ಸನಾತನದ ೫೩ ನೇ ಸಂತ ಪೂ. ಸೀತಾರಾಮ ದೇಸಾಯಿ (ವಯಸ್ಸು ೮೪ ವರ್ಷ) ಇವರಿಂದ ದೇಹತ್ಯಾಗ !

ಗೋವಾದ ಪ್ರಿಯೋಳ (ಮ್ಹಾರ್ದೋಳ) ದಲ್ಲಿರುವ ಸನಾತನದ ೫೩ನೇ ಸಂತ ಪೂ. ಸೀತಾರಾಮ ದೇಸಾಯಿ (ವಯಸ್ಸು ೮೪ ವರ್ಷ) ಅವರು ೨೩ ಅಕ್ಟೋಬರ್‌ ೨೦೨೫ ರಂದು ಸಾಯಂಕಾಲ ೬ ಗಂಟೆ ೨೫ ನಿಮಿಷಕ್ಕೆ ದೇಹತ್ಯಾಗ ಮಾಡಿದರು. ಅವರು ಸನಾತನದ ಮಾರ್ಗದರ್ಶನದಲ್ಲಿ ಸಾಧನೆ ಮಾಡಿ ೩೧ ಜುಲೈ ೨೦೧೫ ರಂದು ವ್ಯಷ್ಟಿ ಸಂತ ಪದವಿಯನ್ನು ಪಡೆದಿದ್ದರು. ಕಳೆದ ಕೆಲವು ವರ್ಷಗಳಿಂದ ಅವರು ಮತ್ತು ಅವರ ಪತ್ನಿ ಸನಾತನದ ೫೨ ನೇ ಸಂತ ಪೂ. ಮಾಲಿನಿ ದೇಸಾಯಿ (ವಯಸ್ಸು ೮೦ ವರ್ಷ) ಅವರು ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ವಾಸವಾಗಿದ್ದರು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲು ತ್ತಿದ್ದರು. ಆದ್ದರಿಂದ ಅವರಿಗೆ ಬಾಂಬೋಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಅವರು ಪತ್ನಿ ಪೂ. ಮಾಲಿನಿ ದೇಸಾಯಿ, ೨ ಮಕ್ಕಳು ಶ್ರೀ. ಚಂದ್ರಶೇಖರ ಮತ್ತು ಶ್ರೀ. ಅನಿಲ; ೧ ಸೊಸೆ, ೪ ಸಹೋದರರು, ೨ ಸಹೋದರಿಯರು ಮತ್ತು ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ. ಪ್ರಿಯೋಳದಲ್ಲಿ ಅಕ್ಟೋಬರ್‌ ೨೪ ರಂದು ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆರವೇರಿತು.