ಸನಾತನ ಸಂಸ್ಥೆಯ ೫೭ ನೆಯ ಸಂತ ಪೂ. (ಶ್ರೀಮತಿ) ಆನಂದಿ ಪಾಟೀಲ ಅಜ್ಜಿಯವರಿಂದ ದೇಹತ್ಯಾಗ !

ಪೂ. ಆನಂದಿ ಪಾಟೀಲ ಅಜ್ಜಿ

ಠಾಣೆ (ಮಹಾರಾಷ್ಟ್ರ) – ಸನಾತನ ಸಂಸ್ಥೆಯ ೫೭ ನೇ ಸಂತ ಪೂ. (ಶ್ರೀಮತಿ) ಆನಂದಿ ಪಾಟೀಲ (ವಯಸ್ಸು ೧೦೪ ವರ್ಷ, ಆಧ್ಯಾತ್ಮಿಕ ಮಟ್ಟ ಶೇ. ೭೭) ಅವರು ಮೇ ೨೫ ರಂದು ಸಂಜೆ ೫.೦೯ ಕ್ಕೆ ಡೊಂಬಿವಲಿ (ಠಾಣೆ ಜಿಲ್ಲೆ, ಮಹಾರಾಷ್ಟ್ರ) ಯಲ್ಲಿರುವ ತಮ್ಮ ಮೊಮ್ಮಗಳು ಸೌ. ದೀಪಾ ಮ್ಹಾತ್ರೆ ಅವರ ನಿವಾಸದಲ್ಲಿ ದೇಹತ್ಯಾಗ ಮಾಡಿದರು. ಈ ಸಮಯದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಸದ್ಗುರು ಅನುರಾಧಾ ವಾಡೇಕರ ಮತ್ತು ಪೂ. (ಸೌ.) ಸಂಗೀತಾ ಜಾಧವ ಉಪಸ್ಥಿತರಿದ್ದರು.

ಮೇ ೨೬ ರಂದು ಮಧ್ಯಾಹ್ನ ೧೨.೧೦ ಕ್ಕೆ ಸನಾತನದ ದೇವದ ಆಶ್ರಮದ ಸಮೀಪವಿರುವ ಸ್ಮಶಾನಭೂಮಿಯಲ್ಲಿ ಪೂ. ಅಜ್ಜಿಯವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಸನಾತನದ ಪೂ. ರಮೇಶ ಗಡ್ಕರಿ ಅವರು ಅಜ್ಜಿಯವರಿಗೆ ಹಾರವನ್ನು ಹಾಕಿ, ಅವರ ಬಾಯಿಯಲ್ಲಿ ತುಳಸಿದಳವನ್ನು ಇಟ್ಟರು. ಈ ಸಂದರ್ಭದಲ್ಲಿ ಪೂ. ಅಜ್ಜಿಯವರ ಕುಟುಂಬದವರು ಉಪಸ್ಥಿತರಿದ್ದರು. ಪೂ. ಅಜ್ಜಿಯವರು ಓರ್ವ ಪುತ್ರ, ಓರ್ವ ಸೊಸೆ, ಒಬ್ಬ ಮೊಮ್ಮಗ, ಒಬ್ಬ ಮೊಮ್ಮಗಳ ಸೊಸೆ, ಮೂವರು ಮೊಮ್ಮಕ್ಕಳು, ಮೂವರು ಮೊಮ್ಮಕ್ಕಳ ಪತಿಯಂದಿರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ವಯೋಸಹಜ ಅನಾರೋಗ್ಯದ ಕಾರಣ ಪೂ. ಪಾಟೀಲ ಅಜ್ಜಿಯವರು ಹಾಸಿಗೆ ಹಿಡಿದಿದ್ದರು. ಅವರ ಸಾಧನೆಯ ವೈಶಿಷ್ಟ್ಯವೆಂದರೆ, ಇಳಿವಯಸ್ಸಿನಲ್ಲಿಯೂ ಪೂ. ಆನಂದಿ ಪಾಟೀಲ ಅಜ್ಜಿಯವರು ಸನಾತನ ಸಂಸ್ಥೆಯ ಮಾರ್ಗದರ್ಶನದಂತೆ ಸಾಧನೆಯನ್ನು ಪ್ರಾರಂಭಿಸಿ, ೧೪ ಫೆಬ್ರವರಿ ೨೦೧೬ ರಂದು ‘ಸಂತ ಪದವಿಯನ್ನು ತಲುಪಿದ್ದರು. ‘ಪ್ರೀತಿ ಮತ್ತು ‘ಭಗವಂತನ ಮೇಲಿನ ಮುಗ್ಧ ಭಾವ ಅವರ ಗುಣವಿಶೇಷಗಳಾಗಿದ್ದವು. ತಮ್ಮ ಹೆಸರಿಗೆ ತಕ್ಕಂತೆ ಅವರು ಯಾವಾಗಲೂ ‘ಆನಂದಿಯಾಗಿರುತ್ತಿದ್ದರು.

ದೇಹತ್ಯಾಗಕ್ಕೂ ಮುನ್ನ ೩ ದಿನ ನೀರು ಕುಡಿಯದಿರುವುದು; ಆದರೆ ಸದ್ಗುರು ಅನುರಾಧಾ ವಾಡೇಕರ ಅವರ ಹಸ್ತದಿಂದ ತೀರ್ಥ ಪ್ರಾಶನ ಮಾಡುವುದು !

ದೇಹತ್ಯಾಗಕ್ಕೂ ೩ ದಿನಗಳ ಮುಂಚಿತವಾಗಿ ಪೂ. ಆನಂದಿ ಪಾಟೀಲ ಅಜ್ಜಿಯವರು ನೀರು ಕುಡಿಯುವುದನ್ನು ನಿಲ್ಲಿಸಿದ್ದರು. ಮೇ ೨೫ ರಂದು ಸದ್ಗುರು ಅನುರಾಧಾ ವಾಡೇಕರ ಮತ್ತು ಪೂ. (ಸೌ.) ಸಂಗೀತಾ ಜಾಧವ ಅವರು ಪೂ. ಪಾಟೀಲ್ ಅಜ್ಜಿಯವರನ್ನು ನೋಡಲು ಹೋಗಿದ್ದರು. ಆ ಸಮಯದಲ್ಲಿ ಪೂ. ಅಜ್ಜಿಯವರು ಸದ್ಗುರು ಅನುರಾಧಾ ವಾಡೇಕರ ಅವರ ಹಸ್ತದಿಂದ ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ತೀರ್ಥವನ್ನು ಪ್ರಾಶನ ಮಾಡಿದರು ಅನಂತರವೇ ದೇಹತ್ಯಾಗ ಮಾಡಿದರು. ಆ ಕ್ಷಣದಲ್ಲಿ, ‘ಸದ್ಗುರು ಅನುರಾಧಾ ವಾಡೇಕರ ಅವರ ಭೇಟಿಗಾಗಿ ಮತ್ತು ಅವರ ಹಸ್ತದಿಂದ ತೀರ್ಥವನ್ನು ಸ್ವೀಕರಿಸುವುದಕ್ಕಾಗಿಯೇ ಅಜ್ಜಿಯವರು ತಮ್ಮ ಪ್ರಾಣವನ್ನು ಹಿಡಿದಿಟ್ಟುಕೊಂಡಿದ್ದರು ಎಂದು ಅಜ್ಜಿಯವರ ಮೊಮ್ಮಗಳು ಸೌ. ಕಪಿಲಾ ಘಾಣೇಕರ ಅವರಿಗೆ ಅನಿಸಿತು.