ಮ್ಹಾರ್ದೋಳ (ಗೋವಾ) ಇಲ್ಲಿ ರಾಜ್ಯಮಟ್ಟದ ದೇವಸ್ಥಾನಗಳ ಟ್ರಸ್ಟ್ ಮತ್ತು ವಿಶ್ವಸ್ತರ ಪರಿಷತ್ತು

ಮ್ಹಾರ್ದೋಳ (ಗೋವಾ), ಮೇ 31 (ಸುದ್ದಿ) – ದೇವಸ್ಥಾನಗಳ ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು. ಇಂದು ದೇವಸ್ಥಾನದ ವಿಶ್ವಸ್ತರನ್ನು ಸಂಘಟಿತರಾಗುವಂತೆ ಸತತವಾಗಿ ಏಕೆ ಹೇಳಬೇಕಾಗುತ್ತಿದೆ? ಗೋಮಾಂತಕದಲ್ಲಿ ಪೂರ್ವಜರು ಪ್ರಾಣದ ಹಂಗು ತೊರೆದು ಹೋರಾಡಿ ಇಲ್ಲಿನ ದೇವತೆಗಳ ಮೂರ್ತಿಗಳು ಮತ್ತು ದೇವಸ್ಥಾನಗಳನ್ನು ರಕ್ಷಿಸಿದರು. ಈ ಇತಿಹಾಸವು ಮರುಕಳಿಸುವುದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಉತ್ತರ ಪ್ರದೇಶದ ಸಂಭಲ್ ನಲ್ಲಿರುವ ಶ್ರೀ ಹರಿಹರ ದೇವಸ್ಥಾನಕ್ಕೆ ಹಿಂದೂಗಳು ಪ್ರವೇಶಿಸುವಂತಿಲ್ಲ ಮತ್ತು ಈ ವಿಷಯವು ನ್ಯಾಯಾಲಯದಲ್ಲಿದೆ, ಹಾಗೆಯೇ ಬಂಗಾಳದಲ್ಲಿ 15 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಶ್ರೀ ದುರ್ಗಾದೇವಸ್ಥಾನವನ್ನು ಹೊಸ ಸರಕಾರವು ಇತ್ತೀಚೆಗಷ್ಟೇ ಮುಕ್ತಗೊಳಿಸಿದೆ. ಸ್ವತಂತ್ರ ಭಾರತದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿರುವಾಗ ದೇವಸ್ಥಾನಗಳ ಪರಿಸ್ಥಿತಿ ಹೀಗಿದೆ. ಇಂತಹ ಪರಿಸ್ಥಿತಿ ಗೋವಾ ಸೇರಿದಂತೆ ದೇಶದ ಇತರ ಸ್ಥಳಗಳಲ್ಲೂ ನಿರ್ಮಾಣವಾಗಬಹುದು. ಇದಕ್ಕಾಗಿ ದೇವಸ್ಥಾನಗಳ ಪ್ರತಿನಿಧಿಗಳು ಮತ್ತು ಹಿಂದೂಗಳು ಸಂಘಟಿತರಾಗುವುದು ಅತ್ಯಗತ್ಯ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಕರೆ ನೀಡಿದರು.
ಪೋರ್ಚುಗೀಸರ 450 ವರ್ಷಗಳ ಕ್ರೂರ ಆಡಳಿತದಲ್ಲೂ ಈ ಸಂಸ್ಕೃತಿಯು ಉಳಿದುಕೊಂಡಿದೆ. ಗೋವಾಕ್ಕೆ ಬರುವ ಪ್ರವಾಸಿಗರನ್ನು ಕಡಲತೀರಗಳಿಂದ ದೇವಸ್ಥಾನದ ಸಂಸ್ಕೃತಿಯತ್ತ ಆಕರ್ಷಿಸಲು ಗೋವಾ ಸರಕಾರವು ‘ಏಕಾದಶ ತೀರ್ಥ’ದಂತಹ ಹಲವು ಯೋಜನೆಗಳ ಮೂಲಕ ಪ್ರಯತ್ನಿಸುತ್ತಿದೆ. ‘ಗೋವಾ ಒಂದು ಭೋಗಭೂಮಿ’ ಎಂಬ ಅಪಪ್ರಚಾರ ನಡೆಯುತ್ತಿರುವಾಗ ಗೋವಾವನ್ನು ‘ಯೋಗಭೂಮಿ’, ‘ಪರಶುರಾಮಭೂಮಿ’, ‘ದೇವಸ್ಥಾನ ಸಂಸ್ಕೃತಿ ಹೊಂದಿರುವ ಭೂಮಿ’ ಎಂದು ಮುಂದೆ ತರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೇ 31 ರಂದು ರಾಜ್ಯದ ಮ್ಹಾರ್ದೋಳನಲ್ಲಿರುವ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ಪವಿತ್ರ ಪ್ರಾಂಗಣದಲ್ಲಿ ಒಂದು ದಿನದ ದ್ವಿತೀಯ ರಾಜ್ಯಮಟ್ಟದ ದೇವಸ್ಥಾನಗಳ ಟ್ರಸ್ಟ್ ಮತ್ತು ವಿಶ್ವಸ್ತರ ಮಹಾಸಭೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6.30 ಗಂಟೆಯ ವರೆಗೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ. ಶಿಂದೆ ಮಾತನಾಡುತ್ತಿದ್ದರು. ಈ ದೇವಸ್ಥಾನ ಪರಿಷತ್ತು ದೇವಸ್ಥಾನ ಸಂಸ್ಕೃತಿಯ ಮಹತ್ವವನ್ನು ಎತ್ತಿ ತೋರಿಸುವಲ್ಲಿ ಹಾಗೂ ಅದನ್ನು ರಕ್ಷಿಸಲು ದೇವಸ್ಥಾನದ ಪ್ರತಿನಿಧಿಗಳು ಸಂಘಟಿತರಾಗುವ ಮಹತ್ವವನ್ನು ತಿಳಿಸುವಲ್ಲಿ ಯಶಸ್ವಿಯಾಯಿತು.

ಶ್ರೀ. ಶಿಂದೆ ಮಾತು ಮುಂದುವರೆಸುತ್ತಾ, ”ದೇವಸ್ಥಾನದ ವಿಶ್ವಸ್ತರು ಅಥವಾ ಮಹಾಜನರು ‘ನಾವು ದೇವರ ರಾಜ್ಯವನ್ನು ನಡೆಸುತ್ತಿದ್ದೇವೆ’ ಎಂಬ ಭಾವನೆಯನ್ನಿಟ್ಟುಕೊಂಡು ದೇವಸ್ಥಾನದ ಕಾರ್ಯಗಳನ್ನು ಮಾಡಬೇಕು. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾದಾಗಿನಿಂದ ಇದುವರೆಗೆ 23 ಕೋಟಿ 82 ಲಕ್ಷ ಭಕ್ತರು ಶ್ರೀರಾಮನ ದರ್ಶನ ಪಡೆದಿದ್ದಾರೆ. ಇದರಿಂದ ದೇವಸ್ಥಾನಕ್ಕೆ 12 ಸಾವಿರ ಕೋಟಿ ರೂಪಾಯಿ ಆದಾಯ ಬಂದಿದೆ. ಇದರಿಂದ ದೇವಸ್ಥಾನದ ಸಾಮರ್ಥ್ಯವನ್ನು ಎಲ್ಲರೂ ಮನಗಾಣಬೇಕು. ಮಹಾರಾಷ್ಟ್ರದಲ್ಲಿ ‘ಮಹಾರಾಷ್ಟ್ರ ದೇವಸ್ಥಾನ ಇನಾಮ್ ನಿರ್ಮೂಲನಾ ಅಧಿನಿಯಮ-2026’ ಜಾರಿಗೆ ಬರಲಿದೆ. ಈ ಕಾಯ್ದೆಯಿಂದಾಗಿ ದೇವಸ್ಥಾನಗಳ ಭೂಮಿ ಇಲ್ಲದಂತಾಗಲಿದೆ. ದೇವಸ್ಥಾನದ ರಕ್ಷಣೆಗಾಗಿ ಸರಕಾರ ನಮ್ಮದೇ ಆಗಿದ್ದರೂ, ಕಾನೂನು ರದ್ದಾಗುವವರೆಗೂ ನಾವು ಹೋರಾಡುತ್ತೇವೆ. ದೇವರ ಹೆಸರಿನಲ್ಲಿರುವ ಭೂಮಿಯನ್ನು ಕಿತ್ತುಕೊಳ್ಳುವ ಹಕ್ಕು ಯಾವುದೇ ಸರಕಾರಕ್ಕೆ ಇಲ್ಲ. ಇಂತಹ ಕಾನೂನು ಭವಿಷ್ಯದಲ್ಲಿ ಗೋವಾದಲ್ಲೂ ಬರಬಹುದು ಮತ್ತು ಇದಕ್ಕಾಗಿ ದೇವಸ್ಥಾನದ ಪ್ರತಿನಿಧಿಗಳು ಈಗಿನಿಂದಲೇ ಭಕ್ತರನ್ನು ಸಂಘಟಿಸಬೇಕು. ದೇವಸ್ಥಾನಗಳು ಸಂಘಟಿತವಾದರೆ ಸರಕಾರ ಇಂತಹ ಕಾನೂನುಗಳನ್ನು ಮಾಡಲು ಧೈರ್ಯ ಮಾಡುವುದಿಲ್ಲ ಎಂದರು.
ಹೀಗಿತ್ತು ದೇವಸ್ಥಾನ ಮಹಾಸಭೆಯ ಮುಂಜಾನೆಯ ಅಧಿವೇಶನ
1. ಸನಾತನದ ಸದ್ಗುರು ನಂದಕುಮಾರ ಜಾಧವ, ಹ.ಭ.ಪ. ಸುಹಾಸ ಬುವಾ ವಝೆ, ಗೋಮಾಂತಕ ದೇವಸ್ಥಾನ ಮಹಾಸಂಘದ ಕಾರ್ಯದರ್ಶಿ ಶ್ರೀ. ಜಯೇಶ ಥಳಿ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಮತ್ತು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ಅಧ್ಯಕ್ಷ ಶ್ರೀ. ಪ್ರೇಮಾನಂದ ಕಾಮತ ಅವರ ಹಸ್ತದಿಂದ ದೀಪಪ್ರಜ್ವಲನ ಹಾಗೂ ಶಂಖನಾದದೊಂದಿಗೆ ಪರಿಷತ್ತು ಆರಂಭವಾಯಿತು.
2. ಪುರೋಹಿತ ಶ್ರೀ. ದಾಮೋದರ ವಝೆ ಅವರು ವೇದಮಂತ್ರ ಪಠಣ ಮಾಡಿದರು.
3. ಕಾರ್ಯಕ್ರಮದ ನಿರೂಪಕಿ ಸೌ. ಗೌರಿ ನಾಯಕ ಅವರು ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ದೇವಸ್ಥಾನ ಪರಿಷತ್ತಿಗೆ ನೀಡಿದ್ದ ‘ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ದೇವಸ್ಥಾನ ಸಂಸ್ಕೃತಿಯ ಪುನರುಜ್ಜೀವನ ಅನಿವಾರ್ಯ’ ಎಂಬ ವಿಷಯದ ಸಂದೇಶವನ್ನು ಓದಿದರು.
4. ಶ್ರೀಕ್ಷೇತ್ರ ತಪೋಭೂಮಿಯ ಶ್ರೀ ದತ್ತ ಪದ್ಮನಾಭ ಪೀಠದ ಪೀಠಾಧಿಪತಿ (ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ) ವಿಭೂಷಿತ ಧರ್ಮಭೂಷಣ ಸದ್ಗುರು ಬ್ರಹ್ಮೇಶಾನಂದಾಚಾರ್ಯ ಸ್ವಾಮೀಜಿ ಅವರು ರಾಜ್ಯಮಟ್ಟದ ದೇವಸ್ಥಾನಗಳ ಟ್ರಸ್ಟ್ ಮತ್ತು ವಿಶ್ವಸ್ತರ ಪರಿಷತ್ತಿಗಾಗಿ ನೀಡಿದ್ದ ಸಂದೇಶವನ್ನು ‘ಸ್ವಾಮಿ ಬ್ರಹ್ಮಾನಂದ ವೈದಿಕ ಗುರುಕುಲ ಆಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಶ್ರೀಕ್ಷೇತ್ರ ತಪೋಭೂಮಿ ಗುರುಪೀಠ’ದ ಪ್ರಧಾನಾಚಾರ್ಯ ವೇದಮೂರ್ತಿ ಅನೂಪ ಶಾಂತಾರಾಮ ಶೇಲಾರ ಅವರು ಓದಿದರು.
ಪರಿಷತ್ತಿನ ಮುಂಜಾನೆಯ ಅಧಿವೇಶನದಲ್ಲಿ ಗಣ್ಯರಿಂದ ಮಾರ್ಗದರ್ಶನ
ಪರಿಷತ್ತಿನ ಮುಂಜಾನೆಯ ಉದ್ಘಾಟನಾ ಅಧಿವೇಶನದಲ್ಲಿ ಹ.ಭ.ಪ. ಸುಹಾಸ ಬುವಾ ವಝೆ ಅವರು ‘ಭಕ್ತರನ್ನು ದೇವಸ್ಥಾನದೊಂದಿಗೆ ಜೋಡಿಸಲು ಮಾಡಬೇಕಾದ ಪ್ರಯತ್ನಗಳು’ ಎಂಬ ವಿಷಯದ ಕುರಿತು ಮಾರ್ಗದರ್ಶನ ನೀಡಿದರು. ಸದ್ಗುರು ನಂದಕುಮಾರ ಜಾಧವ ಅವರು ‘ದೇವಸ್ಥಾನದ ವಿಶ್ವಸ್ತರಿಗಾಗಿ ಕಾಲಾನುಸಾರ ಸಾಧನೆ’ ಎಂಬ ವಿಷಯದ ಕುರಿತು ಮಾರ್ಗದರ್ಶನ ಮಾಡಿದರು. ಶ್ರೀ. ರಮೇಶ ಶಿಂದೆ ಅವರು ‘ಹಿಂದೂಗಳ ಸಂಘಟನೆಯ ದೃಷ್ಟಿಯಿಂದ ದೇವಸ್ಥಾನಗಳ ಸಂಘಟನೆ, ಇದು ಕಾಲದ ಅಗತ್ಯ’ ಎಂಬ ವಿಷಯದ ಕುರಿತು ಮಾರ್ಗದರ್ಶನ ಮಾಡಿದರು. ಸನಾತನ ಸಂಸ್ಥೆಯ ಸೌ. ಶುಭಾ ಸಾವಂತ ಅವರು ‘ದೇವಸ್ಥಾನ: ಕಾಲಾನುಸಾರ ಧರ್ಮಪ್ರಸಾರದ ಕೇಂದ್ರಬಿಂದು’ ಎಂಬ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ. ರೋಹನ ದೇಸಾಯಿ ಮತ್ತು ಸೌ. ಗೌರಿ ನಾಯಕ ಅವರು ನೆರವೇರಿಸಿದರು.
ದೇವಸ್ಥಾನದ ರಕ್ಷಣೆಗಾಗಿ ವಿವಿಧ ಠರಾವುಗಳನ್ನು ಅಂಗೀಕರಿಸಿ ಪರಿಷತ್ತು ಮುಕ್ತಾಯಗೊಂಡಿತು
ಪರಿಷತ್ತಿನ ಸಂಜೆಯ ಅಧಿವೇಶನದಲ್ಲಿ ‘ದೇವಸ್ಥಾನಗಳನ್ನು ಧರ್ಮಶಿಕ್ಷಣದ ಕೇಂದ್ರಗಳನ್ನಾಗಿ ಮಾಡುವುದು ಹೇಗೆ?’, ‘ದೇವಸ್ಥಾನದ ವಿಶ್ವಸ್ತರಿಗೆ ಎದುರಾಗುವ ಕಾನೂನು ಮತ್ತು ಇತರ ತೊಂದರೆಗಳು’, ‘ಮಂದಿರ ಮಹಾಸಂಘದ ಸಂಘಟನೆಯ ದಿಕ್ಕು’ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು, ಹಾಗೂ ಉಪಸ್ಥಿತ ಗಣ್ಯರು ಈ ವಿಷಯಗಳ ಕುರಿತು ಮಾರ್ಗದರ್ಶನ ಮಾಡಿದರು. ಮಹಾಸಭೆಯ ಸಮಾರೋಪ ಅಧಿವೇಶನದಲ್ಲಿ ದೇವಸ್ಥಾನದ ರಕ್ಷಣೆಗಾಗಿ ವಿವಿಧ ನಿರ್ಣಯಗಳನ್ನು ಮಂಡಿಸಲಾಯಿತು. ಈ ಸಂದರ್ಭದಲ್ಲಿ ಮುಂಬಯಿಯಲ್ಲಿ ನಡೆದಿದ್ದ ಶ್ರೀ ರಾಜಮಾತಂಗಿ ಯಜ್ಞದ ವಿಡಿಯೋವನ್ನೂ ತೋರಿಸಲಾಯಿತು.
ಮಹಾಸಭೆಯಲ್ಲಿ ಅಂಗೀಕರಿಸಲಾದ ಠರಾವು
1. ದೇವಸ್ಥಾನಗಳ ಪವಿತ್ರತೆಯನ್ನು ಕಾಪಾಡಲು ದೇವಸ್ಥಾನದ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸ ಮಾರಾಟ ಕೇಂದ್ರಗಳನ್ನು ನಿಷೇಧಿಸುವ ಕಾನೂನನ್ನು ತಕ್ಷಣವೇ ಅನುಷ್ಠಾನಗೊಳಿಸಬೇಕು ಮತ್ತು ಇದರಲ್ಲಿ ಯಾವುದೇ ರೀತಿಯ ಸಡಿಲಿಕೆ ನೀಡಬಾರದು.
2. ಮದ್ಯದ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರನ್ನು ಇಡುವುದನ್ನು ನಿಷೇಧಿಸುವ ಕಾಯ್ದೆಯನ್ನು ಜಾರಿಗೊಳಿಸಬೇಕು.
3. ಪೋರ್ಚುಗೀಸರು ಧ್ವಂಸಗೊಳಿಸಿದ ದೇವಸ್ಥಾನಗಳ ಪುನರ್ನಿರ್ಮಾಣಕ್ಕಾಗಿ ಸರಕಾರವು ಆದಷ್ಟು ಬೇಗ ಮುಂದಾಗಬೇಕು.
4. ಗಣೇಶೋತ್ಸವಕ್ಕೆ ರಾಜ್ಯ ಮಹೋತ್ಸವದ ಸ್ಥಾನಮಾನ ನೀಡಬೇಕು.
5. ಹಿಂದೂಗಳ ಮತಾಂತರವನ್ನು ತಡೆಯಲು ಮತಾಂತರ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಬೇಕು.
6. ಜಾತ್ರೋತ್ಸವಗಳ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿ ಅನ್ಯಧರ್ಮೀಯರು ಮಳಿಗೆಗಳನ್ನು ಹಾಕುವುದನ್ನು ನಿಷೇಧಿಸಬೇಕು.
7. ದೇವಸ್ಥಾನದ ಸಮಿತಿಗಳಲ್ಲಿ ಮಹಿಳೆಯರಿಗೂ ಪ್ರತಿನಿಧಿಗಳೆಂದು ಸ್ಥಾನ ನೀಡಬೇಕು.
8. ದೇವಸ್ಥಾನದ ಪವಿತ್ರತೆಯನ್ನು ಕಾಪಾಡಲು ವಸ್ತ್ರಸಂಹಿತೆಯನ್ನು ಜಾರಿಗೊಳಿಸಬೇಕು.
9. ದೇವಸ್ಥಾನದ ಧಾರ್ಮಿಕ ಉತ್ಸವಗಳ ಸಮಯದಲ್ಲಿ ಧರ್ಮಹಾನಿ ಉಂಟುಮಾಡುವ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು.
ಪರಿಷತ್ತಿನ ಫಲಿತಾಂಶಗಳು
1. 39 ದೇವಸ್ಥಾನಗಳು ವಸ್ತ್ರಸಂಹಿತೆಯನ್ನು ಜಾರಿಗೊಳಿಸಲು ನಿರ್ಧರಿಸಿದವು.
2. 29 ದೇವಸ್ಥಾನಗಳು ತಾಲೂಕು ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲು ತೀರ್ಮಾನಿಸಿದವು.
3. 30 ದೇವಸ್ಥಾನಗಳಲ್ಲಿ ಧರ್ಮಶಿಕ್ಷಣದ ಫಲಕಗಳನ್ನು ಅಳವಡಿಸಲು ನಿರ್ಧರಿಸಲಾಯಿತು.
4. 26 ದೇವಸ್ಥಾನಗಳಲ್ಲಿ ಧರ್ಮಜಾಗೃತಿಯ ಉಪನ್ಯಾಸಗಳನ್ನು ಆಯೋಜಿಸಲು ನಿರ್ಧರಿಸಲಾಯಿತು.
5. 28 ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ವರ್ಗಗಳನ್ನು ಆರಂಭಿಸಲು ತೀರ್ಮಾನಿಸಲಾಯಿತು.
6. 21 ದೇವಸ್ಥಾನಗಳಲ್ಲಿ ಸಾಮೂಹಿಕ ಆರತಿಯನ್ನು ಆರಂಭಿಸಲು ನಿರ್ಧರಿಸಲಾಯಿತು.
7. ಮಹಾಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರೂ ದೇವಸ್ಥಾನದ 100 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಲ್ಲಿಸಲು ಪ್ರಯತ್ನಿಸಲು ನಿರ್ಧರಿಸಲಾಯಿತು.
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು