ಮೇ ೧೭ ರಂದು ನಡೆಯಲಿರುವ ಶ್ರೀ ರಾಜಮಾತಂಗಿ ಮಹಾಯಜ್ಞದ ನಿಮಿತ್ತ...

ಮುಂಬಯಿ, ಮೇ ೧೦ (ವಾರ್ತೆ.) – ಪ್ರಸ್ತುತ ಯುದ್ಧದ ಸಮಯದಲ್ಲಿ ತಪೋಭೂಮಿಯಾದ ಭಾರತಕ್ಕೆ ರಕ್ಷಾಕವಚ ದೊರೆಯಲಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದ ಸನಾತನ ಸಂಸ್ಥೆಯ ವತಿಯಿಂದ ಮೇ ೧೭ ರಂದು ‘ಶ್ರೀ ರಾಜಮಾತಂಗಿ ಮಹಾಯಜ್ಞ’ವನ್ನು ಆಯೋಜಿಸಲಾಗಿದೆ. ಶ್ರೀ ಗಣೇಶನ ಕೃಪಾಶೀರ್ವಾದದಿಂದ ಈ ಯಜ್ಞ ಸಮಾರಂಭವು ನಿರ್ವಿಘ್ನವಾಗಿ ನೆರವೇರಲಿ ಎಂದು, ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಸದ್ಗುರು ಅನುರಾಧಾ ವಾಡೇಕರ್ ಅವರ ಶುಭಹಸ್ತದಿಂದ ಮೇ ೭ ರಂದು ಯಜ್ಞಕ್ಕಾಗಿ ನಿಗದಿಪಡಿಸಿದ ಮೈದಾನದಲ್ಲಿ ವಿಘ್ನಹರ್ತ ಶ್ರೀ ಮಹಾಗಣಪತಿ ಮತ್ತು ಭೂಮಾತೆಯ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಪೂ. (ಸೌ.) ಸಂಗೀತಾ ಜಾಧವ್ ಅವರ ವಂದನೀಯ ಉಪಸ್ಥಿತಿಯೂ ಇತ್ತು. ಈ ವೇಳೆ ಸನಾತನ ಸಂಸ್ಥೆಯ ಸಾಧಕರು ಕೂಡ ಉಪಸ್ಥಿತರಿದ್ದರು.

ಸನಾತನದ ಸಾಧಕ ಪುರೋಹಿತ ಶ್ರೀ. ಶ್ರೇಯಸ ಪಿಸೋಳ್ಕರ್ ಅವರು ಈ ಪೂಜಾವಿಧಿಯ ಪೌರೋಹಿತ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾಧಕರು ಚೈತನ್ಯ ಮತ್ತು ಆನಂದವನ್ನು ಅನುಭವಿಸಿ, ಶ್ರೀ ರಾಜಮಾತಂಗಿದೇವಿಯ ಅಸ್ತಿತ್ವ ಮತ್ತು ಆಶೀರ್ವಾದದ ಅನುಭೂತಿಯನ್ನು ಪಡೆದರು. ಮೇ ೧೭ ರಂದು ಪ್ರಭಾದೇವಿಯಲ್ಲಿರುವ ಶ್ರೀ ಸಿದ್ಧಿವಿನಾಯಕ ಮಂದಿರದ ಹಿಂಭಾಗದಲ್ಲಿರುವ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ಮಧ್ಯಾಹ್ನ ೩.೩೦ ರಿಂದ ಸಂಜೆ ೭.೩೦ ರವರೆಗೆ ಈ ಮಹಾಯಜ್ಞವು ನಡೆಯಲಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ