ಹಾಗಾದರೆ ವಕ್ಫ್ ಮಂಡಳಿಯು ಕಾನೂನಿಗಿಂತ ದೊಡ್ಡದೇ? ಎಂಬ ಪ್ರಶ್ನೆಯನ್ನು ಖರ್ಗೆಯವರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಕೇಳಲಾಗುತ್ತಿದೆ!

ಬೆಂಗಳೂರು – ಏನೇ ಆದರೂ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾನೂನಿಗಿಂತ ದೊಡ್ಡದಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ದೃಢವಾಗಿ ಹೇಳಿದ್ದಾರೆ. ಯಾರಿಗೂ ವಿಶೇಷ ಹಕ್ಕು ಇರಲು ಸಾಧ್ಯವಿಲ್ಲ. ಈ ದೇಶದ ಕಾನೂನನ್ನು ಪಾಲಿಸಿ, ಇಷ್ಟನ್ನೇ ನಾನು ಸಂಘಕ್ಕೆ ಹೇಳುತ್ತಿದ್ದೇನೆ, ಎಂದು ಅವರು ಒಂದು ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಿಯಾಂಕ್ ಖರ್ಗೆ ಅವರ ಮೇಲೆ ಟೀಕೆ ವ್ಯಕ್ತವಾಗುತ್ತಿದೆ. ಹಾಗಾದರೆ ಇದೇ ನಿಯಮ ವಕ್ಫ್ ಮಂಡಳಿಗೂ ಅನ್ವಯಿಸುವುದಿಲ್ಲವೇ? ವಕ್ಫ್ ಮಂಡಳಿ ಕಾನೂನಿಗಿಂತ ದೊಡ್ಡದೇ? ವಕ್ಫ್ ಮಂಡಳಿಯ ವಿಷಯದಲ್ಲಿ ನಿಮ್ಮ ನಿಲುವು ಹೀಗೇಕಿಲ್ಲ? ಎಂಬ ಪ್ರಶ್ನೆಗಳನ್ನು ಖರ್ಗೆಯವರಿಗೆ ಕೇಳಲಾಗುತ್ತಿದೆ. ಸಂಘದ ಸಾರ್ವಜನಿಕ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಖರ್ಗೆ ಕೆಲವು ದಿನಗಳ ಹಿಂದೆ ಬೇಡಿಕೆ ಇಟ್ಟಿದ್ದರು.
ಸಂಪಾದಕೀಯ ನಿಲುವುಈ ದೇಶದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಹಾಗಿದ್ದರೂ ಕಾಂಗ್ರೆಸ್ ಆಡಳಿತದಲ್ಲಿ ಗಾಂಧಿ ಕುಟುಂಬ ಯಾವಾಗಲೂ ಕಾನೂನಿಗಿಂತ ದೊಡ್ಡದಾಗಿದೆ! |
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !