
ಮಗುವಿನ ಮನಸ್ಸು ಮುಗ್ಧ, ಕೋಮಲ ಮತ್ತು ಖಾಲಿ ಹಲಗೆಯಂತಿರುತ್ತದೆ. ಬಾಲ್ಯದಲ್ಲಿ ನಾವು ಅದರ ಮೇಲೆ ಯಾವ ಸಂಸ್ಕಾರಗಳನ್ನು ಮಾಡುತ್ತೇವೆಯೋ, ಅವು ಶಾಶ್ವತವಾಗಿ ಉಳಿಯುವ ಸಾಧ್ಯತೆ ಇರುತ್ತದೆ. ನಮ್ಮ ಮಗುವಿಗೆ ಒಳ್ಳೆಯ ಅಭ್ಯಾಸಗಳನ್ನು ಕಲಿಸುವುದು, ಅವರ ಮುಂದೆ ಉತ್ತಮ ಆದರ್ಶಗಳನ್ನು ಇಡುವುದು; ಹಾಗೆಯೇ ಉತ್ತಮ ನಡತೆ ಮತ್ತು ಸನ್ಮಾರ್ಗದಲ್ಲಿ ನಡೆಯುವ ಶಿಕ್ಷಣವನ್ನು ಪೋಷಕರೇ ಮಗುವಿಗೆ ನೀಡಬೇಕು. ಬಾಲ್ಯದಲ್ಲಾದ ಸುಸಂಸ್ಕಾರಗಳಿಂದ ಮಕ್ಕಳ ಜೀವನ ಆದರ್ಶವಾಗುತ್ತದೆ. ಈ ಸಂಚಿಕೆಯಲ್ಲಿ ನೀಡಿದ ಮಾಹಿತಿಯ ಆಧಾರದ ಮೇಲೆ, ಎಳೆ ವಯಸ್ಸಿನ ಮಗುವಿನ ಮನಸ್ಸನ್ನು ಪೋಷಕರು ಕರ್ತವ್ಯನಿಷ್ಠೆಯಿಂದ ಪೋಷಿಸುವಂತಾಗಲಿ ಮತ್ತು ಸುಸಂಸ್ಕಾರಗಳ ಗೊಬ್ಬರದಿಂದ ಬೆಳೆಯುವ ಮಗುರೂಪಿ ಸಸ್ಯವು ಗುಣವಂತ, ಬುದ್ಧಿವಂತ ಮತ್ತು ಆದರ್ಶಪ್ರಾಯವಾಗಲಿ ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !
ಸಂಸ್ಕಾರ ಎಂದರೇನು ?
ಸಂಸ್ಕಾರ ಎಂದರೆ ಗುಣಗಳ ಗುಣಾಕಾರ ಮತ್ತು ದೋಷಗಳ ಭಾಗಾಕಾರ. ವಿಚಾರ ಮತ್ತು ಕೃತಿಗಳು ಉತ್ತಮವಾಗಿರಬೇಕೆಂದರೆ ಸಂಸ್ಕಾರಗಳ ಅವಶ್ಯಕತೆ ಇರುತ್ತದೆ. ಭಾರತೀಯ ಶಾಸ್ತ್ರಕ್ಕನುಸಾರ, ಪ್ರತಿಯೊಂದು ಕ್ರಿಯೆಯೂ ಸಂಸ್ಕಾರಯುಕ್ತವಾಗಿರಬೇಕು. ಪ್ರತಿಯೊಂದು ಕೆಲಸವೂ ಒಳ್ಳೆಯ ಸಂಸ್ಕಾರದಿಂದ ಕೂಡಿರಬೇಕು. ಉದಾ : ಬಾಳೆಹಣ್ಣನ್ನು ತಿಂದು ನಾವು ಸಿಪ್ಪೆಯನ್ನು ಎಸೆಯುತ್ತೇವೆ, ಇದು ಕೃತಿಯಾಗಿದೆ. ಬಾಳೆಹಣ್ಣನ್ನು ತಿಂದು ನಾವು ಸಿಪ್ಪೆಯನ್ನು ಕಸದ ಬುಟ್ಟಿಯಲ್ಲಿ ಹಾಕುವುದು, ಇದು ಪ್ರಕೃತಿ. ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ರಸ್ತೆಯ ಮೇಲೆ ಎಸೆಯುವುದು ಇದು ವಿಕೃತಿ. ಇನ್ನೊಬ್ಬರು ರಸ್ತೆಯ ಮೇಲೆ ಎಸೆದ ಸಿಪ್ಪೆಯನ್ನು ತೆಗೆದು ಕಸದ ಬುಟ್ಟಿಗೆ ಹಾಕುವುದು ಇದು ಸಂಸ್ಕೃತಿ.
ಸುಸಂಸ್ಕಾರಗಳ ಮಹತ್ವ !
ಸುಸಂಸ್ಕಾರಿತ ಮನಸ್ಸು ಜೀವವನ್ನು ಎಲ್ಲಿಯೂ ಅಲೆದಾಡಲು ಬಿಡುವುದಿಲ್ಲ. ಇದಕ್ಕಾಗಿಯೇ ಮಕ್ಕಳ ಮನಸ್ಸನ್ನು ಸುಸಂಸ್ಕೃತಗೊಳಿಸುವುದು ಇದು ಹಿರಿಯರ, ಹಿಂದೂ ಧರ್ಮಾಚರಣೆ ಮಾಡುವವರ ಮತ್ತು ಸಮಾಜದ ಕರ್ತವ್ಯವಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ರಾಜ್ಯವನ್ನು, ಅಂದರೆ ಆದರ್ಶ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿದರು. ಅದಕ್ಕಾಗಿ ಆವಶ್ಯಕವಾಗಿರುವ ಶಿಕ್ಷಣವನ್ನು (ಸಂಸ್ಕಾರಗಳನ್ನು) ಜೀಜಾಮಾತೆ ಬಾಲ್ಯದಲ್ಲಿಯೇ ಅವರಿಗೆ ನೀಡಿದರು, ಅವರಲ್ಲಿ ಜಾಜ್ವಲ್ಯ ಧರ್ಮಾಭಿಮಾನ ಮತ್ತು ರಾಷ್ಟ್ರಾಭಿಮಾನವನ್ನೂ ನಿರ್ಮಿಸಿದರು. ಶಸ್ತ್ರಾಸ್ತ್ರಗಳ ತರಬೇತಿ ನೀಡಿ ಅವರಲ್ಲಿರುವ ಕ್ಷಾತ್ರವೃತ್ತಿಯನ್ನು ಜಾಗೃತಗೊಳಿಸಿದರು ಮತ್ತು ಅವರ ಮನಸ್ಸಿನಲ್ಲಿ ಅನ್ಯಾಯ ಮತ್ತು ಅತ್ಯಾಚಾರದ ಬಗ್ಗೆ ಆಕ್ರೋಶವನ್ನು ಸೃಷ್ಟಿಸಿದರು. ಬಾಲ್ಯದಲ್ಲಿಯೇ ಅವರಲ್ಲಿ ಭಕ್ತಿಯ ಮತ್ತು ಹಿಂದೂ ಧರ್ಮದ ಬೀಜವನ್ನು ಬಿತ್ತಿ, ಜೀಜಾಮಾತೆ ಎಲ್ಲ ರೀತಿಯಿಂದಲೂ ಶಿವಾಜಿಯವರನ್ನು ರೂಪಿಸಿದರು. ಇದರಿಂದಲೇ ಹಿಂದವೀ ಸ್ವರಾಜ್ಯದ ಸ್ಥಾಪನೆ ಸಾಧ್ಯವಾಯಿತು ಮತ್ತು ಇದರ ಫಲವಾಗಿ ಇಂದು ನಾವು ‘ಹಿಂದೂ’ ಎಂದು ಜೀವನ ನಡೆಸಲು ಸಾಧ್ಯವಾಗುತ್ತಿದೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು