀ. ತಾತ್ಯಾ ಭೋಸಲೆ) ಓಡಿ ಬಂದನು ಮತ್ತು, ”ಪ.ಪೂ. ಬಾಬಾರವರು ನಿಮ್ಮನ್ನು ಕರೆಯುತ್ತಿದ್ದಾರೆ’’ ಎಂದು ಹೇಳಿದನು. ನಾನು ಹೋಗಿ ನಮಸ್ಕಾರ ಮಾಡಿ ಪ.ಪೂ. ಬಾಬಾರವರ ಎದುರಿಗೆ ಕುಳಿತೆನು. ಅಷ್ಟರಲ್ಲಿ ಸೌ. ನಂದಿನಿಯೂ ಅಲ್ಲಿಗೆ ಬಂದಳು. ಅವಳು ಸ್ವಲ್ಪ ಅಂತರದಲ್ಲಿ ಕುಳಿತಿದ್ದಳು. ಪ.ಪೂ. ಬಾಬಾರವರು ತಮ್ಮ ಕೈಯಲ್ಲಿನ ಪೇಡಾವನ್ನು ತಿನ್ನಲಿದ್ದರು. ಆಗ ಅವರು ನಿಧಾನವಾಗಿ ಪೇಡಾದ ಒಂದು ತುಂಡನ್ನು ತಾವು ತಿಂದರು ಮತ್ತು ಉಳಿದದ್ದು ನನ್ನ ಕೈಗೆ ಕೊಟ್ಟರು ಮತ್ತು, ”ಇದನ್ನು ನೀನು ತಿನ್ನು !’’ ಎಂದು ಹೇಳಿದರು. ನಾನು ಪೇಡಾವನ್ನು ತೆಗೆದುಕೊಂಡೆನು. ‘ಅದರಲ್ಲಿನ ಅರ್ಧ ಸೌ. ನಂದಿನಿಗೆ (ಪತ್ನಿಗೆ) ಕೊಡಬೇಕು’, ಎಂದು ನನಗೆ ಅನಿಸಿತು; ಆದರೆ ಅವರು ‘ನೀನು ತಿನ್ನು’, ಎಂದು ಹೇಳಿದ್ದರು. ಆದ್ದರಿಂದ ನಾನು ಅದನ್ನು ಪ್ರಸಾದವೆಂದು ಸೇವಿಸಿದೆನು. ಅನಂತರ ಪ.ಪೂ. ಬಾಬಾರವರು ಮತ್ತೇನು ಮಾತನಾಡಲಿಲ್ಲ. ಅವರು ಇತರರೊಂದಿಗೆ ಮಾತನಾಡುತ್ತಿದ್ದರು. ಅದೇ ಆಜ್ಞೆ ಎಂದು ತಿಳಿದು ನಾವು ಮನೆಗೆ ಬಂದೆವು.’
– ಆಧುನಿಕ ವೈದ್ಯ (ಡಾ.) ದುರ್ಗೇಶ ಸಾಮಂತ (ವಯಸ್ಸು ೬೪), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೧೨.೨೦೨೪)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !