|

ಶ್ರೀಕಾಕುಳಂ (ಆಂಧ್ರಪ್ರದೇಶ) – ಇಲ್ಲಿನ ಕಾಶಿಬುಗ್ಗಾ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದಲ್ಲಿ 10 ಭಕ್ತರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಆಡಳಿತವು ಈ ಅಪಘಾತದ ಬಗ್ಗೆ ತನಿಖೆಗೆ ಆದೇಶ ನೀಡಿದ್ದು, ‘ಜನಸಂದಣಿ ನಿಯಂತ್ರಣದಲ್ಲಿ ಎಲ್ಲಿ ತಪ್ಪು ಸಂಭವಿಸಿತು’ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ.
1. ಇಲ್ಲಿ ಕಾರ್ತಿಕ ಮಾಸದ ಏಕಾದಶಿಯ ನಿಮಿತ್ತ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ದೇವಸ್ಥಾನದ ಆವರಣದ ಪ್ರವೇಶದ್ವಾರದ ಬಳಿ ಇದ್ದಕ್ಕಿದ್ದಂತೆ ಜನಸಂದಣಿಯ ಒತ್ತಡ ಹೆಚ್ಚಾಯಿತು, ಇದರಿಂದ ಜನರಲ್ಲಿ ಗೊಂದಲ ಉಂಟಾಗಿ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಯಿತು. ಅನೇಕ ಜನರು ಕೆಳಗೆ ಬಿದ್ದರು ಮತ್ತು ಹಲವರು ಅವರನ್ನು ತುಳಿದು ಕೊಂಡು ಹೋಗಲು ಪ್ರಾರಂಭಿಸಿದರು.
2. ಪ್ರತ್ಯಕ್ಷದರ್ಶಿಗಳು ಹೇಳಿದಂತೆ, ಬೆಳಗಿನಿಂದಲೇ ದೇವಸ್ಥಾನದಲ್ಲಿ ಜನಸಂದಣಿ ಹೆಚ್ಚಾಗಿತ್ತು ಮತ್ತು ಸಾಕಷ್ಟು ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಜನಸಂದಣಿ ನಿಯಂತ್ರಣ ಮೀರಿತು.
ಮುಖ್ಯಮಂತ್ರಿಗಳಿಂದ ಶೋಕ ವ್ಯಕ್ತ!
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು, ಈ ದುರದೃಷ್ಟಕರ ಘಟನೆಯಲ್ಲಿ ಸಂಭವಿಸಿದ ಜೀವಹಾನಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಎಂದು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ನಾನು ಶೋಕ ವ್ಯಕ್ತಪಡಿಸುತ್ತೇನೆ. ಗಾಯಗೊಂಡವರಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡುವಂತೆ ನಾನು ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ನೆರವು ಕಾರ್ಯಗಳನ್ನು ಪರಿಶೀಲಿಸುವಂತೆ ನಾನು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳ ದೇವಸ್ಥಾನದಲ್ಲಿ, ಧಾರ್ಮಿಕ ಸ್ಥಳಗಳಲ್ಲಿ ನಿರಂತರವಾಗಿ ನಡೆಯುವ ಇಂತಹ ಘಟನೆಗಳು ನಾಚಿಕೆಗೇಡಿನವು ಎಂದು ಹೇಳಬೇಕಾಗುತ್ತದೆ! |
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
ಸರಯೂ ನದಿಯಲ್ಲಿ ಮಾಂಸ-ಮದ್ಯ ಸೇವನೆ; ಮೂವರು ಬಂಧನ : Saryu River Case
ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !