
ಸೌ. ಸುಪ್ರಿಯಾ ಆಠವಲೆ : ‘ಪ.ಪೂ. ಡಾಕ್ಟರ, ನಾನು ಹಿಂದಿನ ಸತ್ಸಂಗದಲ್ಲಿ ನಮ್ಮ ಮಗ ನಮ್ಮಿಂದ ದೂರ ಇರಲು ಹೋದ ನಂತರ ನನ್ನ ಮನಸ್ಸಿನಲ್ಲಿ ತುಂಬಾ ಸಂಘರ್ಷವಾಯಿತು’, ಈ ಕುರಿತು ನಾನು ನಿಮಗೆ ಹೇಳಿದ್ದೆ. ನನಗೆ ಮಗನ ಬಗ್ಗೆ ತುಂಬಾ ಸೆಳೆತ ಮತ್ತು ಅವನ ಮೇಲೆ ತುಂಬಾ ಪ್ರೀತಿ ಇರುವುದರಿಂದ ನನ್ನ ಮನಸ್ಸಿನಲ್ಲಿ ತುಂಬಾ ಸಂಘರ್ಷವಾಗುತ್ತಿತ್ತು; ಆದರೆ ತಮ್ಮ ಹಿಂದಿನ ಸತ್ಸಂಗದ ನಂತರ ಆ ಸಂಘರ್ಷವು ಬಹಳಷ್ಟು ಕಡಿಮೆ ಆಯಿತು. ಈಗ ನನ್ನ ವಿಚಾರಗಳಲ್ಲಿ ಬದಲಾವಣೆಯಾಗಿದೆ ಮತ್ತು ಈ ಬದಲಾವಣೆಯು ತನ್ನಿಂದ ತಾನೆ ಆಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಈ ವಿಷಯದ ಬಗ್ಗೆ ನಾನು ಹಿಂದಿನ ಸತ್ಸಂಗದಲ್ಲಿ ಏನಾದರು ಹೇಳಿದ್ದೇನೇನು ?
ಸೌ. ಸುಪ್ರಿಯಾ ಆಠವಲೆ : ನೀವು, ”ಅದಂತೂ ಆಗುವುದೇ ಇತ್ತು. ಎಲ್ಲರೂ ಕೊನೆಯ ವರೆಗೂ ನಮ್ಮ ಜೊತೆಗೆ ಎಲ್ಲಿ ಇರುತ್ತಾರೆ ?’’ ಎಂದು ಹೇಳಿದ್ದೀರಿ. ಈ ನಿಮ್ಮ ವಾಕ್ಯದ ಮೇಲೆ ನನ್ನ ಚಿಂತನೆ ಆಯಿತು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಮನೋರೋಗತಜ್ಞರಿಗೆ (ಸೈಕ್ಯಾಟ್ರಿಸ್ಟ) ಒಬ್ಬೊಬ್ಬರೊಂದಿಗೆ ವೈಯಕ್ತಿಕವಾಗಿ ಮಾತನಾಡಬೇಕಾಗುತ್ತದೆ. ಇಲ್ಲಿ ನಾನು ಸಾಮಾನ್ಯ ವಾಕ್ಯವನ್ನು ಹೇಳಿದೆನು ಮತ್ತು ಇವರ ವಿಚಾರಗಳಲ್ಲಿ ತಕ್ಷಣ ಬದಲಾವಣೆ ಆಯಿತು !
ಸೌ. ಸುಪ್ರಿಯಾ ಆಠವಲೆ : ಗುರುದೇವ, ಈಗ ನನ್ನ ವಿಚಾರಗಳ ದಿಶೆಯೇ ಬದಲಾಗಿದೆ. ಈ ಮೊದಲು ‘ಮಗನು ನನ್ನ ಹತ್ತಿರ ಯಾವಾಗಲೂ ಇರಬಹುದೇ ?’ ಈ ರೀತಿಯ ಭಾವನಾತ್ಮಕ ವಿಚಾರಗಳು ನನ್ನ ಮನಸ್ಸಿನಲ್ಲಿ ಬರುತ್ತಿದ್ದವು. ಈಗ ಅದು ಕಡಿಮೆಯಾಗಿದೆ. ‘ದೇವರು ನನಗೆ ಸಾಧನೆ ಮಾಡಲು ಅವಕಾಶವನ್ನು ಕೊಟ್ಟಿದ್ದಾನೆ, ಇಲ್ಲದಿದ್ದರೆ ನಾನು ಮಗನಲ್ಲಿಯೇ ಸಿಲುಕುತ್ತಿದ್ದೆನು’, ಎಂಬ ವಿಚಾರಗಳು ನನ್ನ ಮನಸ್ಸಿನಲ್ಲಿ ತನ್ನಿಂದ ತಾನೆ ಬರುತ್ತಿದ್ದವು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅರೆ ವಾ ! ಇದು ತುಂಬಾ ಒಳ್ಳೆಯದಾಯಿತು !’
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !