ಬಾಂಗ್ಲಾದೇಶಿ ಪತ್ರಕರ್ತ ಸಲಾಹುದ್ದೀನ ಶೋಯೆಬ ಚೌಧರಿ ಅವರ ದಾವೆ

ನವದೆಹಲಿ – ಪಾಕಿಸ್ತಾನದ ಗೂಢಚಾರ ಸಂಸ್ಥೆ ‘ಇಂಟರ್-ಸರ್ವೀಸ್ ಇಂಟೆಲಿಜೆನ್ಸ್’ (‘ಐ.ಎಸ್.ಐ.’) ಹಲವು ದಶಕಗಳಿಂದ ಇಸ್ಲಾಮಿ ಭಯೋತ್ಪಾದಕ ಸಂಘಟನೆಗಳ ಮೂಲಕ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದೆ. ಈ ವ್ಯಾಪಾರದಿಂದ ಬರುವ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗುತ್ತಿದ್ದು, ಇದನ್ನು ‘ನಾರ್ಕೋ ಜಿಹಾದ್’ ಎಂದು ಕರೆಯಲಾಗುತ್ತಿದೆ. ‘ಐ.ಎಸ್.ಐ.’ ಈ ಕೆಲಸಕ್ಕಾಗಿ ಅನೇಕ ಅಂತರರಾಷ್ಟ್ರೀಯ ಸಂಘಟನೆಗಳೊಂದಿಗೆ ರಹಸ್ಯ ಸಹಕಾರ ಹೊಂದಿದೆ. ಇದರಲ್ಲಿ ಲೆಬನಾನ್ ನ ಹಿಜ್ಬುಲ್ಲಾ, ನೈಜೀರಿಯಾದ ಬೊಕೊ ಹರಾಮ್, ಅಲ್-ಖೈದಾಕ್ಕೆ ಸಂಬಂಧಿಸಿದ ಗುಂಪುಗಳು ಮತ್ತು ದಾವೂದ್ ಇಬ್ರಾಹಿಂನ ಅಪರಾಧ ಜಾಲ ಸೇರಿವೆ. ಈ ಕಾರ್ಯಾಚರಣೆಯ ಮುಖ್ಯ ಗುರಿ ಮುಸ್ಲಿಮೇತರ ದೇಶಗಳು ಮತ್ತು ಹಿಂದೂಗಳಾಗಿದ್ದಾರೆ ಎಂದು ಬಾಂಗ್ಲಾದೇಶಿ ಪತ್ರಕರ್ತ ಸಲಾಹುದ್ದೀನ್ ಶೋಯೆಬ್ ಚೌಧರಿ ಅವರು ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ, ಈ ಜಾಲದ ಕಣ್ಣುಗಳು ಈಗ ಬಾಂಗ್ಲಾದೇಶದ ಕಡೆಗೂ ತಿರುಗಿವೆ.
🇧🇩 Bangladeshi journo @salah_shoaib exposes Pak’s ISI running a global Narco Jihad using drug money for terror
Links with Hezbollah, Boko Haram, Al-Qaeda, Dawood network
🌎 Drugs from South America routed via Bangladesh after regime change
💣 Target: India and non-Muslim… pic.twitter.com/uCoP7hngSv
— Sanatan Prabhat (@SanatanPrabhat) November 4, 2025
ದಕ್ಷಿಣ ಅಮೆರಿಕಾದ ಡ್ರಗ್ ಮಾಫಿಯಾಗಳೊಂದಿಗೆ ಸಂಬಂಧ
‘ಬ್ಲಿಟ್ಜ್’ ಎಂಬ ವಾರಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಶೋಯೆಬ್ ಚೌಧರಿ ಹೇಳುತ್ತಾರೆ, ‘.ಐ.ಎಸ್.ಐ.’ ಮತ್ತು ಕುಖ್ಯಾತ ದಾವೂದ್ ಇಬ್ರಾಹಿಂ ಗ್ಯಾಂಗ್ ಕೊಲಂಬಿಯಾ, ಮೆಕ್ಸಿಕೋ, ವೆನೆಜುವೆಲಾ, ನಿಕರಾಗುವಾ ಮತ್ತು ಇತರ ದಕ್ಷಿಣ ಅಮೆರಿಕಾದ ದೇಶಗಳ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ (ಡ್ರಗ್ ಮಾಫಿಯಾಗಳೊಂದಿಗೆ) ಆರ್ಥಿಕ ವ್ಯವಹಾರಗಳನ್ನು ಸ್ಥಾಪಿಸಿದ್ದಾರೆ. ಈ ಜಾಲವು ಸಿರಿಯಾ ದೇಶದ ಅಧ್ಯಕ್ಷ ಬಶರ್-ಅಲ್-ಅಸದ್ ಅವರೊಂದಿಗೆ ಸಹ ಶತಕೋಟಿ ಡಾಲರ್‌ಗಳ ಮಾದಕವಸ್ತು ವ್ಯಾಪಾರಕ್ಕಾಗಿ ದೀರ್ಘಕಾಲದ ಸಹಕಾರವನ್ನು ಹೊಂದಿದೆ.
ಭಾರತವೇ ಗುರಿ
‘ಬೊಕೊ ಹರಾಮ್’ ಸಂಘಟನೆಯು ಭಾರತದಲ್ಲಿ ‘ನಾರ್ಕೋ-ಜಿಹಾದ್’ ಹರಡಲು ಅಲ್-ಖೈದಾ ಮತ್ತು ದಾವೂದ್ ಇಬ್ರಾಹಿಂ ಅವರೊಂದಿಗೆ ಕೈಜೋಡಿಸಿದೆ. ಈ ಭಯೋತ್ಪಾದಕ ಸಂಘಟನೆಯು ದಾವೂದ್ ಮತ್ತು ‘ಐ.ಎಸ್.ಐ.’ ಯ ನೇರ ಸಹಾಯದಿಂದ ಭಾರತದ ಮಾದಕವಸ್ತು ವಿತರಣಾ ಜಾಲವನ್ನು ಪ್ರವೇಶಿಸಿದೆ. ಈ ಗುಂಪುಗಳು ಭಾರತದಲ್ಲಿನ ಮಾದಕವಸ್ತು ವ್ಯಾಪಾರವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವ ಸಾಧನವಾಗಿ ಬಳಸುತ್ತಿವೆ.
ಮಾದಕವಸ್ತು ವ್ಯಾಪಾರದಲ್ಲಿ ಪಾಕಿಸ್ತಾನದ ಸುದೀರ್ಘ ಸಹಭಾಗಿತ್ವ
ಪಾಕಿಸ್ತಾನದ ಸೇನೆ ಮತ್ತು ‘ಐ.ಎಸ್.ಐ.’ ಹಲವು ದಶಕಗಳಿಂದ ಅಂತರರಾಷ್ಟ್ರೀಯ ಮಾದಕವಸ್ತು ವ್ಯಾಪಾರದಲ್ಲಿ ತೊಡಗಿವೆ. 2022 ರ ಮೊದಲು ತಾಲಿಬಾನ್ ಆಡಳಿತದಲ್ಲಿದ್ದ ಅಫ್ಘಾನಿಸ್ತಾನವು ವಿಶ್ವದ ಸುಮಾರು ಶೇ.80 ರಷ್ಟು ಅಫೂ ಅನ್ನು ಉತ್ಪಾದಿಸುತ್ತಿತ್ತು ಮತ್ತು ಆ ಕಾಲದಿಂದಲೂ ಪಾಕಿಸ್ತಾನದ ಮಿಲಿಟರಿ ಮತ್ತು ಗುಪ್ತಚರ ಸಂಸ್ಥೆಗಳು ಈ ದಂಧೆಯಲ್ಲಿ ಸಕ್ರಿಯವಾಗಿವೆ. ಪಾಕಿಸ್ತಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆರಾಯಿನ್ ತಯಾರಾಗುತ್ತದೆ, ಮತ್ತು ಅಲ್ಲಿನ ಸರಕಾರಿ ಮುದ್ರಣಾಲಯಗಳಲ್ಲಿ ತಯಾರಿಸಲಾದ ನಕಲಿ ಭಾರತೀಯ ಕರೆನ್ಸಿಯನ್ನು ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಬಳಸಲಾಗುತ್ತದೆ.
ಬಾಂಗ್ಲಾದೇಶದ ಮೂಲಕ ಹೊಸ ಸಂಚು
ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾದ ನಂತರ ‘ಐ.ಎಸ್.ಐ.’ ಮತ್ತು ದಾವೂದ್ ಈ ಪರಿಸ್ಥಿತಿಯಲ್ಲಿ ಅವಕಾಶವನ್ನು ಕಂಡಿದ್ದಾರೆ. ಬಾಂಗ್ಲಾದೇಶದಲ್ಲಿನ ಈಗಿನ ಭಾರತ-ವಿರೋಧಿ ಮಧ್ಯಂತರ ಸರಕಾರದ ಲಾಭ ಪಡೆದು, ‘ಐ.ಎಸ್.ಐ’ ದಾವೂದ್ ಗ್ಯಾಂಗ್‌ನೊಂದಿಗೆ ಸೇರಿ ಬಾಂಗ್ಲಾದೇಶದಲ್ಲಿ ಜಾಲವನ್ನು ನಿರ್ಮಿಸಿದೆ. ಈಗ ಅಲ್ಲಿಂದ ಮಾದಕವಸ್ತು ವಿತರಣೆಯ ಹೊಸ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಇದರ ಹಿಂದಿನ ಉದ್ದೇಶ ಕೇವಲ ಭಾರತಕ್ಕೆ ಮಾದಕವಸ್ತು ತಲುಪಿಸುವುದಲ್ಲ, ಬದಲಿಗೆ ಜಾಗತಿಕ ಮಟ್ಟದಲ್ಲಿ ಕಳ್ಳಸಾಗಣೆಯ ಸ್ವತಂತ್ರ ಜಾಲವನ್ನು ಸೃಷ್ಟಿಸುವುದಾಗಿದೆ. ಇದರ ಮೂಲಕ ದಾವೂದ್–’ಐ.ಎಸ್.ಐ.’ ಮೈತ್ರಿ ವಿವಿಧ ದೇಶಗಳಿಗೆ ಮಾದಕವಸ್ತುಗಳನ್ನು ತಲುಪಿಸಲು ಸಾಧ್ಯವಾಗುತ್ತದೆ.
ಶೋಯೆಬ್ ಚೌಧರಿ ಅವರ ಪ್ರಕಾರ, ‘ಐ.ಎಸ್.ಐ.’–ದಾವೂದ್ ಅವರ ‘ನಾರ್ಕೋ-ಜಿಹಾದ್’ ಕೇಂದ್ರೀಕೃತ ಇತ್ತೀಚಿನ ಚಟುವಟಿಕೆಗಳು ಅತ್ಯಂತ ಚಿಂತಾಜನಕವಾಗಿದ್ದು, ಭಾರತದ ಜೊತೆಗೆ ಅಮೆರಿಕ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಸಂಪಾದಕೀಯ ನಿಲುವುಬಾಂಗ್ಲಾದೇಶಿ ಪತ್ರಕರ್ತರಿಗೆ ದೊರೆಯುವ ಮಾಹಿತಿ ಭಾರತಕ್ಕೆ ದೊರೆಯುತ್ತದೆಯೇ? ದೊರೆಯುತ್ತಿದ್ದರೆ, ಅದರ ಮೇಲೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ಎಂಬುದನ್ನು ಸಹ ಹೇಳಬೇಕು! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!