ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಂದ ಚೀನಾದ ಹೆಸರನ್ನು ಹೇಳದೆ ಟೀಕೆ

ನವದೆಹಲಿ – ವಿಶ್ವಸಂಸ್ಥೆಯು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಅದರ ಭಯೋತ್ಪಾದನೆಯ ಮೇಲಿನ ಪ್ರತಿಕ್ರಿಯೆಯೇ ಒಂದು ದೊಡ್ಡ ಉದಾಹರಣೆಯಾಗಿದೆ. ಭದ್ರತಾ ಮಂಡಳಿಯ ಒಬ್ಬ ಶಾಶ್ವತ ಸದಸ್ಯ, ಪಹಲ್ಗಾಮ್ ನಂತಹ ಭಯಾನಕ ಭಯೋತ್ಪಾದಕ ದಾಳಿಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಂಘಟನೆಗಳನ್ನು ಬಹಿರಂಗವಾಗಿ ಬೆಂಬಲಿಸುತ್ತದೆ. ಇದರಿಂದ ಬಹುಪಕ್ಷೀಯತೆಯ ವಿಶ್ವಾಸಾರ್ಹತೆಗೆ ಗಂಭೀರ ಧಕ್ಕೆಯಾಗುತ್ತದೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಚೀನಾದ ಹೆಸರನ್ನು ಹೇಳದೆ ಅದರ ಮೇಲೆ, ಹಾಗೆಯೇ ವಿಶ್ವಸಂಸ್ಥೆಯನ್ನು ಟೀಕಿಸಿದರು. ವಿಶ್ವಸಂಸ್ಥೆಯ 80 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
🚨 “A member of the UN Security Council is a sympathizer of terrorist organizations!”
– EAM Dr. S. Jaishankar’s sharp swipe at China, without naming it.
💬 He questioned the credibility of the UN, saying it no longer serves global interests.
🕊️ “The United Nations is of no use… pic.twitter.com/fhZFwl3oh4
— Sanatan Prabhat (@SanatanPrabhat) October 24, 2025
ಭಯೋತ್ಪಾದಕರು ಮತ್ತು ಸಂತ್ರಸ್ತರನ್ನು ಒಂದೇ ಎಂದು ಪರಿಗಣಿಸುವುದು ಖಂಡನೀಯ!
‘ಜಾಗತಿಕ ನೀತಿಯ ಹೆಸರಿನಲ್ಲಿ ಭಯೋತ್ಪಾದಕರು ಮತ್ತು ಸಂತ್ರಸ್ತರನ್ನು ಒಂದೇ ಎಂದು ಪರಿಗಣಿಸುವುದು ಹೆಚ್ಚು ಖಂಡನೀಯವಾಗಿದೆ. ಭಯೋತ್ಪಾದಕರೆಂದು ಸ್ವತಃ ಘೋಷಿಸಿಕೊಂಡವರನ್ನು ನಿರ್ಬಂಧಗಳ ಪ್ರಕ್ರಿಯೆಯಿಂದ ರಕ್ಷಿಸಿದಾಗ, ಅದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಪ್ರಾಮಾಣಿಕತೆಯ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಜೈಶಂಕರ ಹೇಳಿದರು.
ವಿಶ್ವಸಂಸ್ಥೆಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಬಗ್ಗೆ ಟೀಕೆ
ವಿದೇಶಾಂಗ ಸಚಿವ ಜೈಶಂಕರ ಅವರು ಮಾತು ಮುಂದುವರೆಸಿ, ವಿಶ್ವಸಂಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಅದರ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಅದರ ಸದಸ್ಯರನ್ನು ಪ್ರತಿನಿಧಿಸುವುದಿಲ್ಲ, ಮತ್ತು ಜಾಗತಿಕ ಆದ್ಯತೆಗಳಿಗೆ ಪ್ರತಿಕ್ರಿಯಿಸುವುದೂ ಇಲ್ಲ. ಅದರಲ್ಲಿನ ಚರ್ಚೆಗಳು ಹೆಚ್ಚು ಧ್ರುವೀಕರಣಗೊಂಡಿವೆ ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಉಂಟಾಗಿದೆ. ಯಾವುದೇ ಅರ್ಥಪೂರ್ಣ ಸುಧಾರಣೆಯನ್ನು ಅದೇ ಸುಧಾರಣಾ ಪ್ರಕ್ರಿಯೆಯಲ್ಲಿ ತಡೆಯಲಾಗುತ್ತದೆ. ಈಗ ಆರ್ಥಿಕ ಮಿತಿಯು ಒಂದು ಹೊಸ ಚಿಂತೆಯಾಗಿದೆ. ವಿಶ್ವಸಂಸ್ಥೆಯನ್ನು ಪುನರ್ನಿರ್ಮಿಸುವಾಗ ಅದನ್ನು ಉಳಿಸಿಕೊಳ್ಳುವುದು, ಇಂದು ನಮ್ಮೆಲ್ಲರ ಮುಂದಿರುವ ದೊಡ್ಡ ಸವಾಲಿನ ವಿಷಯವಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಇಂತಹ ವಿಶ್ವಸಂಸ್ಥೆಯಿಂದ ಜಗತ್ತಿಗೆ ಯಾವುದೇ ಉಪಯೋಗವಿಲ್ಲದ ಕಾರಣ, ಈಗ ಅದನ್ನು ಮುಚ್ಚುವುದೇ ಅವಶ್ಯಕವಾಗಿದೆ! |
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!