
ವಾಷಿಂಗ್ಟನ್ (ಅಮೆರಿಕಾ) – ಪಾಕಿಸ್ತಾನವು ಈಗಲೂ ಭಯೋತ್ಪಾದನೆಯನ್ನು ಉತ್ತೇಜಿಸುವ ತನ್ನ ಹಳೆಯ ನೀತಿಗೆ ಅಂಟಿಕೊಂಡಿದೆ ಮತ್ತು ಭಾರತಕ್ಕೆ ಧಕ್ಕೆ ತರಲು ಅದರ ಸೈನ್ಯದ ನೀತಿ ಇಂದಿಗೂ ಮುಂದುವರಿದಿದೆ ಎಂದು ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ವಿಶ್ಲೇಷಕರಾದ ಸಿದ್ಧಾಂತ ಕಿಶೋರ ಅವರು ಹೇಳಿದ್ದಾರೆ.
ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆ ಇಂದಿಗೂ ಸಕ್ರಿಯ
‘ದಿ ಮಿಲಿ ಕ್ರಾನಿಕಲ್’ ಎಂಬ ವಾರಪತ್ರಿಕೆಯಲ್ಲಿ ಪ್ರಕಟವಾದ ಕಿಶೋರ ಅವರ ವಿಶ್ಲೇಷಣೆಯಲ್ಲಿ ಅವರು ಬರೆದಿರುವ ಪ್ರಕಾರ, ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆ ಇಂದಿಗೂ ಸಂಪೂರ್ಣವಾಗಿ ಸಕ್ರಿಯವಾಗಿದೆ ಮತ್ತು ಅದು ಪಾಕ್ ನ ಅಧಿಕೃತ ನೀತಿಯ ಒಂದು ಭಾಗವಾಗಿದೆ.
ಭಯೋತ್ಪಾದನೆಯ ಪ್ರಮುಖ ಪ್ರವರ್ತಕ ಎಂದು ಗುರುತಿಸಲ್ಪಟ್ಟಿರುವ ದೇಶಕ್ಕೆ, ಇತ್ತೀಚೆಗೆ ‘ಶಾಂಘೈ ಸಹಕಾರ ಸಂಘಟನೆ’ಯ ಖಾಯಂ ಭಯೋತ್ಪಾದನಾ ವಿರೋಧಿ ಘಟಕ ‘ರೀಜನಲ್ ಆಂಟಿಟೆರರಿಸ್ಟ್ ಸ್ಟ್ರಕ್ಚರ್’ನ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಹಾಸ್ಯಾಸ್ಪದವಾಗಿದೆ ಎಂದು ಕಿಶೋರ್ ಬರೆದಿದ್ದಾರೆ.
ಪಾಕಿಸ್ತಾನವು ನೇರವಾಗಿ ಕ್ರಮ ಕೈಗೊಳ್ಳದ ಹೊರತು, ಅದರ ಭಯೋತ್ಪಾದನಾ ವಿರೋಧಿ ಬದ್ಧತೆಯು ಕೇವಲ ಒಂದು ಪ್ರದರ್ಶನವಾಗಿ ಉಳಿಯುತ್ತದೆ.
ಜೈಷ್ ಮತ್ತು ಲಷ್ಕರ್ ನ ಜಾಲವು ಇನ್ನೂ ಸುರಕ್ಷಿತ
ಕಿಶೋರ ಅವರ ಪ್ರಕಾರ, ‘ಆಪರೇಷನ್ ಸಿಂದೂರ್’ ಅಡಿಯಲ್ಲಿ ಭಾರತವು ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ನಿಖರ ದಾಳಿಗಳನ್ನು ಮಾಡಿದ್ದರೂ, ಪಾಕಿಸ್ತಾನದಲ್ಲಿ ಜೈಷ್-ಎ-ಮಹಮ್ಮದ್ ಮತ್ತು ಲಷ್ಕರ್-ಎ-ತೋಯ್ಬಾ ದಂತಹ ಸಂಘಟನೆಗಳ ಜಾಲವು ಸುರಕ್ಷಿತವಾಗಿವೆ. ಜೈಷ್‌ನ ಮುಖ್ಯಸ್ಥ ಮಸೂದ್ ಅಜರ್ ಇನ್ನೂ ಸಕ್ರಿಯನಾಗಿದ್ದು, ಪಾಕಿಸ್ತಾನದಲ್ಲಿ 313 ಹೊಸ ಭಯೋತ್ಪಾದಕ ಕೇಂದ್ರಗಳನ್ನು ಸ್ಥಾಪಿಸುವ ಪ್ರಯತ್ನದಲ್ಲಿದ್ದಾನೆ.
ಭಯೋತ್ಪಾದನಾ ವಿರೋಧಿ ನಿಲುವಿನ ಸುಳ್ಳು ಪ್ರದರ್ಶನ!
ಅಮೆರಿಕಾದೊಂದಿಗೆ ಪಾಕಿಸ್ತಾನದ ಹೆಚ್ಚುತ್ತಿರುವ ಸಂಬಂಧಗಳು ಆ ದೇಶದ ವಿರುದ್ಧದ ಕ್ರಮವನ್ನು ದುರ್ಬಲಗೊಳಿಸಬಹುದು ಎಂದು ಕಿಶೋರ ಎಚ್ಚರಿಕೆ ನೀಡಿದ್ದಾರೆ. ಮತ್ತೆ ಭಯೋತ್ಪಾದಕ ತರಬೇತಿ ಶಿಬಿರಗಳು ಸ್ಥಾಪನೆಯಾಗುತ್ತಿದ್ದರೆ, ಡಿಜಿಟಲ್ ನಿಧಿ ಸಂಗ್ರಹ ಹೆಚ್ಚುತ್ತಿದ್ದರೆ ಮತ್ತು ಭಯೋತ್ಪಾದಕರ ಸಭೆಗಳಿಗೆ ರಾಜ್ಯಮಟ್ಟದ ಮಾನ್ಯತೆ ಸಿಗುತ್ತಿದ್ದರೆ, ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನಿಲುವು ಕೇವಲ ಬಾಹ್ಯ ಪ್ರದರ್ಶನವಾಗಿದೆ.
ಸಂಪಾದಕೀಯ ನಿಲುವುಈ ವಿಶ್ಲೇಷಣೆಯಿಂದ, ‘ಆಪರೇಷನ್ ಸಿಂದೂರ್’ನ ದೂರಗಾಮಿ ಪರಿಣಾಮ ಉಂಟಾಗಿಲ್ಲ ಎಂದು ತೋರುತ್ತದೆ. ಪಾಕಿಸ್ತಾನವನ್ನು ಸಂಪೂರ್ಣವಾಗಿ ನಾಶ ಮಾಡುವುದೇ ಯೋಗ್ಯ ಮತ್ತು ನಿರ್ಣಾಯಕ ಹೆಜ್ಜೆಯಾಗಿದೆ. ಇಂತಹ ಕ್ರಮ ಕೈಗೊಳ್ಳಲು ಇಸ್ರೇಲ್‌ನಿಂದ ಭಾರತ ಪಾಠ ಕಲಿಯುವುದೇ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation