
೧. ಜೀವದ ಸರ್ವತೋಮುಖ ಪ್ರಗತಿಯ ಜವಾಬ್ದಾರಿಯು ಕುಲದೇವತೆಯ ಬಳಿ ಇರುವುದರಿಂದ ಸಾಧಕರು, ಸಂತರು ಮತ್ತು ಜವಾಬ್ದಾರ ಸಾಧಕರು ಹೇಳಿದ ಉಪಾಯಗಳೊಂದಿಗೆ ಕುಲದೇವತೆಗೂ ಪ್ರಾರ್ಥನೆ ಮಾಡುವುದು ಆವಶ್ಯಕ : ‘ಸದ್ಯ ಕಾಲವು ಪ್ರತಿಕೂಲವಾಗಿರುವುದರಿಂದ ಸಾಧಕರಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಈ ಮೂರು ಸ್ತರಗಳಲ್ಲಿ ತೊಂದರೆಗಳಾಗುತ್ತಿವೆ. ಈ ತೊಂದರೆಗಳನ್ನು ದೂರಗೊಳಿಸಲು ಸಾಧಕರು ಆಗಾಗ ಮಾರ್ಗದರ್ಶಕ ಸಂತರಲ್ಲಿ ಮತ್ತು ಜವಾಬ್ದಾರ ಸಾಧಕರಲ್ಲಿ ಕೇಳಿ ನಾಮಜಪಾದಿ ಉಪಾಯಗಳನ್ನು ಮಾಡುವುದು ಆವಶ್ಯಕವಾಗಿದೆ, ಹಾಗೆಯೇ ಸಾಧನೆಯಲ್ಲಿ ಬರುವ ವಿವಿಧ ಅಡಚಣೆಗಳನ್ನು ದೂರಗೊಳಿಸಲು ಕುಲದೇವ ಮತ್ತು ಕುಲದೇವಿಗೂ ಪ್ರಾರ್ಥನೆ ಮಾಡುವುದು ಆವಶ್ಯಕವಾಗಿದೆ. ಜೀವದ ಸರ್ವತೋಮುಖ ಪ್ರಗತಿಯ ಜವಾಬ್ದಾರಿಯು ಕುಲದೇವತೆಯ ಬಳಿ ಇರುತ್ತದೆ. ಆದ್ದರಿಂದ ಸಾಧನೆಯಲ್ಲಿನ ವಿವಿಧ ಅಡಚಣೆಗಳನ್ನು ಕಡಿಮೆ ಮಾಡಲು ಕುಲದೇವಿಯ ಸಹಾಯವನ್ನು ಪಡೆಯುವುದೂ ಆವಶ್ಯಕವಾಗಿದೆ.
೨. ಗುರುಗಳೇ ಸಾಧಕರ ಕುಲದೇವತೆ ಆಗಿದ್ದು ಕುಲದೇವತೆಗೆ ಪ್ರಾರ್ಥನೆ ಮಾಡುವುದರಿಂದ ಗುರುಗಳ ನಿರ್ಗುಣತತ್ತ್ವಪ್ರಧಾನ ಸಂಕಲ್ಪಕ್ಕೆ ಕುಲದೇವತಾರೂಪಿ ಸಗುಣ ಶಕ್ತಿಯು ಜೊತೆಗೂಡುವುದರಿಂದ ಸಾಧಕರ ಸಾಧನೆಯಲ್ಲಿನ ಅಡಚಣೆಗಳನ್ನು ನಿವಾರಿಸಲು ಸಹಾಯವಾಗುವುದು : ಇಲ್ಲಿ ಮುಖ್ಯವಾಗಿ ಗಮನದಲ್ಲಿಡಬೇಕಾದ ಅಂಶವೆಂದರೆ, ‘ಸಾಧಕರು ಗುರುಕೃಪಾಯೋಗಾನುಸಾರ ಸಾಧನೆ ಮಾಡುತ್ತಿರುವು ದರಿಂದ ಅವರು ಮೂಲದಲ್ಲಿ ಗುರುಕುಲದವರೇ ಆಗಿದ್ದಾರೆ, ಅಂದರೆ ಅವರ ಕುಲದೇವತೆಯು ಗುರುಗಳೇ ಆಗಿರುತ್ತಾರೆ. ಶಿಷ್ಯನ ಎಲ್ಲ ಅಡಚಣೆಗಳನ್ನು ನಿವಾರಿಸುವ ದೇವತೆ ಗುರುಗಳೇ ಆಗಿದ್ದಾರೆ. ಹೀಗಿದ್ದರೂ. ವ್ಯವಹಾರದಲ್ಲಿ ಯಾವುದಾದರೂ ಕೆಲಸಕ್ಕಾಗಿ ಆ ಇಲಾಖೆಯ ಸಚಿವರು ಯಾವುದಾದರೂ ಕಾರ್ಯಕ್ಕೆ ಅನುಮತಿ ನೀಡಿದ್ದರೂ, ಅವರ ಆದೇಶವನ್ನು ನಿರ್ದಿಷ್ಟ ಕಚೇರಿಯ ಅನೇಕ ಸಿಬ್ಬಂದಿಗಳ ಮೂಲಕ ಆಗುತ್ತದೆ ಮತ್ತು ಆ ಕಚೇರಿಯ ಕಾರ್ಯವಿಧಾನಗಳು ಮತ್ತು ನಿಯಮಗಳನ್ನು ಅನುಸರಿಸಿ ಕೆಲಸ ಮಾಡಬೇಕಾಗುತ್ತದೆ. ಆ ವಿಭಾಗದ ಸಿಬ್ಬಂದಿಗಳು ನಮ್ಮ ಪರಿಚಯದವರಾಗಿದ್ದರೆ, ಅವರ ಸಹಾಯದಿಂದ ನಮಗೆ ಆ ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ಅದೇ ರೀತಿ ಸಾಧಕರ ಮತ್ತು ಶಿಷ್ಯರ ಸಾಧನೆಯಲ್ಲಿನ ಅಡಚಣೆಗಳನ್ನು ನಿವಾರಿಸಲು ಗುರುಗಳ ಸಂಕಲ್ಪವು ಕಾರ್ಯನಿರತವೇ ಆಗಿರುತ್ತದೆ; ಆದರೆ ಮಾರ್ಗದರ್ಶಕರಾದ ಸಂತರು ಮತ್ತು ಜವಾಬ್ದಾರ ಸಾಧಕರು ಹೇಳಿದ ಉಪಾಯಗಳನ್ನು ಮಾಡುವುದರೊಂದಿಗೆ ಸಾಧಕರು ಅಡಚಣೆಗಳನ್ನು ನಿವಾರಿಸಲು ಕುಲದೇವತೆಗೂ ಪ್ರಾರ್ಥನೆ ಮಾಡಿದರೆ ಕುಲದೇವತೆಯು ಸಾಧಕರ ಕುಲದಲ್ಲಿನ ಪಾತಕಗಳು (ಪಾಪ), ಪ್ರಾರಬ್ಧ, ಕುಲದಲ್ಲಿ ಸಿಲುಕಿದ ಪೂರ್ವಜರು ಇಂತಹ ಕಾರಣಗಳಿಂದಾಗುವ ಅಡಚಣೆಗಳನ್ನು ಅಲ್ಪಾವಧಿಯಲ್ಲಿ ನಿವಾರಿಸಲು ಸಹಾಯ ಮಾಡುತ್ತಾಳೆ. ಏಕೆಂದರೆ ಗುರುಗಳ ನಿರ್ಗುಣತತ್ತ್ವ ಪ್ರಧಾನ ಸಂಕಲ್ಪಕ್ಕೆ ಕುಲದೇವತಾರೂಪಿ ಸಗುಣ ಶಕ್ತಿಯು ಜೊತೆಗೂಡುತ್ತದೆ.
೨ ಅ. ಸಾಧಕರು ಕುಲದೇವತೆಯ ಭಾವಪೂರ್ಣ ಸ್ಮರಣೆ ಮತ್ತು ಪ್ರಾರ್ಥನೆ ಮಾಡುವುದರಿಂದ ಅವರಿಗೆ ಲಾಭವಾಗಲಿದೆ : ಸಾಧಕರು ಇದನ್ನೂ ಗಮನದಲ್ಲಿಡಬೇಕು, ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು, ಅಂದರೆ ಗುರುಗಳು ಸಾಧಕರ ಕುಲದೇವತೆಯನ್ನು ಈ ಮೊದಲೇ ಪ್ರಸನ್ನಗೊಳಿಸಿದ್ದಾರೆ. ಆದ್ದರಿಂದ ಸಾಧಕರ ಕುಲದೇವತೆ ಧಾವಿಸಿ ಬಂದು ಸಾಧಕರಿಗೆ ಸಹಾಯ ಮಾಡಲಿದ್ದಾರೆ.
೨ ಆ. ಸಾಧಕರು ಸಾಧನೆಯಲ್ಲಿ ಅಡಚಣೆಯ ಪ್ರಸಂಗಗಳಲ್ಲಿ ಗುರುಗಳು ಮತ್ತು ಉಪಾಸ್ಯದೇವತೆಯೊಂದಿಗೆ ಕುಲದೇವತೆಗೂ ಅಡಚಣೆ ನಿವಾರಿಸಲು ಭಾವಪೂರ್ಣ ಪ್ರಾರ್ಥನೆ ಮಾಡಬೇಕು.
– ಶ್ರೀ. ನಿಷಾದ ದೇಶಮುಖ (ಕನಸಿನಲ್ಲಿ ದೊರಕಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೩), ಫೋಂಡಾ, ಗೋವಾ. (೧೩.೧.೨೦೨೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !