ಬ್ರಿಟನ್‌ ನಲ್ಲಿ ಭಾರತೀಯ ಮೂಲದ ಯುವತಿಯ ಮೇಲೆ ಜನಾಂಗೀಯ ದ್ವೇಷದಿಂದ ಅತ್ಯಾಚಾರ

ಲಂಡನ್ (ಬ್ರಿಟನ್) – ಬ್ರಿಟನ್‌ ನಲ್ಲಿ ಕೆಲವು ದಿನಗಳ ಹಿಂದಷ್ಟೇ ಸಿಖ್ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆ ಮಾಸುವ ಮುನ್ನವೇ, ಭಾರತೀಯ ಮೂಲದ ಯುವತಿಯ ಮೇಲೆ ಜನಾಂಗೀಯ ದ್ವೇಷದಿಂದ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಈ ಕುರಿತು ಬ್ರಿಟಿಷ್ ಪೊಲೀಸರು ಮಾಹಿತಿ ನೀಡಿದ್ದಾರೆ. ವೆಸ್ಟ್ ಮಿಡ್‌ ಲ್ಯಾಂಡ್ಸ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಆರೋಪಿ ಸ್ಪಷ್ಟವಾಗಿ ಕಾಣುತ್ತಿದ್ದಾನೆ. ಸಂಬಂಧಿಸಿದ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು, ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಅಕ್ಟೋಬರ್ 25 ರ ಸಂಜೆ ವಾಲ್ಸಾಲ್‌ ನ ಪಾರ್ಕ್ ಹಾಲ್ ಪ್ರದೇಶದಿಂದ ಓರ್ವ ಮಹಿಳೆಯ ದೂರವಾಣಿ ಕರೆ ಬಂದ ನಂತರ ಪೊಲೀಸರಿಗೆ ಘಟನೆಯ ಮಾಹಿತಿ ಲಭಿಸಿತು. ಈ ಘಟನೆಯ ತನಿಖೆ ನಡೆಸುತ್ತಿರುವ ಅಧಿಕಾರಿಯು ಇದನ್ನು ಅತ್ಯಂತ ಭೀಕರ ದಾಳಿ ಎಂದು ಬಣ್ಣಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಇದಕ್ಕಾಗಿ ಒಂದು ಪ್ರತ್ಯೇಕ ತಂಡವನ್ನು ರಚಿಸಲಾಗಿದೆ, ಎಂದು ಪೊಲೀಸರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಬ್ರಿಟನ್ ಸಾಮ್ರಾಜ್ಯದ ಸೂರ್ಯ ಮುಳುಗಿದರೂ, ಬ್ರಿಟಿಷರ ಮನಃಸ್ಥಿತಿ ಮಾತ್ರ ಬದಲಾಗಿಲ್ಲ ಎಂದು ಇದರಿಂದ ತಿಳಿಯುತ್ತದೆ. ಇದರ ವಿರುದ್ಧವೂ ಈಗ ಜಗತ್ತಿನಾದ್ಯಂತ ಹೋರಾಟ ನಡೆಯಬೇಕು!