
ಸಿಯೋಲ್ (ದಕ್ಷಿಣ ಕೊರಿಯಾ) – ದಕ್ಷಿಣ ಕೊರಿಯಾವು ಉತ್ತರ ಕೊರಿಯಾದ ೨೦ ಸೈನಿಕರ ಮೇಲೆ ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂಬಂಧಿತ ಘಟನೆಯು ಗ್ಯಾಂಗ್ವಾನ್ ಪ್ರಾಂತ್ಯದ ಚಿಯೋರ್ವಾನ್‌ನಲ್ಲಿ ನಡೆದಿದೆ. ದಕ್ಷಿಣ ಕೊರಿಯಾದ ಸೈನಿಕರು ಮೊದಲು ಎಚ್ಚರಿಕೆ ನೀಡಿ ನಂತರ ಗುಂಡು ಹಾರಿಸಿದರು. ಗುಂಡಿನ ದಾಳಿಯ ನಂತರ ಉತ್ತರ ಕೊರಿಯಾದ ಸೈನಿಕರು ಹಿಂದೆ ಸರಿದರು. ಈ ಘಟನೆಯಿಂದಾಗಿ ಎರಡೂ ದೇಶಗಳ ನಡುವಿನ ಸಂಘರ್ಷವು ಮತ್ತೊಮ್ಮೆ ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರ ಕೊರಿಯಾಗೆ ಚೀನಾ ಮತ್ತು ರಷ್ಯಾದ ಬೆಂಬಲವಿದೆ, ಆದರೆ ದಕ್ಷಿಣ ಕೊರಿಯಾವು ಅಮೆರಿಕ ಮತ್ತು ಜಪಾನ್‌ನ ಮಿತ್ರರಾಷ್ಟ್ರವಾಗಿದೆ. ಆದ್ದರಿಂದ, ಈ ಎರಡು ದೇಶಗಳ ನಡುವಿನ ಸಂಘರ್ಷದಿಂದಾಗಿ ಏಷ್ಯಾದ ಶೀತಲ ಸಮರವು ಪ್ರಾರಂಭವಾಗುವ ಸಾಧ್ಯತೆಯನ್ನು ಊಹಿಸಲಾಗಿದೆ.
ಉತ್ತರ ಕೊರಿಯಾವು ಇತ್ತೀಚೆಗೆ ಅನೇಕ ಕ್ಷಿಪಣಿಗಳ ಪರೀಕ್ಷೆಗಳನ್ನು ನಡೆಸಿದೆ. ಅವುಗಳಲ್ಲಿ ಒಂದು ಪರೀಕ್ಷೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಪಾನ್ ಪ್ರವಾಸವನ್ನು ಘೋಷಿಸಿದ ನಂತರ ಮಾಡಲಾಯಿತು. ದಕ್ಷಿಣ ಕೊರಿಯಾವು, ಉತ್ತರ ಕೊರಿಯಾದ ಮೇಲೆ ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶಪಡಿಸಲು ಒತ್ತಡ ಹೇರುತ್ತಿದೆ; ಆದರೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಅದನ್ನು ನಿರಾಕರಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara